ಮನೆ Latest News ಮತಾಂತರ ಆದ್ರೆ ಎಸ್ಸಿ-ಎಸ್ಟಿ ತಮ್ಮ ಸ್ಥಾನ ಕಳೆದುಕೊಳ್ತಾರೆ ಎಂಬ ಸುಪ್ರೀಂಕೋರ್ಟ್ ತೀರ್ಪು ವಿಚಾರ: ಅದು ಬಹಳ...

ಮತಾಂತರ ಆದ್ರೆ ಎಸ್ಸಿ-ಎಸ್ಟಿ ತಮ್ಮ ಸ್ಥಾನ ಕಳೆದುಕೊಳ್ತಾರೆ ಎಂಬ ಸುಪ್ರೀಂಕೋರ್ಟ್ ತೀರ್ಪು ವಿಚಾರ: ಅದು ಬಹಳ ಟೆಕ್ನಿಕಲ್ ಇದೆ ಎಂದ ಸಚಿವ ಸಂತೋಷ್ ಲಾಡ್

0

ಬೆಂಗಳೂರು: ಮತಾಂತರ ಆದ್ರೆ ಎಸ್ಸಿ-ಎಸ್ಟಿ ತಮ್ಮ ಸ್ಥಾನ ಕಳೆದುಕೊಳ್ತಾರೆ ಎಂಬ ಸುಪ್ರೀಂಕೋರ್ಟ್ ತೀರ್ಪು ವಿಚಾರದ ಬಗ್ಗೆ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದು ಅದು ಬಹಳ  ಟೆಕ್ನಿಕಲ್ ಇದೆ ಎಂದಿದ್ದಾರೆ.

ಮತಾಂತರ ಆದರೂ ಜಾತಿ ಬದಲಾಗಲ್ಲ ಅಂತ. ಹಳೆ ತೀರ್ಪಿನಲ್ಲಿ ಸುಪ್ರೀಂಕೋರ್ಟ್ ಹೇಳಿತ್ತು. ಈಗ ಯಾವ ದೃಷ್ಟಿಕೋನದಲ್ಲಿ ಹೇಳಿದೆ ಗೊತ್ತಿಲ್ಲ .ನಾನು ಸರಿಯಾಗಿ ಓದಿಕೊಂಡು ಮಾತನಾಡ್ತೇನೆ. ಅದು ಯಾವ ಬೇಸ್ ಮೇಲೆ ಇದೆ ಗೊತ್ತಿಲ್ಲ. ಧರ್ಮ ಬದಲಾದ್ರೆ ಜಾತಿ ಬದಲಾಗಬಾರದು ಅಂತಿತ್ತು.ನಾನು ಯಾವುದೇ ಧರ್ಮಕ್ಕೆ ಹೋಗಬಹುದಿತ್ತು. ಜಾತಿ ಮಾತ್ರ ಬದಲಾವಣೆ ಮಾಡಕ್ಕಾಗಲ್ಲ. ಆ ರೀತಿ ಬಹಳ ಹಿಂದೆ ಇತ್ತು. ಆದ್ರೆ ಇದು ಯಾವ ಬೇಸ್ ಮೇಲೆ ಹೇಳಿದ್ದಾರೆ ಗೊತ್ತಿಲ್ಲ ಎಂದಿದ್ದಾರೆ.

 

ಕೇರಳ ವಯನಾಡುಗೆ 10 ಕೋಟಿ ಅನುದಾನ ನೀಡಿದಕ್ಕೆ ವಿಪಕ್ಷ ನಾಯಕರ ಟೀಕೆ ವಿಚಾರದ ಬಗ್ಗೆ ಮಾತನಾಡಿ ಮೋದಿ ಸಾಹೇಬ್ರು 14 ಸಾವಿರ ಕೋಟಿ ಏನ್ಮಾಡಿದ್ರು? ಕೋವಿಡ್ ಟೈಂನಲ್ಲಿ ವೆಂಟೀಲೇಟರ್ ನೀಡ್ತೀನಂದ್ರು. ಫಸ್ಟ್ ಅದರ ಬಗ್ಗೆ ಲೆಕ್ಕ ಕೊಡೋಕೆ ಹೇಳಿ. ಕಾಂಗ್ರೆಸ್ ಹೇಳಿಕೊಂಡು ಕೂರೋದು ಸಾಕಾಗಿದೆ. ಪಾರ್ಲಿಮೆಂಟ್ ಅಲ್ಲಿ ಪ್ರಶ್ನೆಕೂಡ ಮಾಡಬಾರದಂತೆ. ಪ್ರಜಾಪ್ರಭುತ್ವದಲ್ಲಿ ಪ್ರಶ್ನೆ ಮಾಡಕ್ಕೂ ಆಗ್ತಾಯಿಲ್ಲ. ಅವರ ಪಾರ್ಟಿ ಫಂಡ್ ಇವತ್ತು 10 ಸಾವಿರ ಕೋಟಿಯಿದೆ. ಇದರ ಬಗ್ಗೆ ಸ್ವಲ್ಪ ಬೆಳಕು ಚೆಲ್ಲಕ್ಕೆ ಹೇಳಿ. ಆಮೇಲೆ ಬೇಕಾದರೆ ಇದರ ಬಗ್ಗೆ ಮಾತನಾಡೋಣ. ಎಲೆಕ್ಟ್ರಾಲ್ ಬಾಂಡ್ ನಲ್ಲಿ ದುಡ್ಡು ತಗೊಂಡ್ರು. ಸ್ವಲ್ಪ ಅದರ ಬಗ್ಗೆಯೂ ಅವರು ಮಾತನಾಡಲಿ.ನಾವು ನೀಡಿರೋ ದುಡ್ಡು ಅಕೌಂಟ್  ಲೆಕ್ಕದಲ್ಲಿದೆ. ಇವರದ್ದು ಎಲ್ಲಿಂದ ಬಂದಿದೆ ಸ್ಪಷ್ಟೀಕರಣ ನೀಡಲಿ ಎಂದಿದ್ದಾರೆ.

ಸುಮಾರು 800 ಜಿಲ್ಲೆಗಳಲ್ಲಿ ಬಿಜೆಪಿ ಅವರು . 7 ಸ್ಟಾರ್ ಪಾರ್ಟಿ ಕಚೇರಿಗಳನ್ನ ನಿರ್ಮಾಣ ಮಾಡಿದ್ದಾರೆ. ಬೀಫ್ ರಫ್ತು ಮಾಡಿ ಚಂದಾ ಕಲೆಕ್ಟ್ ಮಾಡಿದ್ದಾರೆ. ಮೊದಲು ಅದರ ಬಗ್ಗೆ ಮಾತನಾಡಲಿ. ಇಂತಹ ಪರಿಸ್ಥಿತಿಯಲ್ಲಿ ಕೇರಳಗೆ 10 ಕೋಟಿ ಕೊಡೋ ಅಗತ್ಯ ಇತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು  ಕೇರಳಗೆ  10 ಕೋಟಿ ನೀಡಿದ್ದನ್ನ ಸಚಿವ ಸಂತೋಷ್ ಲಾಡ್ ಸಮರ್ಥಿಸಿಕೊಂಡಿದ್ದಾರೆ. 10 ಕೋಟಿ ಕೊಡಬಾರದು ಅಂತಾ ಇದ್ಯಾ? ಕೊಟ್ಟಿದಕ್ಕೆ ಇವರು ಪಿನ್ ಪಾಯಿಂಟ್ ಹೇಳ್ತಾರೆ. ಇವರ ಕಥೆಯನ್ನ ಹೇಳೋಣವಾ? ಕೇಂದ್ರದಿಂದ ಗುಜರಾತಿಗೆ ಎಷ್ಡು ದುಡ್ಡು ಹೋಯ್ತು? ಬರೀ ಇದರ ಬಗ್ಗೆ ಪ್ರಶ್ನೆ ಕೇಳ್ತೀರಾ. ಅವರನ್ನ ಸಹ ಪ್ರಶ್ನೆ ಮಾಡಿ . ಕಳೆದ 10 ವರ್ಷದಿಂದ ಗುಜರಾತಿಗೆ ದುಡ್ಡು ಎಷ್ಟೋಗಿದೆ.

ಕರ್ನಾಟಕಕ್ಕೆ ಎಷ್ಟು ಹೋಗಿದೆ ಲೆಕ್ಕ ಕೊಡಲಿ. ಯಾಕೆ ಅಲ್ಲಿ ಜಾಸ್ತಿ ಕೊಟ್ಟ ಇಲ್ಲಿ ಕಡಿಮೆ ಮಾಡಿದ್ರು. ಸರ್ಕಾರ ಬಂದಾಗ ದುಡ್ಡು ಕೊಡ್ತಾವೆ ಅದರೇನಿದೆ. ನಾನು 2013ರಲ್ಲಿ ಬದರಿನಾಥ್ ಕೇದರನಾಥಗೆ ಕೊಟ್ಟೆ. ಎಲ್ಲರೂ ಕೂಡ ನೀಡಿದ್ದಾರೆ ಅದರಲ್ಲಿ ಏನಿಲ್ಲ ಎಂದಿದ್ದಾರೆ.