ಮನೆ ರಾಜಕೀಯ/ರಾಜ್ಯ ನನ್ನ ಮೇಲಿನ ಹಗೆತನಕ್ಕ ರಾಜ್ಯ ಹಾಳು ಮಾಡುತ್ತಿದ್ದಾರೆ: ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿರುದ್ಧ ಕೇಂದ್ರ...

ನನ್ನ ಮೇಲಿನ ಹಗೆತನಕ್ಕ ರಾಜ್ಯ ಹಾಳು ಮಾಡುತ್ತಿದ್ದಾರೆ: ಅರಣ್ಯ ಸಚಿವ ಈಶ್ವರ್ ಖಂಡ್ರೆ ವಿರುದ್ಧ ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ವಾಗ್ದಾಳಿ

0

ಬೆಂಗಳೂರು ನಗರದ ಪೀಣ್ಯ ಜಾಲಹಳ್ಳಿ ಪ್ಲಾಂಟೇಷನ್ ಸರ್ವೆ ನಂ.1 ಮತ್ತು 2ರಲ್ಲಿ 10 ಸಾವಿರ ಕೋಟಿ ರೂ.ಗೂ ಹೆಚ್ಚು ಬೆಲೆ ಬಾಳುವ 599 ಎಕರೆ ಅಧಿಸೂಚಿತ ಅರಣ್ಯ ಪ್ರದೇಶವನ್ನು ಇಲಾಖೆಗೆ ಮರಳಿ ಪಡೆಯಲು ಕ್ರಮ ವಹಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸ್ಪಷ್ಟ ಸೂಚನೆ ನೀಡಿದ್ದರು. ಇದೇ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಕೇಂದ್ರ ಸಚಿವ ಹೆಚ್ ಡಿ ಕುಮಾರಸ್ವಾಮಿ ಸುದ್ದಿಗೋಷ್ಟಿ ನಡೆಸಿ ತಿರುಗೇಟು ಕೊಟ್ಟಿದ್ದಾರೆ.

ಇಂದು ಸುದ್ದಿಗೋಷ್ಟಿ ನಡೆಸಿದ ಮಾತನಾಡಿದ ಕುಮಾರಸ್ವಾಮಿ ಕಳೆದ ಒಂದು ತಿಂಗಳಿಂದ ನೀವು ರಾಜಕೀಯದ ದೊಡ್ಡ ಮಟ್ಟ ಸುದ್ದಿಗಳು ಪ್ರಸಾರ ಮಾಡಿದ್ದೀರಾ?ರಾಜ್ಯ ಸರ್ಕಾರ ನಾನು ಕೇಂದ್ರ ಸಚಿವನಾದ ಮೇಲೆ ಪ್ರೋತ್ಸಾಹ ಕೊಡ್ತಾ ಇದ್ದಾರೆ ಅಂತ.ಕೇಂದ್ರ ಸಚಿವನಾಗಿ ನಾಲ್ಕೈದು ದಿನದಲ್ಲಿ ಕುದುರೆ ಮುಖ ಕಂಪನಿಗೆ ಕೇಂದ್ರ ಸರ್ಕಾರದ ಆರ್ಥಿಕ ಗ್ಯಾರಂಟಿ ಕೇಳಿರೋದು ಅಷ್ಟೇ.ಹಲವಾರು ವರ್ಷಗಳಿಂದ ಲಾಭದಲ್ಲಿ ಇದ್ದು ಚಟುವಟಿಕೆಗಳು ಕಡಿಮೆ ಇತ್ತು.ನಾನು ಕಡತಕ್ಕೆ ಸಹಿ ಹಾಕಿದಕ್ಕೆ ಗೊಂದಲ ಕ್ರಿಯೆಟ್ ಮಾಡಿದ್ರು.ಕುಮಾರಸ್ವಾಮಿ ಪರಿಸರ ಹಾಳು ಮಾಡೋಕೆ ಹೊರಟಿದ್ದಾರೆ ಎಂದು ಹೇಳಿದ್ದಾರೆ.ಇದೇ ಸಿದ್ದರಾಮಯ್ಯ ಸರ್ಕಾರ ಸಂಡೂರಿನಲ್ಲ ದೇವದಾರದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ್ದಾರೆ.ಹಿಂದೆ ಸರ್ಕಾರದದಲ್ಲಿ ಯಾವ ಭೂಮಿ ಅನುಮತಿ ನೀಡಲು ಶಿಫಾರಸ್ಸು ಮಾಡಿದ್ರು.ಅಲ್ಲಿ ದೊಡ್ಡ ಮಟ್ಟದ ಮರಗಳಿಲ್ಲ.ಪರಿಸರ ರಕ್ಷಣೆಗೆ ೧೯೨ ಕೋಟಿ ವರ್ಗಾವಣೆ ಮಾಡಿದ್ದಾರೆ.ಕೆಲವೊಂದು ತಾಂತ್ರಿಕ ತಪ್ಪುಗಳು ಆಗಿವೆ.ಅದನ್ನು ಸರಿಪಡಿಸಿಕೊಳ್ಳಲು ಸಂಸ್ಥೆ ರೆಡಿ ಇದೆ.ಅರಣ್ಯ ಸಚಿವರು ತಡೆಯಾಜ್ಞೆ ತರಲು ಟಿಪ್ಪಣಿ ಬಿಡುಗಡೆ ಮಾಡಿದ್ದಾರೆ.ವರ್ಷಕ್ಕೆ ೧೨೦ ಕೋಟಿ ನಷ್ಟ ಆಗುತ್ತದೆ.ಅಲ್ಲಿನ ಕುಟುಂಬಗಳು ಬೀದಿಗೆ ಬರಲಿವೆ.ನಿನ್ನೆ ಈಶ್ವರ್ ಖಂಡ್ರೆ ಅವರು ಗದಾಪ್ರಹಾಹ ಮಾಡೋಕೆ ಹೋಗಿದ್ದಾರೆ.ಇಲ್ಲಿ ಟಿಪ್ಪಣಿ ಸಹ ಕಳಿಸಿದ್ದಾರೆ.ಹೆಚ್ ಎಂಟಿ ಕೈಗಾರಿಕೆಗೆ ಭೂಮಿ ಕೊಟ್ಟಿದ್ದಾರೆ ಅದನ್ನ ವಶಕ್ಕೆ ಪಡಿಸಿಕೊಳ್ಳಬೇಕು ಅಂತ ಹೇಳಿದ್ದಾರೆ ಎಂದರು.

ಈ ಹೆಚ್ ಎಂಟಿಗೆ ಲ್ಯಾಂಡ್ ಯಾವ ರೀತಿ ಬಂತು?೧೯೬೪ ರಲ್ಲಿ ಹೆಚ್ ಎಂಟಿಯಿಂದ ಕಾರ್ಖಾನೆ ಆಯಿತು.ಅವತ್ತು ನೇಹರು ಅವರು ಬಂದು ಕಾರ್ಖಾನೆ ಭೇಟಿ ನೀಡಿದ್ದಾರೆ.ಲಾಲ್ ಬಹಾದ್ದೂರ್ ಶಾಸ್ತ್ರಿ, ಮೈಸೂರು ಅರಸು ಎಲ್ಲರು ಭೇಟಿ ನೀಡಿದ್ದಾರೆ.ಇದಕ್ಕೆ ಇತಿಹಾಸ ಇದೆ.ನೆಹರು ಅವರ ಕಾಲದಲ್ಲಿ ಹೆಚ್ ಎಂ ಟಿ‌ ಆರಂಭ ಆಯ್ತು.ಎಚ್ ಎಂ ಟಿ ಯಲ್ಲಿ 1970 ರಲ್ಲಿ ಲಾಭ 270 ಕೋಟಿ ಬಂದ ಲಾಭ ದಿಂದ ದೇಶದ ಹಲವು ಕಡೆ ಕಂಪನಿ ಸ್ಥಾಪನೆ ಮಾಡಿದ್ರು ಎಂದರು.

ನಿನ್ನೆ ಸಚಿವರು ಟಿಪ್ಪಣಿ ಬರೆದಿದ್ದಿರಾ ಯಾವ ಕಾರಣಕ್ಕೆ?ಸಚಿವರು ಸೂಚನೆ ಕೊಟ್ಟ ಕೂಡಲೇ ಎಚ್ ಎಂ ಟಿ ಜಾಗ ವಶ ಪಡಿಸಿಕೊಳ್ಳಲು ಆಗುತ್ತಾ?2020 ಡಿನೋಟಿಫೈ ಮಾಡಿದ್ದು ಯಾರು?ನಾನು ಎಚ್ ಎಂ ಟಿ ಕಾರ್ಖಾನೆ ಗೆ ಭೇಟಿ ಕೊಟ್ಟು ಎಚ್ ಎಂ ಟಿ ಉಳಿಸಬೇಕು ಎಂದು ಕೆಲ ನಿರ್ಧಾರ ತೆಗೆದುಕೊಂಡು ನನ್ನ ರೀತಿಯಲ್ಲಿ ನಾನು ಶ್ರಮ ಹಾಕುತ್ತಿದ್ದೇನೆ.ಈಶ್ವರ್ ಖಂಡ್ರೆ ಅವರೇ ಈಗ ಯಾಕೆ ಇದೆಲ್ಲ.ನಾನು ಈ ಸಂಸ್ಥೆ ಉಳಿಸಬೇಕು.ಹೆಚ್ ಎಂಟಿ ಒಂದಿಚ್ಚು ಭೂಮಿ ರಿಜಿಸ್ಟರ್ ಆಗಬಾರದ್ದು ಅಂತ ನಾನು ಸಿಎಂ ಆಗಿದ್ದಾಗ ಮಾಡಿದ್ದೇನೆ.೫೯೯ ಎಕರೆ ಹೆಚ್ ಎಂಟಿ ಜಮೀನು ಏನಿದೆ.ಇದು ಪುಕಟ್ಟೆ ಕೊಟ್ಟಿಲ್ಲ.ನಿನ್ನೆ ದೂರವಾಣಿಯಲ್ಲಿ ಮಾತಾಡಿದ್ದಾಗ ಎಲ್ಲ ದಾಖಲೆ ಸಂಗ್ರಹಿಸಿದ್ದಾರೆ. 1963 ಡಿಸೆಂಬರ್ 4 ರಂದು 4.40 ಲಕ್ಷ ಹಣ ಕಟ್ಟಲಾಗಿದೆ.ಮಂಜೂರಾದ ಜಮೀನಿಗೆ ದುಡ್ಡು ಕಟ್ಟಿದ್ದಾರೆ ,ಪುಕ್ಕಟೆ ತೆಗೆದುಕೊಂಡಿಲ್ಲ.ನಾನು ಜಸ್ಟ್ ಎಂಟ್ರಿಯಾಗಿದ್ದಕ್ಕೆ 45 ರೂ ಇದ್ದ ಶೇರ್ ವ್ಯಾಲ್ಯೂ 92 ಕ್ಕೆ ಏರಿಕೆ ಮಾಡಲಾಗಿದೆ.ಯಾರಿಗೆ ಕೊಡಲಿಕ್ಕೆ ತರಾತುರಿ ಆದೇಶ ಮಾಡಿದ್ದೀರಿ ಈಶ್ವರ್ ಖಂಡ್ರೆ.ಖಾಲಿ ಜಾಗ ತಕ್ಷಣ ವಶಪಡಿಸಿಕೊಳ್ಳಿ ಎಂದು ಅಧಿಕಾರಿಗಳಿಗೆ ಹೇಳಿದ್ದಾರೆ ಎಂದರು.