ಬೆಂಗಳೂರು: RSS ವಿರುದ್ದದ ಹೋರಾಟದಲ್ಲಿ ಪ್ರಿಯಾಂಕ್ ಖರ್ಗೆ ವಿಫಲ ಆಗಿದ್ದೀರಿ ಎಂಬ ಅನಂತಕುಮಾರ್ ಪುತ್ರಿ ಐಶ್ವರ್ಯ ಟ್ವೀಟ್ ಗೆ ಸಚಿವ ಪ್ರಿಯಾಂಕ ಖರ್ಗೆ ತಿರುಗೇಟು ಕೊಟ್ಟಿದ್ದಾರೆ.
ಅವರ ಬಗ್ಗೆ ನನಗೆ ಗೊತ್ತಿಲ್ಲ, ವಕೀಲರು ಇದ್ದಾರೆ ಅಂತ ಗೊತ್ತಿದೆ. ಆದ್ರೆ ವಿಡಿಯೋ ದಲ್ಲಿ ಅನಂತಕುಮಾರ್ ಇದ್ದಾರೆ, ಫಾರೆನ್ಸಿಕ್ ರಿಪೋರ್ಟ್ ಕೂಡ ಇದೆ. ಆದ್ರೆ ಕಲಬುರಗಿ ಗೆ ಬಂದು ಯಾರು ಏನು ಕಮೆಂಟ್ ಮಾಡಿದ್ದಾರೆ ಅನ್ನೋದು ಅವರಿಗೆ ಗೊತ್ತಿದೆ.ಅವರ ಕುಟುಂಬದ ಬಗ್ಗೆ ಬಿಜೆಪಿ ಅವರು ಹೇಗೆ ನಡೆದುಕೊಂಡಿದ್ದಾರೆ ಅನ್ನೋದು ಅವರಿಗೆ ಗೊತ್ತಾಗಬೇಕಾಗಿದೆ ಎಂದಿದ್ದಾರೆ.
ಕಲ್ಲು ತೂರಿದವರ ಮೇಲಿನ ಕೇಸ್ ವಾಪಸ್ ಪಡೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ದಯವಿಟ್ಟು ಆ ಕೇಸ್ ಪರಿಶೀಲನೆ ಮಾಡೋಕೆ ಹೇಳಿ. ಕಾನೂನು ಬಾಹಿರ ಯಾರೂ ಏನೂ ಮಾಡೋಕೆ ಆಗಲ್ಲ. ಅಮಾಯಕರನ್ನ ಹೇಗೆ ನಡೆಸಿಕೊಂಡಿದ್ದಾರೆ ಗೊತ್ತಿಲ್ವಾ?. ನಾವೇನೇ ಮಾಡಿದರೂ ಕಾನೂನು ಅಡಿಯಲ್ಲಿ ಮಾಡಬೇಕು. ಹಿಟ್ ಆ್ಯಂಡ್ ರನ್ ಮಾಡೋದು ಬೇಡ. ವೈಯಕ್ತಿಕ ವಿಚಾರ, ನನ್ಮ ಮೇಲೆ ಕುಟುಂಬದ ಮೇಲೆ ಬೆದರಿಕೆ ಹಾಕ್ತಾರೆ. ಆದ್ರೆ ನನ್ನ ಪ್ರಶ್ನೆಗೆ ಉತ್ತರ ಎಲ್ಲಿ ಸಿಕ್ಕಿದೆ ಹೇಗೆ?. ಆರ್ ಎಸ್ ಎಸ್ ರೆಜಿಸ್ಟರೇಷನ್ ಡಾಕ್ಯುಮೆಂಟ್ ನನ್ನ ಮುಖದ ಮೇಲೆ ಎಸೆಯಲಿ. ಪ್ರಿಯಾಂಕ್ ಖರ್ಗೆ ಗೆ ಮುಖಭಂಗ ಅಂತ ಆರೋಪ ಮಾಡ್ತಾರೆ. ಹೈಕೋರ್ಟ್ ಒಂದು ಡೈರೆಕ್ಷನ್ ಕೊಟ್ಟಿದೆ ಎಂದು ಹೇಳಿದ್ದಾರೆ.
ನಮಗೂ ಫಥಸಂಚಲನ ಮಾಡೋಕೆ ದಲಿತ ಸಂಘಟನೆಗಳ ಪತ್ರ ವಿಚಾರದ ಬಗ್ಗೆ ಮಾತನಾಡಿದ ಅವರು ನಮಗೂ ಅವಕಾಶ ನೀಡಿ ಎಂದು ಪತ್ರ ಬರೆದಿವೆ. ಭೀಮ್ ಆರ್ಮಿಗೂ ಸೇರಿ ಎಲ್ಲ ಸಂಘಟನೆ ಗೂ ಒಂದೇ ಕಾನೂನು. ಆದ್ರೆ ಕಾನೂನು ಪಾಲನೆ ಮಾಡೋಕೆ ಆರ್ ಎಸ್ ಎಸ್ ಗೆ ಆಗ್ತಿಲ್ಲ. ಹೈಕೋರ್ಟ್ ಏನು ಡೈರೆಕ್ಷನ್ ಕೊಡುತ್ತದೆ, ಅದನ್ನ ಪಾಲಿಸಿ ಎಂದು ತಿಳಿಸಿದ್ದಾರೆ.
ಬಿಜೆಪಿಗೆ ಟಾರ್ಗೆಟ್ ಆಗಿದ್ದೀರಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಅದು ಮುಂಚೆಯಿಂದಲೂ ಇದ್ದೇನೆ. ನಾನು ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಕೂಡ ಟಾರ್ಗೆಟ್ ಇದ್ದಾರೆ, ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಇದ್ದಾರೆ. ಇದರಲ್ಲಿ ಏನಿದೆ? ಎಂದು ಪ್ರಶ್ನಿಸಿದ್ದಾರೆ. ಸರ್ಕಾರಿ ಅಧಿಕಾರಿಗಳ ಅಮಾನತ್ತು ವಿಚಾರದ ಬಗ್ಗೆ ಪ್ರತಿಕ್ರಿಯಿಸಿ ಏನೇ ಆರೋಪ ಇದ್ದರೂ ನಾನು ಮನಸ್ಸು ಬಂದಂಗೆ ಆಗಲ್ಲ. ಕಾನೂನು ಇದೆ, ರೂಲ್ಸ್ ಇದೆ. ಮಂತ್ರಿ ಇದ್ದೇನೆ ಅಂತ ಅಮಾನತ್ತು ಮಾಡೋಕೆ ಆಗಲ್ಲ. ತನಿಖೆ ನಂತ್ರ ಉಲ್ಲಂಘನೆ ಅಂತ ಆದ್ಮೇಲೆ ಅಮಾನತ್ತು ಮಾಡಲಾಗಿದೆ.ಯಾವುದೆ ಇಲಾಖೆ ಇದ್ದರೂ ರೂಲ್ಸ್ ಬಗ್ಗೆ ಅರಿವು ಇರಬೇಕು ಎಂದು ಹೇಳಿದ್ದಾರೆ.
ದಲಿತ ಸಂಘಟನೆ ಗೆ ಪ್ರಿಯಾಂಕ್ ಖರ್ಗೆ ಪ್ರಾಯೋಜಕತ್ವ ಇದೆ ಎಂಬ ಆರೋಪ ವಿಚಾರದ ಬಗ್ಗೆ ಮಾತನಾಡಿ ಆಯಿತು ಇದೆ ಅಂತ ತಿಳಿದುಕೊಳ್ಳಲಿ. ಆರ್ ಎಸ್ ಎಸ್ ಗೆ ಯಾರ ಪ್ರಾಯೋಜಕತ್ವ ಇದೆ ಹಾಗಾದ್ರೆ?. ನಿರ್ದೇಶಕ, ನಿರ್ಮಾಪಕ ಯಾರು?. ಹರಿಪ್ರಸಾದ್ ಅವರು ವಿಡಿಯೋ ಬಿಟ್ಟಿದ್ದಾರೆ ಅಲ್ವಾ?. ಆರ್ ಎಸ್ ಎಸ್ ಕಟ್ಟಡ, ಬಟ್ಟೆ, ಡ್ರಮ್ ತೆಗೆದುಕೊಳ್ಳಲು ಎಲ್ಲಿಂದ ಹಣ ಬರುತ್ತದೆ?. ರೆಜಿಸ್ಟರ್ ಆಗದೇ ಇರೋ ಸಂಘಟನೆ ಗೆ ಎಲ್ಲಿಂದ ಹಣ ಬರುತ್ತದೆ. ರಿಜಿಸ್ಟರ್ ಆದ್ರೆ ಟ್ಯಾಕ್ಸ್ ಕಟ್ಟಬೇಕಾಗುತ್ತದೆ ಅಲ್ವೇ ಎಂದಿದ್ದಾರೆ,
ರಸ್ತೆಯಲ್ಲಿ ನಮಾಜ್ ಮಾಡ್ತಾರೆ ಎಂಬ ರಾಜಣ್ಣ ಹೇಳಿಕೆ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಯಾರೇ ಇದ್ದರೆ ರಸ್ತೆಯಲ್ಲಿ ಏನೂ ಮಾಡಬಾರದು.ಪರ್ಮಿಷನ್ ಕೊಟ್ಟರೇ ಅಷ್ಟೇ ಮಾಡಿ. ಇಲ್ಲಂದ್ರೆ ಯಾರೂ ಕೂಡ ರಸ್ತೆಗೆ ಬರಬಾರದು. ಕಾಂಪ್ಲಿಕೇಷನ್ ಏನಿದೆ? ಸರ್ಕಾರದ ಆದೇಶ ಇದೆ. ಎಲ್ಲಾ ಧರ್ಮದವರಿಗೂ ಸಂವಿಧಾನ ಅಪ್ಲೈ ಆಗಬೇಕು ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.











