ಬೆಂಗಳೂರು; ನಟ ಕಿಚ್ಚ ಸುದೀಪ್ ಅವರು ಡಿಸಿಎಂ ಡಿ ಕೆ ಶಿವಕುಮಾರ್ ಅವರನ್ನು ಅವರ ಸದಾಶಿವನಗರದಲ್ಲಿರುವ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ರು.ನಿರ್ದೇಶಕ ಅನೂಪ್ ಭಂಡಾರಿ ಅವರ ಜೊತೆ ಕಿಚ್ಚ ಸುದೀಪ್ ಡಿಕೆಶಿ ನಿವಾಸಕ್ಕೆ ಆಗಮಿಸಿದ್ರು. ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ನಟ ಸುದೀಪ್ ಹಾಗೂ ಅನೂಪ್ ಭಂಡಾರಿ ಅವರು ಸೌಜನ್ಯಯುತ ಭೇಟಿಗಾಗಿ ಬಂದಿದ್ದರು ಎನ್ನಲಾಗಿದೆ.
CCL ಸೀಸನ್ 11ರ ಉದ್ಘಾಟನೆಗೆ ಡಿಸಿಎಂಗೆ ಆಹ್ವಾನ ನೀಡಲು ಕಿಚ್ಚ ಸುದೀಪ್ ಬಂದಿದ್ದರು ಎನ್ನಲಾಗಿದೆ.ಫೆ.8 ರಿಂದ ಬೆಂಗಳೂರಿನಲ್ಲಿ ಸಿಸಿಎಲ್ ಆರಂಭವಾಗಲಿದೆ. ಸಿಸಿಎಲ್ ಉದ್ಘಾಟನೆಗೆ ಆಹ್ವಾನಿಸಲು ಡಿಕೆಶಿ ಮನೆಗೆ ಕಿಚ್ಚ ಸುದೀಪ್ ಆಗಮಿಸಿದ್ದರು. ಫೆ.8 ಮತ್ತು 9 ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿಸಿಎಲ್ ಪಂದ್ಯಗಳು ನಡೆಯಲಿದೆ.ಫೆ.8 ರಂದು ಹೈದರಾಬಾದ್ ವಿರುದ್ದ ಮೊದಲ ಪಂದ್ಯವನ್ನು ಕರ್ನಾಟಕ ಬುಲ್ಡೋಜರ್ ತಂಡ ಆಡಲಿದೆ.
ಸುದೀಪ್ ಅವರು ಡಿಕೆಶಿ ನಿವಾಸಕ್ಕೆ ಆಗಮಿಸಿದ ತೆರಳಿದ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್ ಅವರದ್ದು ಏನೇನೊ ವೈಯಕ್ತಿಕ ವಿಚಾರ ಇರುತ್ತೆ. ಸೌಜನ್ಯದ ಭೇಟಿ, ಶೂಟಿಂಗ್ ಜಾಗದ ಬಗ್ಗೆ ಚರ್ಚೆ ಮಾಡಿದ್ರು.ಬೇರೇನೂ ಇಲ್ಲ, ರಾಜಕೀಯ ವಿಚಾರ ಏನಿಲ್ಲ.ಅವರೊಂದಿಗೆ ನಾನು ಯಾಕೆ ರಾಜಕೀಯ ಚರ್ಚೆ ಮಾಡಲಿ.ಸ್ನೇಹಿತರಾಗಿ ಬಂದಿದ್ರು, ಸಮಸ್ಯೆ ಹೇಳಿಕೊಂಡ್ರು, ತಿಳಿಸುವುದಾಗಿ ಹೇಳಿದ್ದೇನೆ ಎಂದರು.
ಬಿಡದಿಯಲ್ಲಿ ೨ನೇ ಏರ್ಪೋರ್ಟ್ ನಿರ್ಮಾಣದಲ್ಲಿ HDD ಕುಟುಂಬಕ್ಕೆ ಕ್ರೆಡಿಟ್ ತೆಗೆದುಕೊಳ್ಳುವ ವಿಚಾರದ ಬಗ್ಗೆ ಇದೇ ವೇಳೆ ಮಾತನಾಡಿದ ಅವರು ಮೊದಲು ಕಾವೇರಿ ಮೇಕೆದಾಟು ಅನುಮತಿ ಕೊಡಿಸುತ್ತೇನೆ.ಸಹಿ ಹಾಕಿಸಿಕೊಡುತ್ತೇನೆ ಅಂತ ಹೇಳಿದ್ರಲ್ಲ ಮೊದಲು ಅದನ್ನ ಅವರು ಮಾಡಲಿ.ಅವರು ಇದ್ದಾಗ ಮಾಡೋಕೆ ಆಗಲಿಲ್ಲ, ಈಗ ನಾವು ಮಾಡಲು ಹೊರಟಿದ್ದೇವೆ.ನಾವು ತೀರ್ಮಾನ ಮಾಡೋಕೆ ಆಗೊಲ್ಲ.ಬಿಡದಿ, ನೆಲಮಂಗಲ, ಸೋಲೂರು, ತುಮಕೂರು ಇರಬೇಕಾ ಅಂತ ನಾವು ತೀರ್ಮಾನ ಮಾಡೋಕೆ ಆಗಲ್ಲ.ಏರ್ಪೋರ್ಟ್ ಅಥಾರಿಟಿ ಆಫ್ ಇಂಡಿಯಾ, ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದವರು ತೀರ್ಮಾನ ಮಾಡ್ಬೇಕು.ಅಗ್ರಿಮೆಂಟ್ ಇದೆ, ಇಷ್ಟು ವರ್ಷ ಮಾಡಬಾರದು ಅಂತಿದೆ.ಎಂ.ಬಿ. ಪಾಟೀಲ್ ಸಂಬಂಧಪಟ್ಟ ಮಂತ್ರಿ ಇದ್ದಾರೆ, ಅವರ ಪರಿಶೀಲನೆ ನಡೆಸುತ್ತಿದ್ದಾರೆ.ನನ್ನ ಬಳಿ ಮತ್ತು ಸಿಎಂ ಬಳಿ ಒಮ್ಮೆ ಚರ್ಚೆ ಮಾಡ್ತಾರೆ.ನಂತರ ಕ್ಯಾಬಿನೆಟ್ ಗೆ ಆ ವಿಚಾರ ಬರುತ್ತೆ. ಬಳಿಕ ಎಲ್ಲಿ ನಿರ್ಮಾಣ ಮಾಡ್ಬೇಕು ಅಂತ ದೆಹಲಿಯಲ್ಲಿ ಅಪ್ರುವಲ್ ತೆಗೆದುಕೊಂಡು ನಿರ್ಧಾರ ಮಾಡ್ತೀವಿ. ನಮ್ಮೂರಲ್ಲಿ ಮಾಡಲಿ ಅಂತ ನನಗೆ ಆಸೆ ಇರಬಹುದು.ಹಾಗೆಲ್ಲ ಮಾಡೋಕೆ ಆಗೊಲ್ಲ, ಸ್ಕೋಪ್ ಇದೆ, 25-30 ಕಿ.ಲೋ ಗುಡ್ಡ ಏನೂ ಇರಬಾರದು ಅಂತಿದೆ. ವಿಮಾನ ನಿಲ್ದಾಣಕ್ಕೆ 4,400 ಎಕರೆ ಜಾಗ ಬೇಕಾಗುತ್ತದೆ. ಮೊದಲ ಏರ್ಪೋರ್ಟ್ ವೇಳೆ ನಾನೇ ನಗರಾಭಿವೃದ್ಧಿ ಸಚಿವನಾಗಿದ್ದೆ.ಕೆಲವು ತಾಂತ್ರಿಕ ಅಂಶಗಳಿವೆ, ಅದನ್ನ ಗಮನಿಸಬೇಕಾಗುತ್ತದೆ ಎಂದಿದ್ದಾರೆ.











