ಮನೆ Latest News ಬಾಣಂತಿಯರ ಸಾವಿನ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ವಿಧಾನ ಪರಿಷತ್ ನಲ್ಲಿ ಉತ್ತರ

ಬಾಣಂತಿಯರ ಸಾವಿನ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ವಿಧಾನ ಪರಿಷತ್ ನಲ್ಲಿ ಉತ್ತರ

0

ಬೆಳಗಾವಿ; ಬಾಣಂತಿಯರ ಸಾವಿನ ಬಗ್ಗೆ ಸಚಿವ ದಿನೇಶ್ ಗುಂಡೂರಾವ್ ವಿಧಾನ ಪರಿಷತ್ ನಲ್ಲಿ  ಉತ್ತರ ನೀಡಿದ್ರು.

ಬಳ್ಳಾರಿಯ ಆಸ್ಪತ್ರೆಯಲ್ಲಿ ಬಾಣಂತಿಯರ ಸಾವಿನ ಘಟನೆ ನಡೆದಿದೆ. 11-11-2024 ರಿಂದ ತಾಯಂದಿರ ಸಾವು ವರದಿಯಾಗಿದೆ. ಬಳ್ಳಾರಿಯಲ್ಲಿ ನವೆಂಬರ್ 9, 10, 11 ರಂದು ಗರ್ಭಿಣಿಯರ ಶಸ್ತ್ರ ಚಿಕಿತ್ಸೆ ನಡೆಯಿತು. ಅದಾದ ಬಳಿಕ ಸಾವುಗಳಾಗಿವೆ. ೩ ದಿನಗಳಲ್ಲಿ 34 ಸಿಸೇರಿಯನ್ ಆಪರೇಷನ್ ಗಳಾಗಿದ್ದು 7ಪ್ರಕರಣಗಳಲ್ಲಿ ತೊಂದರೆ ಆಗಿದೆ. ಘಟನೆ ವರದಿಯಾದ ಕೂಡಲೇ ನುರಿತ ವೈದ್ಯರ ತಂಡವನ್ನು ರಚನೆ ಮಾಡಲಾಗಿದೆ. ರಿಂಗರ್ ಲ್ಯಾಕ್ಟೇಟ್ ದ್ರಾವಣ 1 ಹೊಸ ಬ್ಯಾಚ್ ಅನ್ನು ನವೆಂಬರ್‌ 9 ರಂದು ಬಳಸಲಾಗಿದೆ. ಇದರ ಬಗ್ಗೆಯೇ ಹೆಚ್ಚು ಸಂಶಯವನ್ನು ತಜ್ಞ ವೈದ್ಯರು ವ್ಯಕ್ತಪಡಿಸಿದರು ಎಂದಿದ್ದಾರೆ.

ರಿಂಗರ್ ಲ್ಯಾಕ್ಟೇಟ್ ಬಗ್ಗೆ 10 ತಿಂಗಳ ಹಿಂದೆಯೇ ಅನುಮಾನಗಳಿತ್ತು. ಮಾರ್ಚ್ ನಿಂದ ಆಗಸ್ಡ್ ವರೆಗೆ ನಾವು ಈ ದ್ರಾವಣ ಬಳಸಲು ಅನುಮತಿ ನೀಡಿರಲಿಲ್ಲ. 22 ರಿಂಗರ್ ಲ್ಯಾಕ್ಟೇಟ್ ಬ್ಯಾಚ್ ಗಳನ್ನು ನಾವು ಸ್ಟಾಪ್ ಮಾಡಿದ್ದೆವು. ಎಲ್ಲ ಕಡೆ ರಿಂಗರ್ ಲ್ಯಾಕ್ಟೇಟ್ ಬಳಕೆಯನ್ನು ಹಿಂಪಡೆದಿದ್ದೇವೆ. ಇದನ್ನು ಪೂರೈಕೆ ಮಾಡಿದ್ದು ಪಶ್ಚಿಮ್ ಬಂಗಾ ಕಂಪನಿ. ಸೆಂಟ್ರಲ್‌ ಡ್ರಗ್ ಲ್ಯಾಬೋರೇಟರಿ ಮೂಲಕ ಪಶ್ಚಿಮ್ ಬಂಗಾ ಕಂಪನಿ ರಿಪೋರ್ಟ್ ಸಲ್ಲಿಸಿತ್ತು. ಹೀಗಾಗಿ ನಮಗೆ ಇದನ್ನು ಬಳಸುವುದು ತಪ್ಪಿಸಲು ಸಾಧ್ಯ ಆಗಲಿಲ್ಲ ಎಂದರು.

ಬಳ್ಳಾರಿಯ ಪ್ರಕರಣ ಆದ ಬಳಿಕ ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ನಮಗೆ ಫಾರ್ಮ್ಯಾಸುಟಿಕಲ್‌ ಕಂಪನಿಗಳನ್ನು ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ. ಡ್ರಗ್ ಫಾರ್ಮಾ ಕಂಪನಿಗಳು ಅತಿ ಹೆಚ್ಚಾಗಿರುವುದು ಉತ್ತರ ಭಾರತದಲ್ಲಿ  ಅನೇಕ ರೀತಿ ರಕ್ಷಣೆಗಳು ಫಾರ್ಮಾ ಕಂಪನಿಗಳಿಗೆ ಸಿಗುತ್ತಿದೆ. ಕೆಲವು ಕಂಪನಿಗಳು ವಿದೇಶಕ್ಕೆ ಒಂದು ಕ್ವಾಲಿಟಿ, ನಮ್ಮ ದೇಶಕ್ಕೆ ಒಂದು ಕ್ವಾಲಿಟಿ ಮಾಡುತ್ತಿವೆ. ಕ್ವಾಲಿಟಿ ಕಾಂಪ್ರಮೈಸ್ ಆಗುತ್ತಿದೆ. ಬಳ್ಳಾರಿಯ ಪ್ರಕರಣ ಕುರಿತು ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾಗೆ ಪತ್ರ ಬರೆದು ಮಾಹಿತಿ ಪಡದಿದ್ದೇವೆ. ಡ್ರಗ್ ಕಂಟ್ರೋಲರ್ ನನ್ನು ಅಮಾನತು ಮಾಡಿದ್ದೇವೆ. ರಿಂಗರ್ ಲ್ಯಾಕ್ಟೇಟ್ ದ್ರಾವಣ ಮಾದರಿ ಪರೀಕ್ಷೆಯಲ್ಲಿ ನಿರ್ಲಕ್ಷ್ಯ ತೋರಿದ ಔಷಧ ನಿಯಂತ್ರಕ ಡಾ.ಉಮೇಶ್ ರನ್ನು ಅಮಾನತು ಮಾಡಲಾಗಿದೆ. KSMSCL ಎಂಡಿಗೆ ಇಲಾಖಾ ವಿಚಾರಣೆ ಗೆ ಷೋಕಾಸ್ ನೊಟೀಸ್ ನೀಡಲಾಗಿದೆ ಎಂದು ಹೇಳಿದ್ದಾರೆ.ಎನ್ಎಬಿಎಲ್ ಲ್ಯಾಬ್ ಗಳ ಪ್ರಯೋಗ ವಿಧಾನದ ತನಿಖೆ ಯನ್ನು ನಡೆಸಲಾಗುತ್ತಿದೆ. ಅಭಿವೃದ್ಧಿ ಆಯುಕ್ತರ ನೇತೃತ್ವದಲ್ಲಿ ಕೂಲಂಕುಷ ವರದಿಗೆ ಸಮಿತಿ ರಚನೆ ಮಾಡಿದ್ದೇವೆ ಎಂದರು

ರಾಜ್ಯದ ಆಸ್ಪತ್ರೆಗಳಲ್ಲಿ ಆಗಿರುವ ಡೆತ್ ಆಡಿಟ್ ಮಾಡ್ತಿದ್ದೇವೆ. ಎಲ್ಲೆಲ್ಲಿ ರಿಂಗರ್ ಲ್ಯಾಕ್ಟೇಟ್ ಬಳಕೆಯಾಗಿದೆ ಅಲ್ಲಿ ಹೇಗಿದೆ ಸ್ಥಿತಿ ಎಂಬುದರ ವರದಿ ನೀಡಲು ಸೂಚಿಸಿದ್ದೇವೆ. ಎಲ್ಲಾ ತಾಯಿ ಮರಣ ಪ್ರಮಾಣದ ಬಗ್ಗೆ ಡೆತ್ ಆಡಿಟ್ ಗೆ ಸೂಚಿಸಲಾಗಿದೆ. ಇದು ನಮ್ಮ ವ್ಯವಸ್ಥೆಯ ಫೆಲ್ಯೂರ್. ಈ ಘಟನೆ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ ಇಡೀ ದೇಶಕ್ಕೆ ಎಚ್ಚರಿಕೆಯ ಗಂಟೆ. ಇದರಲ್ಲಿ ಮುಚ್ಚು ಮರೆ ಮಾಡುವ ಪ್ರಶ್ನೆಯೇ ಇಲ್ಲ. ಆಸ್ಪತ್ರೆಗೆ ಬಂದು ಮಗು ಹುಟ್ಟುತ್ತದೆ ಎಂದು ಸಂಭ್ರಮದಲ್ಲಿ ಇರ್ತಾರೆ. ತಾಯಿ ಮಗು ಸಂಭ್ರಮದಲ್ಲಿ ಇರುವಾಗ ತಾಯಿ ತೀರಿ ಹೋದರೆ ಏನು ಮಾಡುವುದು?. ಯಾವುದೇ ಉತ್ಪಾದಕರ ತಪ್ಪಿಗೋಸ್ಕರ ಬಾಣಂತಿ ಸಾವನ್ನಪ್ಪಿದರೆ ಬಹಳ‌ ನೋವಾಗುತ್ತದೆ. ವ್ಯವಸ್ಥೆಯ ವೈಫಲ್ಯ ಸರಿ ಮಾಡುವುದು ಒಂದು ಕ್ರಮ ಆದರೆ ಆ ಜೀವ ವಾಪಸ್ ತರಲು ಸಾಧ್ಯವಿಲ್ಲ. ಒಂದು ಕಡೆ ೫ ಲಕ್ಷ ಪರಿಹಾರ ನೀಡಿದ್ದೇವೆ, ಮನೆ ಇಲ್ಲದವರಿಗೆ ಮನೆ ಕೊಡಿಸಲು ವ್ಯವಸ್ಥೆ ಮಾಡಿದ್ದೇವೆ. ಹೈದ್ರಾಬಾದ್ ನ ಲ್ಯಾಬೋರೇಟರಿ ಗೂ ಐವಿ ದ್ರಾವಣದ ಬ್ಯಾಚ್ ಪರೀಕ್ಷೆ ಗೆ ಕಳಿಸಿದ್ದೇವೆ.ಪಶ್ಚಿಮ್ ಬಂಗಾ ಕಂಪನಿ ಯನ್ನು ಬ್ಲ್ಯಾಕ್ ಲಿಸ್ಟ್ ಗೆ ಸೇರಿಸಿದ್ದೇವೆ. ತಪ್ಪು ರಿಪೋರ್ಟ್ ಕೊಟ್ಟ ಲ್ಯಾಬೋರೇಟರಿ ಗೂ ತನಿಖೆಗೆ ಒಳಪಡಿಸುತ್ತಿದ್ದೇವೆ. ಪಶ್ಚಿಮ್ ಬಂಗಾ ಕಂಪನಿಗೂ ಕೂಡ ನೊಟೀಸ್ ಕೊಟ್ಟಿದ್ದೇವೆ. ಗುಣಮಟ್ಟದ ಔಷಧ ಪೂರೈಕೆ ಆಗಿದ್ದರೆ ಇಂಥ ಸಮಸ್ಯೆಯೇ ಬರುತ್ತಿರಲಿಲ್ಲ. ಕ್ವಾಲಿಟಿ ಇರುವ ಔಷಧ ಪೂರೈಕೆ ಮಾಡಲೇಬೇಕು.ಇದೇ ಕಂಪನಿ ಪೂರೈಕೆ ಮಾಡಿರುವ Dextrose with Sodium Chloride ಔ಼ಷಧ ಕೂಡ ಗುಣಮಟ್ಟ ಸರಿಯಿಲ್ಲ. ಈ ಕಂಪನಿಯ ಈ ಔಷಧ ಕೂಡ ಕಪ್ಪು ಪಟ್ಟಿಗೆ ಸೇರಿಸಲಾಗಿದೆ.ಪಶ್ಚಿಮ್ ಬಂಗಾ ಕಂಪನಿಯ ಉತ್ಪದನಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ. ಉತ್ಪಾದನೆಯ ವ್ಯವಸ್ಥೆಯೇ ಸರಿಯಿಲ್ಲ ಎಂದು ಗೊತ್ತಾಗಿದೆ. ಸೆಂಟ್ರಲ್ ಡ್ರಗ್ ಕಂಟ್ರೋಲರ್ ಕೂಡ ಭೇಟಿ ನೀಡಿ ಪರಿಶೀಲನೆ ಮಾಡಿದೆ. ಪಶ್ಚಿಮ್ ಬಂಗಾ ಕಂಪನಿಗೆ ಔ಼ಷಧ ಪೂರೈಕೆಗೆ ಸ್ಟಾಪೇಜ್ ಆರ್ಡರ್ ನೀಡಲಾಗಿದೆ .ಔಷಧ ಇಲಾಖೆ ಮತ್ತು ಆಹಾರ ಗುಣಮಟ್ಟ ಸುರಕ್ಷತಾ ಇಲಾಖೆ ಒಂದೇ ಮಾಡಿದ್ದೇವೆ ಎಂದು ಹೇಳಿದ್ದಾರೆ.