ಕಲಬುರಗಿ; ಸದ್ಯದಲ್ಲೇ KPCC ಅಧ್ಯಕ್ಷ ಸ್ಥಾನ ಬದಲಾವಣೆಯಾಗುತ್ತೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುಳಿವು ಕೊಟ್ಟಿದ್ದಾರೆ.
ಕಲಬುರಗಿಯಲ್ಲಿ ಮಾತಾನಾಡಿದ ಅವರು ಒಡಿಶಾದಲ್ಲಿ ಪಿಸಿಸಿ ಅಧ್ಯಕ್ಷರ ಬದಲಾವಣೆ ಮಾಡಿ ಬಂದಿದ್ದೇನೆ. ಅಲ್ಲಿ ಹಿಂದುಳಿದ ವರ್ಗದವರು ಪಿಸಿಸಿ ಅಧ್ಯಕ್ಷರಾಗಿದ್ದಾರೆ. ಬೇರೆ ರಾಜ್ಯಗಳಲ್ಲೂ ಕೆಲವೇ ದಿನಗಳಲ್ಲಿ ಅಧ್ಯಕ್ಷರ ಬದಲಾವಣೆ ಆಗುತ್ತೆ.ಈ ಬಗ್ಗೆ ನಿರ್ದಿಷ್ಟವಾಗಿ ನಾನು ಹೇಳಲು ಆಗಲ್ಲ ಎಂದು ಅವರು ಹೇಳಿದ್ದಾರೆ.
ನಾವು ಒಂದೊಂದು ರಾಜ್ಯಗಳಲ್ಲಿ ಬದಲಾವಣೆ ಮಾಡುತ್ತಿದ್ದೇವೆ. ಒಂದೆರಡು ದಿನದಲ್ಲಿ ಮತ್ತೆ ಒಂದೆರಡು ರಾಜ್ಯಗಳಲ್ಲಿ ಬದಲಾವಣೆ ಆಗುತ್ತದೆ. 8 ದಿನಗಳಲ್ಲಿ ಎಲ್ಲಾ ಬದಲಾವಣೆ ಮುಗಿಯುತ್ತೆ ಎಂದು ಕಲಬುರಗಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರು ಹೇಳಿದ ಬಳಿಕ ಅಲ್ಲಿಗೆ ಮುಗೀತು: ಖರ್ಗೆ ಹೇಳಿಕೆಗೆ ಸತೀಶ್ ಜಾರಕಿಹೊಳಿ ಪ್ರತಿಕ್ರಿಯೆ
ಬೆಂಗಳೂರು; ಅಧ್ಯಕ್ಷ ಸ್ಥಾನ ಬದಲಾವಣೆ ವಿಚಾರವಾಗಿ ಮಲ್ಲಿಕಾರ್ಜುನ ಖರ್ಗೆ ನೀಡಿರುವ ಹೇಳಿಕೆ ಪ್ರತಿಕ್ರಿಯಿಸಿದ ಸತೀಶ್ ಜಾರಕಿಹೊಳಿ ಅವರು ಹೇಳಿದ್ದಾರಲ್ವಾ ಅಲ್ಲಿಗೆ ಮುಗೀತು. ನಮ್ಮದೇನು ಇಲ್ಲ ಅವರು ಹೇಳಿದ್ದಾರೆ ಅವರನ್ನೇ ಕೇಳಿ. ನಾವು ದೆಹಲಿಗೆ ಹೋಗಿದ್ದು ಬೇರೆ ಕಾರಣಕ್ಕೆ. ಯಾರಿಗೆ ಅಧ್ಯಕ್ಷಗಾದಿ ಕೊಡಬೇಕು ಅಂತ ಚರ್ಚೆ ಆಗಬೇಕು.ಸಿಎಂ ಡಿಸಿಎಂ ಇದ್ದಾರೆ ಕರೆದು ಕೇಳ್ತಾರೆ.ಅದರ ಪ್ರಕ್ರಿಯೆ ಯಾವ ರೀತಿ ಇರುತ್ತದೆ ಗೊತ್ತಿಲ್ಲ. ಯಾವ ಸಮುದಾಯಕ್ಕೆ ಅಂತ ಚರ್ಚೆಯಾಗ್ಬೇಕಲ್ವಾ. ಕರೆದು ಮಾತನಾಡಿದಾಗ ನೋಡೋಣ. ಚರ್ಚೆ ಮಾಡಿದ್ದಾರೋ ಇಲ್ವೋ ಗೊತ್ತಿಲ್ಲ.ನಮ್ಮ ಬಳಿ ಚರ್ಚೆ ಮಾಡೋದೆನೂ ಇಲ್ಲ. ಅದು ಸಿಎಂ ಡಿಸಿಎಂ ಹಂತದಲ್ಲಿ ಇರುತ್ತದೆ ಎಂದಿದ್ದಾರೆ.
ದೆಹಲಿ ಭೇಟಿ ಸಮಾಧಾನವಾ ಅನ್ನೋ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಇಲಾಖೆಯ ಕೆಲಸಕ್ಕೆ ಹೋಗಿದ್ದು ಅಷ್ಟೆ.ವರಿಷ್ಠರ ಭೇಟಿ ಸಮಾಧಾನ ಅಂತ ಇರುತ್ತೆ ಇರಲ್ಲ.ಯಾವುದೇ ಸಮಾವೇಶದ ಬಗ್ಗೆ ಚರ್ಚೆ ಆಗಿಲ್ಲ.ಸಮಾವೇಶದ ಬಗ್ಗೆ ಸಿಎಂ ಡಿಸಿಎಂ ನಿರ್ಧಾರ ಮಾಡ್ತಾರೆ.ಹೈ ಕಮಾಂಡ್ ಸರ್ಕಾರದ ಕುರಿತು ಸಹಜವಾಗಿ ಚರ್ಚೆ ಮಾಡೇ ಮಾಡ್ತಾರೆ. ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕಾರ್ಯ ಮುಖ್ಯ ಅನ್ನೋ ಹರಿಪ್ರಸಾದ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ಗ್ಯಾರಂಟಿ ಕೊನೆವರೆಗೂ ಕೈ ಹಿಡಿಯುತ್ತೆ ಅಂತಿಲ್ಲ.ಹರಿಪ್ರಸಾದ್ ಹೇಳಿರೋದ್ರಲ್ಲಿ ತಪ್ಪಿಲ್ಲ. ಗ್ಯಾರಂಟಿ ಜೊತೆಗೆ ಪಕ್ಷ ಸಂಘಟನೆ ಕೂಡ ಮುಖ್ಯವಾಗಲಿದೆ. ನಮ್ಮ ಪ್ರಣಾಳಿಕೆಯಲ್ಲ ಏನಿದ್ದಾವೋ ಅದನ್ನೂ ಈಡೇರಿಸಬೇಕಾಗುತ್ತದೆ ಎಂದರು.
ಎಸ್ ಟಿ ಎಸ್ ಸಿ ಸಮಾವೇಶದ ಬಗ್ಗೆ ಮಾತಾನಾಡಿದ ಅವರು ಈಗ ಯಾವ ಸಮಾವೇಶವೂ ಇಲ್ಲ. ಯಾವುದಿದೆ ಈಗ ಸಮಾವೇಶ. ಯಾವುದೇ ಸಮಾವೇಶ ಮಾಡಲು ಪಕ್ಷದ ವೇದಿಕಯಲ್ಲಿ ಚರ್ಚೆ ಆಗಬೇಕು. ಆ ರೀತಿಯ ಚರ್ಚೆ ಆಗಿಲ್ಲ
ಅಂತದೇನಾದ್ರೂ ಇದ್ರೆ ನಾವೇ ಹೇಳ್ತೀವಿ. ಡಿನ್ನರ್ ಮೀಟಿಂಗ್ ಸೇರುವ ವಿಚಾರದ ಬಗ್ಗೆ ಮಾತನಾಡಿದ ನಾವು ಊಟಕ್ಕೆ ಸೇರಿ ಚರ್ಚೆ ಮಾಡಬೇಕು ಅಂತಿಲ್ಲ. ಫೋನ್, ಬ್ರೇಕ್ ಫಾಸ್ಟ್, ಲಂಚ್, ಫ್ಲೈಟ್ ಎಲ್ಲಿ ಬೇಕಾದ್ರೂ ಚರ್ಚೆ ಮಾಡಬಹುದು.ಊಟಕ್ಕೆ ಸೇರಿ ಚರ್ಚೆ ಮಾಡಬೇಕು ಅಂತೇನಿಲ್ಲ. ಮೈಸೂರು ಘಟನೆ ಬಗ್ಗೆ ಮಾತನಾಡಿದ ಅವರು ಎಲ್ಲಾ ಸರ್ಕಾರದಲ್ಲೂ ಇದು ಆಗಿದೆ. ಸಡನ್ ಆಗಿ ಬಂದು ಗಲಾಟೆ ಮಾಡಿದ್ರೆ ಹೇಗೆ ತಡೆಯೋದು. ಇದನ್ನ ಪೊಲೀಸ್ ವೈಫಲ್ಯ ಅಂತ ಆಗಲ್ಲ. ಅಚಾನಕ್ ಆಗಿ ಬಂದ್ರೆ ಯಾರು ಏನು ಮಾಡಲು ಸಾಧ್ಯ ಎಂದಿದ್ದಾರೆ.
ಬಾಕಿ ಉಳಿದಿರುವ ಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ವಿಚಾರದ ಬಗ್ಗೆ ಮಾತನಾಡಿದ ಅವರು ಇಲ್ಲಪ್ಪಾ ಅದರ ಬಗ್ಗೆ ನನಗೆ ಗೊತ್ತಿಲ್ಲ ಎಂದಿದ್ದಾರೆ.











