ಮನೆ Latest News ಬಸವರಾಜ ರಾಯರೆಡ್ಡಿ ಹೇಳಿಕೆ‌ಗೆ ಸಚಿವ ಎಂ ಬಿ ಪಾಟೀಲ್ ಗರಂ

ಬಸವರಾಜ ರಾಯರೆಡ್ಡಿ ಹೇಳಿಕೆ‌ಗೆ ಸಚಿವ ಎಂ ಬಿ ಪಾಟೀಲ್ ಗರಂ

0

ಬೆಂಗಳೂರು: ಬಸವರಾಜ ರಾಯರೆಡ್ಡಿ ಹೇಳಿಕೆ‌ಗೆ ಸಚಿನ ಎಂ ಬಿ ಪಾಟೀಲ್ ಗರಂ ಆಗಿದ್ದಾರೆ. ಅವರು ಯಾರ ವಿರುದ್ಧ ಆರೋಪ‌ ಮಾಡಿದ್ರು ಹೇಳಲಿ. ಪಕ್ಷಕ್ಕಿಂತ ಯಾರು ದೊಡ್ಡವರಲ್ಲ. ಅವರ ಮೇಲೆ ಪಕ್ಷ ಕ್ರಮ ಕೈಗೊಳ್ಳುತ್ತದೆ. ಸಿಎಂ ಇದ್ದಾರೆ,ವರಿಷ್ಠರು ಇದ್ದಾರೆ. ಪಕ್ಷದ ಅಧ್ಯಕ್ಷರು ಇದ್ದಾರೆ ಕ್ರಮ ಕೈಗೊಳ್ತಾರೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಜಯಚಂದ್ರ ಅವರು ಹಿರಿಯರಿದ್ದಾರೆ. ಅವರಿಗೆ ಎಲ್ಲವೂ ಗೊತ್ತಿರುತ್ತೆ.ಅರವಿಂದ ಬೆಲ್ಲದ್ ಸೇರಿ ಹಲವರು ಹೇಳಿದ್ರು. ಆ ಭಾಗದಲ್ಲಿ ಆದರೆ ಅನುಕೂಲ ಅಂತಾ. ನೆಲಮಂಗಲದಲ್ಲಿ ಮಾಡಿದ್ರೆ ಅನುಕೂಲ ಆಗಬಹುದು. ಶಿರಾದಲ್ಲಿ ಮಾಡಿದ್ರೆ ಬೆಂಗಳೂರು ಏರ್ಪೋರ್ಟ್ ಆಗಲ್ಲ. ಅದು ತುಮಕೂರು,ಚಿತ್ರದುರ್ಗ ಏರ್ಪೋರ್ಟ್ ಆಗುತ್ತೆ. ಹಾಗಾಗಿ ಬೆಂಗಳೂರು ಅಕ್ಕಪಕ್ಕ ಆದ್ರೆ ಉತ್ತಮ.ಇದು ಸದ್ಯಕ್ಕೆ ಆಗೋದಲ್ಲ. ಅದಕ್ಕೆ ಸಾಕಷ್ಟು ಸಮಯ ಬೇಕು. ಅವರು ವರದಿ ಕೊಡಬೇಕು. ಅಲ್ಲಿಂದ ಅದಕ್ಕೆ ಅವಕಾಶ ಸಿಗಬೇಕು. ಮಾಡುವವರು ಬರಬೇಕು ಎಂದಿದ್ದಾರೆ.ಡಿಪಿಆರ್ ಆಗಬೇಕು. ಕ್ಯಾಬಿನೆಟ್ ಚರ್ಚೆಯಾಗಬೇಕು. ನಾವು ಇದೆಲ್ಲ ಮಾಡೋಕೆ ೨೦೨೬ ಆಗಬಹುದು. ಏನಿದ್ರೂ ಎಲ್ಲವೂ ೨೦೩೩ರ ನಂತರವೇ  ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.

ಕರ್ನಾಟಕದಲ್ಲಿ ಅಭಿವೃದ್ಧಿ ಕೆಲಸ ಭ್ರಷ್ಟಾಚಾರದಿಂದ ಹಾಳಾಗುತ್ತಿದೆ : ಬಸವರಾಜ ರಾಯರೆಡ್ಡಿ ಹೇಳಿಕೆ

ಬೆಂಗಳೂರು; ಕರ್ನಾಟಕದಲ್ಲಿ ಅಭಿವೃದ್ಧಿ ಕೆಲಸ ಭ್ರಷ್ಟಾಚಾರದಿಂದ ಹಾಳಾಗುತ್ತಿದೆ ಎಂದು ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು ಕರ್ನಾಟಕದಲ್ಲಿ ಅಭಿವೃದ್ಧಿ ಕೆಲಸ ಭ್ರಷ್ಟಾಚಾರ ಹಾಳಾಗುತ್ತಿದೆ ಅಂತ ಹೇಳಿದ್ದೀನಿ. ಸರಿ ಮಾಡ್ಬೇಕು ಅಂತಲೂ ಹೇಳಿದ್ದೇನೆ. Transfer become a industrial. ಇದು ಸಿದ್ದರಾಮಯ್ಯ ಸರ್ಕಾರದ ತಪ್ಪಲ್ಲ.ಬಿಜೆಪಿ, ಜೆಡಿಎಸ್ ಸರ್ಕಾರದ ಅವಧಿಯಲ್ಲಿ ಏನೆಲ್ಲ ಆಯ್ತು?. ಚಿಂತನೆ ಮಾಡಬೇಕು ಅಂತ ಹೇಳಿದ್ದೀನಿ. ಸಿದ್ದರಾಮಯ್ಯ ಸರ್ಕಾರ ಭ್ರಷ್ಟಾಚಾರ ಮಾಡಿದೆ ಅಂತ ನಾನು ಹೇಳಿಲ್ಲ. ರೆಕ್ಮೆಂಡ್ ಮೇಲೆ ವರ್ಗಾವಣೆ ಆಗುವಂತಿಲ್ಲ. PDAನ ಕೌನ್ಸಿಲಿಂಗ್ ಮಾಡುವುದಾಗಿ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ. ಕರ್ನಾಟಕದ ಭ್ರಷ್ಟಾಚಾರ ಆರೋಪ ಇರುವ ಹೆಸರು ಹೋಗ್ಬೇಕು.ಕೌನ್ಸಿಲಿಂಗ್ ಮೂಲಕ ವರ್ಗಾವಣೆ ಆದರೆ ಭ್ರಷ್ಟಾಚಾರ ನಿಲ್ಲುತ್ತೆ ಎಂದಿದ್ದಾರೆ.

ಇನ್ನು ಇದೇ ವೇಳೆ ಮಾತನಾಡಿದ ಅವರು  ಕೊಪ್ಪಳದ ಡಿಸಿ ಕಚೇರಿಯಲ್ಲಿ ಜಿಲ್ಲಾ ಪರಿಷತ್ ಸಭಾಂಗಣದಲ್ಲಿ ಡಾ.ನಂಜುಂಡಪ್ಪ ವರದಿಯ ಕುರಿತು ಗೋವಿಂದರಾಜು ಸಮ್ಮುಖದಲ್ಲಿ ಸಭೆ ನಡೆಸಲಾಯಿತು. ನಾನು ಕೊಪ್ಪಳದಲ್ಲೇ ಇದ್ದೆ, ಸಲಹೆ ನೀಡಲು ಕೇಳಿದ್ರು. ಅಭಿವೃದ್ಧಿ ವಿಚಾರವಾಗಿ ಸಲಹೆ ಕೇಳಿದ್ರು. ಕಲ್ಯಾಣ ಕರ್ನಾಟಕದಲ್ಲಿ ಕಳೆದ 20 ವರ್ಷಗಳಿಂದ ಆದ ಅಭಿವೃದ್ಧಿ ಬಗ್ಗೆ ಚರ್ಚೆ ಆಯ್ತು. ಹಿಂದುಳಿದ ಜಿಲ್ಲೆಗಳ ಬಗ್ಗೆಯೂ ಚರ್ಚೆ ಆಯ್ತು. ನಮ್ಮ ಪಕ್ಷ ನನಗೆ ಏನೂ ಹೇಳಿಲ್ಲ. ಸಿಎಂ ಸಹ ಏನೂ ಕೇಳಿಲ್ಲ. ಇದರಲ್ಲಿ ಡ್ಯಾನೇಜ್ ಕಂಟ್ರೋಲ್ ಎಲ್ಲಿ ಬರುತ್ತೆ?. ಗುಣಮಟ್ಟದ ಕಾಮಗಾರಿ ಏನೂ ಆಗ್ತಿಲ್ಲ ಅಂತ ಚರ್ಚೆ ಆಯ್ತು. ನಮ್ಮಲ್ಲಿ ಯಾಕೆ ಆಗ್ತಾ ಇಲ್ಲ ಅಂತ ಚರ್ಚೆ ಆಯ್ತು.ಇದು ಭ್ರಷ್ಟವಾದ ರಾಜ್ಯದ ವ್ಯವಸ್ಥೆ ಆಗಿದೆ, ಸರಿ ಇಲ್ಲ ಅಂದೆ.ನೀವು ಒಳ್ಳೆಯ ಕೆಲಸ ಮಾಡ್ಬೇಕು, ಸಿಎಂ ಗೆ ವರದಿ ಕೊಟ್ಟ ವೇಳೆ ನನ್ನ ಮಾತು ಹೇಳಿ ಅಂತ ಹೇಳಿದ್ದೇನೆ. ಇದರಲ್ಲಿ ಏನು ತಪ್ಪಿದೆ? ಎಂದು ಪ್ರಶ್ನಿಸಿದ್ದಾರೆ.