ಹೊಸಪೇಟೆ ; ತುಂಗಭದ್ರಾ ಅಣೆ ಕಟ್ಟು 19 ನೇ ಚೈನ್ ಲಿಂಕ್ ಕಟ್ ಆದ ಹಿನ್ನೆಲೆಯಲ್ಲಿ ತುರ್ತಾಗಿ ಸ್ಟಾಪ್ ಗೇಟ್ ನಿರ್ಮಾಣ ಕಾರ್ಯದಲ್ಲಿ ತೊಡಗಿ ಯಶಸ್ವಿ ಯಾದ ಕಾರ್ಮಿಕರಿಗೆ ಅಭಿನಂದನಾ ಕಾರ್ಯ.ಕ್ರಮ ಹಮ್ಮಿಕೊಳ್ಳಲಾಗಿತ್ತು.
ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರ ಸೂಚನೆ ಮೇರೆಗೆ ಕಂಪ್ಲಿ ಶಾಸಕ ಗಣೇಶ್, ವಖ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಇಮಾಮಿ ನಿಯಾಜ್ ಹಾಗೂ ಮುಖಂಡ ವಿಜಯ ಕುಮಾರ್ ಸ್ವಾಮಿ ಅವರು ಜಿಲ್ಲಾಧಿಕಾರಿಗಳ ಉಪಸ್ಥಿತಿ ಯಲ್ಲಿ ತುಂಗಭದ್ರಾ ಅಣೆಕಟ್ಟೆ ಗೆ ಸ್ಟಾಪ್ ಗೇಟ್ ಅಳವಡಿಕೆ ಕೆಲಸದಲ್ಲಿ ಹಗಲಿರುಳು ಶ್ರಮಿಸಿದ 20 ಪ್ರಮುಖ ಕಾರ್ಮಿಕ ರಿಗೆ ತಲಾ 50 ಸಾವಿರ ರೂ. ನಗದು ನೀಡಿ ಸನ್ಮಾನ ಮಾಡಿದರು. ಸ್ಟಾಪ್ ಗೇಟ್ ಅಳವಡಿಕೆ ಕಾರ್ಯ ಯಶಸ್ವಿ ಗೊಳಿಸಿ ನಿಮಗೆಲ್ಲ ವೈಯಕ್ತಿಕವಾಗಿ ಬಹುಮಾನ ನೀಡುತ್ತೇನೆ ಎಂದು ಸಚಿವರು ಮಾತು ಕೊಟ್ಟಿದ್ದರು.
ಅದರಂತೆ ತಮ್ಮ ಅನುಪಸ್ಥಿತಿ ಯಲ್ಲೂ ಶಾಸಕ ಗಣೇಶ್ ಅವರಿಗೆ ಜವಾಬ್ದಾರಿ ವಹಿಸಿ ವೈಯಕ್ತಿಕ ವಾಗಿ ಹಣ ಕಳುಹಿಸಿಕೊಟ್ಟು ಕೊಟ್ಟ ಮಾತಿನಂತೆ ಭರವಸೆ ಈಡೇರಿಸಿದ್ದಾರೆ.
ಸ್ಟಾಪ್ ಗೇಟ್ ನಿರ್ಮಾಣ ಕಾರ್ಯದಲ್ಲಿ ತೊಡಗಿದ ಕಾರ್ಮಿಕರಿಗೆ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ಅವರು ಕೊಟ್ಟ ಮಾತಿನಂತೆ ನಡೆದುಕೊಡಿದ್ದಾರೆ. ನಾಲ್ಕು ದಿನ ಇಲ್ಲೇ ವಾಸ್ತವ್ಯ ಹೂಡಿ ಸ್ಟಾಪ್ ಗೇಟ್ ಅಳವಡಿಕೆ ಯಾಗುವವರೆಗೆ ಇದ್ದು ಮಾರ್ಗದರ್ಶನ ನೀಡಿದ ಅವರ ಕಾರ್ಯ ಶ್ಲಾಘನೀಯ. ಜತೆಗೆ ಶ್ರಮಿಕ ವರ್ಗದ ಬಗ್ಗೆ ಅವರಿಗೆ ಇರುವ ಕಾಳಜಿಗೆ ಕೃತಜ್ಞತೆ ಗಳು. ಇಂತಹ ಸಚಿವರನ್ನು ನಾನು ಜೀವ ಮಾನದಲ್ಲಿ ನೋಡಿಲ್ಲ. ಇದೊಂದು ಇತಿಹಾಸ. ಎಂದು ಕಂಪ್ಲಿ ಶಾಸಕ ಗಣೇಶ್ ಹೇಳಿದ್ದಾರೆ.
ಇನ್ನು ವಕ್ಫ್ ಬೋರ್ಡ್ ಅಧ್ಯಕ್ಷ ಅನ್ವರ್ ಬಾಷಾ ಮಾತನಾಡಿ ಅಣೆಕಟ್ಟು ಸ್ಟಾಪ್ ಗೇಟ್ ಅಳವಡಿಕೆ ಗೆ ಶ್ರಮಿಸಿದ ಕಾರ್ಮಿಕರನ್ನು ಗೌರವಿಸುವ ದೊಡ್ಡ ಗುಣ ಜಮೀರ್ ಅಹಮದ್ ಖಾನ್ ಅವರದು ನಾಲ್ಕು ಜಿಲ್ಲೆಯ ರೈತರ ಆತಂಕ ಇಂದು ದೂರವಾಗಿದೆ ಎಂದರು.
ಇನ್ನು ಜಿಲ್ಲಾಧಿಕಾರಿ ದಿವಾಕರ್ ಅರು ಮಾತನಾಡುತ್ತಾ ಜಿಲ್ಲೆಯ ಇತಿಹಾಸದಲ್ಲಿ ಇದೊಂದು ಅಪೂರ್ವ ದಿನ. ಸ್ಟಾಪ್ ಗೇಟ್ ಯಶಸ್ವಿ ಅಳವಡಿಕೆ ಮೂಲಕ ಇಡೀ ದೇಶಕ್ಕೆ ಇಲ್ಲಿಂದ ಸಂದೇಶ ರವಾನೆ ಆಗಿದೆ. ಇನ್ಮುಂದೆ ಎಲ್ಲೇ ಸಮಸ್ಯೆ ಆದರೆ ಹೊಸಪೇಟೆ ಅವರನ್ನು ಕರೆಸಿಕೊಳ್ಳುತ್ತಾರೆ. ಕನ್ನಯ್ಯ ನಾಯ್ಡು ನೇತೃತ್ವದ ತಂಡದ ಕಾರ್ಯ ಶ್ಲಾಘನೀಯ ಎಂದು ತಂಡಕ್ಕೆ ಅಭಿನಂದನೆಗಳನ್ನು ಸಲ್ಲಿಸಿದರು.
ಟಿ ಬಿ ಡ್ಯಾಂಗೆ ಸ್ಟಾಪ್ ಗೇಟ್ ಅಳವಡಿಕೆ ಮೊದಲ ಹಂತದ ಯಶಸ್ವಿ
ಹೊಸಪೇಟೆ : ತುಂಗಭದ್ರಾ ಅಣೆ ಕಟ್ಟು ಚೈನ್ ಲಿಂಕ್ ಕಟ್ ಹಿನ್ನೆಲೆಯಲ್ಲಿ ಕೈಗೊಂಡಿದ್ದ ಸ್ಟಾಪ್ ಗೇಟ್ ಅಳವಡಿಕೆ ಮೊದಲ ಹಂತದಲ್ಲಿ ಯಶಸ್ವಿ ಆಗಿದ್ದು, ಶುಕ್ರವಾರ ರಾತ್ರಿ ಮೊದಲ ಪ್ಲೇಟ್ ಕೂರಿಸಲಾಯಿತು.ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಸಚಿವ ಜಮೀರ್ ಅಹ್ಮದ್ ಖಾನ್ ಮಾಹಿತಿ ನೀಡಿದ್ದಾರೆ.
ಒಟ್ಟು ಐದು ಪ್ಲೇಟ್ ಅಳವಡಿಕೆ ಯಾಗಲಿದ್ದು ಶನಿವಾರದ ವೇಳೆಗೆ ಸ್ಟಾಪ್ ಗೇಟ್ ಅಳವಡಿಕೆ ಕಾರ್ಯ ಪೂರ್ಣ ಗೊಳ್ಳಲಿದೆ ಎಂದು ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ ಅಹಮದ್ ಖಾನ್ ತಿಳಿಸಿದ್ದಾರೆ.ಸ್ಟಾಪ್ ಗೇಟ್ ಅಳವಡಿಕೆ ಮೊದಲ ಹಂತದ ಯಶಸ್ವಿ ಕುರಿತು ಸಚಿವ ಜಮೀರ್ ಅಹಮದ್ ಖಾನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ದೂರವಾಣಿ ಮೂಲಕ ಮಾಹಿತಿ ನೀಡಿದರು.
ಸ್ಟಾಪ್ ಗೇಟ್ ಅಳವಡಿಕೆ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ವೈಕುಂಠ ಅತಿಥಿ ಗೃಹದಲ್ಲೇ ವಾಸ್ತವ್ಯ ಹೂಡಿದ್ದ ಸಚಿವ ಜಮೀರ್ ಅಹಮದ್ ಖಾನ್ ದಿನಕ್ಕೆ ಎರಡು ಬಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದರು. ತಾಂತ್ರಿಕ ತಂಡದ ನಿರಂತರ ಪರಿಶ್ರಮ ದಿಂದ ಸ್ಟಾಪ್ ಗೇಟ್ ಅಳವಡಿಕೆಯ ಮೊದಲ ಸ್ಟಾಪ್ ಗೇಟ್ ಅಳವಡಿಕೆ ಮೊದಲ ಹಂತದ ಯಶಸ್ವಿ ಕುರಿತು ಸಚಿವ ಜಮೀರ್ ಅಹಮದ್ ಖಾನ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೂ ದೂರವಾಣಿ ಮೂಲಕ ಮಾಹಿತಿ ನೀಡಿದರು.
ಸ್ಟಾಪ್ ಗೇಟ್ ಅಳವಡಿಕೆ ಹಿನ್ನೆಲೆಯಲ್ಲಿ ಮೂರು ದಿನಗಳಿಂದ ವೈಕುಂಠ ಅತಿಥಿ ಗೃಹದಲ್ಲೇ ವಾಸ್ತವ್ಯ ಹೂಡಿದ್ದ ಸಚಿವ ಜಮೀರ್ ಅಹಮದ್ ಖಾನ್ ದಿನಕ್ಕೆ ಎರಡು ಬಾರಿ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸುತ್ತಿದ್ದರು. ತಾಂತ್ರಿಕ ತಂಡದ ನಿರಂತರ ಪರಿಶ್ರಮ ದಿಂದ ಸ್ಟಾಪ್ ಗೇಟ್ ಅಳವಡಿಕೆ ಮೊದಲ ಹಂತದ ಯಶಸ್ಸು ಸಾಧಿಸಿದ್ದು ಇಡೀ ತಂಡಕ್ಕೆ ಸಚಿವರು ಕೃತಜ್ಞತೆ ಸಲ್ಲಿಸಿದರು.ಸಚಿವ ಶಿವರಾಜ್ ತಂಗಡಗಿ, ಕೊಪ್ಪಳ ಸಂಸದ ರಾಜಶೇಖರ್ ಹಿಟ್ನಾಳ್, ಶಾಸಕರಾದ ಗವಿಯಪ್ಪ, ಕಂಪ್ಲಿ ಗಣೇಶ್ ಉಪಸ್ಥಿತರಿದ್ದರು.
ಇನ್ನು ಎರಡು ಕ್ರೇನ್ ಗಳ ಮೂಲಕ ಎಲಿಮೆಂಟ್ ನ್ನು ತಜ್ಞ ಕನ್ನಯ್ಯನಾಯ್ಡು ನೇತೃತ್ವದಲ್ಲಿ ಸಿಬ್ಬಂದಿ ಅಳವಡಿಕೆ ಮಾಡಿದ್ದಾರೆ. ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸಿಬ್ಬಂದಿ ಕೆಲಸ ಮಾಡಿದ್ದಾರೆ.ಜಲಾಶಯಕ್ಕೆ ಸಣ್ಣ ಧಕ್ಕೆಯಾಗದಂತೆ ಕೆಲಸ ನಿರ್ವಹಿಸಿದ್ದಾರೆ.ಎರಡು ದಿನಗಳ ನಿರಂತರ ಶ್ರಮದಿಂದ ಮೊದಲ ಎಲಿಮೆಂಟ್ ಅಳವಡಿಕೆ ಯಶಸ್ವಿಯಾಗಿದೆ. ಯಶಸ್ವಿಯಾಗಿ ಮೊದಲ ಎಲಿಮೆಂಟ್ ಅಳವಡಿಕೆ ಮಾಡಿದ ಸಿಬ್ಬಂದಿ, ಇನ್ನೊಂದು ಎಲಿಮೆಂಟ್ ಅಳವಡಿಸಲು ಯತ್ನಿಸುತ್ತಿದ್ದಾರೆ.
20 ಮೀಟರ ಉದ್ದ, ನಾಲ್ಕು ಅಡಿ ಎತ್ತರದ ಮೊದಲ ಎಲಿಮೆಂಟ್ ಅಳವಡಿಕೆ ಮಾಡಲಾಗಿದೆ. ಇಂದು ಉಳಿದ ಎಲಿಮೆಂಟ್ ಗಳನ್ನು ಅಳವಡಿಸಲಿದ್ದಾರೆ. ಇನ್ನು ತುಂಗಭದ್ರಾ ಜಲಾಶಯದ ಸ್ಟಾಪಲಾಗ್ ಗೇಟ್ ನ ಮೊದಲ ಎಲಿಮೆಂಟ್ ಅಳವಡಿಕೆ ಸಕ್ಸಸ್ ಹಿನ್ನೆಲೆ ತುಂಗಭಗದ್ರಾ ಜಲಾಶಯ ಮೇಲೆ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು. ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ್ ರಿಂದ ಸಂಭ್ರಮಾಚರಣೆ ನಡೆಯಿತು.ಸಿಹಿ ಹಂಚಿ ಸಂಭ್ರಮಿಸಿದ ಇಬ್ಬರು ನಾಯಕರು ಸಂಭ್ರಮಿಸಿದರು.ಸಿಬ್ಬಂದಿಯಿಂದಲೂ ಸಂಭ್ರಮಾಚರಣೆ ನಡೆಯಿತು. ಇನ್ನು ಇಂದು ಬಾಕಿ ಉಳಿದ ಎಲಿಮೆಂಟ್ ಗಳನ್ನು ತಜ್ಞ ಕನ್ನಯ್ಯನಾಯ್ಡು ನೇತೃತ್ವದಲ್ಲಿ ಸಿಬ್ಬಂದಿ ಅಳವಡಿಕೆ ಮಾಡಲಿದ್ದಾರೆ. ಸದ್ಯ ರೈತರು ನಿಟ್ಟಿಸಿರು ಬಿಟ್ಟಿದ್ದಾರೆ.