ಮನೆ Latest News ಮ್ಯಾನ್ ಹೋಲ್ ಚೇಂಬರ್ ಕದ್ದು ಹಣ ಸಂಪಾದನೆ ಮಾಡುತ್ತಿದ್ದ ಡಿ ಕೆ ಶಿವಕುಮಾರ್; ಡಿಕೆಶಿ ವಿರುದ್ಧ...

ಮ್ಯಾನ್ ಹೋಲ್ ಚೇಂಬರ್ ಕದ್ದು ಹಣ ಸಂಪಾದನೆ ಮಾಡುತ್ತಿದ್ದ ಡಿ ಕೆ ಶಿವಕುಮಾರ್; ಡಿಕೆಶಿ ವಿರುದ್ಧ ಕುಮಾರಸ್ವಾಮಿ ಹಿಗ್ಗಾಮುಗ್ಗಾ ವಾಗ್ದಾಳಿ

0

ಮೈಸೂರು; ಮ್ಯಾನ್ ಹೋಲ್ ಚೇಂಬರ್ ಕದ್ದು ಹಣ ಸಂಪಾದನೆ ಮಾಡುತ್ತಿದ್ದ ಡಿ ಕೆ ಶಿವಕುಮಾರ್ ಎಂದು ಡಿಕೆಶಿ ವಿರುದ್ಧ ಕುಮಾರಸ್ವಾಮಿ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು ಡಿ ಕೆ ಶಿವಕುಮಾರ್ ಜೇಡರಹಳ್ಳಿ ಬಳಿ ಈ ರೀತಿ ಕಳ್ಳತನ ಮಾಡುತ್ತಿದ್ದ .ದೇವೇಗೌಡರು ಮೊದಲ ಬಾರಿ ಶಾಸಕರಾದಾಗ ನೀವು ಹುಟ್ಟಿದ್ದರಾ ?ದೇವೇಗೌಡರ ಆಸ್ತಿ ಬಗ್ಗೆ ಪ್ರಶ್ನೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು ದೇವೇಗೌಡರು ರಾಜಕೀಯಕ್ಕೆ ಬರುವ ಮುನ್ನ ಇಂಜಿನಿಯರ್.ನಿಮ್ಮ ತಂದೆ ಕೆಂಪೇಗೌಡರು ಏನಾಗಿದ್ದರು ?ಯಾವ ನಾಲಿಗೆಯಲ್ಲಿ ನಮ್ಮ ಕುಟುಂಬದ ಬಗ್ಗೆ ಮಾತನಾಡುತ್ತೀರಾ ?ವರ್ಗಾವಣೆ ವಿಚಾರವಾಗಿ ಚರ್ಚೆ ಮಾಡಿದ ವೇಳೆ ರೇವಣ್ಣ ಸಿದ್ದರಾಮಯ್ಯ ಪರ ಮಾತನಾಡಿದ್ದರು.ಆ ಕುಟುಂಬದ ಮಕ್ಕಳನ್ನು ಜೈಲಿಗೆ ಕಳುಹಿಸಿದ್ದು ಸಿದ್ದರಾಮಯ್ಯ.ಭವಾನಿ ಅವರಿಗೆ ಹೈಕೋರ್ಟ್ ಜಾಮೀನು ನೀಡಿದರೆ ಸುಪ್ರೀಂಕೋರ್ಟ್‌ಗೆ ಹೋಗಿದ್ದೀರಾ ಶಿವಕುಮಾರ್?ಇಂತಹ ಮನೆ ಹಾಳರನ್ನು ಜನ ನಂಬುತ್ತಾರಾ ? ಎಂದು ಪ್ರಶ್ನೆ ಮಾಡಿದ್ದಾರೆ.

25 ರಿಂದ 30 ವರ್ಷ 2013 ಯಡಿಯೂರಪ್ಪ ಅವರ ಪೋಟೋ ಇಟ್ಟುಕೊಂಡು ಪೂಜೆ ಮಾಡಬೇಕು ಸಿದ್ದರಾಮಯ್ಯ. ಕಾಂಗ್ರೆಸ್ ನವರು ನನ್ನ ಯಡಿಯೂರಪ್ಪ ಹೋರಾಟದ ಫಲದಿಂದ ಅಧಿಕಾರಕ್ಕೆ ಬಂದಿರಿ.ನಿಮ್ಮ ಮುಖ ನೋಡಿ ಜನ ಮತ ನೀಡಲಿಲ್ಲ.ನನ್ನ ಯಡಿಯೂರಪ್ಪ ಅವರ ಸಂಘರ್ಷದಿಂದ ನೀವು ಅಧಿಕಾರಕ್ಕೆ ಬಂದಿರಿ.ಯಡಿಯೂರಪ್ಪ ಅವರ ಪೋಟೋ ಇಟ್ಟು ಪೂಜೆ ಮಾಡಬೇಕಾಗಿತ್ತು.ಆದರೆ ದ್ವೇಷದಿಂದ ಎಫ್ ಐ ಆರ್ ಹಾಕಿಸಿದಿರಿ.ಸುಳ್ಳು ಕೇಸು ಫಿಕ್ಸ್ ಮಾಡಿ ಜೈಲಿಗೆ ಕಳುಹಿಸಬೇಕು ಅಂತೀರಾ.ನಿಮಗೆ ನಾಚಿಕೆ ಆಗಬೇಕು ಅವರ ವಯಸ್ಸಿಗೆ ಮರ್ಯಾದೆ ಕೊಡಿ.ಸಿದ್ದರಾಮಯ್ಯ ಕೆಂಪೀರೆಗೌಡರು ಜಿ ಟಿ ದೇವೇಗೌಡರನ್ನು ನೆನೆಯುವುದಿಲ್ಲ.ಜನತಾ ಪರಿವಾರದ ಶಾಸಕರನ್ನಾದರೂ ನೆನೆಸಿಕೊಂಡರಾ ? ಎಂದು ವಾಗ್ದಾಳಿ ನಡೆಸಿದ್ದಾರೆ,

ಇನ್ನು ಡಿಕೆಶಿ ಅವರ ಅಕ್ರಮಗಳನ್ನು ಬಿಚ್ಚುತ್ತೇನೆ ಎಂಬ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ನಿಮ್ಮ ಯೋಗ್ಯತೆಗೆ ಏನು ಬಿಚ್ಚುತ್ತೀರಾ ?ವಿರೋಧ ಪಕ್ಷದ ನಾಯಕರಾಗಿ ಒಂದು ದಾಖಲೆ ಬಿಡುಗಡೆ ಮಾಡಲಿಲ್ಲ.ಯಾರದೋ ದುಡಿಮೆ ಯಾರೋ ಹುತ್ತ ಕಟ್ಟಿದಕ್ಕೆ ಬಂದು ಕುಳಿತವರು ನೀವು.ಯಡಿಯೂರಪ್ಪ ದೇವೇಗೌಡರ ಬಗ್ಗೆ ಮಾತನಾಡುತ್ತೀರಾ.ದೇವೇಗೌಡರು ಮೋದಿ ವಿರುದ್ದ ಹೇಳಿಕೆ ವೈಯುಕ್ತಿಕ ಹೇಳಿಕೆ ಅಲ್ಲ.ಇದಾದ ನಂತರ ಮೋದಿ ಭೇಟಿ ಮಾಡಿ ರಾಜೀನಾಮೆ ಕೊಡಲು ಹೋಗಿದ್ದರು.ಆದರೆ ಮೋದಿ ಅದನ್ನು ಸ್ವೀಕರಿಸದೆ ವಾಪಸ್ಸು ಕಳುಹಿಸಿದರು.ದೇವೇಗೌಡರನ್ನು ಪ್ರಧಾನಿ ಮಾಡಿದ್ದೋ ಅಂತೀರಾ ತೆಗೆದಿದ್ದು ಯಾರು?ನನ್ನನ್ನು ಸಿಎಂ ಮಾಡಿದ್ದು ಬಿ ಎಸ್ ಯಡಿಯೂರಪ್ಪ .ಅದನ್ನು ಘಂಟಾಘೋಷವಾಗಿ ಹೇಳುತ್ತೇನೆ.ಸಿದ್ದರಾಮಯ್ಯ ಜನತಾದಳ‌ ಮುಗಿಸಲು ಹೊರಟಿದ್ದರು.ಪಕ್ಷ ಉಳಿಸಲು ನಾನು ಯಡಿಯೂರಪ್ಪ ಜೊತೆ ಹೋದೆ.ಚಾಮುಂಡೇಶ್ವರಿ ಸತ್ಯವಾಗಿ ನಾನು ಯಡಿಯೂರಪ್ಪ ಅವರಿಗೆ ಅಧಿಕಾರ ಕೊಡಲು ಮುಂದಾಗಿದ್ದೆ.ನಾನು ತಪ್ಪು ಮಾಡದೆ 15 ವರ್ಷ ರಾಜಕೀಯ ವನವಾಸ ಅನುಭವಿಸಿದ್ದೇನೆ.ಪೂರ್ಣ ಮನಸಿನಿಂದ ಜೆಡಿಎಸ್ ಬಿಜೆಪಿ ಒಂದಾಗಿದೆ.ಮೋದಿ ಒಂದtವರೆ ಗಂಟೆ ಬುದ್ದಿ ಹೇಳಿದರು.ಕಾಂಗ್ರೆಸ್ ಜೊತೆ ನಿಮಗೆ ಒಳ್ಳೆ ಹೆಸರು ಬರುತ್ತಿಲ್ಲ ಅಂತಾ.ಸಿದ್ದರಾಮಯ್ಯ ಹೆಜ್ಜೆ ಹೆಜ್ಜೆಗೂ ಹಿಂಸೆ ಕೊಟ್ಟರು.ಯಡಿಯೂರಪ್ಪ ಸಿಎಂ ಆದಾಗ ನಾನು ಅಸೂಯೆ ಪಡಲಿಲ್ಲ.ನಾನು ಸಂಪೂರ್ಣ ಸಹಕಾರ ಕೊಡುವುದಾಗಿ ಹೇಳಿದ್ದೆ.ಇದಕ್ಕೆ ತಾಯಿ ಚಾಮುಂಡೇಶ್ವರಿ ಸನ್ನಿಧಾನದಲ್ಲಿ ಹೇಳುತ್ತಿದ್ದೇನೆ ಎಂದರು.

10 ವರ್ಷ ಗೂಟ ಹೊಡೆದುಕೊಂಡು ಇರುತ್ತೇವೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ನಾವು ಸರ್ಕಾರ ತೆಗೆಯುತ್ತೇವೆ ಅಂತಾ ಹೇಳಿಲ್ಲ.ಬಂಡೆ ಸಿದ್ದರಾಮಯ್ಯ ಮೇಲೆ ಬಿದ್ದರೆ ಸಿದ್ದರಾಮಯ್ಯ ಪರಿಸ್ಥಿತಿ ಏನಾಗಬೇಡ ಎಂದು ವ್ಯಂಗ್ಯ ಮಾಡಿದ್ರು.50 ಡಿನೋಟಿಫಿಕೇಶನ್ ವಿಚಾರದ ಬಗ್ಗೆ ಮಾತನಾಡಿದ ಅವರು ನಿಮ್ಮ ಯೋಗ್ಯತೆಗೆ ಸುಳ್ಳು ಹೇಳಲು ಇತಿ ಮಿತಿ ಇರಲಿ.ಅದೇನು ಇದೆ ತೆಗೆದು ತೋರಿಸಪ್ಪ ನೋಡುತ್ತೇನೆ ಎಂದರು.