ಮನೆ Latest News ಶ್ರೀರಾಮುಲು ಅವರ ವಿಚಾರದಲ್ಲಿನ ಬೆಳವಣಿಗೆ ಬೇಸರ ತಂದಿದೆ; ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಹೇಳಿಕೆ

ಶ್ರೀರಾಮುಲು ಅವರ ವಿಚಾರದಲ್ಲಿನ ಬೆಳವಣಿಗೆ ಬೇಸರ ತಂದಿದೆ; ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಹೇಳಿಕೆ

0

ಬೆಂಗಳೂರು; ಶ್ರೀರಾಮುಲು ಅವರ ವಿಚಾರದಲ್ಲಿನ ಬೆಳವಣಿಗೆ ಬೇಸರ ತಂದಿದೆ ಎಂದು ಮಾಜಿ ಶಾಸಕ ಕುಮಾರ್ ಬಂಗಾರಪ್ಪ ಹೇಳಿಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಈ ಬಗ್ಗೆ ಮಾತನಾಡಿದ ಅವರು ತಪ್ಪು ಸರಿಗಳ ಬಗ್ಗೆ ನಾನು ಮಾತಾಡುತ್ತಿಲ್ಲ.ಅದನ್ನು ಎಲ್ಲಿ ಕೂತಿದ್ದರೋ ಅಲ್ಲೇ ಬಗೆ ಹರಿಸಿಕೊಳ್ಳಬೇಕಿತ್ತು ಎಂದಿದ್ದಾರೆ.ರಿಸಲ್ಟ್ ಬಂದ ನಂತರ ಯಾರದ್ದು ತಪ್ಪು ಯಾರದ್ದು ಸರಿ ಅಂತ ಚರ್ಚೆ ಆಗುವುದು ಸಹಜ.ಆದರೆ ಕೋರ್ ಕಮಿಟಿಯಲ್ಲಿ ಚರ್ಚೆ ನಡೆದಿರುವುದು ಅಲ್ಲೇ ಇರಬೇಕಿತ್ತು.ಕೋರ್ ಕಮಿಟಿ ಸಭೆಯಲ್ಲಿ ನಡೆದ ಚರ್ಚೆ ಬಹಿರಂಗವಾಗಿ ಗೊಂದಲ ಉಂಟಾಗಿದೆ ಎಂದಿದ್ದಾರೆ.

ವಕ್ಪ್ ಕಾಯ್ಡೆ ತಿದ್ದುಪಡಿ ಕುರಿತ ಜೆಪಿಸಿ ವಿಚಾರದ ಬಗ್ಗೆ ಮಾತನಾಡಿದ ಅವರು ನಮ್ಮ ತಂಡದಿಂದ ನಡೆದ ವಕ್ಪ್ ಹೋರಾಟಕ್ಕೆ ಅದ್ಭುತ ಪ್ರತಿಫಲ‌ ಸಿಕ್ಕಿದೆ.ಜೆಪಿಸಿಯಲ್ಲಿ ವಕ್ಪ್ ತಿದ್ದುಪಡಿಗಳನ್ನು ಯಶಸ್ವಿಯಾಗಿ ಮಾಡಲಾಗಿದೆ.ಜಗದಾಂಬಿಕಾ ಪಾಲ್ ಅವರು ಎರಡು ಬಾರಿ ಚರ್ಚೆಗೆ ನಮಗೆ ಅವಕಾಶ ಕೊಟ್ಟಿದೆ.ಜಗದಾಂಬಿಕಾ ಪಾಲ್ ಅವರು ನಾವು ಕೊಟ್ಟ ದಾಖಲಾತಿಗಳನ್ನು ಪಾರದರ್ಶಕತೆಯಿಂದ ಪರಿಶೀಲನೆ ಮಾಡಿದ್ದಾರೆ ಎಂದರು.

ರಾಜ್ಯದಲ್ಲಿ ಬಿಜೆಪಿ ಬೂತ್ ಮಟ್ಟದ ಸಂಘಟನಾ ಪರ್ವ ನಡೆಯುತ್ತಿದೆ. ಅದು ಸರಿಯಾಗಿ ನಡೆಯಬೇಕಿತ್ತು.ರಾಧಾ ಮೋಹನ್ ದಾಸ್ ಅಗರವಾಲ್ ಬಂದ ವೇಳೆ ಮಾರ್ಗದರ್ಶನ ಮಾಡಿದ್ದಾರೆ ಅಂತಾ ಅಂದುಕೊಂಡಿದ್ದೆವು.ಆದರ ಬೂತ್, ಮಂಡಲ ಮಟ್ಟದಲ್ಲಿ ಗೊಂದಲಗಳು ಶುರುವಾಗಿವೆ.ಏಕಾಏಕಿ ಬೆಳಗ್ಗೆ ಬಂದು ಅಧ್ಯಕ್ಷರನ್ನು ಘೋಷಣೆ ಮಾಡುವ ಕೆಲಸ ಆಗುತ್ತಿದೆ. ಸಂಬಂಧಪಟ್ಟಂತಹವರು ಇದರ ಬಗ್ಗೆ ಸೂಕ್ತ ಗಮನ ಹರಿಸಬೇಕು.ಜನವರಿ 31 ರಂದು ನಾವು ಎಲ್ಲಾ ನಾಯಕರು ಸಭೆ ಸೇರಿ ಚರ್ಚೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ನೇಮಕಾತಿ ಬಗ್ಗೆ ವಿಪಕ್ಷ ನಾಯಕರು ಎಲ್ಲರ ಜೊತೆಯೂ ಚರ್ಚೆ ಮಾಡಿ ಮಾಡಬೇಕು.ವರಿಷ್ಠರು ‌ಸೂಕ್ತ ಕ್ರಮ ತೆಗೆದುಕೊಳ್ಳಲು ಸಮಯ ಬಂದಿದೆ ಅನ್ನಿಸುತ್ತದೆ.ರಾಜ್ಯಾಧ್ಯಕ್ಷ ಸ್ಥಾನಕ್ಕೆ ನಮ್ಮ ತಂಡದಿಂದ ಸ್ಫರ್ಧೆ ಬಗ್ಗೆ ಜನವರಿ 31 ರಂದು ಚರ್ಚೆ ಮಾಡುತ್ತೇವೆ.ಸೂಕ್ತವಾಗಿ‌ ಪಕ್ಷ ಕಟ್ಟುವ ಸಾಮರ್ಥ್ಯ ಇರುವವರನ್ನು ಅಧ್ಯಕ್ಷ ಮಾಡಿದರೆ ನಾವು ಒಪ್ಪಿಕೊಳ್ಳುತ್ತೇವೆ. ರಾಮುಲುಗೆ ಕಾಂಗ್ರೆಸ್ ಪಕ್ಷದತ್ತ ಹೋಗುವ ವಿಚಾರ ಸತ್ಯಕ್ಕೆ ದೂರ ಎಂದ ಅವರು ಶಿಕಾರಿಪುರದಲ್ಲಿ ಪಿಎಲ್ ಡಿ ಬ್ಯಾಂಕ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲುವು ವಿಚಾರದ ಬಗ್ಗೆ ಮಾತನಾಡಿ ಲೋಕಸಭಾ ಚುನಾವಣೆಯಲ್ಲಿ  ಕೂಡಾ ಕಡಿಮೆ‌ ಬಂದಿತ್ತು. ರಾಜ್ಯಾಧ್ಯಕ್ಷರ ಕ್ಷೇತ್ರದಲ್ಲೇ ಆಗಿದ್ದು ದುರದೃಷ್ಟಕರ.ಗೊಂದಲಗಳನ್ನು ಹಾಕಿಕೊಂಡು ಹೋದಾಗ ಈ ರೀತಿ ಆಗುತ್ತದೆ.ಇದನ್ನು ವಿಶ್ಲೇಷಣೆ ಮಾಡಬೇಕಾಗುತ್ತದೆ.ರಾಜ್ಯಾಧ್ಯಕ್ಷರು ಅಂತಾ ಅಲ್ಲಿನ ಬೆಳವಣಿಗೆಯನ್ನು ಬಿಟ್ಟು ಬಿಟ್ಟರಾ ಗೊತ್ತಿಲ್ಲ.ಅವರು ಕ್ಷೇತ್ರದ ಭದ್ರತೆಯನ್ನು ಕೂಡಾ ನೋಡಿದರೆ ಉತ್ತಮ. ಅವರು ಕ್ಷೇತ್ರ ಭದ್ರ ಮಾಡಿಕೊಳ್ಳುವ ಅವಶ್ಯಕತೆ ಇದೆ, ಅದನ್ನು ಮೊದಲು ಮಾಡಲಿ. ಅಥವಾ ರಾಜ್ಯಾಧ್ಯಕ್ಷ ಜವಾಬ್ದಾರಿ ಬಿಟ್ಟು ಪೂರ್ಣ‌ ಪ್ರಮಾಣದಲ್ಲಿ ಅಲ್ಲಿ ಹೋಗಿ ಭದ್ರ ಮಾಡಿಕೊಳ್ಳಲಿ ಆತ್ಮಾವಲೋಕನ‌ ಸಭೆ ಆಗಿರುತ್ತಿದ್ದರೆ ಈ ರೀತಿಯ ಗೊಂದಲಗಳು ಆಗುತ್ತಿರಲಿಲ್ಲ ಎಂದಿದ್ದಾರೆ.

ವಿಜಯಪುರ, ಬೀದರ್, ದಾವಣಗೆರೆಯಲ್ಲಿ ಅಧ್ಯಕ್ಷರನ್ನು ಸರಿಯಾಗಿ ನೇಮಕ ಮಾಡಿಲ್ಲ.ಬೂತ್ ಮಟ್ಟದ ಅಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರ ಚುನಾವಣೆ ಸರಿಯಾಗಿ ನಡೆದಿಲ್ಲ. ನೇಮಕವನ್ನು ಎಲ್ಲರ ಅಭಿಪ್ರಾಯ ಪಡೆದು ಮಾಡಬೇಕು ಎಂದ್ರು. ಇನ್ನು ಕುಂಭಮೇಳ ಹಾಗೂ ಅಮಿತ್ ಶಾ ಬಗ್ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ ಎಐಸಿಸಿ ಅಧ್ಯಕ್ಷರು ಈ ರೀತಿ ಹೇಳುವುದು ಸರಿಯಲ್ಲ.ಅವರ ಹೇಳಿಕೆ ಬೇಸರ ತರಿಸಿದೆ.ಅವರು ಹಿರಿಯ‌ ನಾಯಕರಾಗಿ ಇಂತಹ ಹೇಳಿಕೆ ನೀಡಬಾರದಿತ್ತು.ಕುಂಭ ಮೇಳಕ್ಕೆ ಕಾಂಗ್ರೆಸ್‌ನ ಅನೇಕ ನಾಯಕರು ಕೂಡ ಹೋಗಿ ಬಂದಿದ್ದಾರೆ ಎಂದ್ರು.

ಕುಂಭ ಮೇಳದಲ್ಲಿ ಕಾಲ್ತುಳಿತ ವಿಚಾರದ ಬಗ್ಗೆ ಇದೇ ಪ್ರತಿಕ್ರಿಯಿಸಿದ ಅವರು ಪ್ರಯಾಗ್‌ರಾಜ್‌ನಲ್ಲಿ ಕಾಲ್ತುಳಿತ ಬಹಳ ಬೇಸರ ಆಯಿತು. ಅನೇಕ ಭಕ್ತರು ಸಾವನ್ನಪ್ಪಿದ್ದಾರೆ. ಭಕ್ತಾದಿಗಳಿಗೆ ಸರಿಯಾಗಿ ವ್ಯವಸ್ಥೆ ಮಾಡಿಕೊಡಬೇಕು.ಕೇಂದ್ರ ಹಾಗೂ ರಾಜ್ಯ ಸರ್ಕಾರ ಅವರ ನೆರವಿಗೆ ಧಾವಿಸಬೇಕು. ನೆರೆಯ ರಾಜ್ಯಗಳು ಕೂಡ ಸಹಾಯಕ್ಕೆ ಧಾವಿಸಬೇಕು ಎಂದರು.