ಬೆಂಗಳೂರು; ಕುಮಾರಸ್ವಾಮಿಯವರಿಗೆ ರೈಸಿಂಗ್ ಸ್ಟಾರ್ ಡಿಕೆಶಿ ಅವರ ಬೆಳವಣಿಗೆಯನ್ನ ಸಹಿಸಿಕೊಳ್ಳಲು ಆಗ್ತಿಲ್ಲ ಎಂದು ಕುಣಿಗಲ್ ರಂಗನಾಥ್ ಹೇಳಿದ್ದಾರೆ.
ಡಿ ಕೆ ಶಿವಕುಮಾರ್ ಬಂಡೆ ಅನ್ನೋದು ಪ್ರತಿ ನಿತ್ಯ ಸತ್ಯವಾಗುತ್ತಿದೆ. ಕುಮಾರಸ್ವಾಮಿ ಸಮುದಾಯಕ್ಕೆ ನಾಯಕನಾಗಲು ಡಿಕೆಶಿ ಅವರನ್ನು ತುಳಿಯಲು ಹೊರಟಿದ್ದಾರೆ. ಡಿಕೆಶಿ ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ, ಡಿಕೆಶಿ ಎಲ್ಲೆ ಹೋದ್ರು ಅವರಿಗೆ ಗೌರವ ಇದೆ. ಕುಮಾರಸ್ವಾಮಿಯವರಿಗೆ ರೈಸಿಂಗ್ ಸ್ಟಾರ್ ಡಿಕೆಶಿ ಅವರ ಬೆಳವಣಿಗೆಯನ್ನ ಸಹಿಸಿಕೊಳ್ಳಲು ಆಗ್ತಿಲ್ಲ. ಡಿಕೆಶಿಯವರನ್ನ ವಿರೋಧಿಸುವುದು ಕುಮಾರಸ್ವಾಮಿ ಹುನ್ನಾರ ಆಗಿದೆ. ಕುಮಾರಸ್ವಾಮಿ ಅವರ ಮಾತಿನ ರೀತಿ ಬದಲಾವಣೆ ಆಗಬೇಕಿದೆ. ನಮ‌್ಮ ನಡೆಗಳಲ್ಲಿ ತಪ್ಪಿದ್ರೆ ತಿಳಿಸಲಿ. ಡಿಕೆಶಿ ಅವರನ್ನ ಮಣಿಸಲು ಕುಮಾರಸ್ವಾಮಿ ಅವರಿಗೆ ಆಗ್ತಿಲ್ಲ. ಅವರು ಕೇಂದ್ರದಲ್ಲಿ ಸಚಿವರಿದ್ದಾರೆ . ಅದಕ್ಕೆ ಡಿಕೆಶಿಯವರನ್ನ ಕಟ್ಟಿ ಹಾಕಿದ್ರೆ ಅವರ ಕುಟುಂಬ ಬೆಳೆಯಬಹುದು ಅಂತ ಯೋಚನೆ ಮಾಡ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಕುಮಾರಸ್ವಾಮಿ ಅವರು ಬಿಡದಿ ಟೌನ್ ಶಿಪ್ ಬಗ್ಗೆ ಮಾತನಾಡಿದ್ದಾರೆ. ಕುಣಿಗಲ್ ತಾಲ್ಲೂಕು ಬೆಂಗಳೂರು ದಕ್ಷಿಣಕ್ಕೆ ಸೇರಿಸಿ ಲೂಟಿಮಾಡಿದ್ದಾರೆ ಅಂದಿದ್ದಾರೆ. ನಾನು ಒಂದು ಬಡ ಕುಟುಂಬದಿಂದ ಬಂದಿದ್ದೇನೆ. ಅವರ ಆರೋಪ ನನಗೆ ಬೇಸರವಾಯ್ತು. ಬೇರೆಯವರ ಮಕ್ಕಳ ಬಗ್ಗೆ ಹಗುರವಾಗಿ ಮಾತನಾಡಬಾರದು.ಅವರು ಆ ರೀತಿಯಲ್ಲಿಮಾತನಾಡಬಾರದು. ಲೂಟಿ ಎಂಬ ಪದ ಬಹಳ ನೋವು ತಂದಿದೆ. ಅವರ ಸರ್ಕಾರದಲ್ಲಿ ನಾನು ಕೂಡ ಶಾಸಕನಾಗಿದ್ದೆ. ಡಿ ಕೆ ಶಿವಕುಮಾರ್ ಅವರು ಅಭಿವೃದ್ಧಿ ಮಾಡುತ್ತಿದ್ದಾರೆ. ಇದರಿಂದ ಹತಾಶರಾಗಿ ಕುಮಾರಸ್ವಾಮಿ ಮಾತನಾಡುತ್ತಿದ್ದಾರೆ. ಕುಮಾರಸ್ವಾಮಿ ಅವರೇ ಈ ಟೌನ್ ಶಿಪ್ ಮಾಡಿದ್ದು. ಅದನ್ನು ಮುಂದುವರೆಸಿದ್ರೆ ಅಪವಿತ್ರವಾಗಿದೆ. ಕಾಮಾಲೆ ಕಣ್ಣಿನಿಂದ ನೋಡಬೇಡಿ. ರೈತರಿಗೆ ಹೆಣ್ಣುಗಳು ಸಿಗುತ್ತಿಲ್ಲ. ರೈತರಿಗೆ ಉದ್ಯೋಗ ಸೃಷ್ಟಿ ಮಾಡೋಣ. ಎಲ್ಲ ವಿಚಾರವಾಗಿ ಕುಮಾರಸ್ವಾಮಿ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ,
ನಾನು ಬೇಕಾದ್ರೆ ರಾಜಕೀಯ ಬಿಡ್ತೇನೆ. ಆದ್ರೆ ಈರೀತಿಯ ಆರೋಪಗಳು ಮಾಡುವುದು ಬೇಡ. ಕುಮಾರಸ್ವಾಮಿ ಆಡಿದ ಮಾತುಗಳು ನೋವಾಗಿದೆ. ಸಿಎಂ ಅವರು ಕುಣಿಗಲ್ ನ್ನು ಬೆಂಗಳೂರು ದಕ್ಷಿಣ ಜಿಲ್ಲೆಗೆ ಸೇರಿಸುವ ಪ್ರಯತ್ನ ಮಾಡಿದ್ರು. ಅಷ್ಟು ಬಿಟ್ಟು ನನಗೆ ಯಾವುದೇ ಮಾಹಿತಿ ಇಲ್ಲ. ಕುಣಿಗಲ್ ಸೇರಿಸುವ ಬಗ್ಗೆ ತಾಲೂಕಿನಲ್ಲಿ ಚರ್ಚೆಯಾಗಬೇಕು.ಕುಣಿಗಲ್ ನ್ನು ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರಕ್ಕೆ ಸೇರಿಸಿದ್ದು ಯಾರು .ತುಮಕೂರು ಜಿಲ್ಲೆಯ ನಿರ್ವಹಣೆ ವಿಚಾರವಾಗಿ ನನಗೆ ಅಸಮಾಧಾನ ಇದೆ. ಸಹಕಾರಿ ಚುನಾವಣೆಯಲ್ಲಿ ಸಹಕಾರ ಸಿಕ್ಕಿಲ್ಲ. ಲಿಂಕ್ ಕೆನಾಲ್ ವಿಚಾರವಾಗಿ ಕೂಡ ಅನ್ಯಾಯವಾಗಿದೆ. ತುಮಕೂರು ಜಿಲ್ಲೆಯನಾಯಕರು ಯಾಕೆ ತಡೆ ಹಿಡಿಯುತ್ತಿದ್ದೀರಿ.ಜನನ ತಾಲೂಕಿನ ನೀರನ್ನು ಯಾಕೆ ತಡೆ ಹಿಡಿಯುತ್ತಿರಿ. ತುಮಕೂರು ಜಿಲ್ಲಾ ನಾಯಕರ ಮೇಲೆ ರಂಗನಾಥ್ ಅಸಮಾಧಾನ. ಪರಮೇಶ್ವರ್ ಅವರು ನನಗೆ ಸಹಕಾರ ಕೊಟ್ಟಿದ್ದಾರೆ. ಸದ್ಯ ಕುಣಿಗಲ್ ಬೆಂಗಳೂರು ದಕ್ಷಿಣಕ್ಕೆ ಸೇರಿಸುವ ಬಗ್ಗೆ ಚಿಂತಿಸಿಲ್ಲ. ಮುಂದೆ ಜನರ ಅಭಿಪ್ರಾಯ ಪಡೆದು ಸಿಎಂ ಮುಂದೆ ಪ್ರಸ್ತಾಪ ಮಾಡುತ್ತೇನೆ. ಅಪೆಕ್ಸ್ ಬ್ಯಾಂಕ್ ಚುನಾವಣೆ ಆಗಬೇಕಿತ್ತು. ಕಾಂಗ್ರೆಸ್ ಸರ್ಕಾರ ಇದ್ರೂ ಬಿಜೆಪಿಯವರು ಅಧ್ಯಕ್ಷರಿದ್ದಾರೆ. ಇದು ಅನ್ಯಾಯವಲ್ವಾ?. ಕಾಂಗ್ರೆಸ್ ಕಾರ್ಯಕರ್ತರನ್ನು ಅಧ್ಯಕ್ಷ ಸ್ಥಾನ ನೀಡಬೇಕು ಎಂದು ಪರೋಕ್ಷವಾಗಿ ಕೆ ಎನ್ ರಾಜಣ್ಣ ಮೇಲೆ ಅಸಮಾಧಾನ ಹೊರ ಹಾಕಿದ್ದಾರೆ.











