ಬೆಂಗಳೂರು: ಕೈಗಾರಿಕಾ ಸಚಿವ ಎಂ ಬಿ ಪಾಟೀಲ್ ಇಂದು ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾದರು.ಭೇಟಿಯಾದ ಬಳಿಕ ಮಾತನಾಡಿದ ಅವರು ಇಂದು ಸಂಕ್ರಾಂತಿ ಹಬ್ಬ. ಹಾಗಾಗಿ ಸಿಎಂ ಅವರಿಗೆ ಶುಭಾಶಯಗಳನ್ನ ತಿಳಿಸುವುದಕ್ಕಾಗಿ ಬಂದಿದ್ದೆ ಎಂದರು.
ಇದೇ ವೇಳೆ ಸಿಎಂ ಬದಲಾಗ್ತಾರಾ ಎಂಬ ಮಾಧ್ಯಮದವರು ಕೇಳಿ ಪ್ರಶ್ನೆಗೆ ಉತ್ತರಿಸಿದ ಅವರು ಸ್ಥಾನ ಖಾಲಿ ಇಲ್ಲ ಅಂತಾ ಹೇಳಿದ್ದೆ. ಈಗ ಮುಖ್ಯಮಂತ್ರಿ ಖುರ್ಚಿ ಖಾಲಿ ಇಲ್ಲವಲ್ಲ. ಏನಿದೆಯೋ ಅದನ್ನ ಹೇಳಬೇಕಲ್ಲವಾ ?. ಸಿದ್ದರಾಮಯ್ಯ ಸಿಎಂ ಆಗಿ ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ. ನಾವೆಲ್ಲರೂ ಚೆನ್ನಾಗಿಯೇ ಇದ್ದೇವೆ.ಗೊಂದಲ ಇರುವುದು ನಿಮ್ಮಲ್ಲಿ (ಮಾಧ್ಯಮಗಳು) ಮಾತ್ರ ಎಂದು ಮಾಧ್ಯಮಗಳಿಗೆ ತಿರುಗೇಟು ಕೊಟ್ರು.
ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನಾನು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಲ್ಲ. ಕೈಗಾರಿಕಾ ಸಚಿವನಾಗಿ ಕೆಲಸ ಮಾಡುತ್ತಿದ್ದೇನೆ. ಈಗಾಗಲೇ ಇದನ್ನ ಮೊದಲೇ ಹೇಳಿದ್ದೇನೆ. ಹೈಕಮಾಂಡ್ ಏನು ಹೇಳುತ್ತೋ ಅದನ್ನ ಕೇಳಬೇಕಾಗುತ್ತೆ. ನಿನ್ನೆ ಸುರ್ಜೇವಾಲಾ ಭೇಟಿ ವಿಚಾರದ ಬಗ್ಗೆ ಮಾತನಾಡಿದ ಅವರು ನಾಯಕರನ್ನ ಭೇಟಿ ಮಾಡಿದ್ರೆ ತಪ್ಪೇನಿದೆ? ಎಂದು ಮರು ಪ್ರಶ್ನೆ ಹಾಕಿದ್ರು.
ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಸತೀಶ್ ಜಾರಕಿಹೊಳಿ ನಡುವೆ ಜಟಾಪಟಿ ವಿಚಾರದ ಬಗ್ಗೆ ಮಾತನಾಡಿದ ಅವರು ಅಂತಹದ್ದೇನು ನಡೆಯಲಿಲ್ಲ.. ಇದೆಲ್ಲಾ ಸುಳ್ಳು ಸುದ್ದಿ ಎಂದು ಗೊಂದಲಕ್ಕೆ ತೆರೆ ಎಳೆದ್ರು. ಕೇಂದ್ರ ತೆರಿಗೆ ವಿಚಾರದಲ್ಲಿ ರಾಜ್ಯಗಳಿಗೆ ಅನ್ಯಾಯ ಮಾಡಿದೆ.ಇದರ ವಿರುದ್ದ ನಾವು ಹೋರಾಟ ಮಾಡ್ತೀವಿ ಎಂದು ಇದೇ ವೇಳೆ ಹೇಳಿದ್ರು.