ಬೆಂಗಳೂರು: ಮೆಟ್ರೋ ಯಾವ ಪಕ್ಷದ ಸ್ವತ್ತಲ್ಲ, ಜನರ ಸ್ವತ್ತು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ. ಯೆಲ್ಲೋ ಲೈನ್ ಮೆಟ್ರೋ ನಾಳೆ ಉದ್ಘಾಟನೆ ಆಗ್ತಿದೆ. ಈ ಬಗ್ಗೆ ಮಾತನಾಡಿದ ಅವರು ವಿಜಯೇಂದ್ರ, ತೇಜಸ್ವಿ ಸೂರ್ಯ ಸಂಪೂರ್ಣ ಕೇಂದ್ರ ಬಿಜೆಪಿಯೇ ಮೆಟ್ರೋ ಮಾರ್ಗ ಅಂತ ಹೇಳ್ತಿದ್ದಾರೆ. ಯೆಲ್ಲೋ ಮೆಟ್ರೋ ವಿಳಂಬಕ್ಕೆ ರಾಜ್ಯ ಸರ್ಕಾರವೇ ಕಾರಣ ಅಂತಿದ್ದಾರೆ. ಬಿಜೆಪಿಯವರಿಗೆ ಮೆಟ್ರೋದ ಇತಿಹಾಸವೇ ಗೊತ್ತಿಲ್ಲ. 2006ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿ ಆದಾಗ ಶುರು ಆಗಿದ್ದು, ಶಂಕು ಸ್ಥಾಪನೆ. ಮೆಟ್ರೋ ಯಾವ ಪಕ್ಷದ ಸ್ವತ್ತಲ್ಲ, ಜನರ ಸ್ವತ್ತು. ಬಿಜೆಪಿಯವರಿಗೆ ಪ್ರಚಾರದ ಹುಚ್ಚು, ಏನೂ ಮಾಡದಿದ್ದರೂ ನಾವೇ ಮಾಡಿದ್ದು ಅಂತಾರೆ ಎಂದಿದ್ದಾರೆ.
ರಾಜ್ಯ ಸರ್ಕಾರವೇ ದೊಡ್ಡ ಪಾಲುದಾರರು. ಫೇಸ್ 1ಗೆ ರಾಜ್ಯ ಸರ್ಕಾರದಿಂದ ಶೇ.30% (ಜಮೀನು ಸೇರಿ), ಕೇಂದ್ರದಿಂದ ಶೇ.25%_ ಬಾಕಿ ಶೇ.45% ಸಾಲ. ಫೇಸ್ 2 ರಾಜ್ಯ ಸರ್ಕಾರದಿಂದ ಶೇ.30% ಜಮೀನು ಮತ್ತು ಮಿತಿನೀರಿದ ವೆಚ್ಚದ ಬಹುತೇಕ ಭಾಗ, ಕೇಂದ್ರದ್ದು ಶೇ.,20%, ಉಳಿದ ಶೇ.50% ಸಾಲ. ಫೇಸ್ 3 ಕರ್ನಾಟಕ ಪಾಲು ಶೇ.20%, ಸಂಪೂರ್ಣ ಜಮೀನು ಮತ್ತು ಪುನರ್ವಸತಿ ವೆಚ್ಚ. ಕೇಂದ್ರದ್ದು ಶೇ.20%, ಉಳಿದ 60% ಸಾಲ. ಕೇಂದ್ರದ ಸಚಿವರು, ಸಂಸದರು ಕರ್ನಾಟಕದವರೇ ಆಗಿದ್ರೂ ಇಲ್ಲಿನ ಬಗ್ಗೆ ಗೌರವ ಇಲ್ಲ. ಕರ್ನಾಟಕ ಕ್ರೆಡಿಟ್ ಕೊಡಲು ಮುಂದಾಗುತ್ತಿಲ್ಲ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರ ಮೆಟ್ರೋ ಕಾಮಗಾರಿಗೆ ಭರಿಸುವ ವೆಚ್ಚದ ದಾಖಲೆ ಬಿಡುಗಡೆ ಮಾಡಿದ್ರು. ಪ್ರತಿ ಹಂತದಲ್ಲೂ ಮೆಟ್ರೋ ಕಾಮಗಾರಿಗೆ ರಾಜ್ಯ ಸರ್ಕಾರದಿಂದ ದೊಡ್ಡ ಪಾಲು ಹೋಗುತ್ತೆ. ಈವರೆಗಿನ ಮೆಟ್ರೋ ಕಾಮಗಾರಿಗೆ ತಗುಲಿದೆ ವೆಚ್ಚ ಕರ್ನಾಟಕ ಸರ್ಕಾರದಿಂದ 24064.50 ಕೋಟಿ ರೂಪಾಯಿ.ಕೇಂದ್ರದಿಂದ 17803.85 ಕೋಟಿ ರೂಪಾಯಿ. ಸಾಲ 43549.85 ಕೋಟಿ ರೂಪಾಯಿ. 15ನೇ ಹಣಕಾಸು ಆಯೋಗವು ಫೆರಿಪೆರಲ್ ರಿಂಗ್ ರೋಡ್ ಅಭಿವೃದ್ಧಿ, ಕೆರೆಗಳ ಅಭಿವೃದ್ಧಿ ಸೇರಿದಂತೆ ಇತರೆ ಅನುದಾನಕ್ಕೆ ಮೀಸಲಿರಿಸಿದ್ದ 11495 ಕೋಟಿ ರೂ. ಬಿಡುಗಡೆ ಮಾಡದೆ ಕೇಂದ್ರ ಸರ್ಕಾರ ಮೋಸ ಮಾಡಿದೆ ಎಂದು ಆರೋಪಿಸಿದ್ದಾರೆ.
43 ಸಾವಿರ ಕೋಟಿ ನಮ್ಮ ಮೆಟ್ರೋ ಸಾಲ ಪಡೆದುಕೊಂಡಿದೆ. ಅವರು ಕೊಡದಿದ್ದರೇ ರಾಜ್ಯ ಸರ್ಕಾರವೇ ಸಾಲ ತೀರಿಸಬೇಕು. ಗುದ್ದಲಿ ಪೂಜೆಗಳಿಗೆ ನಮಗೆ ಆಹ್ವಾನಿಸುದೇ ಇಲ್ಲ ಎಂದ ಅವರು ನಾಳೆಯ ಮೆಟ್ರೋ ಉದ್ಘಾಟನೆಗೆ ಆಹ್ವಾನ ವಿಚಾರದ ಬಗ್ಗೆ ಮಾತನಾಡಿ ನಾಳೆಯ ಕಾರ್ಯಕ್ರಮಕ್ಕೆ ಸಿಎಂ, ಡಿಸಿಎಂ, ಸಚಿವರುಗಳೂ ಹೋಗಲಿದ್ದಾರೆ. ನನ್ನನ್ನೂ ಕರೆದಿದ್ದಾರೆ, ನನ್ನ ಕ್ಷೇತ್ರಕ್ಕೆ ಬರುತ್ತಲ್ಲ ಅದಕ್ಕೆ ಕರೆದಿದ್ದಾರೆ. ಮೆಟ್ರೋ ಟಿಕೆಟ್ ದರ ಏರಿಕೆಗೆ ಯಾರು ಜವಾಬ್ದಾರಿ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಸಮಿತಿ ಕೇಂದ್ರ ಸರ್ಕಾರ ನೇಮಕ ಮಾಡುತ್ತೆ. ನಿವೃತ್ತ ನ್ಯಾಯಾಧೀಶರು ಕಮಿಟಿಯಲ್ಲಿ ಇರ್ತಾರೆ. ಸಮಿತಿ ಶಿಫಾರಸ್ಸು ಅನ್ವಯ ದರ ಏರಿಕೆ ಆಗುತ್ತೆ. ದೆಹಲಿಯಲ್ಲಿ ಅನುಮೋದನೆ ಆದ್ಮೇಲೆ ಬೆಲೆ ಏರಿಕೆ ಆಗುತ್ತೆ. ಕ್ರೆಡಿಟ್ ಬೇಕಾ ಅಂತ ಕೇಳ್ತೀರಾ?. ಬಿಜೆಪಿಯವರಾ? ಕಾಂಗ್ರೆಸ್ ನವರಾ ಸುದ್ದಿಗೋಷ್ಠಿ ನಡೆಸ್ತಾ ಇರೋದು?. ಪ್ರಚಾರ ತೆಗೆದುಕೊಳ್ತಿರೋದು ಯಾರು? ಜನರಿಗೆ ಗೊತ್ತಾಗಬೇಕು ಅಲ್ವಾ ?. ನಾವು ಕ್ರೆಡಿಟ್ ತೆಗೆದುಕೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.
ರಾಜ್ಯದ ಪಾಲಿನ ಬಗ್ಗೆ ಹೇಳೋಕೆ ಬಿಜೆಪಿಗೆ ಬಾಯಿ ಬರಲ್ಲ. ತಮ್ಮ ಕ್ಷೇತ್ರದಲ್ಲೂ ಮತಗಳ್ಳತನ ಆಗಿದ್ಯಾ ಎಂಬ ಆರೋಪ ವಿಚಾರದ ಬಗ್ಗೆ ಮಾತನಾಡಿ ನಮ್ಮ ಪಾಲಿನ ಬಗ್ಗೆ ಅವರು ಹೇಳುವುದಿಲ್ಲ. ಆಗಿದ್ರೆ ತನಿಖೆ ಮಾಡಲಿ, ನಮ್ಮ ಅಭ್ಯಂತರ ಇಲ್ಲ ಎಂದ ಅವರು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಬಿಜೆಪಿಯವರು ಉತ್ತರ ಕುಮಾರರು. ಉತ್ತರನ ಪೌರುಷ ಒಲೆಯ ಮುಂದೆ ಅಷ್ಟೆ. ಮೆಟ್ರೋ ಉದ್ಘಾಟನೆಗೆ ವಿಪಕ್ಷ ನಾಯಕ ಆರ್. ಅಶೋಕ್ ಗೆ ಆಹ್ವಾನವಿಲ್ಲದ ವಿಚಾರದ ಬಗ್ಗೆ ಮಾತನಾಡಿ ಪ್ರೋಟೊಕಾಲ್ ನಲ್ಲಿ ಯಾರಿಗೆ ಅವಕಾಶ ಇರುತ್ತೋ ಅವರನ್ನ ಕರೆದಿದ್ದಾರೆ ಎಂದರು.