ಬೆಂಗಳೂರು; ಬಿಜೆಪಿಯವರು ಬೇರೆಯವರನ್ನು ಟ್ರೋಲ್ ಮಾಡುವ ಮೊದಲು, ನಿಮ್ಮ ಮನೆಯಲ್ಲಿ ಎಷ್ಟು ಹೊಲಸಿದೆ ಎಂಬುದನ್ನು ನೋಡಬೇಕಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ಬಿಜೆಪಿಯವರಿಗೆ ಕಾಮನ್ ಸೆನ್ಸ್ ಸ್ವಲ್ಪ ಕಮ್ಮಿ. ಮೋದಿ ಸರ್ಕಾರ ಬಂದ ಮೇಲೆ ೯೮ ಸಾವಿರ ಶಾಲೆಗಳನ್ನು ಕೇಂದ್ರ ಸರ್ಕಾರ ಬಂದ್ ಮಾಡಿದೆ. ಸ್ಥಳೀಯ ಭಾಷೆಗೆ ಬೆಲೆ ಕೊಡದ ಕೆಲಸ ಬಿಜೆಪಿಯವರು ಮಾಡ್ತಾರೆ. ತೇಜಸ್ವಿ ಸೂರ್ಯ ಡಬ್ಬಿ ಹಿಡಿದುಕೊಂಡು ಹೋಗ್ತಾರೆ. ಬುರುಡೆ ಬಿಡುವುದನ್ನು ನಿಲ್ಲಿಸಬೇಕು ತೇಜಸ್ವಿ ಸೂರ್ಯ. ಮೋದಿ ಮನೆ ಮುಂದೆ ಹೋಗಿ ಖಾಲಿ ಡಬ್ಬಿ ಹಿಡಿದರೆ ರಾಜ್ಯಕ್ಕೆ ಬರುವ ಹಣವಾದರೂ ಬರುತ್ತದೆ. ಪುಕ್ಸಟ್ಟೆ ಓಟ್ ಹಾಕಿಸಿಕೊಂಡು ಹೋಗ್ತಾರೆ ಬಿಜೆಪಿಯವರು ಏನಾದರೂ ಮೋದಿಯವರ ಹತ್ರ ಶಿಕ್ಷಣಕ್ಕೆ ಕೇಳಿದ್ದಾರಾ? ತೇಜಸ್ವಿ ಸೂರ್ಯಗೆ ತಲೆಯಲ್ಲಿ ಸ್ವಲ್ಪ ಬುದ್ದಿ ಇದ್ರೆ ಇದನ್ನು ಕೇಳಲಿ. ಮೆಟ್ರೊ ಮುಂದೆ ಬರೀ ಶೋಕಿ ಮಾಡೋದಲ್ಲ ಎಂದಿದ್ದಾರೆ.
ಸರ್ಕಾರಿ ಶಾಲೆಯ ದಾಖಲಾತಿ ಹೆಚ್ಚಳ ಮಾಡುವ ಪ್ರಯತ್ನ ಈ ಬಾರಿ ಮಾಡುತ್ತೇವೆ. ಸರ್ಕಾರಿ ಶಾಲೆಗಳ ಫಲಿತಾಂಶ ಕೂಡ ಸರಿಯಾಗಬೇಕು. ಕೆಪಿಎಸ್ ಶಾಲೆಗಳ ಬಗ್ಗೆ ಒಳ್ಳೆಯ ಸ್ಪಂದನೆ ಸಿಗುತ್ತಿದೆ ಅಕೌಂಟೆಬಿಲಿಟಿಯನ್ನು ಅದ್ಭುತವಾಗಿ ಮಾಡಬೇಕು. ಕೆಪಿಎಸ್ ಶಾಲೆಗೆ ಉಚಿತ ಸಂಚಾರದ ವ್ಯವಸ್ಥೆ ಕಲ್ಪಿಸುತ್ತಿದ್ದೇವೆ. ಒಳ್ಳೆಯ ಬಜೆಟ್ ನೀಡುತ್ತಾರೆ ಎಂಬ ವಿಶ್ವಾಸವಿದೆ. ಈ ಬಾರಿ ಶೈಕ್ಷಣಿಕ ವರ್ಷ ಪ್ರಾರಂಭ ಆಗುವ ಮೊದಲೇ ಶಿಕ್ಷಕರ ನೇಮಕಾತಿ ಆಗುತ್ತದೆ. ೭-೮ ಸಾವಿರ ಶಿಕ್ಷಕರ ನೇಮಕಾತಿ ಆಗುತ್ತದೆ. ಸಂಗೀತ, ದೈಹಿಕ ಶಿಕ್ಷಕರ ನೇಮಕಾತಿ ಆಗುತ್ತದೆ ಎಂದು ತಿಳಿಸಿದ್ದಾರೆ.
ಮಾತೆತ್ತಿದರೆ ಪಾಕಿಸ್ತಾನಕ್ಕೆ ಹೋಗಿ ಅಂತಾರೆ. ನಾವೇನು ಪಾಕಿಸ್ತಾನ ಹಿಡಿದುಕೊಂಡು ಓಡಾಡ್ತಾ ಇದೀನ?. ಇದೆಲ್ಲ ಡೋಂಗಿ ಪದ್ದತಿಗಳನ್ನು ಬಿಟ್ಟುಬಿಡಿ. ಸುಮ್ಮನೆ ಮೆಟ್ರೋದಲ್ಲಿ ಓಡಾಡಿ ಶೋಕಿ ಡ್ರಾಮಾ ಮಾಡೋ ಬದಲು ಸಂಸತ್ ಅಟೆಂಡ್ ಮಾಡಲಿ. ತೇಜಸ್ವಿ ಸೂರ್ಯ ಡ್ರಾಮಾ ನಿಲ್ಲಿಸೋದು ಒಳ್ಳೆಯದು ಎಂದ ಅವರು ಹೈಕಮಾಂಡ್ ಬಗ್ಗೆ ನನಗೆ ತುಂಬಾ ಭಯ ಇದೆ.ಬೇರೆ ಶಾಸಕರಿಗೆ ಭಯ ಇಲ್ಲದೆ ಇರಬಹುದು.ವೈಯಕ್ತಿಕವಾಗಿ ಹೇಳಿದಾಗ ವೈಯಕ್ತಿಕ ಸ್ಪಷ್ಟನೆ ಅವರೇ ಕೊಡಬೇಕು. ಪಕ್ಷದ ಪರವಾಗಿ ಹೇಳಿಕೆ ಕೊಟ್ಟರೆ ನಾವೆಲ್ಲ ಅದಕ್ಕೆ ಬದ್ದ.ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಅವರೇ ಸ್ಪಷ್ಟನೆ ಕೊಡಬೇಕಾಗುತ್ತದೆ. ಹೀಗೆ ಶಾಸಕರೆಲ್ಲ ಮಾತನಾಡುವ ಬದಲು ಹೈಕಮಾಂಡ್ ಬಳಿಯೇ ಹೋಗಿ ಕೇಳುವುದು ಒಳ್ಳೆಯದು. ದೇಶದಲ್ಲಿ ಹೈಕಮಾಂಡ್ ನಲ್ಲಿ ದೊಡ್ಡ ದೊಡ್ಡ ನಾಯಕರಿದ್ದಾರೆ ಎಂದಿದ್ದಾರೆ.











