ಬೆಂಗಳೂರು; ದೊಡ್ಡವರ ಮಕ್ಕಳಾಗಿ ಹುಟ್ಟಿದ್ಮೇಲೆ ನಾವು ದೊಡ್ಡವರಾಗೊಲ್ಲ ಎಂದು ಮಾಜಿ ಸಚಿವ ಕುಮಾರ ಬಂಗಾರಪ್ಪ ವಿಜಯೇಂದ್ರಗೆ ಟಾಂಗ್ ಕೊಟ್ಟಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು ನಾವು ಯಾರೂ ವಿಚಲಿತರಾಗಿಲ್ಲ. ಚುನಾವಣೆ ಪ್ರಕ್ರಿಯೆ ಆಗಲಿ. ಯತ್ನಾಳ್ ಉತ್ತರ ಕರ್ನಾಟಕ ಭಾಗದವರು. ಅವರ ಧ್ವನಿಯಲ್ಲಿ ಏರಿಳಿತ ಇರಬಹುದು. ನಾವು ಬಿಜೆಪಿ ಜೊತೆಗೆ ಇದ್ದೇವೆ ಎಂದರು. ತಾವು ಆಕಾಂಕ್ಷಿನಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಸಮರ್ಥನೆ ಮಾಡಿಕೊಳ್ಳುವ ಕೆಪಾಸಿಟಿ. ದೊಡ್ಡವರ ಮಕ್ಕಳಾಗಿ ಹುಟ್ಟಿದ್ಮೇಲೆ ನಾವು ದೊಡ್ಡವರಾಗೊಲ್ಲ. ರಾಜಕೀಯವಾಗಿ ನಮ್ಮ ಮಾತು, ನಡವಳಿಕೆ ಪೂರಕವಾಗಿರಬೇಕು .ಯಾರ ಮಕ್ಕಳಾದ್ರೂ ಅದು ಪರಂಪರೆ. ಅದು ಬಳುವಳಿಯಾಗಿ ಕೊಟ್ಟಂತಹದ್ದು ಅಲ್ಲ. ಹಿಂದುಳಿದ, ದಲಿತ ಪರ ಮಾಡಿಕೊಳ್ಳುವ ವಿಚಾರ ಇದೆ.ದೇವೇಗೌಡರು, ಕುಮಾರಸ್ವಾಮಿ ನಮ್ಮ ಪಕ್ಷದ ಜೊತೆಗಿದ್ದಾರೆ. ಹಿಂದುಳಿದ ಮತ್ತು ದಲಿತರನ್ನ ಮಣ್ಣನೆಗೆ ತೆಗೆದುಕೊಳ್ಳುವುದು ಇದೆ.ಇದರ ಸಾಧಕ ಬಾಧಕಗಳನ್ನ ನೋಡಬೇಕು ಎಂದರು.
ಫೆ.20 ರಂದು ನಾವೆಲ್ಲ ಸಭೆ ಸೇರಿದ್ವಿ. ಬಹಳಷ್ಟು ವಿಚಾರದ ಬಗ್ಗೆ ಚರ್ಚೆ ಆಯ್ತು. ವಕ್ಫ್ ವಿಚಾರವಾಗಿ ಚರ್ಚೆ ಮಾಡಿದ್ವಿ.ನಮ್ಮ ಮುಖಂಡರು, ಪಕ್ಷದ ಹಿರಿಯ ನಾಯಕರು ಸೇರಿ ರಾಜಕೀಯ ವಿದ್ಯಮಾನ, ರಾಷ್ಟ್ರದ ಅನೇಕ ವಿಚಾರಗಳು ಚರ್ಚೆ ಆಗಿದೆ.ವಕ್ಫ್ ವಿಚಾರ ಬಹಳಷ್ಟು ಮಾರ್ಗದರ್ಶನ ಮಾಡಿದೆ. ಹಿಂದೂಗಳನ್ನ ಹತ್ತಿರ ತರುವ ಹೋರಾಟ ಆಗಿದೆ.ಜೆಪಿಸಿ ವರದಿ ಮಂಡನೆಯಾಗಿದೆ, ಮುಂದೆ ಕೇಂದ್ರ ಸರ್ಕಾರಕ್ಕೆ ಒತ್ತಡ ಮಾಡಬೇಕಿದೆ. ದೊಡ್ಡ ಆಸ್ತಿ ಇಡೀ ರಾಷ್ಟ್ರದ ರೈತರಿಗೆ ಒದಗಿಸಬೇಕು ಎಂದು ತಿಳಿಸಿದ್ರು,
ನುಸುಳುಕೋರರ ವಿರುದ್ಧ ಹೋರಾಟ ಮಾಡಬೇಕಿದೆ. 40 ಲಕ್ಷದಷ್ಟು ಜನ ಕರ್ನಾಟಕದಲ್ಲಿ ಇದ್ದಾರೆ. ಇದು ಪ್ರಾಥಮಿಕ ಅಂಕಿ ಅಂಶ ಅಷ್ಟೇ. ವೀಸಾ ಅವಧಿ ಮುಗಿದವರು, ಪಾಕಿಸ್ತಾನ್, ನೇಪಾಳ್ ಬೇರೆ ದೇಶದವರು ಇದ್ದಾರೆ.ಇಲ್ಲಿನ ಸಮಸ್ಯೆಗಳ ಅವರು ಮಾಹಿತಿ ನೀಡುತ್ತಿರಬಹುದು. ಯೂರೋಪ್ ಸಮಸ್ಯೆ ನಿಮಗೆಲ್ಲಾ ಗೊತ್ತಿದೆ.ಪ್ಯಾಲಸ್ಟ್ರೀನ್ ಬಗ್ಗೆ ದೊಡ್ಡ ಮಟ್ಟದಲ್ಲಿ ಇದೆ. ನಿವೃತ್ತ ಪೊಲೀಸರು, ನಿವೃತ್ತ ಸೆಂಟ್ರಲ್ ಏಜೆನ್ಸಿ.ಮತಕ್ಕಾಗಿಯೇ ಇವರನ್ನ ರಕ್ಷಣೆ ಮಾಡೋಕೆ ಹೋಗಿದ್ದಾರೆ,.ಇದರಿಂದ ಕರ್ನಾಟಕಕ್ಕೆ ಕುತ್ತು ಬರಬಹುದು. ಈ ಹಿಂದಿನ ಬ್ಲಾಸ್ಟ್ ಗಳನ್ನೂ ಗಮನಿಸಿದ್ದೇವೆ ಎಂದು ಎಚ್ಚರಿಸಿದ್ರು.
ಕಾನೂನುಬಾಹಿರವಾಗಿ ಆಧಾರ್ ಕಾರ್ಡ್ ಇಟ್ಟಿಕೊಂಡೇ ಇಲ್ಲಿದ್ದಾರೆ. ಒನ್ ನೇಷನ್ ಒನ್ ಎಲೆಕ್ಷನ್ ಬಗ್ಗೆಯೂ ಚರ್ಚೆ ಮಾಡಿದ್ದೀವಿ. ಸಿದ್ದರಾಮಯ್ಯ, ಡಿಕೆಶಿ ರಾಜಕೀಯವಾಗಿ ಏನೇ ಹೇಳಬಹುದು. ಆದರೆ ನಾನು ಮಾತನಾಡುವುದಿಲ್ಲ. ದೇವರು ಬಂದ್ರೂ ಬೆಂಗಳೂರಿನ ಗುಂಡಿ ಮುಚ್ಚಿಕೆ ಆಗೊಲ್ಲ ಅಂತಾರೆ. ವಾಗ್ದಾನ ಮಾಡಿದ್ದಾರೆ, ಚುನಾವಣೆಗೂ ಮುನ್ನ ಬೆಂಗಳೂರನ್ನ ಹಾಗೆ ಮಾಡ್ತೀವಿ. ಹೀಗೆ ಮಾಡ್ತೀವಿ ಅಂತ ಭರವಸೆ ಕೊಟ್ರಿ ಏನಾಯ್ತು?. KSRTC, KPTCL ಸಂಸ್ಥೆಗಳು ನಷ್ಟಕ್ಕೆ ಇಳಿದಿದೆ. ಕರ್ನಾಟಕ ರಾಜ್ಯ ಹಾದಿ ತಪ್ಪಿದೆ. ಅಧೋಗತಿಗೆ ಸಿಎಂ, ಡಿಸಿಎಂ ತೆಗೆದುಕೊಂಡು ಹೋಗ್ತಾರೆ. ರಾಜ್ಯ ಸರ್ಕಸರ ಸ್ಕೀಂ ಹಾಕಿ ಕೂತುಕೊಂಡಿದೆ. ಜಿಲ್ಲಾ, ತಾಲ್ಲೂಕು ಪಂಚಾಯ್ತಿ ಚುನಾವಣೆ ವೇಳೆ ಗ್ಯಾರೆಂಟಿ ಹಣ ಬಿಡುಗಡೆ ಮಾಡ್ತಾರೆ. ದೆಹಲಿ ಇದಕ್ಕೆ ಸ್ಪಷ್ಟ ಉದಾಹರಣೆ. ದೆಹಲಿ ರಾಜಕೀಯ ಸ್ಥಿತಿ ಇಲ್ಲಿ ಆಗಬಹುದು.ಅಲ್ಲಿ ಗ್ಯಾರೆಂಟಿಯಿಂದ ಏನಾಯ್ತು ಇಲ್ಲೂ ಅದೇ ರೀತಿ ಆಗುತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಾಮಾನ್ಯ ಸಿವಿಲ್ ಕೋಡ್, ಸಿವಿಲ್ ಲಾ ಬಗ್ಗೆ ಚರ್ಚೆ ಆಗಿದೆ. ಕೇಂದ್ರದ ನಾಯಕರಿಗೆ ಎಲ್ಲ ವಿಚಾರವನ್ನ ತಿಳಿಸಿದ್ದೇವೆ. ಅಕ್ರಮ ನುಸುಳುಕೋರರ ವಿರುದ್ಧ ಅಭಿಯಾನ ಈಗಾಗಲೇ ಆರಂಭವಾಗಿದೆ. 196 ಜನ ಮಾತ್ರ ಇದ್ದಾರೆ ಅಂತ ಗೃಹ ಸಚಿವರು ಹೇಳಿದ್ದಾರೆ. ಕಾರ್ಮಿಕರವಾಗಿ ಬಂದವರು, ವೋಟರ್ ಆಗಿದ್ದಾರೆ. ಈಗಾಗಲೇ ಅವರು ಪಾಲಿಕೆ ಸದಸ್ಯರಾಗಲು ಓಡಾಡುತ್ತಿದ್ದಾರೆ. ಇವರು ದೊಟ್ಟ ಕಂಟವಾಗಬಹುದು ಎಂದಿದ್ದಾರೆ.