ಮನೆ Latest News ಕಾಂಗ್ರೆಸ್ ನವರು ಯಾವ ಕೋರ್ಟ್ ಆದೇಶದಡಿ ಪ್ರತಿಭಟನೆ ಮಾಡುತ್ತಾರೆ ನೋಡುತ್ತೇವೆ; ವಿಧಾನಸಭೆ ವಿಪಕ್ಷ ನಾಯಕ ಆರ್....

ಕಾಂಗ್ರೆಸ್ ನವರು ಯಾವ ಕೋರ್ಟ್ ಆದೇಶದಡಿ ಪ್ರತಿಭಟನೆ ಮಾಡುತ್ತಾರೆ ನೋಡುತ್ತೇವೆ; ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಸುದ್ದಿಗೋಷ್ಠಿಯಲ್ಲಿ ಪ್ರಶ್ನೆ

0

 

ಬೆಂಗಳೂರು; ಕಾಂಗ್ರೆಸ್ ನವರು ಯಾವ ಕೋರ್ಟ್ ಆದೇಶದಡಿ ಪ್ರತಿಭಟನೆ ಮಾಡುತ್ತಾರೆ ನೋಡುತ್ತೇವೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಪ್ರಶ್ನೆ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಬೆಂಗಳೂರಿನಲ್ಲಿ ಆಗಸ್ಟ್ 4 ರಂದು ರಾಹುಲ್ ಗಾಂಧಿ ಪಾದಯಾತ್ರೆ ವಿಚಾರದ ಬಗ್ಗೆ ಮಾತನಾಡಿ ರಾಹುಲ್ ಗಾಂಧಿಗೆ ಮೊದಲಿನಿಂದಲೂ ಸ್ವಲ್ಪ ಬುದ್ದಿ ಕಡಿಮೆ‌. ಲೋಕಸಭಾ ಚುನಾವಣೆ ನಡೆದಾಗ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವೇ ಇತ್ತು. ಅವರೇ ನೇಮಕ ಮಾಡಿದ ಅಧಿಕಾರಿಗಳೇ ಇಲ್ಲಿ ಇದ್ದರು. ಯಾವ ಮುಖ ಇಟ್ಟುಕೊಂಡು ರಾಹುಲ್ ಗಾಂಧಿ ಪ್ರತಿಭಟನೆಗೆ ಬರುತ್ತಾರೆ. ಚುನಾವಣಾ ಅಕ್ರಮ ಆಗಿದ್ದರೆ ದೂರು ಕೊಡಲು ಅಧಿಕಾರ ಇದೆ. ಅಷ್ಟೂ ಕಾಮನ್ ಸೆನ್ಸ್ ಗೊತ್ತಿಲ್ಲದ ರಾಹುಲ್ ಗಾಂಧಿ. 45 ದಿನಗಳಲ್ಲಿ ಅರ್ಜಿ ಹಾಕದ ರಾಹುಲ್ ಗಾಂಧಿ ಈಗ ಬಿಹಾರ ಚುನಾವಣೆ ಬಂದಾಗ ಯಾಕೆ ಅರ್ಜಿ ಹಾಕುತ್ತಿದ್ದಾರೆ? . ಇದು ಜನರಿಗೆ ಮಂಕು ಬೂದಿ ಎರಚುವ ಪ್ರಯತ್ನ. ನಾವು ಫ್ರೀಡಂ ಪಾರ್ಕ್ ನಿಂದ ಆಚೆ ಬಂದ ಕೂಡಲೇ ಅರೆಸ್ಟ್ ಮಾಡುತ್ತಾರೆ. ರಾಹುಲ್ ಗಾಂಧಿಗೆ ಅನುಮತಿ ಕೊಟ್ಟರೆ ಬಿಜೆಪಿ ಪ್ರತಿಭಟನೆ ಮಾಡುತ್ತದೆ ಎಂದು ಎಚ್ಚರಿಸಿದ್ದಾರೆ.

ಕಾಂಗ್ರೆಸ್ ಸರ್ಕಾರವನ್ನು ಬಳಕೆ ಮಾಡಿದರೆ ನಮ್ಮ ಹೋರಾಟ ನಿಶ್ಚಿತ. ಚುನಾವಣಾ ಅಕ್ರಮದ ಬಗ್ಗೆ ಇನ್ನೂ ಕಾಂಗ್ರೆಸ್ ಯಾವ ದಾಖಲೆಯನ್ನೂ ಬಿಡುಗಡೆ ಮಾಡಿಲ್ಲ. ಕಾಂಗ್ರೆಸ್ ಪಕ್ಷವೇ ಅಕ್ರಮ. ಇಂದಿರಾ ಗಾಂಧಿ ಗೆದ್ದಿರುವುದೇ ಅಕ್ರಮ ಅಂತಾ ಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡು ಡಿಬಾರ್ ಆದ ಪಕ್ಷ ಇವರದ್ದು. ಇಲ್ಲಿ ಬಂದು ಪ್ರತಿಭಟಿಸುವ ಯಾವ ನೈತಿಕ ಅಧಿಕಾರ ಇದೆ?. ನಾನು ಕಾನೂನು ಹೋರಾಟದ ಬಗ್ಗೆಯೂ ನೋಡುತ್ತೇವೆ.  ರಾಹುಲ್ ಗಾಂಧಿ ಪಾದಯಾತ್ರೆಗೆ ಪೂರ್ವಸಿದ್ಧತೆ ಸಭೆ ಮಾಡುತ್ತಿದ್ದಾರೆ. ಅಂದು ಆರ್ ಸಿಬಿ ಕಾರ್ಯಕ್ರಮಕ್ಕೆ ಯಾಕೆ ಪೂರ್ವ ಸಿದ್ಧತೆ ಮಾಡಲಿಲ್ಲ?. ಜನರ ಹಿತ ಬೇಡವಾಗಿತ್ತಾ ಇವರಿಗೆ?. ಯಾವ ಕೋರ್ಟ್ ಆದೇಶದಡಿ ಇವರು ಪ್ರತಿಭಟನೆ ಮಾಡುತ್ತಾರೆ ನೋಡುತ್ತೇವೆ ಎಂದು ಸವಾಲು ಹಾಕಿದ್ದಾರೆ.

ಕಾಂಗ್ರೆಸ್ ನಲ್ಲಿ ಅಕ್ಟೋಬರ್ ನಲ್ಲಿ ಬದಲಾವಣೆ ನಿಶ್ಚಿತ. ಈಗಾಗಲೇ ಶಾಸಕರು ಪ್ರಳಯ ಆಗುತ್ತದೆ ಅಂತಾ ಹೇಳುತ್ತಿದ್ದಾರೆ. ಈಗ ಡಿ.ಕೆ. ಶಿವಕುಮಾರ್ ಗೆ ಬುದ್ದಿ ಕಲಿಸಲು ಸಿಎಂ ಹೊರಗಿಟ್ಟು ಸಭೆ ಮಾಡುತ್ತಾರೆ. ಡಿ.ಕೆ. ಶಿವಕುಮಾರ್ ಗೆ ಶಾಸಕರ ಬೆಂಬಲ ಇಲ್ಲ ಅಂತಾ ಈಗಾಗಲೇ ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾಗಿ ಬೆಂಬಲ ಇಲ್ಲದ ಡಿ.ಕೆ. ಶಿವಕುಮಾರ್ ಯಾಕೆ ಸಭೆಗೆ ಬೇಕು ಎನ್ನುವುದು ಸಿದ್ದರಾಮಯ್ಯ ಲಾಜಿಕ್. ಸಿದ್ದರಾಮಯ್ಯ ಬೆಂಬಲಿಗರಷ್ಟೇ 50 ಕೋಟಿ ಅನುದಾನ ಸಿಗುತ್ತದೆ. ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರಿಗೆ 50 ಕೋಟಿ ಸಿಗಲ್ಲ. ನಮಗೆ 25 ಕೋಟಿ ಕೊಡುತ್ತಾರೆ ಅಂತಾ ಇದೆ, 50 ಕೋಟಿಗೆ ನಾವು ಹೋರಾಟ ಮಾಡುತ್ತೇವೆ. ಸಿದ್ಧರಾಮಯ್ಯ ಈಗ ಎಲ್ಲಾ ಸಮುದಾಯಗಳ ಸಿಎಂ ಆಗಿ ಉಳಿದಿಲ್ಲ. ಅವರು ಕಾಂಗ್ರೆಸ್ ಪಕ್ಷದ ಸಿಎಂ ಮಾತ್ರ ಆಗಿದ್ದಾರೆ. ಕಾಂಗ್ರೆಸ್ ನಲ್ಲಿ ಸಿದ್ದರಾಮಯ್ಯ ಪರ, ಡಿ.ಕೆ. ಶಿವಕುಮಾರ್ ಪರ ಮಾತಾಡುವವರ ಗುಂಪು ಜಾಸ್ತಿಯಾಗುತ್ತಿದೆ. ಯೂರಿಯಾ ಹಂಚಿಕೆಯಲ್ಲಿ ರೈತರು ದಂಗೆ ಎದ್ದಿದ್ದರೂ ಅದರ ಕಡೆ ಸರ್ಕಾರ ಗಮನ ಕೊಟ್ಟಿಲ್ಲ ಎಂದು ತಿಳಿಸಿದ್ದಾರೆ.

ಧರ್ಮಸ್ಥಳ ಪ್ರಕರಣದಲ್ಲಿ ಈಗಾಗಲೇ ಎಸ್ ಐಟಿ ತನಿಖೆ ನಡೆಯುತ್ತಿದೆ. ತನಿಖೆಯನ್ನು ನಾನು ಸ್ವಾಗತ ಮಾಡಿದ್ದೇನೆ, ನಾನು‌ ಯಾವುದೇ ಸರ್ಟಿಫಿಕೇಟ್ ಕೊಟ್ಟಿಲ್ಲ. ತನಿಖೆ ನಡೆಯುತ್ತಿರುವಾಗ ನಾನು ಏನೂ ಹೇಳಿಕೆ ನೀಡಲ್ಲ ಎಂದ ಅವರು ರಸಗೊಬ್ಬರ ವಿಚಾರದಲ್ಲಿ ನಾವು ಕೇಂದ್ರ ಸರ್ಕಾರದ ಜೊತೆ ಸಂಪರ್ಕದಲ್ಲಿದ್ದೇವೆ. ಪ್ರಹ್ಲಾದ್ ಜೋಷಿ ಜೊತೆ ಮಾತುಕತೆ ಮಾಡಿದ್ದೇವೆ. ನಮ್ಮ ಪ್ರಯತ್ನವನ್ನು ನಾವು ಮಾಡುತ್ತಿದ್ದೇವೆ. ಕಾಂಗ್ರೆಸ್ ಪಕ್ಷ ಕೇಂದ್ರದ ಮೇಲೆ ಗೂಬೆ ಕೂರಿಸುತ್ತಿದೆ ಎಂದರು.

ಯಶವಂತಪುರ ಕ್ಷೇತ್ರದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಬಿಜೆಪಿ ಅಭ್ಯರ್ಥಿ ಹೆಸರು ಘೋಷಣೆ ಮಾಡಿದ ವಿಚಾರದ ಬಗ್ಗೆ ಮಾತನಾಡಿ ರಾಜ್ಯಾಧ್ಯಕ್ಷರು ನೀಡಿರುವ ಹೇಳಿಕೆಗೆ ನಮ್ಮ ಸಹಮತ ಇದೆ ಎಂದಿದ್ದಾರೆ.