ಮನೆ Latest News ಮಹಾಸಭಾದ ನಿರ್ಧಾರಕ್ಕೆ ಬಿಜೆಪಿ ಲಿಂಗಾಯತ ನಾಯಕರಿಂದ ತೀವ್ರ ವಿರೋಧ; ಇಂದು ಬಿಜೆಪಿ ಲಿಂಗಾಯತ ನಾಯಕರಿಂದ ಮಹತ್ವದ...

ಮಹಾಸಭಾದ ನಿರ್ಧಾರಕ್ಕೆ ಬಿಜೆಪಿ ಲಿಂಗಾಯತ ನಾಯಕರಿಂದ ತೀವ್ರ ವಿರೋಧ; ಇಂದು ಬಿಜೆಪಿ ಲಿಂಗಾಯತ ನಾಯಕರಿಂದ ಮಹತ್ವದ ಸಭೆ

0

 

ಬೆಂಗಳೂರು; ಮಹಾಸಭಾದ ನಿರ್ಧಾರಕ್ಕೆ ಬಿಜೆಪಿ ಲಿಂಗಾಯತ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು ಈ ಹಿನ್ನೆಲೆ ಇಂದು ಬಿಜೆಪಿ ಲಿಂಗಾಯತ ನಾಯಕರ ಮಹತ್ವದ ಸಭೆ ನಡೆಯಿತು.

ಬೆಂಗಳೂರಿನ ಬೆಂಗಳೂರಿನ ಗೋಲ್ಡ್ ಪಿಂಚ್ ಹೊಟೇಲ್ ನಲ್ಲಿ ಬಿಜೆಪಿ ಲಿಂಗಾಯತ ನಾಯಕರು ಮಹತ್ವದ ಸಭೆ ನಡೆಯಿತು. ಮಾಜಿ ಸಿಎಂ ಬಿಎಸ್ ವೈ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಮಾಜಿ ಸಿಎಂಗಳಾದ ಜಗದೀಶ್ ಶೆಟ್ಟರ್, ಬಸವರಾಜ್ ಬೊಮ್ಮಾಯಿ , ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಅರವಿಂದ್ ಬೆಲ್ಲದ, ರೇಣುಕಾಚಾರ್ಯ, ಸಿದ್ದು ಸವದಿ, ಪ್ರಭಾಕರ್ ಕೋರೆ ಭಾಗಿಯಾಗಿದ್ದರು.

ಈ ವೇಳೆ ಮಾತನಾಡಿದ ವಿಜಯೇಂದ್ರ ಸಮಾಜದ ಹಿರಿಯರು ಸಭೆಯಲ್ಲಿ ಭಾಗವಹಿಸಿ ಚರ್ಚೆ ಮಾಡಿದ್ದೇವೆ.ರಾಜ್ಯ ಸರ್ಕಾರ ನಡೆಸ್ತಿರೋ ಜಾತಿ ಜನಗಣತಿಯ ಹಿಂದೆ ಈ ನಿರ್ಧಾರದ ಹಿಂದೆ ಕುತಂತ್ರನೂ ಇದೆ…ಷಡ್ಯಂತ್ರನೂ ಇದೆ. ಕಾಲಂ‌ನಲ್ಲಿ ಹಿಂದೂ..ಕ್ರಿಶ್ಚಿಯನ್…ಜೈನ್…ಜೊತೆ ಇತರೆ ಅಂತ ಸೇರ್ಸಿದ್ದಾರೆ .ಅದು ಕಾನೂನು ಬಾಹಿರ. ವೀರಶೈವ ಸಮಾಜವನ್ನ ಒಡೆಯುವ ಷಡ್ಯಂತ್ರ ಜಾತಿ ಜನಗಣತಿ ಹಿಂದೆ ಅಡಗಿದೆ.ಸಿದ್ದರಾಮಯ್ಯ ಹಿಂದೆ ಸಿಎಂ ಆದಾಗ ವಿರಶೈವ ಲಿಂಗಾಯತ ಧರ್ಮ ಒಡೆಯೋ ಕೆಲಸ ಮಾಡಿದ್ರು. ಈಗ ಮತ್ತೊಮ್ಮೆ ವೀರಶೈವ ಲಿಂಗಾಯತ ಸಮಾಜ ಒಡೆಯೋ ಕೆಲಸ ಆಗ್ತಿದೆ. ನಮ್ಮ ಸಮಾಜದ ಮುಖಂಡರಲ್ಲಿ ಯಾವುದೇ ಗೊಂದಲ ಇಲ್ಲ. ಸಮಾಜ ಸರಿಯಾದ ನಿಟ್ಟಿನಲ್ಲಿ ತೆಗೆದುಕೊಂಡು ಹೋಗಲು ಕಾರ್ಯಪ್ರವೃತ್ತರಾಗಬೇಕು. ಒಳ ಪಂಗಡ ಎಲ್ಲ ಮರೆತು…ಒಟ್ಟಾಗಿ ಒಂದಾಗಿ ಮುಂದೆ ಸಾಗಬೇಕು. ಸಮಾಜದ ಐಖ್ಯತೆ ಕಾಪಾಡಿಕೊಳ್ಬೇಕು ಅಂತ ಚರ್ಚೆ ಮಾಡಿದ್ದೀವಿ. ಧರ್ಮ..ಜಾತಿ…ಉಪಜಾತಿ ಏನಿರಬೇಕು ಅನ್ನೋದರ ಒಮ್ಮತದ ನಿರ್ಧಾರ ತೆಗೆದುಕೊಂಡಿದ್ದೇವೆ. ಸಮಾಜದ ಗಣ್ಯರು…ವಿವುಧ ಮಠಾದೀಶರ ಜೊತೆ ಚರ್ಚೆ ಮಾಡಬೇಕು ಅಂತ ನಿರ್ಧಾರ ತೆಗೆದುಕೊಂಡಿದ್ದೇವೆ. ನಮ್ಮ ಸಮಾಜದ ಮುಖಂಡರಲ್ಲಿ ಗೊಂದಲ ಇಲ್ಲ. ಕೆಲವು ಮಠಾದೀಶರಲ್ಲಿ….ಸಮಾಜದ ಸಂಘಟನೆಗಳಲ್ಲಿ ಇರೋ ಗೊಂದಲ ಬಿಟ್ಟು ಒಗ್ಗಟ್ಟು ಮೂಡಿಸೋಕೆ ಸಭೆ ಮಾಡಿದ್ದೇವೆ. ಸಮಾಜನ ಒಡೆಯೋಕೆ ಯಾವುದೇ ಕಾರಣಕ್ಕೂ ಅವಕಾಶ ಕೊಡೋದಿಲ್ಲ ಎಂದರು.