ಮನೆ Blog ರಂಭಾಪುರಿ ಶ್ರೀಗಳ ಹೇಳಿಕೆಗೆ ತಿರುಗೇಟು ಕೊಟ್ಟ ಸಚಿವ ಸತೀಶ್ ಜಾರಕಿಹೊಳಿ

ರಂಭಾಪುರಿ ಶ್ರೀಗಳ ಹೇಳಿಕೆಗೆ ತಿರುಗೇಟು ಕೊಟ್ಟ ಸಚಿವ ಸತೀಶ್ ಜಾರಕಿಹೊಳಿ

0

ಬೆಂಗಳೂರು: ಡಿಕೆ ಶಿವಕುಮಾರ್ ಗೆ ಸಿಎಂ ಆಗಲು ಅವಕಾಶ ಮಾಡಿಕೊಡಬೇಕು ರಂಭಾಪುರಿ ಶ್ರೀಗಳ ಹೇಳಿಕೆಗೆ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ಕೊಟ್ಟಿದ್ದಾರೆ.

 

ಅವರಿಗೇನು ಅದು ಸಂಬಂಧ. ಅದು ಪಾರ್ಟಿಗೆ ಸಂಬಂಧಪಟ್ಟ ವಿಚಾರ. ಸ್ವಾಮೀಜಿಗಳಿಗೂ ಮುಖ್ಯಮಂತ್ರಿ ಬದಲಾವಣೆ ಸಂಬಂಧ ಬರುವುದಿಲ್ಲ.ಅವರ ಕಾರ್ಯವ್ಯಾಪ್ತಿ ಬೇರೆ ನಮ್ಮ ಕಾರ್ಯ ವ್ಯಾಪ್ತಿ ಬೇರೆ. ಸಿಎಂ ಆಯ್ಕೆ ಮಾಡುವುದು ಶಾಸಕರು ಮತ್ತು ಹೈಕಮಾಂಡ್. ಸ್ವಾಮೀಜಿಗಳು ಅವರ ಪರ ಹೇಳಿದರೆ ,ಈ ಕಡೆ ಹತ್ತು ಜನ ಹೇಳುತ್ತಾರೆ, ಇವರೇ ಮುಂದುವರಿಯಬೇಕೆಂದು . ಸಮಾಜ ಕಟ್ಟುವುದು ಆಶೀರ್ವಾದ ಮಾಡುವುದು ಸ್ವಾಮೀಜಿಯವರ ಕೆಲಸ ಎಂದು. ಈ ರೀತಿಯಾದ ಹೇಳಿಕೆಗಳನ್ನು ಸ್ವಾಮೀಜಿಗಳು ಕೊಡಬಾರದು ಅವರಿಗೆ ಸಂಬಂಧಪಟ್ಟಿದ್ದಲ್ಲ ಇದು ಎಂದು ಗರಂ ಆಗಿದ್ದಾರೆ.

ದೆಹಲಿ ಭೇಟಿ ಸಮಯದಲ್ಲಿ ಪಕ್ಷ ಸಂಘಟನೆ ಚರ್ಚೆ ಮಾಡಬಹುದು. ಇಲಾಖಾವಾರು ಕೆಲಸಗಳು ಇರಬಹುದು ಎಂದು ನಾವು ಭಾವಿಸಿದ್ದೇವೆ.ಏನೇ ಆದರೂ ನಿಮ್ಮ ಮುಂದೆ ಹೇಳ್ತಾರೆ. ಮೊನ್ನೆ ಪೂರ್ಣ ವಿರಾಮ ಹೇಳಿದ್ದಾರೆ ( ಐದು ವರ್ಷ ನಾನೇ ಸಿಎಂ ಎಂದಿದ್ದ ಸಿಎಂ, ನನಗೆ ಬೇರೆ ಆಯ್ಕೆ ಇಲ್ಲ ಎಂದಿದ್ದ ಡಿಸಿಎಂ). ಪದೆ ಪದೆ ಚರ್ಚೆ ಆಗುವುದರಿಂದ ಡ್ಯಾಮೇಜ್ ಆಗಲ್ಲ. ಮೋದಿ ಅವರ ಬಗ್ಗೆ ಸುಬ್ರಹ್ಮಣ್ಯ ಸ್ವಾಮಿ ಹೇಳುತ್ತಿದ್ದಾರೆ. ಮೋದಿಯವರನ್ನ ಇಳಿಸುತ್ತೇವೆ ಎಂದು ಸುಬ್ರಹ್ಮಣ್ಯಸ್ವಾಮಿ ಹೇಳಿದ್ದಾರೆ. ಅದನ್ನು ಮಾದ್ಯಮದವರು ತೋರಿಸುವುದಿಲ್ಲ ಎಂದು ತಿರುಗೇಟು ಕೊಟ್ಟಿದ್ದಾರೆ.

ಗ್ಯಾರಂಟಿಗಳಿಂದ ಜನ ಸೋಮಾರಿ ಆಗುತ್ತಿದ್ದಾರೆ ಎಂಬ ರಂಭಾಪುರಿ ಶ್ರೀಗಳ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಸರಿಯಾದ ಉತ್ತರ  ಸಿಗಬೇಕಾದರೆ ಜನರನ್ನು ಕೇಳಬೇಕು. ನಾವು ನಮ್ಮ ಪಕ್ಷದ ಕಾರ್ಯಕ್ರಮ ನಾವು ಸಮರ್ಥನೆ ಮಾಡಿಕೊಳ್ಳುತ್ತೇವೆ. ವಿಪಕ್ಷದವರು ಅವರು ಕಾರ್ಯಕ್ರಮ ಸಮರ್ಥನೆ ಮಾಡಿಕೊಳ್ಳುತ್ತಾರೆ. ಒಂದು ಸಾವಿರ ಜನರನ್ನು ಸಂದರ್ಶನ ಮಾಡಿದ್ರೆ ಉತ್ತರ ಸಿಗಲಿದೆ. ಪಕ್ಷ ನಿರ್ಧಾರ ನಾವು ಸಮರ್ಥನೆ ಮಾಡುತ್ತೇವೆ. ಜನರ ಉತ್ತರವೇ ಫೈನಲ್ ಎಂದು ಸತೀಶ್ ಜಾರಕಿಹೊಳಿ‌ ಹೇಳಿದ್ದಾರೆ.

ಸಿಎಂ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿ ಅನಾವಶ್ಯಕ ಗೊಂದಲ ಸೃಷ್ಟಿ ಆಗುತ್ತಿದೆ. ನಿರ್ಧಾರ ಮಾಡೋದು ಹೈಕಮಾಂಡ್. ಏನು ಇಲ್ಲ ಎಂದು ಹೈಕಮಾಂಡ್ ಹೇಳಿದ ಮೇಲೆ ಯಾಕೆ ಗೊಂದಲ. ನಾವು ಕನ್ಫ್ಯೂಷ್ ನಲ್ಲಿದ್ದೇವೆ. ಬೇರೆ ಬೇರೆ ಕೆಲಸಗಳಿಗಾಗಿ ಭೇಟಿ ಮಾಡಬಹುದು. ಶಾಸಕರು ಮೊದಲಿಂದಲೂ ಹೇಳಿಕೆ ಕೊಡ್ತಾರೆ. ಎರಡು ವರ್ಷಗಳಿಂದ ಸಿಎಂ ಬದಲಾವಣೆ ಬಗ್ಗೆ ಹೇಳಿಕೆ ಕೊಡ್ತಾ ಇದ್ದಾರೆ. ಇನ್ನೂ ಮೂರು ವರ್ಷ ಕೊಡ್ತಾ ಇರುತ್ತಾರೆ. ಒಂದು‌ ಮನೆಯಲ್ಲಿ ಚರ್ಚೆ ಇದ್ದೆ ಇರುತ್ತದೆ. ನಮ್ಮ ಜಗಳ ನಮ್ಮನ್ನು ಬಿಟ್ಟುಬಿಡಿ. ನೀವು ತೋರಿಸದೆ ಇದ್ದರೆ ಹೊರಗೆ ಬರಲ್ಲ. ಕೆಲವರು ಬದಲಾಗಬೇಕು ಅಂತಾರೆ, ಕೆಲವರು ಬದಲಾವಣೆ ಬೇಡ ಅಂತಾರೆ. ಸಿಎಂ,ಡಿಸಿಎಂ ಬರ್ತಾರೆ ಅವರನ್ನ ಕೇಳಿ, ಅವರೇ ಉತ್ತರ ಕೊಡಬೇಕು. ಜನರಲ್ ಸೆಕ್ರೆಟರಿ, ಡಿಸಿಎಂ, ಸಿಎಂ ಸ್ಪಷ್ಟನೆ ಕೊಟ್ಟಿದ್ದಾರೆ. ಅವರ ಅಭಿಪ್ರಾಯ ಹೇಳಲು ಸ್ವಾತಂತ್ರ್ಯ ಇದ್ದಾರೆ. ಐದು ವರ್ಷಗಳ ಕಾಲ ನಮ್ಮ ಸರ್ಕಾರ ಇರುತ್ತದೆ. ನೀವು ಹೇಗೆ ಅರ್ಥ ಮಾಡಿಕೊಳ್ಳುತ್ತೀರಾ ಮಾಡಿಕೊಳ್ಳಿ ಎಂದಿದ್ದಾರೆ.