ಮನೆ Latest News ಕೋಪದ ಕೈಗೆ ಬುದ್ಧಿ ಕೊಟ್ರೆ ಇಂತಹ ಘಟನೆಗಳಾಗುತ್ತವೆ; ದರ್ಶನ್ ಬಗ್ಗೆ ಕೋಡಿಮಠ ಶ್ರೀಗಳ ಮಾತು

ಕೋಪದ ಕೈಗೆ ಬುದ್ಧಿ ಕೊಟ್ರೆ ಇಂತಹ ಘಟನೆಗಳಾಗುತ್ತವೆ; ದರ್ಶನ್ ಬಗ್ಗೆ ಕೋಡಿಮಠ ಶ್ರೀಗಳ ಮಾತು

0

ಚಿಕ್ಕಬಳ್ಳಾಪುರ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಸೇರಿದಂತೆ ಒಟ್ಟು 17 ಜನರನ್ನು ಅರೆಸ್ಟ್ ಮಾಡಲಾಗಿದೆ. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.

 ಹೀಗಿರುವಾಗ ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬೇರೆ ಬೇರೆ ಗಣ್ಯರು ಪ್ರತಿಕ್ರಿಯಿಸುತ್ತಿದ್ದಾರೆ. ಇದೀಗ ಕೋಡಿಮಠದ ಶ್ರೀ ಶ್ರೀಗಳಾದ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳು ಈ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಈ ಬಗ್ಗೆ ಚಿಕ್ಕಬಳ್ಳಾಪುರದಲ್ಲಿ ಮಾತನಾಡಿದ ಅವರು ಕೋಪದ ಕೈಗೆ ಬುದ್ಧಿ ಕೊಟ್ರೆ ಇಂತಹ ಘಟನೆಗಳು ಆಗ್ತವೆ. ಅಲ್ಲದೇ ಈ ಹಿಂದೆ ಉಮಾಪತಿ ಅವರಿಗೂ ಮಠಕ್ಕೆ ಬಂದಾಗ ಕೋಪ ಕಡಿಮೆ ಮಾಡಿಕೊಳ್ಳುವಂತೆ ಹೇಳಿದ್ದೆ. ತಂದೆ ತಾಯಿಯ ಮಾತು ಕೇಳುವಂತೆ ಹೇಳಿದ್ದೆ. ನಾನು ಹೇಳಿದಂತೆ ನಡೆದುಕೊಂಡ ಕಾರಣ ಇವತ್ತು ಅವರು ಒಳ್ಳೆಯ ಸ್ಥಾನದಲ್ಲಿದ್ದಾರೆ ಎಂದಿದ್ದಾರೆ.ಆ ಮೂಲಕ ರೇಣುಕಾಸ್ವಾಮಿ ಕೊಲೆಗೆ ದರ್ಶನ್ ಅವರ ಕೋಪವೇ ಕಾರಣ ಅನ್ನೋದನ್ನು ಶ್ರೀಗಳು ಹೇಳಿದ್ದಾರೆ.

 

ಪವಿತ್ರಾ ಗೌಡ ಆಸ್ಪತ್ರೆಗೆ ದಾಖಲು

ಇನ್ನು ರೇಣುಕಾಸ್ವಾಮಿ ಕೊಲೆ ಪ್ರಕರಣದ ಎ1 ಆರೋಪಿ ಪವಿತ್ರ ಗೌಡ ಆರೋಗ್ಯದಲ್ಲಿ ಏರುಪೇರಾಗಿದೆ. ನಟಿ ಪವಿತ್ರ ಅವರ ಆರೋಗ್ಯದಲ್ಲಿ ಏರುಪೇರಾದ ಹಿನ್ನೆಲೆ ಅವರನ್ನು ಆಸ್ಪತ್ರೆದೆ ದಾಖಲಿಸಲಾಗಿದೆತ್ತು.ನಿನ್ನೆಯಷ್ಟೇ ಪವಿತ್ರ ಗೌಡರನ್ನು ರಾಜರಾಜೇಶ್ವರಿ ನಗರದ ಅವರ ಮನೆಗೆ ಕರೆದುಕೊಂಡು ಹೋಗಿ ಪೊಲೀಸರು ಸ್ಥಳ ಮಹಜರು ನಡೆಸಿದ್ದರು. ಈ ವೇಳೆ ಮನೆಯಿಂದ  ಬರುತ್ತಿದ್ದಂತೆ ಪವಿತ್ರ ಗೌಡ ನಗುತ್ತಲೇ ಹೊರ ಬಂದಿದ್ದರು. ಇಂದು ಅವರ ಆರೋಗ್ಯದಲ್ಲಿ ಏರುಪೇರಾಗಿದೆ.

ಪವಿತ್ರ ಗೌಡ ಅವರನ್ನು ರಾತ್ರಿ ವೇಳೆ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಲಾಗಿತ್ತು. ಬೆಳಗ್ಗೆ ವಿಚಾರಣೆಗಾಗಿ ಅನ್ನಪೂರ್ಣೇಶ್ವರಿ ನಗರ ಠಾಣೆಗೆ ಕರೆ ತರಲಾಗಿತ್ತು. ಇಂದು ವಿಚಾರಣೆ ನಡೆಸುತ್ತಿರುವಾಗಲೇ ಪವಿತ್ರ ಅವರು ಅಸ್ವಸ್ಥಗೊಂಡಿದ್ದಾರೆ. ಕೂಡಲೇ ಅವರನ್ನು ಮಲ್ಲತ್ತಹಳ್ಳಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಪವಿತ್ರ ಅವರನ್ನು ಪರೀಕ್ಷಿಸಿದ ವೈದ್ಯರು ಲೋ ಬಿಪಿಯಿಂದ ಪವಿತ್ರ ಬಳಲುತ್ತಿದ್ದಾರೆ ಎಂದಿದ್ದಾರೆ. ಅಲ್ಲದೇ ಅವರಿಗೆ ಡ್ರಿಪ್ಸ್ ಹಾಕಿ ಚಿಕಿತ್ಸೆ ನೀಡಲಾಗಿದೆ. ಚಿಕಿತ್ಸೆಯ ಬಳಿಕ ಪವಿತ್ರ ಗೌಡ ಅವರನ್ನು ಅನ್ನಪೂರ್ಣೇಶ್ವಿರ ನಗರ ಪೊಲೀಸ್ ಠಾಣೆಗೆ ಕರೆದುಕೊಂಡು ಹೋಗಲಾಗಿದೆ.