ಮನೆ Latest News ತೆರಿಗೆ ದುಡ್ಡು ಎಲ್ಲಿ ಹೋಗ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆ‌ ವಿಚಾರ; ಕುಮಾರಸ್ವಾಮಿ ಗ್ಯಾರಂಟಿ ಕೊಟ್ಟಿದ್ರಾ? ಎಂದು...

ತೆರಿಗೆ ದುಡ್ಡು ಎಲ್ಲಿ ಹೋಗ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆ‌ ವಿಚಾರ; ಕುಮಾರಸ್ವಾಮಿ ಗ್ಯಾರಂಟಿ ಕೊಟ್ಟಿದ್ರಾ? ಎಂದು ಪ್ರಶ್ನೆ ಮಾಡಿದ ಸಿಎಂ ಸಿದ್ದರಾಮಯ್ಯ

0

ಬೆಂಗಳೂರು; ತೆರಿಗೆ ದುಡ್ಡು ಎಲ್ಲಿ ಹೋಗ್ತಿದೆ ಎಂಬ ಕುಮಾರಸ್ವಾಮಿ ಹೇಳಿಕೆ‌ ವಿಚಾರಕ್ಕೆ ಸಿಎಂ ಸಿದ್ದರಾಮಯ್ಯ ರಿಯ್ಯಾಕ್ಟ್ ಮಾಡಿದ್ದು, ಕುಮಾರಸ್ವಾಮಿ ಗ್ಯಾರಂಟಿ ಕೊಟ್ಟಿದ್ರಾ? . ಯಾವ ನೈತಿಕತೆ ಇದೆ ಅವರಿಗೆ. ನಾಲ್ಕೂವರೆ ಲಕ್ಷ ಕೋಟಿ ತೆರಿಗೆ ಕಟ್ಟುತ್ತೇವೆ. ನಮಗೆ ವಾಪಸ್ಸು ಬರೋದು 60 ಸಾವಿರ ಕೋಟಿ ಅಷ್ಟೆ. ಉಳಿದ ದುಡ್ಡನ್ನ ದೇವೇಗೌಡರಾಗಲಿ, ಕುಮಾರಸ್ವಾಮಿ ಆಗಲಿ ಕೊಡಿಸಲಿ ಎಂದು ತಿರುಗೇಟು ಕೊಟ್ಟಿದ್ದಾರೆ.

ಇವರು ಕರ್ನಾಟಕಕ್ಕೆ ಅನ್ಯಾಯ ಆಗಿದೆ ಅಂತ ಮಾತಾಡಿದ್ದಾರಾ? ಬರೀ ಮಾತಾಡಿದ್ರೆ ಪ್ರಯೋಜನ ಇಲ್ಲಾ. ಈ ವರ್ಷ ನಬಾರ್ಡ್ ನಿಂದಲು ಕರ್ನಾಟಕಕ್ಕೆ ಅನ್ಯಾಯವಾಗಿದೆ. ಕಳೆದ ವರ್ಷ ೫೬೦೦ ಕೋಟಿ  ನಬಾರ್ಡ್ ನಿಂದ ರೈತರಿಗೆ ಸಾಲ‌ ಕೊಟ್ಟಿದ್ರು. ಈ ವರ್ಷ ೨೩೦೦ ಕೋಟಿ ಕೊಟ್ಟಿದ್ದಾರೆ. ಏನ್ ಮಾಡ್ತಿದ್ದಾರೆ ಕುಮಾರಸ್ವಾಮಿ. ೫೮% ಕಡಿಮೆ ಸಾಲ ಕೊಟ್ಟಿದ್ದಾರೆ, ನಿರ್ಮಲಾ ಸೀತಾರಾಮನ್, ಜೋಶಿ ಏನ್ ಮಾಡ್ತಿದ್ದಾರೆ. ಈ ಬಗ್ಗೆ ಪ್ರಧಾನಿಯವರಿಗೆ ಪತ್ರ  ಬರೆದು ರೈತರಿಗೆ ಅನ್ಯಾಯ ಆಗ್ತಿದೆ ದ್ರೋಹದ ಕೆಲಸ ಮಾಡಬೇಡಿ ಎಂದಿದ್ದೇನೆ. ಹಣಕಾಸು ಇಲಾಖೆಯ ಸಚಿವರು ಏನ್ ಮಾಡ್ತಿದ್ದಾರೆ? ಕೃಷ್ಣ ಮೇಲ್ದಂಡೆಗೆ ೨೦೨೪ನೇ ಬಜೆಟ್ ನಲ್ಲಿ ೫೩೦೦ ಕೋಟಿ ಕೊಡ್ತಿವಿ ಅಂತ ಹೇಳಿದ್ರು ಕೊಟ್ರಾ? ಏನ್ ಮಾಡ್ತಿದ್ದಾರೆ ಕುಮಾರಸ್ವಾಮಿ, ಜೋಶಿಯವರು. ಅಕ್ಕಿ ಅನೌನ್ಸ್ ಮಾಡಿದ್ರು ಎಲ್ಲಿ ಕೊಟ್ರು? ಎಂದು ಪ್ರಶ್ನೆ ಮಾಡಿದ್ದಾರೆ.

ಬಿಜೆಪಿಯವರು ಯಾವತ್ತಾದ್ರೂ ಅನ್ನಭಾಗ್ಯ ಕೊಟ್ಟಿದ್ದಾರಾ?; ಸಿಎಂ ಸಿದ್ದರಾಮಯ್ಯ ಹೇಳಿಕೆ

ಬೆಂಗಳೂರು; ಬಿಜೆಪಿಯವರು ಯಾವತ್ತಾದ್ರೂ ಅನ್ನಭಾಗ್ಯ ಕೊಟ್ಟಿದ್ದಾರಾ? ಎಂದು  ಸಿಎಂ ಸಿದ್ದರಾಮಯ್ಯ ಬಿಜೆಪಿ ಮುಖಂಡರನ್ನು ಪ್ರಶ್ನಿಸಿದ್ದಾರೆ. ತೆರಿಗೆ ಕಟ್ಟದವರ ಬಿಪಿಎಲ್ ಕಾರ್ಡ್ ಸಹ ರದ್ದು ಆರೋಪ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು ಬಡವರಿಗೆ ಕೊಡಬೇಕು, ಕೊಡ್ತಿದ್ದೀವಿ, ಕೊಡುತ್ತೇವೆ. ಬಿಜೆಪಿಯವರು ಯಾವತ್ತಾದ್ರೂ ಅನ್ನಭಾಗ್ಯ ಕೊಟ್ಟಿದ್ದಾರಾ? ಎಂದು ಕೇಳಿದ್ದಾರೆ.

ಅರ್ಹರಿಗೆ ಕೊಡುತ್ತೇವೆ, ಕೊಡ್ತಾ ಇದ್ದೀವಿ . ಅನರ್ಹರ ಕಾರ್ಡ್ ಮಾತ್ರ ರದ್ದು ಮಾಡಲಾಗಿದೆ. ನೀವೇ ಗೊಂದಲ ಮಾಡುತ್ತಿದ್ದೀರಿ ಅಂತ ಮಾಧ್ಯಮಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ಗರಂ ಆಗಿದ್ದಾರೆ.

ಅನರ್ಹ ಕಾರ್ಡ್ ಗಳು ಮಾತ್ರ ರದ್ದಾಗುತ್ತೆ. ಅರ್ಹರಿಗೆ ತಪ್ಪಿಸೊಲ್ಲಾ, ಬಡವರಿಗೆ ಕೊಡಬೇಕು. ನಾವು ಬಡವರಿಗೆ ಸಹಾಯ ಮಾಡಬೇಕು. ಅನ್ನಭಾಗ್ಯವನ್ನ ಬಿಜೆಪಿಯವರು ಕೊಟ್ಟಿದ್ದಾರಾ? ಜೆಡಿಎಸ್ ಮಾಡಿದ್ರಾ? ನಾನು ಸಿಎಂ ಅಗಿದ್ದಾಗ ಮಾಡಿದ್ದು. ಅದು. 2017 ರಲ್ಲಿ 1 ರೂಪಾಯಿ ಅಕ್ಕಿ ಕೊಡ್ತಿದ್ವು. ಇದನ್ನ ಗುಜರಾತ್ ಮಧ್ಯಪ್ರದೇಶ್ ಬಿಹಾರ್ ಹರಿಯಾಣದಲ್ಲಿ ಮಾಡಿದ್ರಾ ಎಂದು ಸಿಎಂ ಸಿದ್ದರಾಮಯ್ಯ ವಿಪಕ್ಷಗಳನ್ನು ಪ್ರಶ್ನೆ ಮಾಡಿದ್ದಾರೆ.