ಬೆಂಗಳೂರು; ಶಿವಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಸಂಜೆಗೊಂದು ನುಡಿ ಚಿಂತನ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಅಖಿಲ ಭಾರತ ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ, ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಭಾಗಿಯಾಗಿದ್ದರು. ಆರ್.ಟಿ ನಗರದ ತರಳಬಾಳು ಮಠದ ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಿತು. ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಪ್ರತಿಷ್ಟಾನದ ವತಿಯಿಂದ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಶಾಮನೂರು ನನಗಿಂತ ೧೧ ವರ್ಷ ಹಿರಿಯರು. ೯೭೨ ರಲ್ಲಿ ನಾನು ಅವರ ಮೊದಲ ಭೇಟಿಯಾಗಿದ್ದು ಅವರು ಮುನಿಸಿಪಲ್ ಅಧ್ಯಕ್ಷ ಆದಾಗ ಅವತ್ತಿನ ಕಾಲದಲ್ಲೇ ದಾವಣಗೆರೆ ಯಲ್ಲಿ ಶಾಮನೂರು ಫೇಮಸ್ ಆಗಿದ್ರು. ಅವತ್ತಿನ ಕಾಲದಲ್ಲಿ ಕಮ್ಯುನಿಸ್ಟ್ ಪ್ರಭಾವ ದಾವಣಗೆರೆ ಯಲ್ಲಿ ಜಾಸ್ತಿ ಇತ್ತು. ಕಮ್ಯುನಿಸ್ಟ್ ರಿಂದ ತೆಗೆದುಕೊಂಡು ಕಾಂಗ್ರೆಸ್ ಪಾರ್ಟಿಗೆ ದಾವಣಗೆರೆ ಕೊಟ್ಟವರು ಶಾಮನೂರು. ದಾವಣಗೆರೆ ಯನ್ನು ಬದಲಾಯಿಸಿ ಅಭಿವೃದ್ಧಿ ಮಾಡಿದ್ದು ಶಾಮನೂರು. ಶಿಕ್ಷಣ ವ್ಯಾಪಾರ ರಾಜಕೀಯ ಎಲ್ಲ ಕ್ಷೇತ್ರದಲ್ಲಿ ಹೆಜ್ಜೆ ಇಟ್ಟವರು ಶಾಮನೂರು ಶಿವಶಂಕರಪ್ಪ ಎಂದರು.
ಈಗಿನ ಕಾಲದಲ್ಲಿ ತಮ್ಮವರಿಗೆ ಸಹಾಯ ಆಗ್ಲಿಲ್ಲ ಅಂದ್ರೆ ಬೇರೆಯವರ ಕಾಲೆಳೆಯುವವರೇ ಜಾಸ್ತಿ. ಆದರೆ ನಮ್ಮ ಹಿಂದಿನ ಕಾಲದಲ್ಲಿ ಹೀಗಿರಲಿಲ್ಲ . ದೆಹಲಿಯಲ್ಲಿ ಭೇಟಿಯಾದವರು ಕೆಲವರು ಶಿವಶಂಕರಪ್ಪಾಜೀ ಹೈ ಕ್ಯಾ ಅಂತಾರೆ. ಅಯ್ಯೋ, ಅವರು ಹೈ ಕ್ಯಾ ಅಲ್ಲ, ನೂರು ವರ್ಷಕ್ಕೂ ಹೆಚ್ಚು ಬದುಕ್ತಾರೆ ಅಂತ ನಾನು ಹೇಳ್ತೀನಿ. ವೀರಶೈವ ಲಿಂಗಾಯತ ಸಮುದಾಯದ ರಾಷ್ಟ್ರೀಯ ಅಧ್ಯಕ್ಷರೂ ಹೌದು. ಒಳ್ಳೆಯ ಕೆಲಸ ಮಾಡಿದ್ರೆ ಮಾತ್ರ ಇಂಥ ಸ್ಥಾನಗಳು ಸಿಗ್ತಾವೆ ಎಂದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಮಾತನಾಡಿ ಜಾತಿ ಜನಗಣತಿ ಕುರಿತು ಒಂದು ಸಭೆ ಮಾಡಿದ್ದೇವೆ. ಮತ್ತೊಂದು ಸಭೆ ಸೇರಿ ಚರ್ಚೆ ಮಾಡುತ್ತೇವೆ. ನಾವು ಇನ್ನೂ ಫೈನಲ್ ಸ್ಟೇಜ್ ಗೆ ಹೋಗಿಲ್ಲ. ಸಮಾವೇಶದ ಬಗ್ಗೆ ಸದ್ಯಕ್ಕೆ ಯೋಚನೆ ಮಾಡಿಲ್ಲ.ಸರ್ಕಾರ ಏನು ನಿರ್ಣಯ ಮಾಡುತ್ತೋ ನೋಡೋಣ. ಅವರ ಮಾತನ್ನು ನಾವು ಕೇಳೋದಿಲ್ಲ. ನಾವು ವಿರೋಧ ಮಾಡ್ತೀವಿ ಎಂದು ತಿಳಿಸಿದ್ರು.
ನಾನು ಪಾಕಿಸ್ತಾನದ ಜೊತೆ ಯುದ್ಧ ಮಾಡೋದೇ ಬೇಡ ಅಂತ ಹೇಳಿಲ್ಲ; ಸಿಎಂ ಸಿದ್ದರಾಮಯ್ಯ ಹೇಳಿಕೆ
ಬೆಂಗಳೂರು; ನಾನು ಪಾಕಿಸ್ತಾನದ ಜೊತೆ ಯುದ್ಧ ಮಾಡೋದೇ ಬೇಡ ಅಂತ ಹೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಯುದ್ಧ ಅನಿವಾರ್ಯ ಆದ್ರೆ ಮಾತ್ರ ಮಾಡಬೇಕು. ಯುದ್ಧದಿಂದ ಪರಿಹಾರ ಅಂತ ಅಲ್ಲ ಯುದ್ಧ ಬೇಡವೇ ಬೇಡ ಅಂತ ಹೇಳಿಲ್ಲ.ನಾನು ಪಾಕಿಸ್ತಾನದ ಜೊತೆ ಯುದ್ಧ ಮಾಡೋದೇ ಬೇಡ ಅಂತ ಹೇಳಿಲ್ಲ. ಯುದ್ಧ ಪರಿಹಾರ ವಲ್ಲ.ಭದ್ರತೆ ಕೊಡಬೇಕು ಅಲ್ಲವೇ, ಯಾರ ಜವಾಬ್ದಾರಿ. ಅದರ ವೈಫಲ್ಯ ಇದೆ ಅಂತ ಹೇಳಿದ್ದೀನಿ.೪೦ ಜನ ಸೈನಿಕರು ಸತ್ತಿದ್ದರು, ಈಗ ೨೭ ಜನ ಸತ್ತಿದ್ದಾರೆ.ಯುದ್ಧ ಅನಿವಾರ್ಯ ಆದ್ರೆ ಮಾಡಬೇಕು. ತಕ್ಷಣಕ್ಕೆ ಯುದ್ದ ಬೇಡ ಅಂತ ಹೇಳಿದ್ದೀನಿ.ಬಿಜೆಪಿಯವರು ಉತ್ತರ ಕೋಡೋದೇ ಸರಿಯಲ್ಲ ಎಂದಿದ್ದಾರೆ.
ಇನ್ನು ಕಸ್ತೂರಿರಂಗನ್ ಬಗ್ಗೆ ಮಾತನಾಡಿದ ಅವರು ಅವರು ಪಶ್ಚಿಮ ಘಟ್ಟಗಳ ಪರಿಸರ ಅಧ್ಯಯನ ದಲ್ಲಿ ವರದಿ ಕೊಟ್ಟಿದ್ದರು. ಕರ್ನಾಟಕಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅವರನ್ನ ಸ್ಮರಿಸಬೇಕು.ಅವರ ಕೊಡುಗೆಯನ್ನು ದೇಶ ಸ್ಮರಿಸಬೇಕು. ಅವರು ಅಸ್ವಸ್ಥರಾಗಿದ್ದರು, ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ವಿಜ್ಞಾನ ಕ್ಷೇತ್ರಕ್ಕೆ ನಷ್ಟ, ದೇಶ ಕಂಡಂತಹ ಹೆಸರಾಂತ ವಿಜ್ಞಾನಿ. ಬಾಹ್ಯಾಕ್ಷೇತ್ರ ದಲ್ಲಿ ಅಪಾರವಾದ ಕೊಡುಗೆ ದೇಶಕ್ಕೆ ಕೊಟ್ಟಿದ್ದಾರೆ.ಬಹಳ ದೀರ್ಘ ಕಾಲ ಇಸ್ರೋ ಅಧ್ಯಕ್ಷ ರಾಗಿದ್ದರು. ಅವರ ಕೊಡುಗೆ ಶಿಕ್ಷಣ ಕ್ಷೇತ್ರಕ್ಕೆ ಅಪಾರವಾದದ್ದು. ರಾಷ್ಟ್ರದಿಂದ ಕೊಡುವ ಪ್ರಶಸ್ತಿ ಕೊಟ್ಟಿದ್ದಾರೆ. ನಾವು ಕೊಡುವ ರಾಜ್ಯಪ್ರಶಸ್ತಿ ಕೂಡ ಕೊಟ್ಟಿದ್ದೇವೆ.ಕರ್ನಾಕಟಕ್ಕೆ ಬಹಳ ಕೊಡುಗೆ ಕೊಟ್ಟಿದ್ದಾರೆ. ಅವರನ್ನು ನಾವು ಸ್ಮರಿಸುತ್ತೇವೆ. ಅವರನ್ನು ನೆನಸಿಕೊಳ್ಳುವುದು ರಾಜ್ಯ ಸರಕಾರದ ಕರ್ತವ್ಯ ಎಂದು ತಿಳಿಸಿದ್ರು.