ಬೆಂಗಳೂರಿನಲ್ಲಿ ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್ ಸುದ್ದಿಗೋಷ್ಠಿ ನಡೆಸಿದ್ರು. ಈ ವೇಳೆ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ರು.ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು ಚಿತ್ತಾಪುರ ತಾಲೂಕಿನಲ್ಲಿ ದನ ಕಳ್ಳ ಸಾಗಾಣಿಕೆ ಮಾಡಿ ಹತ್ಯೆ ಮಾಡಿದ್ದವರ ಮೇಲೆ ಪೊಲೀಸರು ಕೇಸ್ ದಾಖಲಾಗಿತ್ತು. ಹಸು ಕಳ್ಳ ಸಾಗಣೆ ಮಾಡುತ್ತಿದ್ದವರನ್ನು ಬಂಧಿಸಿ ಪೊಲೀಸರು ವಾಹನ ಸೀಜ್ ಮಾಡಿದ್ದರು. ಗೋ ಕಳ್ಳರನ್ನು ಬಿಡಬೇಕು ಎಂದು ಪ್ರಿಯಾಂಕ್ ಖರ್ಗೆ ಕ್ಯಾಬಿನೆಟ್ ನಲ್ಲಿ ಪತ್ರ ಕೊಟ್ಟಿದ್ದರು. ಅದರ ಆಧಾರದಲ್ಲಿ ಕ್ರಿಮಿನಲ್ ಕೇಸ್ ವಾಪಸ್ ಪಡೆದಿದ್ದಾರೆ.ಕಾರಣ ಮುಸ್ಲಿಮರು ಎಂಬ ಒಂದೇ ಕಾರಣ.
ಮಾತು ಎತ್ತಿದರೆ ಮಹಾತ್ಮಾ ಗಾಂಧಿ, ಅಂಬೇಡ್ಕರ್ ಬೆನ್ನುವ ಸರ್ಕಾರ ಗೋ ಹತ್ಯೆ ಸರಿ ಎಂದು ಹೇಳುತ್ತಿದೆ.ಕಳ್ಳತನದ ಕೇಸ್ ವಾಪಸ್ ಪಡೆಯುತ್ತೀರಾ ಅಂದರೆ ರಾಜ್ಯವನ್ನು ಏನು ಮಾಡಲು ಹೊರಟಿದ್ದೀರಿ.ಮುಸ್ಲಿಮರನ್ನು ಓಲೈಕೆ ಮಾಡಲು ಮಾಡುತ್ತಿದ್ದೀರಾ?.ಇದರ ಬಗ್ಗೆ ಕಾನೂನು ಹೋರಾಟದ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದರು.
ಆರ್ ಎಸ್ ಎಸ್ ಚಟುವಟಿಕೆಗಳಿಗೆ ಪರೋಕ್ಷ ಕಡಿವಾಣ ವಿಚಾರದ ಬಗ್ಗೆ ಮಾತನಾಡಿದ ಅವರು ಈ ಸರ್ಕಾರಕ್ಕೆ ಓದಲು ಬರುತ್ತಾ?. ಜಗದೀಶ್ ಶೆಟ್ಟರ್ ಸರ್ಕಾರದ ಪತ್ರವನ್ನು ಸರಿಯಾಗಿ ಓದಲಿ. ಶೆಟ್ಟರ್ ಅವರು ಸಹಿ ಹಾಕಿಲ್ಲ, ಅವರಿಗೆ ಫೈಲ್ ಬಂದೇ ಇಲ್ಲ.ನಮ್ಮ ಕ್ಯಾಬಿನೆಟ್ ನಲ್ಲಿ ಈ ನಿರ್ಧಾರವೇ ಆಗಿಲ್ಲ. ಚಾಮರಾಜಪೇಟೆಯ ಒಂದು ಶಾಲೆಯ ಬಗ್ಗೆ ಒಂದು ದೂರು ಬಂದಿತ್ತು. ಸರ್ಕಾರಿ ಶಾಲೆಗಳಲ್ಲಿ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಆ ಶಾಲೆಗೆ ಮಾತ್ರ ಉತ್ತರ ನೀಡಿರುವ ಪತ್ರ ಅದು.ಸಿಎಂ ಯಾರಾಗಿದ್ದರು ಎಂದು ಈಗ ಕಾಂಗ್ರೆಸ್ ನವರು ಕೇಳುತ್ತಿದ್ದಾರೆ. ಹಾಗಾದರೆ 14 ಸೈಟ್ ಹೊಡೆದಾಗ, ವಾಲ್ಮೀಕಿ ನಿಗಮದ ಹಗರಣ ನಡೆದಾಗ ಸಿಎಂ ಯಾರಾಗಿದ್ದರು?.ಇಲ್ಲಿ ಶೆಟ್ಟರ್, ಸಿಎಸ್ ಸಹಿ ಹಾಕಿದ್ದಾರಾ?.ನೀವು ಈಗ ಸರ್ಕಾರಿ ಸ್ಥಳ, ದೇವಾಲಯ, ಅನುದಾನಿತ ಶಾಲೆ ಎಲ್ಲವನ್ನೂ ಸೇರಿಸಿದ್ದೀರಿ. ಇದೆಲ್ಲಾ ಜಗದೀಶ್ ಶೆಟ್ಟರ್ ಪತ್ರದಲ್ಲಿ ಇತ್ತಾ?. ಶೆಟ್ಟರ್ ಹೆಸರನ್ನು ಅನಾವಶ್ಯಕವಾಗಿ ತರುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಆರ್ ಎಸ್ ಎಸ್ ಗೆ ಇಂತಹ ನೂರಾರು ಖರ್ಗೆಗಳನ್ನು ಎದುರಿಸುವ ಶಕ್ತಿ ಇದೆ. ಪ್ರಧಾನಿ ಅಗಿದ್ದ ನೆಹರು, ಇಂದಿರಾ ಗಾಂಧಿ ಅವರನ್ನೇ ಹೆದರಿಸಿದ ಆರ್ ಎಸ್ ಎಸ್ ಗೆ ಇದು ಯಾವ ಲೆಕ್ಕ.ಇವರು ಒಂದು ರಾಜ್ಯದ ಔಟ್ ಗೋಯಿಂಗ್ ಸಿಎಂ. ಆರ್ ಎಸ್ ಎಸ್ ಸಂಘಟನೆ ಜಗತ್ತಿನ ಹಲವು ದೇಶಗಳಲ್ಲಿದೆ. ಸಿದ್ದರಾಮಯ್ಯ ಸಂಘಟನೆ ಮೈಸೂರಿನ ಹುಂಡಿಯಲ್ಲಿದೆ ಎಂದರು.
ತೇಜಸ್ವಿ ಸೂರ್ಯ ಅಮಾವಾಸ್ಯೆ ಎಂಬ ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿದ ಅವರು ನನ್ನನ್ನೂ ಸೇರಿಸಿ ಎಲ್ಲರೂ ಮುಖ ನೋಡಿಕೊಳ್ಳೋಣ. ಯಾರು ಅಮವಾಸ್ಯೆ, ಯಾರು ಪೌರ್ಣಮಿ ಅಂತಾ ಜನ ತೀರ್ಮಾನ ಮಾಡುತ್ತಾರೆ. ರಸ್ತೆ ಗುಂಡಿ ನೋಡಿದರೆ ಗೊತ್ತಾಗಲ್ವಾ?. ಬೆಂಗಳೂರಿಗೆ ಬಂದರೆ ರಸ್ತೆ ಗುಂಡಿ ನೋಡಿದರೆ ಅಮವಾಸ್ಯೆ ಯಾರು ಅಂತಾ ಗೊತ್ತಾಗುತ್ತದೆ. ತೇಜಸ್ವಿ ಸೂರ್ಯ ಅದೇ ರೀತಿ ಸಿದ್ದರಾಮಯ್ಯ ಅವರಿಗೆ ಹೇಳಿದರೆ ಹೇಗಾಗಬಹುದು?. ಪ್ರತಿಕ್ರಿಯೆ ಕೊಡಲೇಬೇಕು, ನಾನೂ ಸೂರ್ಯ ಜೊತೆ ಮಾತಾಡುತ್ತೇನೆ. ಸಿದ್ದರಾಮಯ್ಯಗೆ ವೋಟ್ ಕಡಿಮೆಯಾದರೆ ಹೇಳಿ, ತೇಜಸ್ವಿ ಸೂರ್ಯ ಬಳಿ ನಾಲ್ಕು ಲಕ್ಷ ವೋಟ್ ಇದೆ, ಸ್ವಲ್ಪ ವರ್ಗಾವಣೆ ಮಾಡೋಣ. ಜನ ಅವರನ್ನು ಸೂರ್ಯ ಅಂತಾ ತೀರ್ಮಾನ ಮಾಡಿರುವುದಕ್ಕೆ ನಾಲ್ಕು ಲಕ್ಷ ವೋಟ್ ಪಡೆದಿರುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮೋದಿ ನೋಡಿದಷ್ಟು ಒಳ್ಳೆಯವರಲ್ಲ ಎಂಬ ಸಿಎಂ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ನೀವು ಅದಕ್ಕಿಂತ ಕೆಟ್ಟವರು.ನಾನೇ ದುಡ್ಡು ಕೊಟ್ಟು ನಾನೇ ಉದ್ಘಾಟನೆ ಮಾಡಿದ್ದೇನೆ ಅಂತಾ ಒಂದು ಉದಾಹರಣೆ ಕೊಡಿ. ಮೋದಿ ಅಂದರೆ ಅಭಿವೃದ್ಧಿ. ಕೆಲವು ದೇಶದವರಂತೂ ಕೋವಿಡ್ ಸಮಯದಲ್ಲಿ ಮೋದಿ ಕಾಲಿಗೆ ಬಿದ್ದಿದ್ದಾರೆ. ಮೋದಿಗೆ ಬೈದರೆ ನಮ್ಮ ಲೆವೆಲ್ ಜಾಸ್ತಿ ಆಗುತ್ತದೆ ಅಂತಾ ಅಷ್ಟೇ ಇವರದ್ದು. ಮೋದಿ ಲೆವೆಲ್ ಅವರದ್ದೇ, ನಿಮ್ಮ ಲೆವಲ್ ನಿಮ್ಮದೇ ಎಂದಿದ್ದಾರೆ.











