ಬೆಳಗಾವಿ: ಮೊಟ್ಟೆಯಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ ವಿಚಾರದ ಬಗ್ಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರತಿಕ್ರಿಯಿಸಿದ್ದು ಆತಂಕ ಪಡುವ ಅವಶ್ಯಕತೆ ಇಲ್ಲ ಎಂದು ಹೇಳಿದ್ದಾರೆ.
ಕೇಂದ್ರ ಸರ್ಕಾರ ಸಹ ವರದಿ ಕಳಿಸಿದೆ . ಆರು ದಿವಸ ಆಗುತ್ತೆ ಅಂತಾ ಹೇಳಿದ್ದಾರೆ. ಸ್ಯಾಂಪಲ್ ಟೆಸ್ಟ್ ಮಾಡೋಕೆ ಆರು ದಿನ ಬೇಕು .ಸೋಮವಾರ ರಿಪೊರ್ಟ್ ಬರಬಹುದು.ರಿಪೊರ್ಟ್ ಬಂದ ಮೇಲೆ ಅದರ ಮಾಹಿತಿ ತಿಳಿಸುತ್ತೇನೆ .
ನನ್ನ ಪ್ರಕಾರದ ಸದ್ಯಕ್ಕೆ ಯಾವುದೇ ಆತಂಕ ಮಾಡುವು ಬೇಡ . ರೂಮರ್ಸ್ ಹರಡಿದವರ ವಿರುದ್ಧ ಕ್ರಮ ವಿಚಾರದ ಬಗ್ಗೆ ಮಾತನಾಡಿದ ಅವರು ಅದು ಹೊರ ರಾಜ್ಯದಲ್ಲಿ ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಿರೋದು. ನೋಡೋಣ ವರದಿ ಬರಲಿ ಎಂದು ಗುಂಡೂರಾವ್ ಹೇಳಿದ್ದಾರೆ.
21ರಂದು ರಾಷ್ಟ್ರೀಯ ಪೊಲಿಯೋ ಲಸಿಕಾ ದಿನ. 5 ವರ್ಷದೊಳಗಿನ ಮಗುವಿಗೆ ಕಡ್ಡಾಯ ಪೊಲಿಯೋ ಲಸಿಕೆ ಹಾಕಬೇಕು. 14 ವರ್ಷದ ಹಿಂದೆ ಪೊಲೀಯೋ ಮುಕ್ತ ದೇಶ ಎಂದು ಘೋಷಣೆ ಮಾಡಲಾಗಿದೆ .ಆದರೂ ನಾವು ಎಚ್ಚರಿಕೆ ವಹಿಸಬೇಕು. ಪಕ್ಕದ ರಾಷ್ಟ್ರದಲ್ಲಿ ಪೊಲೀಯೋ ಪೀಡಿತರಿದ್ದಾರೆ. 6240114ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದೇವೆ.1 ಲಕ್ಷ 13 ಸಾವಿರ ಕಾರ್ಯಕರ್ತರು ಲಸಿಕಾ ಕಾರ್ಯಕ್ರಮದಲ್ಲಿ ಭಾಗಿಯಾಗ್ತಾರೆ. ಮೈಕ್ರೋ ಪ್ಲಾನಿಂಗ್ ಸಹ ಮಾಡಿದ್ದೇವೆ. ಲಸಿಕೆ ಹಾಕಿಸದವರ ಮನೆಗೆ ತೆರಳಿ ಲಸಿಕೆ ಹಾಕಿಸಲಾಗುತ್ತೆ. ಡಿಸೆಂಬರ್ 21 ರಿಂದ 24ವರೆಗೆ ವಿಶೇಷ ಅಭಿಯಾನ ಮಾಡ್ತಿದ್ದೇವೆ. ಸಿಎಂ ಸಿದ್ದರಾಮಯ್ಯನವರು ಮೈಸೂರಿನ ಅವರ ಕಚೇರಿಯಲ್ಲಿ ಚಾಲನೆ ನೀಡ್ತಾರೆ.
ರಾಜ್ಯದಲ್ಲಿ 33158 ಬೂತ್ ಮಾಡಿದ್ದೇವೆ. ಇದರ ಹೊರತಾಗಿ ಸಂಚಾರಿ ಬೂತ್ ಗಳು ಇದೆ. ಕಳೆದ ಬಾರಿ ಟಾರ್ಗೆಟ್‌ಗಿಂತ ಹೆಚ್ಚು ರೀಚ್ ಆಗಿದ್ದೇವೆ. ಪೊಲೀಯೊ ಬೂತ್ ಬಗ್ಗೆ ಮಾಹಿತಿ ಪಡೆಯಲು app ಸಹ ಮಾಡಿದ್ದೇವೆ.ನಾವಿರುವ ಲೊಕೇಷನ್‌ನಿಂದ ಹತ್ತಿರದಲ್ಲಿ ಪೊಲೀಯೋ ಬೂತ್ ಎಲ್ಲಿದೆ ಎನ್ನೊದನ್ನ app ಮಾಹಿತಿ ನೀಡಲಿದೆ ಎಂದಿದ್ದಾರೆ.











