ಮನೆ Blog ಮನ ಮೋಹನ್ ಸಿಂಗ್ ದೇಶದ ಆರ್ಥಿಕ ಉನ್ನತಿಗೆ ಶಕ್ತಿ ಮೀರಿ ಸೇವೆ ಸಲ್ಲಿಸಿದ್ದಾರೆ: ಮಾಜಿ ಪ್ರಧಾನಿ...

ಮನ ಮೋಹನ್ ಸಿಂಗ್ ದೇಶದ ಆರ್ಥಿಕ ಉನ್ನತಿಗೆ ಶಕ್ತಿ ಮೀರಿ ಸೇವೆ ಸಲ್ಲಿಸಿದ್ದಾರೆ: ಮಾಜಿ ಪ್ರಧಾನಿ ದೇವೇ ಗೌಡ ಹೇಳಿಕೆ

0

ಬೆಂಗಳೂರು: ಮನ ಮೋಹನ್ ಸಿಂಗ್ ದೇಶದ ಆರ್ಥಿಕ ಉನ್ನತಿಗೆ ಶಕ್ತಿ ಮೀರಿ ಸೇವೆ ಸಲ್ಲಿಸಿದ್ದಾರೆ ಎಂದು ಮಾಜಿ ಪ್ರಧಾನಿ ದೇವೇ ಗೌಡ ಹೇಳಿದ್ದಾರೆ.

ಬೆಂಗಳೂರಿನ ಜೆಡಿಎಸ್ ಕಛೇರಿಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನಕ್ಕೆ
ಸಂತಾಪ ಸೂಚಿಸಲಾಯಿತು.ಮಾಜಿ ಪ್ರಧಾನಿ ದೇವೇಗೌಡ ಸಮ್ಮುಖದಲ್ಲಿ ಸಂತಾಪ ಸಲ್ಲಿಸಲಾಯಿತು. ಜೆಡಿಎಸ್ ಮಾಜಿ, ಹಾಲಿ ಶಾಸಕರು ಈ ವೇಳೆ ಉಪಸ್ಥಿತರಿದ್ದರು.

ಶ್ರದ್ಧಾಂಜಲಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಇಂದು ಅತ್ಯಂತ ದುಃಖದ ದಿವಸ. ನಾನು ನನ್ನ ಭಾವನೆ ನಿಮ್ಮ ಮುಂದೆ ಹಂಚಿಕೊಳ್ಳುತ್ತೇನೆ. ನಾನು ಮನಮೋಹನ್ ಸಿಂಗ್ ಅವರನ್ನು ನೋಡಿದ್ದು ಲೋಕಸಭೆಯಲ್ಲಿ.1991ರಲ್ಲಿ ಲೋಕಸಭೆಯಲ್ಲಿ ನೋಡಿದ್ದೆ. ನಾನು ಕರ್ನಾಟಕದಿಂದ ಮೊದಲೇ ಸಲ ಲೋಕಸಭೆಗೆ ಹೋಗಿದ್ದೆ. ನರಸಿಂಹ ರಾವ್ ಸರ್ಕಾರದಲ್ಲಿ ಹಣಕಾಸು ಸಚಿವರು ಆಗಿದ್ದರು.ನಮ್ಮ ರಾಷ್ಟ್ರದ ಆರ್ಥಿಕ ಪರಿಸ್ಥಿತಿ ಬಗ್ಗೆ ಸರಿಪಡಿಸಲು ಪ್ರಯತ್ನ ಮಾಡಿದ್ದಾರೆ. ವಿಶ್ವ ಸಂಸ್ಥೆಯಲ್ಲಿ ಒಬ್ಬ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಅವರ ತಂದೆ ಪಾಕಿಸ್ತಾನದಿಂದ ಬಂದಿದ್ದಾರೆ. ಆರ್ಥಿಕವಾಗಿ ಮನಮೋಹನ್ ಸಿಂಗ್ ತುಂಬಾ ಬುದ್ದಿವಂತರು ಎಂದರು.

ನರಸಿಂಹ ರಾವ್ ಪ್ರಧಾನ ಮಂತ್ರಿ ಅದಾಗ ದೇಶದ ಸ್ಥಿತಿ ತುಂಬಾ ಹದಗೆಟ್ಟಿತ್ತು. ನಮ್ಮ ದೇಶದ 130 ಟನ್ ಚಿನ್ನ ಅಡವಿಟ್ಟದ್ದರು. ನಮ್ಮ ದೇಶಕ್ಕೆ ಕೆಟ್ಟ ಪರಿಸ್ಥಿತಿ ಉಂಟಾಗುತ್ತಿತ್ತು.ನರಸಿಂಹರಾವ್ ಸರ್ಕಾರದಲ್ಲಿ ಈ ದೇಶದ ಗೌರವ ಉಳಿಸಲು ಆರ್ಥಿಕ ತಜ್ಞರಾಗಿ ಸೇವೆ ಮಾಡಿದ್ದಾರೆ. ಅವರ ಕಾಲದಲ್ಲಿ ನಮ್ಮ ದೇಶದ ಸ್ಥಿತಿ ಯಾವ ಸಂಕಷ್ಟದಲ್ಲಿ ಇತ್ತು. ಅದನ್ನು ಸರಿಪಡಿಸಲು ಸರ್ವ ಪ್ರಯತ್ನ ಮಾಡಿದ್ದಾರೆ. ಮನಮೋಹನ್ ಸಿಂಗ್ 10 ವರ್ಷ ದೇಶ ಆಳಿದರು. ನಾನು, ಇಂದಿರಾಗಾಂಧಿ ಬಿಟ್ಟ ಮೇಲೆ 10 ವರ್ಷ ದೇಶ ಆಳಿದ್ದಾರೆ. ಸರಳ ಸಜ್ಜನ ವ್ಯಕ್ತಿ ಮನಮೋಹನ್ ಸಿಂಗ್. ಎಚ್. ಡಿ ಕುಮಾರಸ್ವಾಮಿ, ನಮ್ಮ ಪಕ್ಷದ ಪರವಾಗಿ ಶ್ರದ್ಧಾಂಜಲಿ ಸಲ್ಲಿಸಿ ಬರ್ತಾರೆ. 10 ವರ್ಷ ಪ್ರಧಾನಿ ಮಂತ್ರಿ ಆಗಿ 5 ವರ್ಷ ಹಣಕಾಸು ಸಚಿವರಾಗಿದ್ದು, 92 ವಯಸ್ಸಿನಲ್ಲಿ ಮನಮೋಹನ್ ಸಿಂಗ್ ನಮ್ಮನ್ನು ಅಗಲಿ ಹೋಗಿದ್ದಾರೆ. ಪ್ರಾಮಾಣಿಕ ವ್ಯಕ್ತಿ, ಸುಧೀರ್ಘ ಸೇವೆ ಸಲ್ಲಿಸಿದ್ದಾರೆ ಎಂದು ಮಾಜಿ ಪ್ರಧಾನಿ ಹೆಚ್‌. ಡಿ ದವೇಗೌಡ ಭಾವುಕರಾಗಿದ್ದಾರೆ.

ಈ ದೇಶದ ಆರ್ಥಿಕ ಉನ್ನತಿಗೆ ಶಕ್ತಿ ಮೀರಿ ಸೇವೆ ಸಲ್ಲಿಸಿದ್ದಾರೆ. ಅವರ ಸೇವೆಯನ್ನು ಸ್ಮರಿಸಿಕೊಳ್ಳಬೇಕು.ಅವರ ಕುಟುಂಬಕ್ಕೆ ದುಃಖ ಸಹಿಸಿಕೊಳ್ಳಲು ಶಕ್ತಿ ನೀಡಲಿ. ಲಿಬ್ರೈಸೇಷನ್, ಪ್ರೈವೇಟೈಸೇಷನ್, ಗ್ಲೋಬಲೈಸೇಷನ್ ಮಾಡಿದ್ರು. ವಿದೇಶಿ ನೇರ ಬಂಡವಾಳ ಹೀಡಿಕೆ ಮೂಲಕ ಸುಧಾರಣೆ ತಂದಿದ್ರು. ಆಗ ಏನೇನು ಘಟನೆ ನಡೆದಿತ್ತು ಹೇಳಬಾರದು ಇಂದು ಅವರು ಅಗಲಿ ಹೋಗಿದ್ದಾರೆ.ಅವರ ಕಾಲದಲ್ಲಿ ನಮ್ಮ ದೇಶ ಯಾವ ಪರಿಸ್ಥಿತಿಯಲ್ಲಿ ಇತ್ತು. ಅ ದನ್ನ ಸರಿಪಡಿಸಲು ಸರ್ವ ಪ್ರಯತ್ನ ಮಾಡಿದ್ರು. ಅದರಿಂದಲೇ ಎಲ್ಲರೂ ಹೇಳೋದು. ಇಡೀ ದೇಶದಲ್ಲಿ ಅವರ ಬಗ್ಗೆ ಗೌರವ ಇದೆ. ಸಂಕಷ್ಟದ ಸಮಯದಲ್ಲಿ ದೇಶದ ಪರಿಸ್ಥಿತಿ ಸರಿ ಮಾಡಿದ್ರು ಎಂದರು.