ಮನೆ Latest News ಸಚಿವ ಸ್ಥಾನಕ್ಕೆ ಕೆ ಎನ್ ರಾಜಣ್ಣ ರಾಜೀನಾಮೆ ವಿಚಾರ; ರಾಜಣ್ಣ ಪರ ಬ್ಯಾಟ್ ಬೀಸಿದ ಬಿಜೆಪಿ...

ಸಚಿವ ಸ್ಥಾನಕ್ಕೆ ಕೆ ಎನ್ ರಾಜಣ್ಣ ರಾಜೀನಾಮೆ ವಿಚಾರ; ರಾಜಣ್ಣ ಪರ ಬ್ಯಾಟ್ ಬೀಸಿದ ಬಿಜೆಪಿ ನಾಯಕರು

0

ಬೆಂಗಳೂರು: ಸಚಿವ ಸ್ಥಾನಕ್ಕೆ ಕೆ ಎನ್ ರಾಜಣ್ಣ ರಾಜೀನಾಮೆ ವಿಚಾರಕ್ಕೆ ಸಂಬಂಧಪಟ್ಟಂತೆ ಕೆ ಎನ್ ರಾಜಣ್ಣ ಪರ ಜೆಪಿ ನಾಯಕರು ಬ್ಯಾಟ್ ಬೀಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ  ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಸಿಎಂ ಸಿದ್ದರಾಮಯ್ಯಗೆ ಪರಮಾತ್ಮರಾಗಿದ್ರು. ರಾಜಣ್ಣನವರನ್ನ ಸಂಪುಟದಿಂದ ವಜಾ ಮಾಡಿದ್ದಾರೆ. ರಾಜಣ್ಣ ಅಂತಹ ಘೋರ ಅಪರಾಧ ಏನು ಮಾಡಿದ್ರು?.ರಾಜ್ಯದ ಜನರು ಇದನ್ನ ಕೇಳ್ತಿದ್ದಾರೆ. ಇದು ಕೇವಲ ಕಾಂಗ್ರೆಸ್ ಆಂತರಿಕ ವಿಚಾರವಲ್ಲ. ಸದನದಲ್ಲಿ ಇದರ ಬಗ್ಗೆ ಚರ್ಚೆ ಆಗಬೇಕಿದೆ.ಪರಿಶಿಷ್ಟ ಪಂಗಡದ ಮೇಲೆ ರಾಹುಲ್ ಗಾಂಧಿ ಇಟ್ಟಿರೋ ಪ್ರೀತಿ ಇಷ್ಟೇನಾ ?. ದೇಶದ ಜನತೆ ಮುಂದೆ ಬಿಜೆಪಿ ಅಕ್ರಮವಾಗಿ ಅಧಿಕಾರಕ್ಕೆ ಬಂದಿದೆ ಎಂದು ಬಿಂಬಿಸಿದ್ರು. ಆದರೆ ಅದಾದ  ಬಳಿಕ ಯಾವುದೇ ದೂರನ್ನ ಕೊಡದೇ ಪಲಾಯನ ಮಾಡಿದ್ರು. ರಾಜಣ್ಣ ಸತ್ಯ ಹೇಳಿದ ಕಾರಣಕ್ಕೆ ಸಂಪುಟದಿಂದ ಕೈ ಬಿಟ್ಟಿದ್ದೀರಿ ಎಂದರೇ ಇದನ್ನ ಸಧನಕ್ಕೆ ಸಿಎಂ ತಿಳಿಸಬೇಕು. ಷಡ್ಯಂತ್ರಪಿತೂರಿ ಬಗ್ಗೆ ರಾಜಣ್ಣ‌ ಹೇಳಿದ್ದಾರೆ. ರಾಹುಲ್ ಗಾಂಧಿಗೆ ಸತ್ಯ ಅರಗಿಸಿಕೊಳ್ಳುವ ಧೈರ್ಯ ಇರಲಿಲ್ವಾ. ಸಂವಿಧಾನದ ಬಗ್ಗೆ ಭಾಷಣ ಮಾಡುವ ಇವರು. ಪರಿಶಿಷ್ಟ ಸಮುದಾಯದವರಿಗೆ ಕೊಡುವ ಗೌರವ ಇದೇನಾ ಎಂದು ಪ್ರಶ್ನಿಸಿದ್ದಾರೆ.

ವಿಧಾನಸೌಧದಲ್ಲಿ ಪರಿಷತ್ ಸದಸ್ಯ ಸಿ.ಟಿ ರವಿ ಈ ಬಗ್ಗೆ ಪ್ರತಿಕ್ರಿಯಿಸಿದ್ದು ಸಿದ್ದರಾಮಯ್ಯರಿಗೆ ಒಂದು ಪ್ರಶ್ನೆ ಕೇಳ್ತೀನಿ. ನಿಮ್ಮ ಸ್ವಾಭಿಮಾನ ಎಲ್ಲಿ ಹೋಯ್ತು ಸಿದ್ದರಾಮಯ್ಯನವರೇ. ರಾಜಣ್ಣ ಬಹಿರಂಗವಾಗಿ ನಿಮ್ಮ‌ಪರವಾಗಿಯೇ ಹೆಚ್ಚು ಮಾತಾಡಿದ್ದು.ಇದಕ್ಕೆ ಗುಲಾಮಗಿರಿ ಅನ್ನೋದು. ಮತಗಳ್ಳತನ ಅಂತ ಆರೋಪ ಮಾಡ್ತಿದ್ದಾರೆ.ತಪ್ಪಾಗಿದ್ರೆ ನಿಮ್ಮ ಅಧಿಕಾರಿಗಳು, ನೌಕಕರ ತಪ್ಪಾಗಿದೆ. ಪ್ರತಿ ಬೂತ್ ಗೆ ಬಿಎಲ್ ಎ ನೇಮಕ ಆಗುತ್ತೆ ಅಲ್ವಾ ? . ಜಾರ್ಜ್ ವಿಚಾರವಾಗಿ ಸ್ಮಾರ್ಟ್ ಮೀಟರ್ ಹಗರಣ ಆಯ್ತು. ಅವರು ಕಪ್ಪ ಕಾಣಿಕೆ ಕಳುಹಿಸ್ತಾ ಇರುತ್ತಾರೆ. ಹೀಗಾಗಿ ಅವರ ರಾಜೀನಾಮೆ ಪಡೆಯಲಿಲ್ಲ.ಎಸ್ ಟಿ‌ ನಾಯಕ ನಾಗೇಂದ್ರನನ್ನ ಬಲಿ ಪಡೆದುಕೊಂಡ್ರಿ ಎಂದು ವಾಗ್ದಾಳಿ ನಡೆಸಿದ್ದಾರೆ.

ವಿಧಾನಸಭೆ ವಿಪಕ್ಷ ನಾಯಕ ಆರ್ ಅಶೋಕ್ ಈ ಬಗ್ಗೆ ಪ್ರತಿಕ್ರಿಯಿಸಿ ರಾಜಣ್ಣ ರಾಜೀನಾಮೆ ಬಗ್ಗೆ  ಕಾನೂನು ಸಚಿವರು ಏನೂ ಆಗಿಲ್ಲ ಅಂದ್ರು.ಸಚಿವರ ವಜಾ ಆಗಿದೆ ಅದರು ಅದರ ಮಾಹಿತಿ ಕೊಟ್ಟಿಲ್ಲ.ಸದನ ನೆಡೆಯುವಾಗ  ಸಿಎಂ ಸಚಿವರ ವಜಾ ಆಗಿರುವ ಬಗ್ಗೆ ಮಾಹಿತಿ ನೀಡಬೇಕು.ನಿನ್ನೆ ಘಟನೆ ಆಗಿರೋದು ಸಿಎಂ ಇನ್ನೂ ಮಾಹಿತಿ ಕೊಟ್ಟಿಲ್ಲ.ಈ ವೇಳೆ ಮದ್ಯ ಪ್ರವೇಶ ಮಾಡಿದ ಸ್ಪೀಕರ್  ಇದು ಅವರ ಇಂಟರ್ನಲ್ ಮ್ಯಾಟರ್ .ಇದು ಹೇಗೆ ಇಂಟರ್ನಲ್ ಮ್ಯಾಟರ್ ಹೇಗೆ ಆಗುತ್ತದೆ ಎಂದಿದ್ದಾರೆ.