ಮನೆ Latest News ನಾಳೆಯಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭ ಹಿನ್ನೆಲೆ; ಬೆಳಗಾವಿಯ ಸುವರ್ಣಸೌಧದಲ್ಲಿ ಸ್ಪೀಕರ್ ಯು.ಟಿ. ಖಾದರ್...

ನಾಳೆಯಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭ ಹಿನ್ನೆಲೆ; ಬೆಳಗಾವಿಯ ಸುವರ್ಣಸೌಧದಲ್ಲಿ ಸ್ಪೀಕರ್ ಯು.ಟಿ. ಖಾದರ್ ಸುದ್ದಿಗೋಷ್ಠಿ

0

ಬೆಳಗಾವಿ; ನಾಳೆಯಿಂದ ಬೆಳಗಾವಿಯ ಸುವರ್ಣಸೌಧದಲ್ಲಿ ಚಳಿಗಾಲದ ಅಧಿವೇಶನ ಆರಂಭ ಹಿನ್ನೆಲೆ  ಬೆಳಗಾವಿಯ ಸುವರ್ಣಸೌಧದಲ್ಲಿ ಸ್ಪೀಕರ್ ಯು.ಟಿ. ಖಾದರ್ ಸುದ್ದಿಗೋಷ್ಠಿ ನಡೆಸಿದ್ರು.

ಈ ವೇಳೆ ಮಾತನಾಡಿದ ಸ್ಪೀಕರ್ ಖಾದರ್, ಡಿ.9 ರಿಂದ 19ರವರೆಗೆ ಅಧಿವೇಶನ ನಡೆಯಲಿದೆ. ನಾಳೆ ಬೆಳಗ್ಗೆ 11 ಗಂಟೆಯಿಂದ ಅಧಿವೇಶನ ಪ್ರಾರಂಭವಾಗಲಿದೆ. ನಾಳೆ 10:30ಕ್ಕೆ ಅನುಭವ ಮಂಟಪದ ಭಾವಚಿತ್ರ ಅನಾವರಣಗೊಳಿಸಲಾಗುತ್ತದೆ. ಸಿಎಂ ಸಿದ್ದರಾಮಯ್ಯ ನಾಳೆ ಅನಾವರಣಗೊಳಿಸಲಿದ್ದಾರೆ. ಸಚಿವಾಲಯದ ಹಿರಿಯ ವರ್ಗ, ಸಚಿವರುಗಳು ಭಾಗಿಯಾಗಲಿದ್ದಾರೆ ಎಂದರು. ಉಪಚುನಾವಣೆಯಲ್ಲಿ ಆಯ್ಕೆ ಆದವರ ಪ್ರತಿಜ್ಞೆ ಸ್ವೀಕಾರ ನಡೆಯಲಿದೆ. ಪ್ರಶ್ನಾವಳಿ ನಡೆಯಲಿದೆ, ಮಧ್ಯಾಹ್ನ‌ BSC ಸಭೆ ಕೂಡ ನಡೆಯಲಿದೆ. 5 ತಿದ್ದುಪಡಿ ವಿಧೇಯಕಗಳು‌ ಸರ್ಕಾರದಿಂದ ಚರ್ಚೆ ಆಗಲಿದೆ ಎಂದರು.

ಮುಂದುವರೆದು ಮಾತನಾಡಿದ ಅವರು  ಸುವರ್ಣಸೌಧದ ಸಭಾಂಗಣದ ಸ್ಪೀಕರ್‌ ಪೀಠ ವಿಧಾನಸೌಧದ ಮಾದರಿಯಲ್ಲೇ ನವೀಕರಣ ಆಗಿದೆ. ಡಿಸಿಎಂ, ಸಿಎಂ ಸಲಹೆ ಪಡೆದು ರೋಜ್‌ ವುಡ್ ಬಳಸಿ ನವೀಕರಣ ಮಾಡಲಾಗಿದೆ. 6 ಸಾವಿರಕ್ಕೂ ಹೆಚ್ಚು ಪೊಲೀಸರು ಭದ್ರತೆಗಾಗಿ ನಿಯೋಜನೆ ಮಾಡಲಾಗಿದೆ. ಜಿಲ್ಲಾಡಳಿತ ಸಹಯೋಗದಿಂದ ಸುಮಾರು 10 ಕಮಿಟಿ ರಚಿಸಲಾಗಿದೆ. ಪ್ರತಿಭಟನೆ ಮಾಡುವವರಿಗೂ ಬೇಕಾದ ವ್ಯವಸ್ಥೆ ಮಾಡಲಾಗಿದೆ. ಯುವಕರು, ವಿದ್ಯಾರ್ಥಿಗಳು, ಶಿಕ್ಷಕ ವರ್ಗಕ್ಕೆ ಉತ್ತಮ ವ್ಯವಸ್ಥೆ ಮಾಡಲಾಗಿದೆ. ಮಹಾತ್ಮ ಗಾಂಧಿ ಬೆಳಗಾವಿಗೆ ಬಂದು‌ಅಧಿವೇಶದಲ್ಲಿ ಭಾಗಿಯಾಗಿ 100 ವರ್ಷ ಕಳೆದಿದೆ. ಗಾಂಧೀ ಭಾವಚಿತ್ರ ಇರುವ ಎಕ್ಸಿಬಿಷನ್ ಮಾಡಲಾಗಿದೆ. ಚಿಲ್ಡ್ರನ್ಸ್ ಸೈನ್ಸ್ ಸೆಂಟರ್ ನಿರ್ಮಾಣ ಮಾಡಲಾಗಿದೆ ಎಂದರು.

ಇನ್ನು ಇದೇ ವೇಳೆ ಮಾತನಾಡಿದ ಸ್ಪೀಕರ್ ಇಡೀ ಕರ್ನಾಟಕ ಬಗ್ಗೆ ಚರ್ಚೆ ಆಗಬೇಕು. ಇದು ಸ್ವಾಭಿಮಾನದ ಸುವರ್ಣಸೌಧ, ಆದರೆ ಹೆಚ್ಚಿನ ಆದ್ಯತೆ ಈ ಭಾಗಕ್ಕೆ ಕೊಡಬೇಕು. ಉತ್ತರ ಕರ್ನಾಟಕ ಭಾಗದ ಚರ್ಚೆಗೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು. ಅಧಿವೇಶನದ ಸಮಯದಲ್ಲಿ ಉತ್ತರ ಕರ್ನಾಟಕ ಬಗ್ಗೆ ಚರ್ಚೆ ಆಗಬೇಕು. ಹಿಮಾಚಲ ಪ್ರದೇಶ, ನಾಗಪುರದಲ್ಲೂ ಎರಡು ವಿಧಾನಸಭೆ ಇದೆ. ಶಾಶ್ವತವಾಗಿ ಶಾಸಕರ ಭವನ ಮಾಡುವ ಯೋಚನೆ ಇದೆ. ಲೋಕೋಪಯೋಗಿ ಸಚಿವರ ಜೊತೆ ಚರ್ಚಿಸಿ ತೀರ್ಮಾನ ಮಾಡ್ತೀವಿ. ಅನುಭವ ಮಂಟಪದ ಬಿಲ್ ಬಂದ ಕೂಡಲೇ ಮಾಹಿತಿ ನೀಡ್ತೀವೆ. ಚಿತ್ರಕಲಾ ಪರಿಷತ್ ನಿಂದ ಆ ಕಲಾಕೃತಿ ಮಾಡಲಾಗಿದೆ. ಸುವರ್ಣಸೌಧದ ವಿಧಾನಸಭಾ ಸಭಾಧ್ಯಕ್ಷದ ಪೀಠ ಕರ್ನಾಟಕ ರಾಜ್ಯ ಅರಣ್ಯ ನಿಗಮ ಸಿದ್ದಪಡಿಸಿದೆ. ಇದಕ್ಕೆ ಅಂದಾಜು 45 ಲಕ್ಷ ರೂಪಾಯಿ ವೆಚ್ಚ ತಗುಲಿದೆ.ಒಟ್ಟು 25 ಕೋಟಿ ರೂ. ಬೆಳಗಾವಿ ಅಧಿವೇಶಕ್ಕೆ ಖರ್ಚು ಆಗಲಿದೆ ಎಂದರು.

ಅಧಿವೇಶನ ಆರಂಭಕ್ಕೂ ಮುನ್ನ ಹೇಗಿತ್ತು, ಈಗ ಹೇಗಾಗಿದೆ ಅನ್ನೋದು ಎಲ್ಲರಿಗೂ ಗೊತ್ತು. ಬೆಳಗಾವಿಯ ಜನರಿಗೆ ಚಿರೃಣಿ ಆಗಿರುತ್ತೇವೆ. ಯಾರು ವಿರೋಧ ಮಾಡ್ತಾರೋ ಅವರು ಬೆಳಗಾವಿಯವರು ಅಲ್ಲ ಎಂದರು. ಸದನದ ಒಳಗಿರುವ ಸಾವರ್ಕರ್ ಭಾವಚಿತ್ರ ತೆರವಿಗೆ ಒತ್ತಡ ವಿಚಾರಕ್ಕೆ ರಿಯ್ಯಾಕ್ಟ್ ಮಾಡಿದ ಅವರು  ಯಾವುದೇ ಚರ್ಚೆ ಆಗಿಲ್ಲ, ಒತ್ತಡ ಬಂದಿಲ್ಲ. ಸಕಾರಾತ್ಮಕ ಚಿಂತನೆಗೆ ಅಷ್ಟೇ ಅವಕಾಶ. ನಮ್ಮಲ್ಲಿ ನಕಾರಾತ್ಮಕ‌ ಚಿಂತನೆಗೆ ಅವಕಾಶ ಇಲ್ಲ ಎಂದರು.ಬೆಳಗಾವಿ ರಾಜ್ಯದ ಎರಡನೇ ರಾಜಧಾನಿ ಆಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ಅದನ್ನ ಸಿಎಂ ಬಳಿ ಕೇಳಬೇಕು. ಎರಡನೇ ರಾಜಧಾನಿ ಆದರೆ ನನಗೂ ಬಹಳ‌‌ ಸಂತೋಷ. ಸರ್ಕಾರಕ್ಕೆ ಸಲಹೆ ಕೊಡ್ತೀರ ಎಂಬ ಪ್ರಶ್ನೆಗೆ  ನನ್ನ‌ ಸಲಹೆಯನ್ನ ಅಲ್ಲಿ ಹೇಳ್ತೇನೆ ಎಂದ ಸ್ಪೀಕರ್ ಉತ್ತರಿಸಿದ್ದಾರೆ.