ಬೆಂಗಳೂರು; ಮೈಸೂರು ಭಾಗದವರೇ ಆದ ಮಹದೇವಪ್ಪ ಇತಿಹಾಸ ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದು ಬೆಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದ್ದಾರೆ.
ಕೆಅರ್ ಎಸ್ ನಿರ್ಮಾಣದ ಬಗ್ಗೆ ಸಚಿವ ಡಾ. ಎಚ್.ಸಿ. ಮಹದೇವಪ್ಪ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ಸಿದ್ದರಾಮಯ್ಯ, ಮಹದೇವಪ್ಪ ಮತ್ತು ಕಾಂಗ್ರೆಸ್ ಪಕ್ಷಕ್ಕೆ ಮೈಸೂರು ಮಹಾರಾಜರಿಗೆ ಅಪಮಾನ ಮಾಡುವುದು ಏನು ತೃಪ್ತಿ ಕೊಡುತ್ತದೋ ಗೊತ್ತಿಲ್ಲ. ಅನೇಕ ಸಂದರ್ಭಗಳಲ್ಲಿ ಮೈಸೂರು ಮಹಾರಾಜರಿಗೆ ಅಪಮಾನ ಮಾಡಿದ್ದಾರೆ. 1799 ರಲ್ಲಿ ಟಿಪ್ಪು ಸುಲ್ತಾನ್ ಯುದ್ಧ ಸೋತು ಪ್ರಾಣ ಕಳೆದುಕೊಳ್ಳುತ್ತಾರೆ. 1931 ರಲ್ಲಿ ಕೆಆರ್ ಎಸ್ ಅಣೆಕಟ್ಟು ಪೂರ್ಣ ಆಗುತ್ತದೆ. ಇದೆಲ್ಲಾ ಗೊತ್ತಿದ್ದೂ ಮೈಸೂರು ಭಾಗದವರೇ ಆದ ಮಹದೇವಪ್ಪ ಇತಿಹಾಸ ತಿರುಚುವ ಕೆಲಸ ಮಾಡುತ್ತಿದ್ದಾರೆ?. ಯಾಕೆ ಅಪಮಾನ ಮಾಡುತ್ತಿರುವ ರೀತಿ ಮಾಡುತ್ತಿದ್ದಾರೆ?. ಇತ್ತೀಚೆಗೆ ಪುಣ್ಯಾತ್ಮ ಎಂಎಲ್ಸಿ ಯತೀಂದ್ರ ಕೂಡಾ ಹೇಳಿದ್ದಾರೆ. ಮಹದೇವಪ್ಪನವರಿಗೆ ಸಿದ್ದರಾಮಯ್ಯನವರಿಂದ ಬಳುವಳಿ ಬಂದಿರಬೇಕು. ಎಲ್ಲವೂ ಕೂಡಾ ಮುಸ್ಲಿಮರ ಓಲೈಕೆಯೇ ಎಂದಿದ್ದಾರೆ.
ಬೆಳಗಾವಿ ಜಿಲ್ಲೆಯ ಯಾದವಾಡದಲ್ಲಿ ಕುಡಿಯುವ ನೀರಿಗೆ ವಿಷ ಬೆರೆಸಿದ ಪ್ರಕರಣದಲ್ಲಿ ಈಗಾಗಲೇ ಸಿದ್ದರಾಮಯ್ಯ ತೀರ್ಪು ಕೊಟ್ಟುಬಿಟ್ಟಿದ್ದಾರೆ. ಅಲ್ಲಿ ಏನು ಆಗಿದೆ ಅದು ತನಿಖೆ ಆಗಲಿ ಎಂದ ಅವರು ನಾಳೆ ಬೆಂಗಳೂರಿನಲ್ಲಿ ರಾಹುಲ್ ಗಾಂಧಿ ಪ್ರತಿಭಟನೆ ವಿಚಾರವಾಗಿ ಮಾತನಾಡಿ ರಾಹುಲ್ ಗಾಂಧಿ ಬಂದು ಏನು ಪ್ರತಿಭಟನೆ ಮಾಡುತ್ತಾರೋ ಮಾಡಲಿ. ಲೋಕಸಭೆ ಅಧಿವೇಶನದ ಸಂದರ್ಭದಲ್ಲಿ ವಿಪಕ್ಷ ನಾಯಕ ಕರ್ನಾಟಕಕ್ಕೆ ಬಂದು ನಾಟಕ ಮಾಡುವ ಅವಶ್ಯಕತೆ ಇರಲಿಲ್ಲ. ನರೇಂದ್ರ ಮೋದಿ ಪ್ರಧಾನಿಯಾಗಿ ಮುಂದುವರಿಯುವುದು ಸಹಿಸಲಾಗುತ್ತಿಲ್ಲವೋ ಏನೋ. ಅವರ ನಡವಳಿಕೆಗಳೇ ಅರ್ಥ ಆಗುತ್ತಿಲ್ಲ. ಬಿಹಾರ ಚುನಾವಣಾ ಸೋಲಿನ ಸುಳಿವು ಈಗಾಗಲೇ ಅವರಿಗೆ ಸಿಕ್ಕಿರಬೇಕು. ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಕೂಡಾ ಅಕ್ರಮ ಆಗಿದೆ ಎಂದು ಹೇಳುತ್ತಿರುವುದು ಮತದಾರರಿಗೆ ಮಾಡುವ ಅಪಮಾನ. ಮತದಾರರಿಗೆ ಅಪಮಾನ ಮಾಡಲು ಬಿಜೆಪಿ ಬಿಡುವುದಿಲ್ಲ. ಮುಸಲ್ಮಾನರ ಓಲೈಕೆ ಕಾಂಗ್ರೆಸ್ ಪಕ್ಷದ ಕೆಟ್ಟ ಚಾಳಿ. ಸಿದ್ದರಾಮಯ್ಯ ಸಿಎಂ ಆದ ಮೇಲೆ ಇದು ಜಾಸ್ತಿಯಾಗಿ ಎಂದು ಹೇಳಿದ್ದಾರೆಯ.
: ಆಗಸ್ಟ್ 10 ರಂದು ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸಲಿದ್ದಾರೆ. ಬೆಂಗಳೂರು ಮೆಟ್ರೋ ಮೋದಿಯವರ ಕನಸಿನ ಕೂಸು. ಮೆಟ್ರೋ ಹಳದಿ ಲೈನ್ ಅನ್ನು ಮೋದಿ ಲೋಕಾರ್ಪಣೆ ಮಾಡಲಿದ್ದಾರೆ ಎಂದಿದ್ದಾರೆ.