ಬೆಂಗಳೂರು; ಸರಕಾರಿ ಕೆಲಸಗಳಿಗೆ ಹೆಲಿಕಾಪ್ಟರ್ / ವಿಮಾನ ಗುತ್ತಿಗೆ ಪಡೆಯುವ ವಿಚಾರಕ್ಕೆ ಸಂಬಂಧಿಸದಂತೆ ಡಿಸಿಎಂ ಡಿಕೆಶಿ ನೇತೃತ್ವದಲ್ಲಿ ಸಭೆ ನಡೆಯಿತು.
ಸಭೆಯಲ್ಲಿ ವಾರ್ಷಿಕ ಗುತ್ತಿಗೆ ಆಧಾರದಲ್ಲಿ ಸೇವೆ ಪಡೆಯಲು ನಿರ್ಧರಿಸಲಾಯಿತು. ಇದುವರೆಗೂ ಗಂಟೆಗಳ ಅವಧಿಯಲ್ಲಿ ಹೆಲಿಕಾಪ್ಟರ್ ಗುತ್ತಿಗೆ ಪಡೆಯಲಾಗುತ್ತಿತ್ತು. ಇನ್ನು ಮುಂದೆ ಗಂಟೆಗಳ ಆಧಾರದಲ್ಲಿ ಬಾಡಿಗೆ ಪಡೆಯುವುದು ಬೇಡ ಎಂಬ ನಿರ್ಧಾರ ಕೈಗೊಳ್ಳಲಾಯಿತು. ವಾರ್ಷಿಕವಾಗಿ ಗುತ್ತಿಗೆ ಹೆಲಿಕಾಪ್ಟರ್/ ವಿಮಾನ ಸೇವೆ ಪಡೆಯಲು ನಿರ್ಧಾರ ಮಾಡಲಾಯಿತು.
ಇನ್ನು ಸೂಕ್ತ ತರಬೇತಿ ಹೊಂದಿರುವ ಸಂಸ್ಥೆಗಳಿಗೆ ಟೆಂಡರ್ ಆಹ್ವಾನ ಮಾಡಲು ನಿರ್ಧರಿಸಲಾಯಿತು. ಆಸಕ್ತಿಯುಳ್ಳ ಸಂಸ್ಥೆಗಳು ಟೆಂಡರ್ ನಲ್ಲಿ ಭಾಗಿಯಾಗಿಯಲು ಅವಕಾಶವಿದೆ. ಗಂಟೆ ಆಧಾರದಲ್ಲಿ ಸರಕಾರದ ಬೊಕ್ಕಸದಿಂದ 28 ಕೋಟಿ ಖರ್ಚಾಗುತ್ತಿತ್ತು. ಮತ್ತೆ ಸಮಯಕ್ಕೆ ಸರಿಯಾಗಿ ಹೆಲಿಕಾಪ್ಟರ್ ಸೇವೆ ಲಭ್ಯವಿರುತ್ತಿರಲಿಲ್ಲ. ವಾರ್ಷಿಕ ಗುತ್ತಿಗೆಯಿಂದ ಸಮಯಕ್ಕೆ ಸರಿಯಾಗಿ ಸೇವೆ ಸಿಗಲಿದೆ ಎಂಬ ಹಿನ್ನೆಲೆಯಲ್ಲಿ ಸರಕಾರದಿಂದ ನಿರ್ಧಾರ ಕೈಗೊಂಡಿದೆ.
ಇಂದಿನಿಂದ ಹೊಸ ಜಿಬಿಎ ಶುರುವಾಗುತ್ತಿದೆ. ಐದು ಕಾರ್ಪೋರೇಷನ್ ಆಗ್ತಿದೆ. ಬಹಳ ಸೀನಿಯರ್ ಅವರನ್ನೇ ಕಮಿಷನರ್ ಮಾಡಲು ನಿರ್ಧರಿಸಲಾಯಿತು. ಹೆಲಿಕಾಪ್ಟರ್ ಮತ್ತು ಏರ್ ಕ್ರಾಫ್ಟ್ ಬಾಡಿಗೆ ಪಡೆಯೋ ಕುರಿತು ಸಭೆ ವಿಚಾರದ ಬಗ್ಗೆ ಮಾತನಾಡಿದ ಡಿಸಿಎಂ ಡಿ ಕೆ ಶಿವಕುಮಾರ್ ಬಹಳ ದಿನದಿಂದ ಪೆಂಡಿಂಗ್ ಇತ್ತು. ಸಿಎಂ ನಮಗೆ ಜವಾಬ್ದಾರಿ ನೀಡಿದ್ದರು. ಹೆಚ್ ಎ ಎಲ್ ಬಳಿಯೂ ಮಾತಾಡೋಕೆ ಹೇಳಿದ್ದರು. ಯಾವ ರಾಜಕಾರಣಿ ಕೂಡ ಇಲ್ಲ. ಇಡೀ ದೇಶದಲ್ಲಿ ನೋಡಿಕೊಂಡು ಟೆಂಡರ್ ಕರೆಯುತ್ತೇವೆ ಎಂದರು.
ಜಿಬಿಎ ಕಾರ್ಯಾಚರಣೆ ವಿಚಾರದ ಬಗ್ಗೆ ಮಾತನಾಡಿ ಇಂದಿನಿಂದ ಹೊಸ ಜಿಬಿಎ ಪ್ರಾರಂಭ ಅಗ್ತಿದೆ. ಐದು ಕಾರ್ಪೊರೇಷನ್ ಆಗ್ತಿದೆ, ಇವತ್ತು ಕುಳಿತುಕೊಂಡು ಚರ್ಚೆ ಮಾಡಿದ್ದೇವೆ. ಬಹಳ ಸೀನಿಯರ್ ಅವರನ್ನೇ ಕಮಿಷನರ್ ಆಗಿ ನೇಮಕ ಮಾಡುತ್ತಿದ್ದೇವೆ. ಎಲ್ಲರಿಗೂ ಅವರವರ ಅಧಿಕಾರ ಕೊಡುತ್ತೇವೆ ಎಂದು ತಿಳಿಸಿದರು. ಬಹಳ ದಿನದಿಂದ ಪೆಂಡಿಂಗ್ ಇತ್ತು. ಸಿಎಂ ಅವರು ನಮಗೆ ಜವಾಬ್ದಾರಿ ವಹಿಸಿದರು. ನಾನು ಮತ್ತು ಕೆಲ ಮಂತ್ರಿಗಳು ಕುಳಿತು ಚರ್ಚೆ ಮಾಡಿದ್ದೇವೆ.ಬೇರೆ ರಾಜ್ಯದಲ್ಲಿ ಏನೆಲ್ಲಾ ಇದೆ ನೋಡಿಕೊಂಡು ಅಧ್ಯಯನ ಮಾಡೋಕೆ ಹೇಳಿದ್ದೇವೆ. ಹೆಚ್ ಎ ಎಲ್ ಅವರೊಂದಿಗೆ ಮಾತಾಡೋಕೆ ಹೇಳಿದ್ದೇವೆ ಎಂದರು. ರಾಜಕಾರಣಿಗಳ ಬಳಿ ಹೆಲಿಕಾಪ್ಟರ್ ಇದೆ ಎಂಬ ವಿಚಾರದ ಬಗ್ಗೆ ಮಾತನಾಡಿ ಯಾವ ರಾಜಕಾಲುವೆ ಕೂಡ ಇಲ್ಲ.ಟೆಂಡರ್ ಕರೆಯುತ್ತೇವೆ, ನಂತ್ರ ಎಲ್ಲವೂ ನಿರ್ಧಾರ ಆಗುತ್ತದೆ ಎಂದು ತಿಳಿಸಿದರು.











