ಮನೆ Latest News ರಾಜ್ಯ ಸರ್ಕಾರದಿಂದ ಒಳ ಮೀಸಲಾತಿ ಅಂಗೀಕಾರ ಹಿನ್ನೆಲೆ: ದಲಿತ ಎಡಗೈ ಸಮುದಾಯದಿಂದ ಮುಂದಿನ ಹೆಜ್ಜೆಗಳ ಕುರಿತು...

ರಾಜ್ಯ ಸರ್ಕಾರದಿಂದ ಒಳ ಮೀಸಲಾತಿ ಅಂಗೀಕಾರ ಹಿನ್ನೆಲೆ: ದಲಿತ ಎಡಗೈ ಸಮುದಾಯದಿಂದ ಮುಂದಿನ ಹೆಜ್ಜೆಗಳ ಕುರಿತು ಚರ್ಚಿಸಲು ಸಭೆ

0

ಬೆಂಗಳೂರು: ರಾಜ್ಯ ಸರ್ಕಾರದಿಂದ ಒಳ ಮೀಸಲಾತಿ ಅಂಗೀಕಾರ ಹಿನ್ನೆಲೆ ದಲಿತ ಎಡಗೈ ಸಮುದಾಯದಿಂದ ಮುಂದಿನ ಹೆಜ್ಜೆಗಳ ಕುರಿತು ಚರ್ಚಿಸಲು ಗಾಂಧಿ ಭವನದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ದಲಿತ ಎಡಗೈ ಸಮುದಾಯದಲ್ಲಿ ಯಾವ ರೀತಿಯಲ್ಲಿ ಅರಿವು ಮೂಡಿಸಬೇಕು ಎಂದು ಚರ್ಚೆ ಮಾಡಲಾಯಿತು.ಸಭೆಯಲ್ಲಿ ಸಚಿವರಾದ ಕೆ ಎಚ್ ಮುನಿಯಪ್ಪ, ಆರ್ ಬಿ ತಿಮ್ಮಾಪೂರ್, ಮಾಜಿ ಸಚಿವ ಆಂಜನೇಯ, ಮಾಜಿ ಸಂಸದ ಚಂದ್ರಪ್ಪ ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಆಂಜನೇಯ ಮಾತನಾಡಿ ರಾಜ್ಯದಲ್ಲಿ ಕರ್ನಾಟಕ ಮಾದರ ಮಹಾಸಭಾ ಅಸ್ತಿತ್ವಕ್ಕೆ ಬರುತ್ತಿದೆ. ಸಚಿವ ಮುನಿಯಪ್ಪ ಇದರ ಮುಂದಾಳತ್ವ ತೆಗೆದುಕೊಂಡಿದ್ದಾರೆ. ಎಲ್ಲಾ ಮಾದಿಗರು ಒಟ್ಟಾಗಿ ಇರಲು ಈ ಸಭಾ ಅಸ್ತಿತ್ವಕ್ಕೆ ಬರುತ್ತಿದೆ. 35 ವರ್ಷಗಳ ಒಳ ಮೀಸಲಾತಿ ಹೋರಾಟಕ್ಕೆ ಫಲ ಸಿಕ್ಕಿದೆ. ಸಿದ್ದರಾಮಯ್ಯಗೆ ಅದೃಷ್ಟ ಇತ್ತು. ಅದೃಷ್ಟ ಇದಿದ್ದಕ್ಕೆ ಒಳ ಮೀಸಲಾತಿ ಜಾರಿ ಮಾಡಿದ್ರು. ಕಾಂಗ್ರೆಸ್ ಚುನಾವಣೆ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಕೊಡೋದಾಗಿ ಹೇಳಿದ್ವಿ. 101 ಜಾತಿಯಲ್ಲಿ ನಾವು ಮಾದಿಗರು ದುರ್ಬಲರು. ನಮ್ಮ ಸಮುದಾಯಕ್ಕೆ ಸರಿಯಾದ ಶಿಕ್ಷಣ ಸಿಗಲಿಲ್ಲ. ಹಿರಿಯರು ಶಿಕ್ಷಣ ಕೊಡೋದ್ರಲ್ಲಿ ವಿಫಲರಾದ್ರು. ಅಲೆಮಾರಿಗಳನ್ನ ಬೇರೆ ಗುಂಪಿಗೆ ಹಾಕಿದ್ದಾರೆ ಇದು ಸರಿಯಲ್ಲ. ಅಲೆಮಾರಿಗಳಿಗೆ ಪ್ರತ್ಯೇಕ ಮೀಸಲಾತಿ ‌ಕೊಡಬೇಕು. ಸಿಎಂ ಅವರಿಗೂ ಇದನ್ನ ಹೇಳಿದ್ದೇವೆ ಎಂದಿದ್ದಾರೆ.

 

35-40 ವರ್ಷಗಳ ಹೋರಾಟ ಫಲ ಒಳ ಮೀಸಲಾತಿ ಸಿಕ್ಕಿದೆ‌. ಹೋರಾಟ ಮಾಡಿ ಮಡಿದವರಿಗೆ, ಹೋರಾಟ ಮಾಡಿದವರಿಗೆ ಧನ್ಯವಾದ ಹೇಳ್ತೀನಿ. ಗಾಂಧಿಜೀ ಹೋರಾಟ ಮಾಡದೇ ಬ್ರಿಟಿಷರು ಹೋಗ್ತಿರಲಿಲ್ಲ. ಶಾಂತಿಯಿಂದ ಅವರು ಹೋರಾಟ ಮಾಡಿದ್ರು. ಹೋರಾಟ ಇಲ್ಲದೇ ಏನು ಆಗೋದಿಲ್ಲ. ಒಳ ಮೀಸಲಾತಿ ಇವತ್ತು ಬರೋಕೆ ಎಲ್ಲರ ಹೋರಾಟ ಇದೆ. ನಮ್ಮ ಒಬ್ಬರಿಂದ ಈ ಮೀಸಲಾತಿ ಆಗಿಲ್ಲ. ಎಲ್ಲರ ಹೋರಾಟದಿಂದ ಹೋರಾಟ ಆಗಿದೆ. ಎಡ-ಬಲ ಅಂತ ವಿರೋಧ ಬೇಡ. ಬೇರೆ ಅವರ ಸಹಾಯ ಪಡೆದು ನಾವು ಮುಂದೆ ಹೋಗೋಣ.  ಪರಮೇಶ್ವರ್, ಮಹದೇವಪ್ಪ, ತಂಗಡಗಿ ಕೈ ಜೋಡಿಸದೇ ಹೋಗಿದ್ರೆ ಮೀಸಲಾತಿ ಸಿಗುತ್ತಿರಲಿಲ್ಲ. ಕೆಲವರು ಈ ಸಾರಿ ತಪ್ಪಿಸಿದ್ರೆ ಮುನಿಯಪ್ಪ ನಿವೃತ್ತಿ ಆಗ್ತಾನೆ ಅಂತ ಯೋಚನೆ ‌ಮಾಡಿದ್ರು. ನಾನು ನೀವೆಲ್ಲಾ ತಗೊಂಡು ನನಗೆ ಉಳಿದು ಕೊಡಿ ಎಂದು ತಿಳಿಸಿದ್ದಾರೆ.

ಇಲ್ಲಿವರೆಗೆ ಆಗಿರೋ ಎಲ್ಲಾ ಆಯೋಗವೂ ಮಾದಿಗರಿಗೆ 6%  ಕ್ಕಿಂತ ಕಡಿಮೆ ಕೊಟ್ಟಿಲ್ಲ. ನಮ್ಮ ಸಮುದಾಯದವರು ಸರಿಯಾಗಿ ಜಾತಿಯನ್ನು ಬರೆಸಲಿಲ್ಲ. ಅವರೆಲ್ಲಾ ಬರೆಸಬೇಕು. ಎಲ್ಲಾ ಪಕ್ಷದ ನಾಯಕರು ನಮಗೆ ಭಿನ್ನಾಭಿಪ್ರಾಯ ಇಲ್ಲ. ಸಮಾಜಕ್ಕೆ ಕಷ್ಟ ಬಂದಾಗ ನಾವೆಲ್ಲ ಒಟ್ಟಿಗೆ ಇರ್ತೀವಿ. ರಾಜಕೀಯ ಬೇರೆ ಸಮಾಜ ವಿಷಯ ಬೇರೆ ಎಂದು ಹೇಳಿದ್ದಾರೆ.