ಮನೆ Latest News ಸ್ಪೀಕರ್ ಮಾಡಿದ್ದು ಸರಿಯಿದೆ; ಸದನದಲ್ಲಿ ಶಾಸಕರ ಅಮಾನತು ವಿಚಾರದ ಬಗ್ಗೆ ಸಚಿವ ಎಂ ಬಿ ಪಾಟೀಲ್...

ಸ್ಪೀಕರ್ ಮಾಡಿದ್ದು ಸರಿಯಿದೆ; ಸದನದಲ್ಲಿ ಶಾಸಕರ ಅಮಾನತು ವಿಚಾರದ ಬಗ್ಗೆ ಸಚಿವ ಎಂ ಬಿ ಪಾಟೀಲ್ ರಿಯಾಕ್ಷನ್

0

ಬೆಂಗಳೂರು; ಸ್ಪೀಕರ್ ಮಾಡಿದ್ದು ಸರಿಯಿದೆ ಎಂದು  ಸದನದಲ್ಲಿ ಶಾಸಕರ ಅಮಾನತು ವಿಚಾರದ ಬಗ್ಗೆ ಸಚಿವ ಎಂ ಬಿ ಪಾಟೀಲ್ ಹೇಳಿದ್ದಾರೆ. ಸ್ಪೀಕರ್ ಕಚೇರಿ ಬಳಿ ಹೋದ್ರೆ ಸುಮ್ಮನೇ ಇರ್ತಾರೆ. ಅವರು ಮಾಡಿದ್ದು ಸರಿಯಾಗಿದೆ ಎಂದ್ರು.

ಹನಿಟ್ರ್ಯಾಪ್ ವಿಚಾರದಲ್ಲಿ ಸಿಎಂ ಅವರಿಗೆ ಬ್ರೀಫ್ ಮಾಡಿದ್ದಾರೆ. ಏನೇನೋ ಆಗಿದೆ, ಅವರ ಬಳಿ ರಾಜಣ್ಣ ಹೇಳಿದ್ದಾರೆ.ನಮ್ಮ ಕಾಂಗ್ರೆಸ್ ನವರೇ ಮಾಡಿದ್ದಾರೆ ಎಂದು ರಾಜಣ್ಣ ಹೇಳಿಲ್ಲ. ಯತ್ನಾಳ್ ಅವರು ನಮ್ಕ ಜಿಲ್ಲೆಯವರು ಏನೇನೋ ಹೇಳ್ತಾರೆ.ಅದರ ಉಸಾಬರಿಗೆ ಹೋಗಲ್ಲ. ಹನಿಟ್ರ್ಯಾಪ್ ಅನ್ನೋದು ಕೆಟ್ಟ ಚಾಳಿ.ಉದ್ದೇಶ ಪೂರ್ವಕವಾಗಿ ಮಾಡೋದು ತಪ್ಪು. ರಾಜಣ್ಣ ಏನೂ ಹೇಳಿದ್ದಾರೆ ‌ಗೊತ್ತಿಲ್ಲ. ಸಿಎಂ, ಹೋಮ್ ಮಿನಿಸ್ಟರ್ ಕ್ರಮ ತೆಗೆದುಕೊಳ್ಳುತ್ತಾರೆ. ರಾಜಣ್ಣ ಸ್ವಭಾವ ಗೊತ್ತಿದೆ, ಹಲೋ ಅಂದ್ರೆ ರಾಜಣ್ಣ ವಾಟ್ ಎಂದು ಕೇಳ್ತಾರೆ.ಯಾರೇ ಕ್ಯಾಮರಾ ಮನ್, ಡೈರೆಕ್ಟರ್, ಪ್ರೊಡ್ಯೂಸರ್ ಇದ್ದಾರೆ ಗೊತ್ತಿಲ್ಲ ಎಂದಿದ್ದಾರೆ.

ಇದೇ ವೇಳೆ ಮಾತನಾಡಿದ ಅವರು ನಾವು 37 ಜನ ಲಿಂಗಾಯತ ಶಾಸಕರಿದ್ದೇವೆ.ನಮ್ಮ ಸಮುದಾಯದ ಸಮಸ್ಯೆಗಳು ಹಾಗು ಬೇಡಿಕೆ ಬಗ್ಗೆ ಸಭೆ ಸೇರಿದರೆ ತಪ್ಪೇನು? ಕೆಲವೊಂದು ಬೇಡಿಕೆಗಳಿವೆ ಮತ್ತೊಮ್ಮೆ ಸಭೆ ಸೇರುತ್ತೇವೆ.ಲಿಂಗಾಯತ ಶಾಸಕರ ಸಭೆ ಸೇರುವುದಾಗಿ ಎಂ ಬಿ ಪಾಟೀಲ್ ಹೇಳಿದ್ದಾರೆ. ಎಂ ಬಿ ಪಾಟೀಲ್ ಲಿಂಗಾಯತ ಶಾಸಕರ ಸಭೆ ಸೇರುವ ಮೂಲಕ ರಾಜಕೀಯ ದಾಳ ಉರುಳಿಸಿದ್ದಾರೆ. ಎಲ್ಲಾ ಸಮುದಾಯದವರಿಗೂ ಸಿಎಂ ಸ್ಥಾನ ಸಿಗಬೇಕು ಅಂತಾ ಆಸೆ ಇರುತ್ತದೆ.ಈಗ ಸಿಎಂ ಸ್ಥಾನ ಖಾಲಿ ಇಲ್ಲ. ಸ್ವಯಂಘೋಷಿತವಾಗಿ ನಾನು ಸಿಎಂ ಆಗುತ್ತೇನೆ ಅಂತಾ ಹೇಳಿದರೆ ಆಗಲ್ಲ ಎಂದಿದ್ದಾರೆ.

ಪೀಠಕ್ಕೆ ಅಗೌರವ ತಂದಿದ್ದನ್ನು ಸಹಿಸಲು ಸಾಧ್ಯ ಇದೆಯಾ?; ಸ್ಪೀಕರ್ ಯು ಟಿ ಖಾದರ್ ಪ್ರಶ್ನೆ

ಬೆಂಗಳೂರು; ಪೀಠಕ್ಕೆ ಅಗೌರವ ತಂದಿದ್ದನ್ನು ಸಹಿಸಲು ಸಾಧ್ಯ ಇದೆಯಾ? ಎಂದು ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಪ್ರಶ್ನೆ ಮಾಡಿದ್ದಾರೆ.

ಅಧಿವೇಶನ ನಿನ್ನೆಗೆ ಮುಕ್ತಾಯವಾಗಿದ್ದು ಇಂದು ಖಾದರ್ ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ ೧೮ ಮಂದಿ ಶಾಸಕರ ಅಮಾನತು ವಿಚಾರದ ಬಗ್ಗೆ ಮಾತನಾಡಿದ ಅವರು  ಘಟನೆ ನಡೆದಿದೆ, ಸದನಕ್ಕಿಂತ ದೊಡ್ಡದು ಯಾವುದೂ ಇಲ್ಲ. ಸದನದಲ್ಲಿ ಅಧ್ಯಕ್ಷರ ಪೀಠಕ್ಕಿಂತ ಯಾವುದೂ ಇಲ್ಲ. ಅವಧಿ ಎಷ್ಟಿದೆ ಅದಕ್ಕೆ ಎನ್ನುವದಲ್ಲ. ಯಾವ ಒತ್ತಡ ಕೂಡ ಇರಲಿಲ್ಲ.ಜನಪ್ರತಿನಿಧಿಗಳು ಜನರಿಂದ ಆಯ್ಕೆಯಾಗಿ ಬಂದಿದ್ದಾರೆ ಎಂಬುದು ಗೊತ್ತಿದೆ. ಅದಕ್ಕೆ ತಕ್ಕ ಹಾಗೆ ಶಾಸಕರು ನಡೆದುಕೊಳ್ಳಬೇಕಲ್ವಾ? ಎಂದಿದ್ದಾರೆ.

ಇದು ಬಿಜೆಪಿ ಶಾಸಕರು ಮಾಡಿದ್ದು ಎರಡನೇ ಬಾರಿಗೆ. ಪೀಠಕ್ಕೆ ಅಗೌರವ ತಂದಿದ್ದನ್ನು ಸಹಿಸಲು ಸಾಧ್ಯ ಇದೆಯಾ?.ನಾನು ಶಾಸಕರ ಮೇಲಿನ ದ್ವೇಷದಿಂದ ಮಾಡಿಲ್ಲ. ಯಾವುದೋ ಕೋಪ ದ್ವೇಷದಿಂದ ಮಾಡಿದ್ದಲ್ಲ. ಅದು ಶಿಕ್ಷೆ ಅಂತಲ್ಲ ಮುಂದಿನ ದಿನಗಳಲ್ಲಿ ಅತ್ಯುತ್ತಮ ಜನಪ್ರತಿನಿಧಿಯಾಗಿ ಬಂದಿದ್ದು ತಿದ್ದಿಕೊಳ್ಳಬೇಕು. ೧೮ ಶಾಸಕರು ಮನವಿ ಮಾಡಿಕೊಂಡರೆ ಮುಂದಿನ ನಿರ್ಧಾರ ಮಾಡುತ್ತೇನೆ. ತಾವು ತಪ್ಪು ಮಾಡಿದ್ದೇವೆ ಎಂಬ ಭಾವನೆಯಾದರೂ ಅವರಿಗೆ ಬರಬೇಕಿತ್ತಲ್ವಾ?.ತಪ್ಪಿನ ಅರಿವು ಸ್ವಲ್ಪವಾದರೂ ಇರಬೇಕಿತ್ತಲ್ವಾ?. ಮತ್ತೆ ಸದನ ಶುರು ಆದ ಮೇಲೂ ಕೂಡ ಹಾಗೆಯೇ ವರ್ತಿಸಿದರು.ನಾಳೆ ಇಲ್ಲಿ ಹೀಗೆ ಮಾಡುವ ಶಾಸಕರು ಜಿಲ್ಲಾ ಮಟ್ಟದ ಮೀಟಿಂಗುಗಳಲ್ಲೂ ಹೀಗೇ ಮಾಡಿದರೆ ಹೇಗೆ ಎಂದು ಖಾದರ್ ಪ್ರಶ್ನಿಸಿದ್ದಾರೆ.