ಮನೆ Latest News ಕೊಪ್ಪಳ; ಶಾಸಕ ಜನಾರ್ದನ ರೆಡ್ಡಿಗೆ ಸೇರಿದ್ದ ರೇಂಜ್ ರೂವರ್ ಕಾರು ಸೀಜ್

ಕೊಪ್ಪಳ; ಶಾಸಕ ಜನಾರ್ದನ ರೆಡ್ಡಿಗೆ ಸೇರಿದ್ದ ರೇಂಜ್ ರೂವರ್ ಕಾರು ಸೀಜ್

0

ಕೊಪ್ಪಳ; ಗಂಗಾವತಿ ಶಾಸಕ ಜನಾರ್ದನ ರೆಡ್ಡಿಗೆ ಸೇರಿದ್ದ ರೇಂಜ್ ರೂವರ್ ಕಾರು ಸೀಜ್ ಮಾಡಲಾಗಿದೆ. ಸಿಎಂ ಕಾನ್ವೇ ರೂಲ್ಸ್ ಬ್ರೇಕ್ ಹಿನ್ನೆಲೆ ಜನಾರ್ದನ ರೆಡ್ಡಿ ಕಾರು ಸೀಜ್ ಮಾಡಲಾಗಿದೆ.ಗಂಗಾವತಿ  ಸಂಚಾರಿ ಠಾಣೆ ಪೊಲೀಸರು ಶಾಸಕ ಜನಾರ್ದನ ರೆಡ್ಡಿ ಕಾರು ಸೀಜ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಕಾರ್ ಸೀಜ್ ಮಾಡಿ ಪೊಲೀಸರು ಗಂಗಾವತಿಗೆ ಕಾರು ತಂದಿದ್ದಾರೆ. ಅಕ್ಟೋಬರ್ 5 ರಂದು ಸಂಜೆ ರಾಯಚೂರಿನಿಂದ‌ ಜಿಂದಾಲ್ ವಿಮಾನ ನಿಲ್ದಾಣಕ್ಕೆ ಸಿಎಂ‌ ತೆರಳುತ್ತಿದ್ದ ವೇಳೆ ರೂಲ್ಸ್ ಬ್ರೇಕ್  ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ಜನಾರ್ದನ ರೆಡ್ಡಿ ಕಾರು ಚಾಲಕ ಸಿಎಂ ಕಾನ್ವೇಗೆ ಎದುರು ಕಾರು ಚಾಲನೆ ಮಾಡಿದ್ದ .ರೂಲ್ಸ್ ಬ್ರೇಕ್ ಹಿನ್ನೆಲೆ ಪೊಲೀಸರು ಮೂರು ಕಾರಗಳ ಮೇಲೆ ಎಫ್ ಐ ಆರ್ ದಾಖಲಿಸಿದ್ದರು. ಅದರಂತೆ ಜನಾರ್ದನ ರೆಡ್ಡಿ ಬಳಸುವ ರೇಂಜ್ ರೋವರ್, ಸ್ಕಾರ್ಪಿಯೋ, ಹಾಗೂ ಪಾರ್ಚೂನರ್ ಈ ಮೂರು ವಾಹನಗಳನ್ನು ಗಂಗಾವತಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ ರಾಜಕೀಯವಾಗಿ ಸಿದ್ದರಾಮಯ್ಯ ಏನೇ ಇದ್ದರೂ,  ತೊಂದರೆ ಕೊಟ್ಟರೂ, ಸಿದ್ದರಾಮಯ್ಯ ಅಲ್ಲದೇ ಹೋದರೂ ಸಿಎಂ‌ ಅಂತ ಮರ್ಯಾದೆ ಕೊಡುತ್ತೇನೆ. ಗಂಗಾವತಿಗೆ ಬಿಜೆಪಿ ಸದಸ್ಯತ್ವ ಅಭಿಯಾನಕ್ಕೆ ಹೋಗಿದ್ದೆ.ಬಳ್ಳಾರಿಯಲ್ಲಿ ಮನೆಯಲ್ಲಿ ಹೋಮ‌ ನಡೆಯುತ್ತಿತ್ತು. ಪೂರ್ಣಾಹುತಿಗೆ ಬರಬೇಕು ಅಂತ ಹೇಳಿದ್ದರು.ಹಾಗಾಗಿ ಮನೆಗೆ ಹೊರಟಿದ್ದೆ .ಕಾರಿನಲ್ಲಿ ಸಿಸಿ ಕ್ಯಾಮೆರಾ ಇದೆ, ದೃಶ್ಯಾವಳಿ ಕೊಡುತ್ತೇನೆ. ಅರ್ಧ ಗಂಟೆ ಕಾಲ ಕಾದರೂ ಕಾನ್ವೇ ಬರಲಿಲ್ಲ. ನಾನು ಪೊಲೀಸರಿಗೆ ಹೇಳಿ ಹೋಗಬಹುದಿತ್ತು.ನನ್ನ ಮುಂದೆ ಇರುವ ವಾಹನ ಬಿಟ್ಟರೆ ಅವರಿಗೆ ಸಮಸ್ಯೆ ಆಗುತ್ತದೆ ಅಂತಾ ಸಿಎಂ ಬರುವ ಮೊದಲು ಹೋಗಬೇಕು ಅಂತ ಡಿವೈಡರ್ ಮೇಲೆ ಹೋದೆ. ಅಷ್ಟು ಮೂರ್ಖತನ ನನಗಿಲ್ಲ ಎಂದಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ಅವರು ಇಂದು ಮದ ಅನ್ನೋದು ಶಿವರಾಜ್ ತಂಗಡಗಿಗೆ ಬಹಳಷ್ಟು ಹೆಚ್ಚಿದೆ.ಮುಂದಿನ ದಿನಗಳಲ್ಲಿ ಜನ ಅವರಿಗೆ ಬುದ್ದಿ ಕಲಿಸುತ್ತಾರೆ.ಮುಂದೆ ಅವರಿಗೆ ಡೆಪಾಸಿಟ್ ಕೂಡಾ ಸಿಗಲ್ಲ. ಅವರು ಗಂಗಾವತಿಗೆ ಬಂದಿದ್ದು, ನಾನು ಡಿವೈಡರ್ ಮೂಲಕ ಹೋಗಿದ್ದೆ.ಎಫ್ ಐಆರ್ ಆಗಿದ್ದು ಡ್ರೈವರ್ ಮೇಲೆ‌ ಕೇಸ್ ಆಗಿದೆ.ನಾನು ಕಾನೂನಿನ ಮೂಲಕ ಕೇಸ್ ಎದುರಿಸಲಿದ್ದೇನೆ ಎಂದಿದ್ದಾರೆ.

ಸುಪ್ರೀಂಕೋರ್ಟ್ ನಿಂದ ಜನಾರ್ದನ ರೆಡ್ಡಿಗೆ ರಿಲೀಫ್;  ಬಳ್ಳಾರಿಗೆ ತೆರಳಲು ಅನುಮತಿ

ಬೆಂಗಳೂರು; ಗಣಿ ಧಣಿ, ಗಂಗಾವತಿಯ ಬಿಜೆಪಿಶಾಸಕ ಜನಾರ್ದನ ರೆಡ್ಡಿ ಅವರಿಗೆ ಸುಪ್ರೀಂ ಕೋರ್ಟ್ ಬಿಗ್ ರಿಲೀಫ್ ನೀಡಿದೆ.ಬಳ್ಳಾರಿಗೆ ತೆರಳಲು ಸುಪ್ರೀಂಕೋರ್ಟ್ ಅನುಮತಿ ನೀಡಿದ್ದು ನವರಾತ್ರಿ ಹಬ್ಬದ ಹೊತ್ತಲ್ಲೇ ಸಿಹಿ ಸುದ್ದಿ ಸಿಕ್ಕಿದೆ.

ಯಾವುದೇ ಪೂರ್ವಾನುಮತಿ ಇಲ್ಲದೆ ಬಳ್ಳಾರಿಗೆ ತೆರಳಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದೆ.ಬಳ್ಳಾರಿ, ಕಡಪ,ಅನಂತಪುರಕ್ಕೆ ತೆರಳಲು ಇದ್ದ ಪೂರ್ವಾನುವತಿ ರದ್ದಾಗಿ, ಬಳ್ಳಾರಿ ತೆರಳಲು ಇದ್ದ ನಿರ್ಬಂಧ ತೆರವಾಗಿದೆ. ಜಾಮೀನು ನೀಡುವ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಷರತ್ತು ವಿಧಿಸಿತ್ತು. ಬಳ್ಳಾರಿಗೆ ತೆರಳು ನಿಷೇಧ ಹೇರಿ ಜಾಮೀನು ನೀಡಿತ್ತು. ಇದೀಗ ಆ ನಿರ್ಬಂಧವನ್ನು ತೆರವುಗೊಳಿಸಿದೆ.ನ್ಯಾ. ಎಂ ಎಂ ಸುಂದರೇಶ್ ನೇತೃತ್ವದ ಸುಪ್ರೀಂ ಕೋರ್ಟ್ ನ ದ್ವಿ ಸದಸ್ಯ ಪೀಠ ಈ ಮಹತ್ವದ ಆದೇಶ ನೀಡಿದೆ.

ಇನ್ನು ಈ ಬಗ್ಗೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ  ಬಿಜೆಪಿ ಕಚೇರಿಯಲ್ಲಿ ಮಾತನಾಡಿದ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಬಿಜೆಪಿ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಎಲ್ಲಿ ಹೇಳುತ್ತದೋ ಅಲ್ಲಿ ಕೆಲಸ ಮಾಡುತ್ತೇನೆ.ಬಳ್ಳಾರಿಗೆ ಏನು ಮಾಡಿದ್ದೇನೆ ಅಂತಾ ಜನರಿಗೆ ಗೊತ್ತಿದೆ.ಯಡಿಯೂರಪ್ಪ ಸಿಎಂ ಆಗಿದ್ದಾಗ ನಾನು ಸಚಿವ ಆಗಿದ್ದೆ .ಆಗ ಅಭಿವೃದ್ಧಿ ಕಾರ್ಯಗಳು ಆಗಿದೆ.ಮತ್ತೆ ಬಳ್ಳಾರಿಗೆ ಹೋಗಿ ಅಭಿವೃದ್ಧಿ ಕಾರ್ಯ ಮಾಡುತ್ತೇನೆ.ನೂರಕ್ಕೆ ನೂರು ಸಂಡೂರು ವಿಧಾನಸಭಾ ಕ್ಷೇತ್ರದ ಚುನಾವಣೆ ಗೆಲ್ಲುತ್ತೇವೆ. ಒಬ್ಬ ಮಂತ್ರಿ ನೂರಾರು ಕೋಟಿ ಹಣ ದುರುಪಯೋಗ ಮಾಡಿಕೊಂಡಿದ್ದಾನೆ.ಆ ಹಣದಲ್ಲಿ ಲೋಕಸಭಾ ಚುನಾವಣೆ ಗೆದ್ದಿದ್ದಾರೆ.ನೂರಕ್ಕೆ ನೂರು ಸಂಡೂರು ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲಲಿದೆ ಎಂದಿದ್ದಾರೆ.

ನಾವೆಲ್ಲಾ ಕಷ್ಟ ಬಂದಾಗ ಶ್ರೀರಾಮ ಚಂದ್ರನ ನೆನೆಸಿಕೊಳ್ಳುತ್ತೇವೆ.ಅಂತಹ ಶ್ರೀರಾಮಚಂದ್ರನ ಕಷ್ಟ ತಪ್ಪಲಿಲ್ಲ.ನನಗೆ ಜನ್ಮ ಕೊಟ್ಟಿದ್ದು ಬಳ್ಳಾರಿ.14 ವರ್ಷಗಳ ಬಳಿಕ ಬಳ್ಳಾರಿಗೆ ಹೋಗಲು ಅವಕಾಶ ಸಿಕ್ಕಿದೆ.ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.ನನ್ನ ಕೊನೆ‌ ಉಸಿರೂ ಕೂಡ ಬಳ್ಳಾರಿಯಲ್ಲೇ ಬಿಡಬೇಕು ಅಂತ ಆಸೆ.ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.ಮೊದಲು ಗಂಗಾವತಿಗೆ ಹೋಗಿ, ಆಂಜನೇಯನ ದರ್ಶನ ಪಡೆಯುತ್ತೇನೆ.ನನಗೆ ರಾಜಕೀಯ ಪುನರ್ಜನ್ಮ ನೀಡಿದ್ದು ಗಂಗಾವತಿ.ಗುರುವಾರ ಬೆಳಗ್ಗೆ ನವರಾತ್ರಿ ಮೊದಲ ದಿನ ಬಳ್ಳಾರಿಗೆ ಹೋಗುತ್ತೇನೆ.ದುರ್ಗಾ ಮಾತೆಯ ಆಶೀರ್ವಾದ ಪಡೆದುಕೊಳ್ಳುತ್ತೇನೆ ಎಂದಿದ್ದಾರೆ.

ಒಳ್ಳೆಯವರಿಗೆ ಒಂದಷ್ಟು ಕಷ್ಟಗಳು ಬರುತ್ತವೆ.ಈ ಹದಿನಾಲ್ಕು ವರ್ಷ ನನ್ನನ್ನು ರಾಜಕೀಯವಾಗಿ ಮುಗಿಸುವ ಸಂಚು ಮಾಡಲಾಯಿತು.ಶಾಸಕನಾಗಿ ಮತ್ತೆ ರಾಜಕೀಯ ಪುನರ್ಜನ್ಮ ಸಿಕ್ಕಿದೆ.ನನ್ನ ವಿರುದ್ಧ ತೊಡೆ ತಟ್ಟಿದ್ದ ಸಿದ್ದರಾಮಯ್ಯ ಮತ್ತೆ ಸಿಎಂ ಆಗಿದ್ದಾರೆ.ಅವರು ಮತ್ತೆ ಸಿಎಂ ಆಗಿರುವಾಗಲೇ ಮತ್ತೆ ವಿಧಾನಸಭೆಗೆ ಬಂದಿದ್ದೇನೆ.ನನ್ನ ವಿರುದ್ಧ ಕೆಟ್ಟದಾಗಿ ಬಿಂಬಿಸಲಾಯಿತು.ಈಗ ನನ್ನ ಜನ್ಮ ಸ್ಥಳಕ್ಕೆ ಹೋಗುತ್ತಿದ್ದೇನೆ.ಬಳ್ಳಾರಿಗೆ ನನ್ನನ್ನು ದುರ್ಗೆ ಮಾತೆ ಮತ್ತೆ ಕರೆಸಿಕೊಳ್ಳುತ್ತಿದ್ದಾಳೆ. ಸಿದ್ದರಾಮಯ್ಯ ಜಿಲ್ಲೆಯಲ್ಲಿ ಚಾಮುಂಡಿ ಇದ್ದಾಳೆ, ನನ್ನ ಜಿಲ್ಲೆಯಲ್ಲಿ ದುರ್ಗಮ್ಮ ಇದ್ದಾಳೆ.ಈಗ ಮಹಿಷಾಸುರ ಮರ್ದಿನಿ ಏನು ಮಾಡುತ್ತಾಳೆ ಅಂತ ನಾವೆಲ್ಲರೂ ಕಾದು ನೋಡಬೇಕು ಎಂದು ಜನಾರ್ದನ ರೆಡ್ಡಿ ಹೇಳಿದ್ದಾರೆ.