ಮನೆ ಪ್ರಸ್ತುತ ವಿದ್ಯಮಾನ ಕೊರೋನಾ ಹಗರಣದ ತನಿಖೆ ವಿಚಾರಕ್ಕೆ ಜೋಷಿ ಹೇಳಿಕೆಗೆ ಎಂ‌ಬಿ ಪಾಟೀಲ್ ತಿರುಗೇಟು

ಕೊರೋನಾ ಹಗರಣದ ತನಿಖೆ ವಿಚಾರಕ್ಕೆ ಜೋಷಿ ಹೇಳಿಕೆಗೆ ಎಂ‌ಬಿ ಪಾಟೀಲ್ ತಿರುಗೇಟು

0

ಬೆಂಗಳೂರು; ಕೊರೋನಾ ಹಗರಣದ ತನಿಖೆ ವಿಚಾರಕ್ಕೆ ಜೋಷಿ ಹೇಳಿಕೆಗೆ ಎಂ‌ಬಿ ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ.ಮುಡಾ ವಿಷಯ ಸುಳ್ಳು ಆಪಾದನೆ.ಅದು ಕೋರ್ಟ್ ನಲ್ಲಿ ಎಲ್ಲಾ ಗೊತ್ತಾಗುತ್ತೆ. ಅದರಲ್ಲಿ ಮೂಡ ತಪ್ಪು ಮಾಡಿದೆ.ಕೋವಿಡ್ ಹರಗರಣ ನಿಮಗೆ ಗೊತ್ತಿದೆ.ಜನ ಸಾವು ಬದುಕಿನ ಹೋರಾಟ ಮಾಡಿದ್ರು.ಆ ಸಮಯದಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ ಎಂದಿದ್ದಾರೆ.

ಪಿಪಿಇ ಕಿಟ್, ಬೆಡ್ ಹಗರಣ ಇರಬಹುದು ಹೀಗೆ ಹಲವು ಹಗರಣ ನಡೆದಿದೆ. ನನ್ನದೇ ಸಂಸ್ಥೆ 500 ಬೆಡ್ ನಿರ್ಮಿಸಿ ಸೇವೆ ಮಾಡಿದ್ವಿ.ಅದು ನಮ್ಮ ಕರ್ತವ್ಯ.ಅಂತಹ ಸಮಯದಲ್ಲಿ ಸಾವಿರಾರು ಕೋಟಿ ಲೂಟಿ ಮಾಡಿದ್ದಾರೆ.ಪಿಪಿಇ ಕಿಟ್ ರೆಮಿಡಿಸ್ವಿರ್ ನಲ್ಲಿ ಹಣ ಹೊಡೆದಿದ್ದಾರೆ.ಸಾವಿರಾರು ಕೋಟಿ ಲೂಟಿ ಮಾಡಿರೋ ಬಗ್ಗೆ ಪ್ರಶ್ನೆ ಮಾಡಬಾರದಾ? ತನಿಖೆ ಮಾಡಬಾರದಾ?ಪ್ರಹ್ಲಾದ್ ಜೋಷಿಯವರು ಇದರ ಬಗ್ಗೆ ಹೇಳ ಬೇಕು ಹಾಗಾದರೆ ಎಂದಿದ್ದಾರೆ.

ಸಾವಿರಾರು ಕೋಟಿ ಬಹುಶ: ಬಿಜೆಪಿ ಎಲೆಕ್ಷನ್ ಫಂಡ್ ಗೆ ಹೋಗಿರಬೇಕು.ಅದೇ ಹಣದಲ್ಲಿ ಎಲೆಕ್ಷನ್ ಮಾಡಿದ್ರಾ?ಲೋಕಸಭಾ ಎಲೆಕ್ಷನ್ ರಾಜ್ಯದ ಎಲೆಕ್ಷನ್ ಮಾಡಿರಬೇಕು.ಅದನ್ನಾದರು ಒಪ್ಪಿಕೊಳ್ಳಿ ಎಂದು ಎಂಬಿ ಪಾಟೀಲ್ ಹೇಳಿದ್ದಾರೆ. ಇದು ಅತ್ಯಂತ ಗಂಭೀರ ಪ್ರಕರಣ.ಇದು ಅತ್ಯಂತ ಕ್ರೂರ ಕೃತ್ಯ ಕೂಡ.ಸಾವಿನ ಸಂದರ್ಭದಲ್ಲಿ ದುಡ್ಡು ಮಾಡೋದನ್ನ ಯಾರು ಕ್ಷಮಿಸೋದಿಲ್ಲ ಎಂದು ಎಂ ಬಿ ಪಾಟೀಲ್ ಹೇಳಿದ್ದಾರೆ.

ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ವಿರುದ್ಧ ಛಲವಾದಿ ನಾರಾಯಣ ಸ್ವಾಮಿ ಆರೋಪ ವಿಚಾರ; ಎಂ ಬಿ ಪಾಟೀಲ್ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ

ಬೆಂಗಳೂರು; ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ವಿರುದ್ಧ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ ಸ್ವಾಮಿ ಮಾಡಿರುವ ಆರೋಪಕ್ಕೆ ಸಂಬಂಧಪಟ್ಟಂತೆ ಎಂ ಬಿ ಪಾಟೀಲ್ ಮಾಧ್ಯಮ ಪ್ರಕಟಣೆ ಮೂಲಕ ಸ್ಪಷ್ಟನೆ ನೀಡಿದ್ದಾರೆ.

ಸರ್ಕಾರದಿಂದ ನಾನು ಒಂದೂ ನಿವೇಶನ ಪಡೆದುಕೊಂಡಿಲ್ಲ.’ನಾನಾಗಲಿ, ನಮ್ಮ ಕುಟುಂಬದವರಾಗಲಿ ಸರ್ಕಾರದಿಂದ ನಿವೇಶನಗಳನ್ನು ಪಡೆದುಕೊಂಡಿಲ್ಲ.ಜಿ- ಕ್ಯಾಟಗರಿ, ಕೆಎಚ್ ಬಿ ಇಲ್ಲವೇ ಕೆಐಎಡಿಬಿಯ ನಿವೇಶನಗಳನ್ನು ಪಡೆದುಕೊಂಡಿಲ್ಲ.ನಮ್ಮ ಕುಟುಂಬಕ್ಕೂ ಬಾಗ್ಮನೆ ಕುಟುಂಬಕ್ಕೂ ೨೫-೩೦ ವರ್ಷಗಳಿಂದಲೂ ಪರಸ್ಪರ ಒಡನಾಟವಿದೆ.ಬೆಂಗಳೂರಿನ ಅಭಿವೃದ್ಧಿಗೆ ಪ್ರೆಸ್ಟೀಜ್, ಬ್ರಿಗೇಡ್, ಎಂಬೆಸಿ, ಮಂತ್ರಿ, ಬಾಗ್ಮನೆ ಸಮೂಹಗಳು ಕೊಡುಗೆ ನೀಡಿವೆ.ಎಲ್ಲ ಪಕ್ಷಗಳ ಸರ್ಕಾರಗಳ ಆಡಳಿತಾವಧಿಯಲ್ಲೂ ಈ ಸಂಸ್ಥೆಗಳು ನಿವೇಶನ ಪಡೆದಿವೆ.ಈ ಸಂಸ್ಥೆಗಳು ಬೆಂಗಳೂರಿನ ಅಭಿವೃದ್ಧಿಗೆ ಕೊಡುಗೆ ನೀಡಿರುವುದನ್ನು ನಾರಾಯಣಸ್ವಾಮಿ ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.

ಬಾಗ್ಮನೆಯ ವ್ಯವಹಾರಕ್ಕೂ ನಮ್ಮ ಕುಟುಂಬಕ್ಕೂ ಯಾವುದೇ ಸಂಬಂಧ ಇಲ್ಲ.ಸರ್ಕಾರದ ಮಟ್ಟದಲ್ಲಿ ಆಗುವ ನಿರ್ಧಾರಗಳಿಗೂ ಸಂಬಂಧವಿಲ್ಲ.ಬಾಗ್ಮನೆ ಸಂಸ್ಥೆಯವರು ಬೆಂಗಳೂರಿನ ಏರೋಸ್ಪೇಸ್ ಪಾರ್ಕಿನಲ್ಲಿ ಕೈಗಾರಿಕಾ ನಿವೇಶನ ಕೋರಿ ಅರ್ಜಿ ಹಾಕಿದ್ದರು.ಇಂತಹ ಸಂದರ್ಭದಲ್ಲಿ ನಾವು ಸಂಸ್ಥೆಯ ಅರ್ಹತೆ, ಸಾಧನೆಗಳನ್ನು ಮಾತ್ರ ಪರಿಗಣಿಸುತ್ತೇವೆ ಅಷ್ಟೆ.ನಾರಾಯಣಸ್ವಾಮಿಗೆ ಇಂತಹ ಸರಳ ಸತ್ಯ ಗೊತ್ತಾಗದೆ ಇರುವುದು ಆಶ್ಚರ್ಯಕರ ಎಂದು ಬಿಜೆಪಿ ನಾಯಕ ಛಲವಾದಿ ನಾರಾಯಣ ಸ್ವಾಮಿಗೆ ಎಂಬಿ ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ.