ಮನೆ Latest News ಮುಡಾ ಹಗರಣದ ಆರೋಪ ವಿಚಾರ;ಕೆಪಿಸಿಸಿ ಕಚೇರಿಯಲ್ಲಿ ಮೂಡಾ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್, ಲಕ್ಷ್ಮಣ್...

ಮುಡಾ ಹಗರಣದ ಆರೋಪ ವಿಚಾರ;ಕೆಪಿಸಿಸಿ ಕಚೇರಿಯಲ್ಲಿ ಮೂಡಾ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್, ಲಕ್ಷ್ಮಣ್ ಸುದ್ದಿಗೋಷ್ಟಿ

0

ಬೆಂಗಳೂರು: ಮುಡಾ ಹಗರಣದ ಆರೋಪ ವಿಚಾರಕ್ಕೆ ಸಂಬಂಧಪಟ್ಟಂತೆ ಕೆಪಿಸಿಸಿ ಕಚೇರಿಯಲ್ಲಿ ಮೂಡಾ ಮಾಜಿ ಅಧ್ಯಕ್ಷ ಎಚ್ ವಿ ರಾಜೀವ್ ಹಾಗೂ ಕಾಂಗ್ರೆಸ್ ರಾಜ್ಯ ವಕ್ತಾರ ಲಕ್ಷ್ಮಣ್  ಸುದ್ದಿಗೋಷ್ಟಿ ನಡೆಸಿದ್ರು.

ಈ ವೇಳೆ ಮಾತನಾಡಿದ ಕಾಂಗ್ರೆಸ್  ರಾಜ್ಯ ವಕ್ತಾರ ಎಂ ಲಕ್ಷ್ಮಣ್ ಬಿಜೆಪಿಯವರು ಒಂದು ವಾರದಿಂದ ರಸ್ತೆಯಲ್ಲಿ ಉರುಳಾಡುತ್ತಿದ್ರು .ಅದರ ಜೊತೆಗೆ ಈಗ ಕುಮಾರಸ್ವಾಮಿ ಸೇರಿಕೊಂಡಿದ್ದಾರೆ.ಗಿನ್ನಿಸ್ ದಾಖಲೆಗೆ ಸೇರುವಷ್ಟು ಸುಳ್ಳು ಗಳನ್ನು ಕುಮಾರಸ್ವಾಮಿ ಹೇಳಿದ್ದಾರೆ. ಕೇಂದ್ರದ ಮಂತ್ರಿ ಸ್ಥಾನಕ್ಕೆ ಬೆಲೆ ಕೊಟ್ಟು ೧೦% ಆದ್ರೂ ಸುಳ್ಳು ಕಡಿಮೆ ಮಾಡಿ.ದಾಖಲೆ ಒದಗಿಸಿ ಏನಾದ್ರೂ ಮಾತನಾಡಿ ಎಂತು ವ್ಯಂಗ್ಯವಾಡಿದ್ರು.

ಕುಮಾರಸ್ವಾಮಿ ೧೦ ನಿಮಿಷ ಸಮಯ ಕೊಡಲಿ ಏನೆಲ್ಲ ಪ್ರಶ್ನೆ ಎತ್ತಿದ್ದೀರಿ ಅದಕ್ಕೆ ನಾವು ಉತ್ತರ ಕೊಡ್ತೀವಿ.ಬಿಜೆಪಿಗೆ ಏನೂ ಸಿಗದೇ ಇದ್ದಾಗ ನೂರು ಬಾರಿ ಸುಳ್ಳು ಹೇಳಿ ಜನರನ್ನು ನಂಬಿಸಲಾಗುತ್ತಿದೆ.ಶ್ರೀಮತಿ ಪಾರ್ವತಿಯವರಿಂದ ಏನಾದ್ರೂ ತಪ್ಪಾಗಿದ್ರೆ ದಾಖಲೆ ಇಡಿ. ೨೦೧೦ ರ ಬಳಿಕ ಏನಾಯ್ತು ಅದಕ್ಕೆ ಉತ್ತರ ಕೊಡಿ ಎಂದು ಸವಾಲು ಹಾಕಿದ್ದಾರೆ.

ನಿಂಗ ಬಿನ್ ಜವರಾ ದಲಿತ ಸಮುದಾಯಕ್ಕೆ ಸೇರಿದವರು.ಕೆಸರೆ ಗ್ರಾಮದಲ್ಲಿ ೧೯೮೫ ರಲ್ಲಿ ಮೈಸೂರು ಡಿಸಿ ಬಹಿರಂಗ ಹರಾಜಿನಲ್ಲಿ ಜಮೀನು ನೀಡಿದ್ದರು.ನಿಂಗ ಎಂಬುವವರಿಗೆ ೧೦೦₹ ರೂ.ಗೆ ಕೆಸರೆ ಗ್ರಾಮದಲ್ಲಿ ೩.೧೬ ಎಕರೆ ಜಮೀನು ನೀಡಿದ್ದಾರೆ.ನಿಂಗಪ್ಪಗೆ ಮೂರು ಜನ ಮಕ್ಕಳು.ಇವರ ಜಮೀನೂ ಸೇರಿ ೧೯೯೨ ರಲ್ಲಿ ಮುಡಾ ೬೦ ಸರ್ವೆ ನಂಬರ್ ಗಳನ್ನು ಭೂಸ್ವಾಧೀನಕ್ಕೆ ನೋಟಿಫಿಕೇಷನ್ ಆಗುತ್ತದೆ.೧೯೯೭ ರಲ್ಲಿ ಜಮೀನಿಗೆ ಅವಾರ್ಡ್ ಕೂಡ ಆಗುತ್ತದೆ.ಅವಾರ್ಡ್ ನೊಟೀಸ್ ಅನ್ನು ಅವರ ನಿಂಗ ಅವರ ಕುಟುಂಬಕ್ಕೆ ನೀಡಲಾಗಿದೆ.ಕುಮಾರಸ್ವಾಮಿ ಗೆ ಟ್ಯೂಷನ್ ಕೊಟ್ಟ  ಮೇಷ್ಟ್ರು ಸರಿಯಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಇನ್ನು ವ್ಯಕ್ತಿಗಳ ಹೆಸರಲ್ಲಿ ಡಿನೋಟಿಫೀಕೇಷನ್ ಆಗಲ್ಲ, ಸರ್ವೆ ನಂಬರ್ ಆಧರಿಸಿ ನೋಟಿಫಿಕೇಷನ್ ಡಿನೋಟಿಫಿಕೇಷನ್ ಆಗುತ್ತದೆ. ಯಾರೋ ಟೈಪ್ ಮಾಡಿದ್ದನ್ನು ತಂದು ಬಿಡುಗಡೆ ಮಾಡಬೇಡಿ ಸ್ವಾಮೀ.ಜಮೀನು ಪಾರ್ವತಿ ಸಿದ್ದರಾಮಯ್ಯ ಗೆ ಬಂದಿದ್ದೇ ೨೦೧೦ ರ ಬಳಿಕ.ಈ ೩.೧೬ ಎಕರೆ ಡೀನೋಟಿಫೈ ಆಗಿದ್ದು ೧೯೯೮ ರಲ್ಲಿ ಆಗ ಜಮೀನಿನ ಮಾಲಿಕತ್ವ ಇದ್ದಿದ್ದು ನಿಂಗ ಹೆಸರಲ್ಲಿ.೨0೦೫ ರಲ್ಲಿ ಜಮೀನು ಕನವರ್ಷನ್ ಆಗುತ್ತದೆ.ಮುಡಾ ವಿರುದ್ದ ಕ್ರಿಮಿನಲ್ ಕೇಸ್ ಹಾಕಬೇಕಿತ್ತು.ಮುಡಾ ಜಮೀನು ವಿಚಾರದಲ್ಲಿ ತಪ್ಪು ಮಾಡಿದೆ.ಮುಡಾ ನಡವಳಿಯಲ್ಲೇ ತಪ್ಪಾಗಿದೆ ಎಂಬುದು ಗೊತ್ತಾಗುತ್ತದೆ.ಮುಡಾ ಸ್ಕ್ಯಾಮ್ ಅಲ್ಲ, ಇದು ಸ್ಕ್ಯಾಮ್ ಅಂತ ದಯವಿಟ್ಟು ಹೇಳಬೇಡಿ ಎಂದು ಲಕ್ಷ್ಮಣ್ ಹೇಳಿದ್ದಾರೆ.