ಮನೆ Latest News ಮಲ್ಲಿಕಾರ್ಜುನ ಖರ್ಗೆ ಯಾವುದೇ ವರದಿ ಕೊಡಿ ಅಂತ ಕೇಳಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

ಮಲ್ಲಿಕಾರ್ಜುನ ಖರ್ಗೆ ಯಾವುದೇ ವರದಿ ಕೊಡಿ ಅಂತ ಕೇಳಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ ಹೇಳಿಕೆ

0

ಬೆಂಗಳೂರು; ಹನಿಟ್ರಾಪ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿದ್ದು  ಹೋಮ್ ಮಿನಿಸ್ಟರ್ ಗೆ ರಾಜಣ್ಣ ಮನವಿ ಕೊಟ್ಟಿದ್ದಾರೆ. ಉನ್ನತ ಮಟ್ಟದ ತನಿಖೆ ಆಗಬೇಕು ಅಂದಿದ್ದಾರೆ. ಇದಕ್ಕೆ ಸರ್ಕಾರ ಕೂಡ ಸಿದ್ದ ಇದೆ ಎಂದಿದ್ದಾರೆ.

ಹೈ ಕಮಾಂಡ್ ಯಾಕೆ ಎಂಟ್ರಿ ಆಗುತ್ತದೆ?. ಎಐಸಿಸಿ ಅಧ್ಯಕ್ಷರಿಗೆ ಮಾಡೋಕೆ ಕೆಲಸ ಇಲ್ವಾ?. ಖರ್ಗೆ ಹಾಗೂ ಸಿಎಂ ಅನೇಕ ಚರ್ಚೆ ಮಾಡಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಯಾವುದೇ ವರದಿ ಕೊಡಿ ಅಂತ ಕೇಳಿಲ್ಲ. ಹಂಗೇನಾದ್ರೂ ಇದ್ರೆ ಸುರ್ಜೇವಾಲಾ ಕೇಳ್ತಾರೆ. ಇವರ್ಯಾಕೆ ವರದಿ ಕೊಡಿ ಅಂತ ಕೇಳ್ತಾರೆ. ಈ ವಿಚಾರ ರಾಜಣ್ಣ ಸದನದಲ್ಲಿ ಪ್ರಸ್ತಾಪ ಮಾಡಿದ್ರು. ಪರಮೇಶ್ವರ್ ದೂರು ಕೊಡಲಿ ಅಂದ್ರು. ಗುರುವಾರದ ವರೆಗೆ ಸಮಯ ಕೇಳಿದ್ದಾರೆ ಅಂತ ಇದೆ ನೋಡೋಣ. ದೂರು ಕೊಟ್ಟರೆ ಉನ್ನತ ಮಟ್ಟದ ತನಿಖೆ ಮಾಡಿಸುತ್ತದೆ ಸರ್ಕಾರ ಎಂದಿದ್ದಾರೆ.

ಇದು ಸಾರ್ವಜನಿಕರ ಮುಂದೆ ತಲೆ ತಗ್ಗಿಸುವ ವಿಚಾರ. ಕೋಟಿ ಜನರಲ್ಲಿ ೨೨೪ ಜನರಿಗೆ ರಾಜಕೀಯಕ್ಕೆ ಬರಲು ಅವಕಾಶ ಇದೆ.ಆದರೆ ನಮ್ಮ ಕ್ರೆಡಿಬಲಿಟಿ ನಾವೇ ಕಳೆದುಕೊಳ್ಳೋದು ದುರಂತ. ಯಾರೂ ಏಕ ಪತ್ನಿ ವ್ರತಸ್ಥರಲ್ಲ ಅಂದ್ರು ಒಬ್ಬರು ಅಸೆಂಬ್ಲಿಯಲ್ಲೇ. ಅವರು ಹಾಗಿರಬಹುದು, ನಾವೆಲ್ಲ ಸರಿ ಇದ್ದೀವಲ್ಲ. ಇನ್ನೊಬ್ಬ ಮಾಜಿ ಶಾಸಕ 222. ಮಂದಿಯೂ ಹನಿ ಟ್ರ್ಯಾಪ್ ಆಗಿದೆ ಅಂದ್ರು. ಹಾಗಾದ್ರೆ ಸ್ಪೀಕರ್ ಸಿಎಂ ಡಿಸಿಎಂ ಎಲ್ರದ್ದೂ ಇದೇ ಅಂತ ಅರ್ಥಾನಾ?. ಅಂದ್ರೆ ಸಿಎಂ ಡಿಸಿಎಂ, ಸ್ಪೀಕರ್ ದೂ ಇದೆ ಅಂತಾನಾ..? ಎಂದು ಪ್ರಶ್ನಿಸಿದ್ದಾರೆ.

ಇದು ನಿಜಕ್ಕೂ ತಲೆ ತಗ್ಗಿಸುವ ವಿಚಾರ. ನಾವು ಕುಟುಂಬಗಳಿಗೆ ಸ್ನೇಹಿತರಿಗೆ ಹೇಗೆ ಮುಖ ತೋರಿಸೋದು?. ನಮಗೂ ನೈತಿಕತೆ ಇರಬೇಕಲಾ?. ಯಾರಾದ್ರೂ ಬಂದು ಏನೋ ಮಾಡ್ತಾರೆ ಅಂದರೆ ಇವರು ಸುಮ್ಮನೆ ಇದ್ದಾರೆ ಅಂದ್ರೆ ಏನು?. ಮಾಡೋವ್ರಿಗೆ ಮಾಡಿಸಿಕೊಂಡವರಿಗೂ ಇದೇ ಬೇಕು ಅಂದ್ರೆ ಕಂಪ್ಲೆಂಟ್ ಕೊಡಲಿ ತನಿಖೆ ಮಾಡಿಸೋಣ. ರಾಜ್ಯದ ಜನರು ತಲೆ ತಗ್ಗಿಸುವ ವಿಚಾರ. ನಮ್ಮ ಕ್ರೆಡಿಬಲಿಟಿ ಬಗ್ಗೆ ನಾವೇ ಆತ್ಮಾವಲೋಕನ ಮಾಡಿಕೊಳ್ಳಬೇಕು.ರೋ ಟ್ರಿಕ್ಸ್ ಮಾಡ್ತಾ ಇದಾರೆ ಅನ್ನೋದು ನಮಗೇನು ಗೊತ್ತು?. ಹೌದು, ಪಕ್ಷಕ್ಕೂ ಇದು ಮುಜುಗರ ತಂದಿದೆ.ನಾವೇನಾದ್ರೂ ಉಳಿಸಿಕೊಂಡಿದ್ದೀವಾ..!? ಎಂದಿದ್ದಾರೆ.

ಸಂವಿಧಾನ ವಿಚಾರವಾಗಿ ಡಿಕೆ ಶಿವಕುಮಾರ್ ವಿರುದ್ಧ ಪ್ರತಿಭಟನೆ ವಿಚಾರದ ಬಗ್ಗೆ ಮಾತನಾಡಿದ ಅವರು ಹಿಂದೆ ಅನಂತ್ ಕುಮಾರ್ ಮಾತನಾಡಿದಾಗ ಯಾಕೆ ಪ್ರತಿಭಟನೆ ಮಾಡಲಿಲ್ಲ?. ಮನುಸ್ಕೃತಿ ಬೇಕು ಅಂದ್ರಲ್ಲಾ ಆರ್ ಎಸ್ ಎಸ್ ನವರು ಆಗ ಯಾಕೆ ಪ್ರತಿಭಟನೆ ಮಾಡಲಿಲ್ಲ?. ಇತಿಹಾಸ ಇವರಿಗೆ ಗೊತ್ತಿಲ್ಲ ವಾಟ್ಸ್ ಅಪ್ ಯುನಿವರ್ಟಿಸಿ ಬಿಟ್ಟು ಬರಲಿ. ನಮ್ಮ ರಾಷ್ಟ್ರ ಧ್ವಜನೇ ಹಾಕಲಿಲ್ಲ ಇವರು ೫೨ ವರ್ಷದ ತನಕ. ಇವರು ಸಂವಿಧಾನದ ಬಗ್ಗೆ ಮಾತಾಡ್ತಾರಾ?ಎಂದಿದ್ದಾರೆ.