ಮನೆ Latest News ಬದುಕು ಅರಸಿ ಬಂದವರು ಕನ್ನಡ ಕಲಿಯಿರಿ; ಪ್ರೊಫೆಸರ್ ಪುರುಷೋತ್ತಮ ಬಿಳಿನೆಲೆ                               

ಬದುಕು ಅರಸಿ ಬಂದವರು ಕನ್ನಡ ಕಲಿಯಿರಿ; ಪ್ರೊಫೆಸರ್ ಪುರುಷೋತ್ತಮ ಬಿಳಿನೆಲೆ                               

0

ಬೆಂಗಳೂರು : ಕನ್ನಡ ನಾಡು  ಸಂಪದ್ಭರಿತವಾದದ್ದು , ಈ ಸುಂದರ  ನಾಡಿನಲ್ಲಿ ತಮ್ಮ ಜೀವನವನ್ನೊ, ಬದುಕನ್ನು ಕಟ್ಟಿಕೊಳ್ಳಲು ಹೊರರಾಜ್ಯಗಳಿಂದ  ಬಂದವರು ಇಲ್ಲಿನ ಅನ್ನ, ನೀರು, ಜೀವ, ಜೀವನ ಕಂಡುಕೊಂಡವರು ಮೊದಲು ಕನ್ನಡ ಕಲಿಯಿರಿ, ಓದಿರಿ, ಬರೆಯಿರಿ ನಮ್ಮ ಸಂಸ್ಕೃತಿಯನ್ನು ಅಳವಡಿಸಿಕೊಂಡು ಬದುಕಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಪುರುಷೋತ್ತಮ ಬಿಳಿಮಲೆ ಅವರು ಅಭಿಪ್ರಾಯಪಟ್ಟರು.

ಅವರು ಬುದ್ಧ ಬಸವ ಗಾಂಧಿ ಸಾಂಸ್ಕೃತಿಕ  ಟ್ರಸ್ಟ್, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಶೇಷಾದ್ರಿಪುರಂ ಇನ್ಸ್ಟಿಟ್ಯೂಟ್ ಆಫ್ ಕಾಮರ್ಸ್ ಅಂಡ್ ಮ್ಯಾನೇಜ್ಮೆಂಟ್ ಪದವಿ ಕಾಲೇಜಿನ ಸಹಯೋಗದಲ್ಲಿ ಏರ್ಪಡಿಸಿದ್ದ ರಾಜ್ಯ ಮಟ್ಟದ ಶಾಸ್ತ್ರೀಯ ಕನ್ನಡ ಸ್ಥಾನಮಾನ ಮತ್ತು ಕನ್ನಡ ಜಾಗೃತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ವ್ಯಾಸ ಮಹರ್ಷಿಗಳು ಬರೆದಿರುವ ಮಹಾಭಾರತ ಕಥೆಯು ಭಾರತದ ನೂರಾರು ಭಾಷೆಯಲ್ಲಿ ರಾಜ್ಯದ ಭಾಷೆಯ, ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯವನ್ನು ಅಳವಡಿಸಿಕೊಂಡು ದೇಶದಾದ್ಯಂತ ವಿಭಿನ್ನ, ವೈಚಾರಿಕ, ವೈಜ್ಞಾನಿಕವಾಗಿ ಕಥೆ, ಕಾವ್ಯ, ಕಾದಂಬರಿ, ಯಕ್ಷಗಾನ, ಬುಡಕಟ್ಟು ಜನಾಂಗದವರು ಸೇರಿದಂತೆ ಅನೇಕಾನೇಕ ರೀತಿಗಳಲ್ಲಿ ತಮ್ಮದಾಗಿಸಿಕೊಂಡು ಹೊಸ ಹೊಸ ನಿಟ್ಟಿನಲ್ಲಿ ಲಕ್ಷಾಂತರ ಅಧ್ಯಾಯಗಳು ಸೃಷ್ಟಿಸಿಕೊಂಡು ತಮ್ಮವೇ ಎಂಬ ರೀತಿಯಲ್ಲಿ ರಾಮಾಯಣ, ಮಹಾಭಾರತ ಭಾಗವತ ಕಥೆಗಳು ಹರಳುಗಟ್ಟಿವೆ. ಹಾಗಾಗಿ ನಮ್ಮ ನೆಲದ ಭಾಷೆ ಸಾಹಿತ್ಯ ಸಂಸ್ಕೃತಿಯನ್ನು ಅಳವಡಿಸಿಕೊAಡು ಜಾಗೃತಗೊಳಿಸಿಕೊಂಡು ನಮ್ಮದು ತಮ್ಮದೆಂದು ಮನಸ್ಸಿಗೆ ಹಚ್ಚಿಕೊಂಡರೆ ಮಾತ್ರ ಈ ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದು ಪ್ರೊ.ಬಿಳಿಮಲೆಯವರು ತಮ್ಮ ಅನುಭವ ಹಂಚಿಕೊಂಡರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷರಾದ ನಾಡೋಜ ಡಾ.ವೂಡೇ ಪಿ ಕೃಷ್ಣ ಅವರು ಮಾತನಾಡಿ ಕನ್ನಡ ಕಾರ್ಯ, ಹೋರಾಟ ಕೇವಲ ಒಬ್ಬಿಬ್ಬರಿಂದ ಸಾಧ್ಯವಿಲ್ಲ. ಪ್ರತಿಯೊಬ್ಬರೂ ಟೊಂಕ ಕಟ್ಟಿ ನಿಲ್ಲಬೇಕು, ಕೈ ಜೋಡಿಸಿ ಕೊಂಡು ದುಡಿದರೆ ಕನ್ನಡ ಯಾವ ಕಾಲವಾದರೂ ಸದಾ ಅಚ್ಚಳಿಯದೆ ಉಳಿಯುತ್ತದೆ. ಮಹಾತ್ಮ ಗಾಂಧೀಜಿ, ವಿನೋಬಾ ಭಾವೆ , ಕುವೆಂಪು, ಬೇಂದ್ರೆ ಮುಂತಾದವರು ತಮ್ಮ ತಮ್ಮ ನಾಡಿನ ಭಾಷೆಯನ್ನು ಕಲಿತು, ಓದಿ ಬರೆದರು.

ಆಯಾ ನಾಡಿನ ಭಾಷೆಯಲ್ಲಿ ಶಾಶ್ವತವಾಗಿ ನೆಲೆ ನಿಂತಿದ್ದಾರೆ. ಆದಾಗಿ ಕನ್ನಡ ಕನ್ನಡತನ ನಮ್ಮ ಹೃದಯದ ಭಾಷೆಯಾಗಿ ಮನಸ್ಸಲ್ಲಿ ಉಳಿಸಿ ಬೆಳೆಸುವ ಕಾರ್ಯ ಎಲ್ಲರೂ ಕೂಡಿ ಮಾಡೋಣ ಎಂದರು.

ವೇದಿಕೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ ಅವರು ಪ್ರಾಧಿಕಾರವು ಕರ್ನಾಟಕದಾದ್ಯಂತ ಕನ್ನಡ ಭಾಷೆ, ಕನ್ನಡಿಗರ ಅಭಿವೃದ್ಧಿಗಾಗಿ ಕೊಂಕಣಿ ಬದ್ಧವಾಗಿ ದುಡಿಯುತ್ತಿದೆ. ಸದಾ ಸಲಹೆ ಸಹಕಾರ ತಮ್ಮಿಂದ ಬಯಸುತ್ತದೆ ಎಂದರು. ಪದವಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ವಿದ್ಯಾಶಿವಣ್ಣವರ್, ಬಿಬಿಜಿಎಸ್. ಟ್ರಸ್ಟ್ನ ಅಧ್ಯಕ್ಷರಾದ ಡಾ.ಎಸ್.ರಾಮಲಿಂಗೇಶ್ವರ (ಸಿಸಿರಾ), ಪ್ರಾಧಿಕಾರದ  ಸಹಸದಸ್ಯರಾದ ಟಿ.ತಿಮ್ಮೇಶ್ , ಪಿಯು ಕಾಲೇಜಿನ ಪ್ರಾಂಶುಪಾಲರಾದ ಪ್ರೊ ಜಿ.ಕೆ. ಮಂಜುನಾಥ್, ಭಾಷಾ ತಜ್ಞರಾದ ಡಾ. ಆರ್.ವಿ.ಎಸ್.ಸುಂದರಂ,ಎಸ್.ಐ.ಸಿ.ಎಂ. ಕನ್ನಡ ಪ್ರಾಧ್ಯಾಪಕರಾದ ಡಾ.ಎಸ್.ಪೂರ್ಣಿಮಾ, ಪ್ರೊ.ಲಕ್ಷ್ಮೀನಾರಾಯಣ ಮುಂತಾದವರಿದ್ದರು