ಮನೆ Latest News ಎಐಸಿಸಿ ಅಧ್ಯಕ್ಷರನ್ನು ಒಲೈಸಲು ಸಿಎಂ ಸಿದ್ದರಾಮಯ್ಯ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದಾರೆ ಎಂಬ ವಿಜಯೇಂದ್ರ...

ಎಐಸಿಸಿ ಅಧ್ಯಕ್ಷರನ್ನು ಒಲೈಸಲು ಸಿಎಂ ಸಿದ್ದರಾಮಯ್ಯ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದಾರೆ ಎಂಬ ವಿಜಯೇಂದ್ರ ಹೇಳಿಕೆಗೆ ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ತಿರುಗೇಟು

0

 

 

ವಿಜಯಪುರ : ಸಿಎಂ ಕುರ್ಚಿ ಅಲುಗಾಡುತ್ತಿದೆ. ಹಾಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒಲೈಸಲು ಸಿಎಂ ಸಿದ್ದರಾಮಯ್ಯ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದಾರೆ ಎಂಬ ವಿಜಯೇಂದ್ರ ಹೇಳಿಕೆಗೆ ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ.

 

ಸಿಎಂ ಸಿದ್ದರಾಮಯ್ಯನವರ ಕುರ್ಚಿ ಗಟ್ಟಿಯಾಗಿದೆ. ಆದರೆ ಈಗ ಅಲಗಾಡುತ್ತಿರುವುದು ಬಿ ವೈ ವಿಜಯೇಂದ್ರ ಅವರ ಕುರ್ಚಿ ಎಂದು ಹೇಳಿಕೆಗೆ ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ತಿರುಗೇಟು ಕೊಟ್ಟಿದ್ದಾರೆ.

 

ವಿಜಯಪುರದಲ್ಲಿ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಬೃಹತ್ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಸಿಎಂ ಸಿದ್ದರಾಮಯ್ಯ ಅವರು ಗಟ್ಟಿಯಾಗಿದ್ದಾರೆ. ಸಿದ್ದರಾಮಯ್ಯ ಅವರ ಕುರ್ಚಿ ಕೂಡ ಗಟ್ಟಿ ಇದೆ. ಆದರೆ ಈಗ ಅಲುಗಾಡುತ್ತಿರುವುದು ಬಿ ವೈ ವಿಜಯೇಂದ್ರ ಅವರ ಕುರ್ಚಿ ಎಂದು ಬಿ ವೈ ವಿಜಯೇಂದ್ರ ಹೇಳಿಕೆಗೆ ಎಂ ಬಿ ಪಾಟೀಲ್ ತಿರುಗೇಟು ಕೊಟ್ಟರು.

ಬಸನಗೌಡ ಪಾಟೀಲ್ ಯತ್ನಾಳ್, ರಮೇಶ್ ಜಾರಕಿಹೊಳಿ ಸೇರಿದಂತೆ ಅನೇಕರಿಂದಾಗಿ  ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಅವರ ಕುರ್ಚಿ ಈಗ  ಅಲಗಾಡುತ್ತಿದೆ.  ಹೀಗಾಗಿ ವಿಜಯೇಂದ್ರ ಮೊದಲು ತಮ್ಮ ಕುರ್ಚಿ ಗಟ್ಟಿ ಮಾಡಿಕೊಳ್ಳಲಿ ಎಂದು ವಿಜಯಪುರದಲ್ಲಿ ಕೈಗಾರಿಕೆ ಇಲಾಖೆಯ ಸಚಿವ ಎಂ ಬಿ ಪಾಟೀಲ್ ವಿಜಯೇಂದ್ರ ಅವರಿಗೆ ಟಕ್ಕರ್ ಕೊಟ್ಟಿದ್ದಾರೆ. ಆ ಮೂಲಕ ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ ನಿಮ್ಮ ಸಮಸ್ಯೆ ಫಸ್ಟ್ ಸರಿಮಾಡಿಕೊಳ್ಳಿ ಮತ್ತೆ ಬೇರೆಯವರ ಬಗ್ಗೆ ಮಾತನಾಡಿ ಅನ್ನೋ ರೀತಿಯಲ್ಲಿ ರಿಯ್ಯಾಕ್ಟ್ ಮಾಡಿದ್ದಾರೆ.

ಬೆಂಗಳೂರು; ಎಐಸಿಸಿ ಅಧ್ಯಕ್ಷರನ್ನು ಒಲೈಸಲು ಸಿಎಂ ಸಿದ್ದರಾಮಯ್ಯ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.

ಕಲಬುರಗಿಯಲ್ಲಿ ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟ ಸಭೆ ಮಾಡಿದ್ದಾರೆ. ಅಚಾನಾಕ್ ಆಗಿ ಈಗ ಸಿಎಂ ಸಿದ್ದರಾಮಯ್ಯ ಅವರಿಗೆ ಕಲಬುರಗಿ ನೆನಪಾಗಿದೆ.ಸರ್ಕಾರ ಬಂದು ಒಂದು ವರ್ಷ ಆಗಿದ್ದರೂ ಇದುವರೆಗೂ ಅವರಿಗೆ ಕಲಬುರಗಿ ನೆನಪಾಗಿರಲಿಲ್ಲ.ಆದರೆ ಈಗ ನೆನಪಾಗಿದೆ. ಇನ್ನು ನಿನ್ನೆ ಸಚಿವ ಸಂಪುಟದಲ್ಲಿ ಯಾವುದೆ ಹೊಸ ವಿಚಾರ ಹೇಳಿಲ್ಲ.ಕೆಕೆಆರ್ ಡಿಬಿಗೆ ನಾವು 5 ಸಾವಿರ ಕೋಟಿ ಬಜೆಟ್ ನಲ್ಲಿ ಇಟ್ಟಿದ್ದೆವು ಅದನ್ನೆ ಹೇಳಿದ್ದಾರೆ. ಬೆಂಗಳೂರು,ಮೈಸೂರು ಮುಖ್ಯಮಂತ್ರಿ ಅಂತಾ ಜನ ಹೇಳ್ತಿದ್ದಾರೆ.ನಿನ್ನೆಯ ಸಚಿವ ಸಂಪುಟದ ಸಭೆ ಯಾವುದೇ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಿರ್ಧಾರ ತೆಗೆದುಕೊಂಡಿಲ್ಲ.ಮುಖ್ಯಮಂತ್ರಿ ಕುರ್ಚಿ ಅಲುಗಾಡ್ತಿದೆ. ಹಾಗಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಒಲೈಕೆ ಮಾಡೋದಕ್ಕೆ ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ಮಾಡಿದ್ದಾರೆ ಎಂದು ವಿಜಯೇಂದ್ರ ಹೇಳಿದ್ದಾರೆ.

ಇನ್ನು ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ಡಿಕೆಶಿ ,ಆರ್ ವಿ ದೇಶಪಾಂಡೆ , ಮುಖ್ಯಮಂತ್ರಿ ಆಕಾಂಕ್ಷಿ ಅಂತಾ ಹೇಳಿದ್ದಾರೆ.ಅವರಿಗೆ ಈ ಪ್ರಶ್ನೆ ಕೇಳಬೇಕು.ಅಲ್ಲದೇ ಎಲ್ಲಾ ಕಾಲದಲ್ಲೂ ಮುರುಕರಿದ್ದಾರೆ ಎನ್ನೋ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಯಾರಿಗೂ ಹೇಳಬೇಡಿ  ಅವರು ಡಿಕೆಶಿ ಅವರಿಗೆ ಹೇಳಿರೋದು ಎಂದಿದ್ದಾರೆ,.

ಶಿವಮೊಗ್ಗದಲ್ಲಿ ಪ್ಯಾಲೆಸ್ಟೈನ್ ಬಾವುಟ ಹಾರಿಸಿರುವ ವಿಚಾರದ ಬಗ್ಗೆ ಮಾತನಾಡಿದ ಅವರು ಪ್ಯಾಲೆಸ್ಟೈನ್ ದ್ವಜ ಹಾರಿಸಿರೋದು ಅಷ್ಟೆ ಅಲ್ಲ.ಮೊನ್ನೆ ನಾಗಮಂಗಲ ಘಟನೆ , ಇವತ್ತು ದೇಶದ್ರೋಹಿಗಳ ಅಟ್ಟಹಾಸ.ಆರ್ ಎಸ್ ಎಸ್ ಕಚೇರಿಗೆ ಪೊಲೀಸರು ನುಗ್ಗಿರೋದು.ದಾವಣಗೆರೆ ಘಟನೆ , ರಾಮೇಶ್ವರಂ ಬಾಂಬ್ ಬ್ಲಾಸ್ಟ್ ಘಟನೆ. ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇಂತಹ ದೇಶದ್ರೋಹಿ ಚಟುವಟಿಕೆಗಳಿಗೆ ಹೆಚ್ಚು ಶಕ್ತಿ ಸಿಗ್ತಿದೆ.ಬೆಂಕಿ ಹಚ್ಚುವ ಕೆಲಸ ಹಚ್ಚಿಸಿಕೊಳ್ಳುವ ಕೆಲಸ ಮಾಡೋದು ಕಾಂಗ್ರೆಸ್ ಪಕ್ಷದವರೇ.ನಾಗಮಂಗಲದಲ್ಲಿ ಅಲ್ಪಸಂಖ್ಯಾತ ಗೂಂಡಾಗಳು ಹಿಂದುಗಳ ಅಂಗಡಿಗೆ ನುಗ್ಗಿ ಬೆಂಕಿ ಹಚ್ಚಿರುವ ಸಂಧರ್ಭದಲ್ಲಿ.ಪೊಲೀಸರು ಕೈ ಕಟ್ಟಿ ಕೂತಿರೋದ್ರೆ ನೋಡ್ರೆ ಯಾರು ಹೊಣೆಗಾರರು.ಗೃಹ ಸಚಿವರು ಸಣ್ಣ ಘಟನೆ ಅಂತಾ ಹೇಳ್ತಾರೆ.ಸರ್ಕಾರದ ನಡುವಳಿಕೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸುವ ಹುನ್ನಾರ ಇದರಲ್ಲಿ ಅಡಗಿದೆ ಎಂದಿದ್ದಾರೆ.

ವಾಲ್ಮೀಕಿ ಹಗರಣ ಸಂಬಂಧ ಪಾದಯಾತ್ರೆ ಹೈಕಮಾಂಡ್ ನಲ್ಲಿ ಚರ್ಚೆಯ ಹಂತದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿಜಯೇಂದ್ರ ಮೇಲೆ ಅಸಮಾಧಾನ ಹೊರ ಹಾಕಿದ್ದಾರೆ ಎಂಬ ಬಗ್ಗೆ ಮಾತನಾಡಿದ ಅವರು ರಮೇಶ್ ಜಾರಕಿಹೊಳಿ ವಿಜಯೇಂದ್ರ ನಾಯಕನಾಗಿ ಒಪ್ಪಿಕೊಳ್ಳೊದಿಲ್ಲ ಅನ್ನೋದನ್ನ ಸ್ವಾಗತ ಮಾಡ್ತೆನೆ .ನಾನು ನಾಯಕನಾಗಲು ಹೊರಟಿಲ್ಲ.ನಮ್ಮ ಪಕ್ಷದ ವರಿಷ್ಟರು ಹಿರಿಯರು ರಾಜ್ಯದ ಅಧ್ಯಕ್ಷನಾಗಿ ನೇಮಕ ಮಾಡಿದ್ದಾರೆ ಎಂದಿದ್ದಾರೆ.ಭ್ರಷ್ಟ ಸರ್ಕಾರವನ್ನ ಒಂಟಿ ಕಾಲಿನಲ್ಲಿ ನಿಲ್ಲಿಸುವ ಕೆಲಸ ಮಾಡಿದ್ದೆವೆ.ಸಂತೋಷದ ವಿಷಯ ಏನಂದ್ರೆ ರಮೇಶ್ ಜರಾಕಿಹೊಳಿ ಬಾಯಲ್ಲೂ ಪಕ್ಷ ಪಕ್ಷದ ಸಿದ್ದಾಂತ ಬಂದಿರೋದು ಒಳ್ಳೆಯ ಬೆಳವಣಿಗೆಎಂದಿದ್ದಾರೆ.

ಶಿಕಾರಿಪುರದ ಗೆಲುವ ಕಾಂಗ್ರೆಸ್ ಕೊಡುಗೆ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು ನಮ್ಮ ತಂದೆಯವರು ಒಂದು ಮಾತು ಹೇಳಿದ್ದಾರೆ.ಮಾತಾಡೋದೆ ಸಾಧನೆ ಆಗಬಾರದು , ಸಾಧನೆ ಮಾತಾಗಬೇಕು ಅಂತಾ.ನಾನು ಕೂಡ ಕೆಲಸ ಮಾಡಿ ತೋರಿಸ್ತೇನೆ ಎಂದಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಆಗುವ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ಮುಡಾ ಪ್ರಕರಣದಲ್ಲಿ ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಬದಲಾವಣೆ ಖಂಡಿತ ಎಂದು ಭವಿಷ್ಯ ನುಡಿದಿದ್ದಾರೆ.