ಮನೆ Latest News ಬಿಜೆಪಿ ಗಲಾಟೆ ಮಧ್ಯೆ ಕರ್ನಾಟಕ ಧನ ವಿನಿಯೋಗ ವಿಧೇಯಕ 2025 ಅಂಗೀಕಾರ

ಬಿಜೆಪಿ ಗಲಾಟೆ ಮಧ್ಯೆ ಕರ್ನಾಟಕ ಧನ ವಿನಿಯೋಗ ವಿಧೇಯಕ 2025 ಅಂಗೀಕಾರ

0

ಬೆಂಗಳೂರು: ಬಿಜೆಪಿ ಗಲಾಟೆ ಮಧ್ಯೆ ಕರ್ನಾಟಕ ಧನ ವಿನಿಯೋಗ ವಿಧೇಯಕ 2025 ವಿಧಾನಪರಿಷತ್ ನಲ್ಲಿ ಅಂಗೀಕಾರವಾಗಿದೆ.

ಕರ್ನಾಟಕ ಧನ ವಿನಿಯೋಗ ಸಂಖ್ಯೆ ೩ ವಿಧೇಯಕ ೨೦೨೫ ನ್ನು ಸಿಎಂ ಸಿದ್ದರಾಮಯ್ಯ ಮಂಡನೆ ಮಾಡಿದರು.  ೩೩೫೨ ಕೋಟಿ ಮೊತ್ತದ ಪೂರಕ ಅಂದಾಜು ಮಂಡಿಸಿದರು.

ಈ ವೇಳೆ ಮಾತನಾಡಿದ ಛಲವಾದಿ ನಾರಾಯಣಸ್ವಾಮಿ ಸರ್ಕಾರ ಸಾಲವನ್ನು ಹೆಚ್ಚು ಮಾಡುತ್ತಿದೆ.ವಿಧಾನಸೌಧದಲ್ಲಿ ಕ್ಯಾಬಿನೆಟ್ ಮೀಟಿಂಗ್ ಮಾಡಿದರೆ ಏನೂ ಖರ್ಚಾಗುವುದಿಲ್ಲ. ನಂದಿ ಬೆಟ್ಟದಲ್ಲಿ ೩ ಕೋಟಿ ಖರ್ಚು ಬಂತು ದುಂದು ವೆಚ್ಚ ಅಲ್ವಾ?.ಸಾಧನಾ ಸಮಾವೇಶ ಮಾಡಿದ್ರಿ ೧೦ ಕೋಟಿ ಖರ್ಚಾಯಿತು. ನಮ್ಮತ್ರ ಬಹಳಷ್ಟು ದುಡ್ಡಿದೆ ಅಂತ ಸಿಎಂ ಹೇಳುವುದಾದರೆ ಗ್ಯಾರಂಟಿಗಳಿಗೆ ಪರಿಶಿಷ್ಟ ಜಾತಿಗಳ ಮೀಸಲಿಟ್ಟ ಹಣ ಯಾಕೆ ಖರ್ಚು ಮಾಡಿದಿರಿ?.ನಾಗಮೋಹನ್ ದಾಸ್ ಅವರ ಕಮಿಟಿಗೆ ೧೧೫ ಕೋಟಿ ಕೊಟ್ಟಿದ್ದೀರಿ .ಅವೆಲ್ಲವನ್ನೂ ಎಸ್.ಸಿಪಿ ಟಿಎಸ್ಪಿಯಿಂದಲೇ ಹೋಗುತ್ತದೆ.ನಾಗಮೋಹನ್ ದಾಸ್ ವರದಿಯನ್ನು ತಿರಸ್ಕಾರವೇ ಮಾಡಿದ್ದೀರಿ.ಹಾಗಾದರೆ ಕಮಿಟಿಗೆ ಕೊಟ್ಟ ಹಣ ದುಂದುವೆಚ್ಚವೇ ಅಲ್ವಾ?.ನೀವು ಯಾವ ವೆಚ್ಚವನ್ನೂ ಕೂಡ ಕಡಿಮೆ‌ ಮಾಡಿಲ್ಲ. ರಸ್ತೆಗುಂಡಿ ಮುಚ್ಚುವುದಕ್ಕೇ ಆಗುತ್ತಿಲ್ಲ ಈ ಸರ್ಕಾರಕ್ಕೆ. ನಾವು ತಲೆ ತಗ್ಗಿಸಬೇಕಾಗಿದೆ ಎಂದು ಶಾಸಕರೇ ಮಾತಾಡ್ತಾರೆ.ಸರ್ಕಾರ ಸಾಲವನ್ನು ಹೆಚ್ಚೆಚ್ಚು ಮಾಡುತ್ತಲೇ ಇದೆಯಲ್ಲ.ದುಂದುವೆಚ್ಚ ಮಾಡಿ ಜನರಿಗೆ ಹೊರೆ ಹಾಕುವುದು ಸರಿಯಲ್ಲ? ಎಂದರು.

ಈ ವೇಳೆ ವಿಧೇಯಕದ ಬಗ್ಗೆ ಬಿಜೆಪಿ ಸದಸ್ಯರಿಂದ ತೀವ್ರ ಆಕ್ಷೇಪ ವ್ಯಕ್ತವಾಯಿತು. ಗದ್ದಲ ಗಲಾಟೆ ನಡೆಯಿತು. ಎಸ್ಸಿಪಿ ಟಿಎಸ್ಪಿ ವಿಚಾರದಲ್ಲಿ ಸಿಎಂ ಸಿದ್ದರಾಮಯ್ಯ ಹಾಗೂ ಬಿಜೆಪಿ ಸದಸ್ಯರ ನಡುವೆ ವಾಕ್ಸಮರ ಉಂಟಾಯಿತು. ಪರಿಶಿಷ್ಟ ಜಾತಿಗಳ ವಿರೋಧಿಗಳು ಎಂದು ಈ ವೇಳೆ ಸಿಎಂ ಕಿಡಿ ಕಾರಿದರು. ಹೀಗೆ ಗದ್ದಲದ ನಡುವೆಯೇ‌ ಧನ ವಿನಿಯೋಗ ವಿಧೇಯಕ ಅಂಗೀಕಾರವಾಯಿತು.

ಇದಕ್ಕೆ ಛಲವಾದಿ ನಾರಾಯಣಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ರು.SCSP-TSP ಯಲ್ಲಿ ಗ್ಯಾರಂಟಿಗೆ ಹಣ ತೆಗೆದು ಇದ್ದಿದ್ದೀರಾ. ನಾವು ದಾಖಲೆ ಕೊಡ್ತೀವಿ.14 ಸಾವಿರ ಕೋಟಿ ಗ್ಯಾರಂಟಿ ಗೆ ಖರ್ಚು ಮಾಡಿದ್ದೀರಾ ಎಂದರು. ಆಗ ಸಿಎಂ ಸಿದ್ದರಾಮಯ್ಯ ಬಿಜೆಪಿ ಅವರು ಪರಿಶಿಷ್ಟ ಜಾತಿಗಳ ವಿರೋಧಿಗಳು. ಇವರಿಂದ ನಾವು ಪಾಠ ಕಲಿಬೇಕಾ?. SCSP-TSP ಕಾಯ್ದೆ ಕೇಂದ್ರದಲ್ಲಿ ಯಾಕೆ ತಂದಿಲ್ಲ?. ಸಿಎಂ ಉತ್ತರಕ್ಕೆ ಬಿಜೆಪಿ ಸದಸ್ಯರು ವಿರೋಧ ವ್ಯಕ್ತಪಡಿಸಿದ್ರು. ಸದನದಲ್ಲಿ ಗದ್ದಲ ಗಲಾಟೆ ಉಂಟಾಯಿತು.