ಬೆಂಗಳೂರು; ನಮ್ಮನ್ನು ತಬ್ಬಿಕೊಂಡ ಮೇಲೆ ನಾವೂ ಕೊಚ್ಚೆ ಅವರೂ ಕೊಚ್ಚೆ ಎಂದು ಹೆಚ್ ಡಿ ಕುಮಾರಸ್ವಾಮಿಗೆ ಶಾಸಕ ಮಾಗಡಿ ಬಾಲಕೃಷ್ಣ ತಿರುಗೇಟು ಕೊಟ್ಟಿದ್ದಾರೆ.ಹಿಂದೆ ನನ್ನ ಮುಖ್ಯ ಮಂತ್ರಿ ಮಾಡಿದವರು ಚೆಲುವರಾಯಸ್ವಾಮಿ ಪುಟ್ಟಣ್ಣ ಝಮೀರ್ ಅಂತ ಇದೇ ಕುಮಾರಣ್ಣ ಹೇಳಿದ್ರು. ಆಗ ಕೊಚ್ಚೆ ಆಗಿರಲಿಲ್ಲ, ಈಗ ಕೊಚ್ಚೆ ಆಗಿದಿವಾ?. ನಮ್ಮನ್ನು ತಬ್ಬಿಕೊಂಡ ಮೇಲೆ ನಾವೂ ಕೊಚ್ಚೆ ಅವರೂ ಕೊಚ್ಚೆ ಎಂದಿದ್ದಾರೆ.
ಒಕ್ಕಲಿಗ ನಾಯಕರನ್ನು ತುಳಿಯುವ ಕೆಲಸ ಮಾಡಿದ್ರು ಕುಮಾರಸ್ವಾಮಿ. ದೇವೇಗೌಡ್ರಂತ ಉನ್ನತ ಸ್ಥಾನದಲ್ಲಿ ಇರುವವರು ಡಿಕೆಶಿವಕುಮಾರ್ ಗೆ ಎಂತೆಂಥ ಪದ ಬಳಸಿದರು. ಝಮೀರ್ ಕೂಡ ಹೇಳಬಾರದಿತ್ತು. ಆದರೆ ಅದನ್ನು ಮಾತ್ರ ಹೈಪ್ ಮಾಡಿದ್ರಿ. ಹಿಂದೆ ಆರಗ ಜ್ಞಾನೇಂದ್ರ ಖರ್ಗೆಯವರ ಬಗ್ಗೆ ಕರಿಯ ಅಂದಿದ್ರು. ಆಗ ಯಾಕೆ ಮಾಧ್ಯಮಗಳು ಹೈಪ್ ಮಾಡಲಿಲ್ಲ. ಕುಮಾರಸ್ವಾಮಿಗೆ ಹಿಂದೆ ನಾವೆಲ್ಲ ಪನ್ನೀರ್ ಆಗಿದ್ವಿ ಈಗ ಕೊಚ್ಚೆ ಆಗಿದಿವಿ. ಒಕ್ಕಲಿಗ ಸಮುದಾಯಕ್ಕೆ ಕುಮಾರಸ್ವಾಮಿ ಯಿಂದ ಏನೂ ಆಗಿಲ್ಲ. ದೊಡ್ಡ ತಿಮಿಂಗಿಲಗಳು ಸಣ್ಣ ಮೀನು ನುಂಗಿದ ಹಾಗೆ ನಮ್ಮನ್ನೆಲ್ಲ ಕುಮಾರಸ್ವಾಮಿ ನುಂಗಿ ಹಾಕಿಕೊಂಡರು ಎಂದಿದ್ದಾರೆ.
ಯೋಗೇಶ್ವರ್ ಹೇಳಿಕೆ ಸರಿಯಾಗಿದೆ. ಜೆಡಿಎಸ್ ಅವರಿಗೆ ಸ್ವಲ್ಪ ಪ್ಲಸ್ ಆಗಿದೆ. ಝಮೀರ್ ಹೇಳಿಕೆ ಕೂಡ ಜೆಡಿಎಸ್ ನವರಿಗೆ ಪ್ಲಸ್ ಆಗಿದೆ. ಬೋಳಿಮಗ ಬಾಲಕೃಷ್ಣ ಅಂತ ದೇವೇಗೌಡ್ರು ಹೇಳಿದರೂ ಏನೂ ಅನಿಸಲ್ಲ. ಆದರೆ ನಾವೇ ಮಾತನಾಡಿದರೆ ಸಹಿಸಲ್ಲ. ಒಕ್ಕಲಿಗ ಜನಾಂಗವನ್ನು ಚೆನ್ನಾಗಿ ಉಪಯೋಗಿಸಿಕೊಳ್ತಾರೆ ಎಂದು ಅವರು ಹೇಳಿದ್ದಾರೆ.
ಸಿದ್ದರಾಮಯ್ಯ ಮುಟ್ಟಿದರೆ ಒಂದು ವರ್ಗ ದಂಗೆ ಏಳುತ್ತದೆ. ಇದು ನ್ಯಾಚುರಲ್ ಫಿನಾಮಿನನ್. ಜನರ ಆಕ್ರೋಶ ಹೆಚ್ಚಾದಾಗ ದಂಗೆ ಏಳುವುದು ಸಹಜ. ಶ್ರೀಲಂಕಾ, ಬಾಂಗ್ಲಾದೇಶ ಅಲ್ಲೆಲ್ಲ ಜನರ ಆಕ್ರೋಶ ಹೆಚ್ಚಾದಾಗ ದಂಗೆ ಏಳಲಿಲ್ವಾ. ಮುಡಾ ಕೇಸ್ ಇಡಿ ಬರುವ ಪ್ರಕರಣ ಅಲ್ಲವೇ ಅಲ್ಲ. ಹೀಗಾಗಿ ಜನರಿಗೂ ಮುಂದೆ ಇದರ ಬಗ್ಗೆ ಆಕ್ರೋಶ ಇರುತ್ತದೆ. ಆಕ್ರೋಶ ಹೆಚ್ಚಾದಾಗ ಸಹಜವಾಗಿಯೇ ದಂಗೆ ಏಳುವ ಸಾಧ್ಯತೆ ಇರುತ್ತದೆ. ಸಿದ್ದರಾಮಯ್ಯ ರನ್ನು ಮುಟ್ಟಿದರೆ ಸಹಜವಾಗಿಯೇ ಒಂದು ವರ್ಗ ದಂಗೆ ಏಳುತ್ತದೆ. ದೇವೇಗೌಡರನ್ನು ಮುಟ್ಟಿದರೆ ಒಂದು ವರ್ಗ, ಯಡಿಯೂರಪ್ಪ ರನ್ನು ಮುಟ್ಟಿದರೆ ಒಂದು ವರ್ಗ ದಂಗೆ ಏಳುತ್ತದೆ ಎಂದು ಅವರು ಹೇಳಿದ್ದಾರೆ.











