ಮನೆ Latest News ಮುಡಾ ಹಗರಣ ನಡೆದೇ ಇಲ್ಲ ಅಂದರೆ ಅಧಿಕಾರಿಗಳ ಮೂಲಕ ತನಿಖೆ ಯಾಕೆ ನಡೆಸ್ತಾಯಿದ್ದೀರಿ?; ಕೇಂದ್ರ ಸಚಿವ...

ಮುಡಾ ಹಗರಣ ನಡೆದೇ ಇಲ್ಲ ಅಂದರೆ ಅಧಿಕಾರಿಗಳ ಮೂಲಕ ತನಿಖೆ ಯಾಕೆ ನಡೆಸ್ತಾಯಿದ್ದೀರಿ?; ಕೇಂದ್ರ ಸಚಿವ ಕುಮಾರಸ್ವಾಮಿ ಪ್ರಶ್ನೆ

0

ಬೆಂಗಳೂರು: ಕೇಂದ್ರ ಸಚಿವ ಕುಮಾರಸ್ವಾಮಿ ಬೆಂಗಳೂರಿನ ಜೆಡಿಎಸ್ ಕಛೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ್ರು. ಈ ವೇಳೆ ಮಾತನಾಡಿದ ಅವರು ಹೊಸ ಶಾಸಕಾಂಗ ಪಕ್ಷದ ನಾಯಕನನ್ನ ಗುರುತಿಸುವ ಜವಾಬ್ದಾರಿ ಕೊಟ್ಟಿದ್ದಾರೆ.ಸದಸ್ಯತ್ವ ನೋಂದಣಿ ಬಗ್ಗೆ ಚರ್ಚೆ ಮಾಡಿದ್ದೇವೆ.31 ಜಿಲ್ಲೆಯಲ್ಲಿ ಸದಸ್ಯತ್ವ ನೋಂದಣಿ ಬಗ್ಗೆ ಪದಾಧಿಕಾರಿಗಳಿಗೆ ಜವಾಬ್ದಾರಿ ಕೊಡಲಾಗಿದೆ ಎಂದ್ರು.

ಅಲ್ಲದೇ ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ  ಕಾಂಗ್ರೆಸ್ ನಾಯಕರು ತುಂಬಾ ಲಘುವಾಗಿ ಮತನಾಡಿದ್ರು.ಲಘುವಾಗಿ ಮತನಾಡಿದ್ದ ಕಾಂಗ್ರೆಸ್ಗೆ ನಮ್ಮ ಶಾಸಕರು ಉತ್ತರ ಕೊಟ್ಟಿದ್ದಾರೆ ಎಂದು ತಿಳಿಸಿದ್ರು. ನಿಮ್ಮ ಗಮನವನ್ನು ಮೂಡಾ ಕಡೆ ಸೆಳೆದಿದ್ದಾರೆ.ನಿನ್ನೆ ಭೈರತಿ ಸುರೇಶ್ ಹಗರಣವೆ ಆಗಿಲ್ಲ ಎಂದಿದ್ದಾರೆ. ಹಗರಣವನ್ನು ದೊಡ್ಡ ಮಟ್ಟದಲ್ಲಿ ತೆರೆದಿಡ್ತಿದ್ದಾರೆ ಎಂದಿದ್ದಾರೆ.ಹಗರಣ ನಡೆದಿಲ್ಲ ಅಂದ್ರೆ ಅಧಿಕಾರಿಗಳನ್ನು ಇಟ್ಕೊಂಡು ತನಿಖೆ ಏಕೆ ನಡೆಸ್ತಿದ್ದಾರೆ ಎಂದು ಪ್ರಶ್ನೆ ಮಾಡಿದ್ದಾರೆ.

ಹೆಲಿಕಾಪ್ಟರ್ ನಲ್ಲಿ ಹೋಗಿ ಯಾವ ಯಾವ ದಾಖಲೆ ತುಂಬಿಕೊಂಡು ಬಂದಿದ್ದೀರಿ.ರೀಡು ಹಗರಣ ಎಲ್ಲಿಗೆ ತಂದಿದ್ದೀರಿ, ಅದರ ಕಥೆ ಏನಾಯ್ತು.62 ಕೋಟಿ ಮೂಡಾದವರೆ ಕೊಡಬೇಕಂತೆ ಸಿಎಂಗೆ.ರೆಡ್ ಕಾರ್ಪೆಟ್ ಹಾಕಿ 14 ಸೈಟ್ ಕೊಟ್ಟಿದ್ದಾರೆ, ತಪ್ಪೇ ಮಾಡಿಲ್ವಂತೆ ಎಂದು ವ್ಯಂಗ್ಯ ಮಾಡಿದ್ದಾರೆ.

ಮುಡಾದವರು ತಪ್ಪು ಮಾಡಿಕೊಂಡು, ರೆಡ್ ಕಾರ್ಪೆಟ್ ಹಾಕಿ ಸಿಎಂ ಗೆ‌  14 ಸೈಟ್ ಕೊಟ್ಟಿದ್ದಾರೆ.ಏನು ಇವ್ರು ತಪ್ಪೇ ಮಾಡಿಲ್ವಂತೆ ನನ್ನ ಜಮೀನು ತಗೊಂಡಿದ್ದು ತಪ್ಪಾ ಅಂತಾರೆ.ಇತ್ತೀಚೆಗೆ ನಾನು ಭ್ರಷ್ಟಾಚಾರದ‌ ಬಗ್ಗೆ ಚರ್ಚೆ ಮಾಡಿಲ್ಲ.ಈ‌ ಹಗರಣ ನನಗೆ ಕಳೆದ ವರ್ಷವೇ ಗಮನಕ್ಕೆ ಬಂದಿತ್ತು.ಇದೇ ಅಧಿಕಾರಿ ಮುಡಾದಲ್ಲಿ ಆಗಿರುವ ಹಗರಣದ ಬಗ್ಗೆ,ಎಷ್ಟು ಬಾರಿ ಕಡತಗಳನ್ನು ನಗರಾಭಿವೃದ್ಧಿ ಗೆ‌ ಕಳುಹಿಸಿದ್ದಾರೆ.ಅವ್ರು ಕಳುಹಿಸಿದ ಮಾಹಿತಿ ಗಳನ್ನು ಎಲ್ಲಿಗೆ ತಗೊಂಡು ಹೋಗಿ ಇಟ್ಟಿದ್ರು. ಸಿಎಂ 62 ಕೋಟಿ ಅಂತಾ‌ ಬೆಲೆ ಕೊಟ್ಟಿದ್ದಾರೆ.ಇದರ‌ ಬಗ್ಗೆ ದೊಡ್ಡ ಬ್ರಹ್ಮಾಂಡ‌‌ ಭ್ರಷ್ಟಾಚಾರವೇ ಇದೆ.ಇದರ‌ ಬಗ್ಗೆ ನಾನೇನು ಚರ್ಚೆ ಮಾಡೋಕೆ ಅವಶ್ಯಕತೆ ಇಲ್ಲ.ಅವರ ಸರ್ಕಾರ ದಲ್ಲಿರುವ ಸಚಿವರೇ ಮಾಡ್ತಾರೆ.ನನ್ನ‌ ಏನೋ ಒಬ್ಬರು ಹುಚ್ಚರು ಅಂದಿದ್ದೀರಲ್ಲ.ನಾನು ಯಾವುದೋ ಆಸ್ಪತ್ರೆ ಗೆ ಹೋಗಿ ಚಿಕಿತ್ಸೆ ಪಡೆದುಕೊಂಡು‌ ಬರುವ ಅವಶ್ಯಕತೆ ಇಲ್ಲ.ನಾನು ಈಗಾಗಲೇ ಹೃದಯ ಚಿಕಿತ್ಸೆ ಪಡೆದು ಬಂದಿದ್ದೇನೆ ನಾನು ಚೆನ್ನಾಗಿ ಯೇ ಇದ್ದೇನೆ ಎಂದು ಹೆಸರು ಹೇಳದೇ ಡಿಸಿಎಂ ಡಿಕೆಶಿಗೆ ಹೆಚ್ ಡಿ ಕುಮಾರಸ್ವಾಮಿ ತಿರುಗೇಟು ಕೊಟ್ಟಿದ್ದಾರೆ.

ಇನ್ನು ಸಿಪಿ ಯೋಗೇಶ್ವರ್ ಚನ್ನಪಟ್ಟಣದಲ್ಲಿ ನಾನೇ ಅಭ್ಯರ್ಥಿ ಎಂಬ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು 3 ಕ್ಷೇತ್ರದ ಉಪ ಚುನಾವಣೆ ಇದೆ.ಚನ್ನಪಟ್ಟಣದಲ್ಲಿ ನಾನೇ ಶಾಸಕ ಇದ್ದೆ, ಜೆಡಿಎಸ್ ಕ್ಷೇತ್ರ ಅದು.ನನ್ನ ಕಾರ್ಯಕರ್ತರ ಅಭಿಪ್ರಾಯ ತಗೊಬೇಕು, ಆಮೇಲೆ ಮುಂದುವರಿಬೇಕು.ನಾನೇ ಏಕಪಕ್ಷೀಯ ನಿರ್ಧಾರ ಕೈಗೊಳ್ಳೋಕೆ ಆಗಲ್ಲ.ನಾನು ಅವರಿಗೂ ಹೇಳಿದ್ದೀನಿ ನಮ್ಮ ಕಾರ್ಯಕರ್ತರನ್ನು ಭೇಟಿ ಮಾಡಿ ವಿಶ್ವಾಸಕ್ಕೆ ತಗೊಳಿ ಅಂತ ಹೇಳಿದ್ದೀನಿ.ನಾನು ಬಿಜೆಪಿ ಹೈಕಮಾಂಡ್, ರಾಜ್ಯದ ನಾಯಕರ ಜೊತೆ ಚರ್ಚೆ ಮಾಡಿಲ್ಲ.ನನ್ನ ಚನ್ನಪಟ್ಟಣದ ಕಾರ್ಯಕರ್ತರ ಅಭಿಪ್ರಾಯ ತಗೊಂಡೇ ನಿರ್ಧಾರ ಮಾಡೋದು.ಸದ್ಯ ಯಾರಿಗೂ ಟಿಕೆಟ್ ಫೈನಲ್ ಮಾಡಿಲ್ಲ.ಅನುಸೂಯ ಸೇರಿ ಇನ್ನೂ ಹಲವು ಹೆಸರುಗಳು ಕೇಳಿಬರ್ತಿವೆ, ನೋಡೋಣ ಮುಂದೆ ಯಾವ್ಯಾವ ಹೆಸರು ಬರ್ತಾವೋ.ಇನ್ನೂ ಸಮಯ ಇದೆ ಚರ್ಚೆ ಮಾಡೋಣ ಬಿಡಿ ಎಂದು ಹೇಳಿದ್ದಾರೆ.