ಮನೆ Latest News ಬೆಂಗಳೂರು; ನೀರು ಹಿಡಿಯುವಾಗ ಕರೆಂಟ್ ಶಾಕ್ ಹೊಡೆದು ಮಹಿಳೆ ಸಾವು; ಮಾರ್ಕೆಟ್ ರಸ್ತೆಯಲ್ಲಿ ಹೈಡ್ರಾಮಾ

ಬೆಂಗಳೂರು; ನೀರು ಹಿಡಿಯುವಾಗ ಕರೆಂಟ್ ಶಾಕ್ ಹೊಡೆದು ಮಹಿಳೆ ಸಾವು; ಮಾರ್ಕೆಟ್ ರಸ್ತೆಯಲ್ಲಿ ಹೈಡ್ರಾಮಾ

0

ಬೆಂಗಳೂರು; ನೀರು ಹಿಡಿಯುವಾಗ ಕರೆಂಟ್ ಶಾಕ್ ಹೊಡೆದು ಮಹಿಳೆ ಸಾವನ್ನಪ್ಪಿದ್ದರಿಂದ ಕೆರಳಿದ ಸ್ಧಳೀಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ. ಮಾರ್ಕೆಟ್ ರಸ್ತೆಯ ಆನಂದಪುರದಲ್ಲಿ ಘಟನೆ ನಡೆದಿದೆ.

ಇಲ್ಲಿರುವ ಯಾವ ಮನೆಗೂ ನೀರಿನ ಸಂಪರ್ಕ ಇಲ್ಲ. ದೊಡ್ಡ ಪೈಪ್ ನಲ್ಲಿ ಅಲ್ಲಲ್ಲಿ ಮೋಟರ್ ಕನೆಕ್ಷನ್ ನೀಡಲಾಗಿದೆ.ಮೋಟರ್ ಸ್ಟಾರ್ಟ್ ಮಾಡುವಾಗ ಕರೆಂಟ್ ತಗುಲಿ ಮಹಿಳೆ ಸಾವನ್ನಪ್ಪಿದ್ದಾರೆ. ಇಂದು ಬೆಳಗ್ಗೆ 5.30 ಸುಮಾರಿಗೆ ಘಟನೆ ನಡೆದಿದೆ. ಇದರಿಂದ ಕೆರಳಿದ ಜನ ಪ್ರತಿಭಟನೆ ನಡೆಸಿದ್ದಾರೆ. ರಸ್ತೆ ತಡೆ ನಡೆಸಿ ಪ್ರೊಟೆಸ್ಟ್ ಮಾಡಿದ್ದಾರೆ. ಇದರಿಂದಾಗಿ ಮಾರ್ಕೆಟ್ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇನ್ನು ಸ್ಥಳಕ್ಕೆ ಚಾಮರಾಜಪೇಟೆ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಲು ಯತ್ನಿಸಿದ್ದಾರೆ. ಈ ವೇಳೆ ಪೊಲೀಸರಿಗೆ ಹಾಗೂ ಸ್ಥಳೀಯರ ಮಧ್ಯೆ ವಾಗ್ವಾದ ಉಂಟಾಗಿದೆ. ಆದರೆ ನಮ್ಮ ಮನೆಗೆ ನೀರು ಸಿಗೊವರೆಗೆ ರಸ್ತೆ ತಡೆ ನಿಲ್ಲಿಸಲ್ಲ. ನೀರು ಹಿಡಿಯಲು ಹೋಗಿ ಒಂದು ಜೀವ ಹೋಗಿದೆ ಎಂದು ಸ್ಥಳೀಯರು ಆಕ್ರೋಶ ಹೊರ ಹಾಕಿದ್ದಾರೆ. ಅಲ್ಲದೇ ರಸ್ತೆ ತಡೆ ಮುಂದುವರೆಸಿದ್ದಾರೆ.

ಇಲ್ಲಿಯವರೆಗೂ ನಾಲ್ಕು ಜನ ಸಾಪನ್ನಪ್ಪಿದ್ದಾರೆ. ಇದುವರೆಗೂ ಯಾರು ಕೂಡ ಬಂದಿಲ್ಲ. ನಾವು ನ್ಯಾಯ ಕೇಳಿದ್ರೆ ನಮ್ಮ ಮೇಲೆ ಧಮ್ಕಿ ಹಾಕ್ತಾರೆ. ಪೋಲಿಸರು ನಮ್ಮ  ಮೇಲೆ FI R ಮಾಡ್ತೇನೆ ಅಂತಿದ್ದಾರೆ. ನಾವು ನ್ಯಾಯ ಕೇಳೋದ ತಪ್ಪ..?. ಕಳೆದ ಐವತ್ತು ವರ್ಷಗಳಿಂದ ವಾಸ ಮಾಡಿಕೊಂಡಿದ್ದೇವೆ. ನಮ್ಮ ಬಳಿ ಬಂದು ವೋಟ್ ಕೇಳುತ್ತಾರೆ. ಗೆದ್ದ ನಂತರ ಯಾರು ಕೂಡ ಬರೋದಿಲ್ಲ. ನ್ಯಾಯ‌ ಸಿಗೋವರೆಗೂ‌ ಪ್ರತಿಭಟನೆ ಕೈ‌ಬಿಡೊದಿಲ್ಲ ಎಂದು ಸ್ಥಳಿಯ ವ್ಯಕ್ತಿ ಮೂರ್ತಿ ಹೇಳಿದ್ದಾರೆ.

ಮೂಲಭೂತ ಸೌಕರ್ಯ ನೀಡೋದರಲ್ಲೂ ಶಾಸಕ ಜಮೀರ್ ಅಹಮ್ಮದ್ ಖಾನ್ ತಾರತಮ್ಯ ಮಾಡ್ತಿದ್ದಾರೆ  ಆನಂದಪುರದಲ್ಲಿ ಮಹಿಳೆಯರ ಆಕ್ರೋಶ ಹೊರ ಹಾಕಿದ್ದಾರೆ. ಇಲ್ಲಿ ಹೆಚ್ಚಾಗಿ ಹಿಂದೂ ಜನರು ವಾಸ ಮಾಡ್ತಿದ್ದಾರೆ. ಪಕ್ಕದಲ್ಲೇ ಇರುವ ಟಿಪ್ಪು ನಗರ ನೋಡಿ. ಅಲ್ಲಿ ಹೆಚ್ಚಾಗಿ ಮುಸ್ಲಿಂ ಜನರಿದ್ದಾರೆ. ಅವರಿಗೆ ಮನೆ ಮನೆಗೂ ನೀರಿನ ವ್ಯವಸ್ಥೆ ಮಾಡಿದ್ದಾರೆ. ಕೇಳಿದ್ರೆ ಇದು ಸ್ಲಂ ಅಂತಾರೆ,ನಾವು ವೋಟ್ ಹಾಕಿಲ್ವಾ. ಇಲ್ಲಿ ನೀರು,ಚರಂಡಿ ವ್ಯವಸ್ಥೆವಿಲ್ಲ ಎಂದು ಆನಂದಪುರ ಮಹಿಳೆಯರು ಆಕ್ರೋಶ ಹೊರ ಹಾಕಿದ್ದಾರೆ.