ಮನೆ Latest News ಸ್ಯಾಂಡಲ್ ವುಡ್ ನ ಕಲ್ಜಿಗ ಸಿನಿಮಾದ ವಿರುದ್ಧ ಮಂಗಳೂರಿನ ದೈವಾರಾಧನೆ ಸಂರಕ್ಷಣಾ ವೇದಿಕೆ ಆಕ್ರೋಶ

ಸ್ಯಾಂಡಲ್ ವುಡ್ ನ ಕಲ್ಜಿಗ ಸಿನಿಮಾದ ವಿರುದ್ಧ ಮಂಗಳೂರಿನ ದೈವಾರಾಧನೆ ಸಂರಕ್ಷಣಾ ವೇದಿಕೆ ಆಕ್ರೋಶ

0

ಮಂಗಳೂರು:ಕಾಂತಾರ ಸಿನಿಮಾದ ಬಳಿಕ ಕರಾವಳಿಗರಿಗ ಮಾತ್ರವಲ್ಲದೇ ರಾಜ್ಯ ಹೊರ ರಾಜ್ಯಗಳಲ್ಲೂ ಜನರಿಗೆ ದೈವಾರಾಧನೆ ಅಂದರೆ ಏನು ಅನ್ನೋದು ಗೊತ್ತಾಗುತ್ತಿದೆ. ಅಲ್ಲದೇ ತುಳುನಾಡಿನ ದೈವಾರಾಧನೆ ಬಗ್ಗೆ ಅನೇಕರಲ್ಲಿ ಆಸಕ್ತಿ ಕೂಡ ಹೆಚ್ಚಾಗುತ್ತಿದೆ. ಕಾಂತಾರ ಸಿನಿಮಾದ ಬಳಿಕ ಇದೀಗ ಮತ್ತೊಂದು ಕನ್ನಡ ಸಿನಿಮಾ ಗಾಂಧೀನಗರಕ್ಕೆ ಎಂಟ್ರಿ ಕೊಟ್ಟಿದೆ,

ಹೌದು.. ಕಾಂತಾರ ಬಳಿಕ‌ ಮತ್ತೊಂದು ಕನ್ನಡ ಸಿನಿಮಾದಲ್ಲಿ ದೈವದ ಚಿತ್ರೀಕರಣ ಮಾಡಲಾಗಿದೆ. ಕೊರಗಜ್ಜನ ಕುರಿತಾದ ಕಥಾ ಹಂದರವಿರುವ ಕಲ್ಜಿಗ ಸಿನಿಮಾದಲ್ಲಿ ರಿಲೀಸ್ ಆಗಿದೆ. ಇದೀಗ ಈ ಸಿನಿಮಾ ದೈವರಾಧಕರ ಕೆಂಗಣ್ಣಿಗೆ ಗುರಿಯಾಗಿದೆ. ಕಲ್ಜಿಗ ಸಿನಿಮಾದಲ್ಲಿ ಕರಾವಳಿಯ ಕಾರಣಿಕ ದೈವ ಕೊರಗಜ್ಜನನ್ನು ತೋರಿಸಲಾಗುತ್ತಿದೆ. ಕೊರಗಜ್ಜನ ವೇಷಭೂಷಣ ಧರಿಸಿ ಸಿನಿಮಾದ ಶೂಟಿಂಗ್ ಗಾಗಿ ನರ್ತನ ಮಾಡಲಾಗಿದೆ. ಇದೀಗ ಈ ಬಗ್ಗೆ ಸಿನಿಮಾ ತಂಡದ ವಿರುದ್ಧ ಮಂಗಳೂರಿನ ದೈವಾರಾಧನೆ ಸಂರಕ್ಷಣಾ ವೇದಿಕೆ ಆಕ್ರೋಶ ಹೊರ ಹಾಕಿದೆ.  ಸಾಮಾಜಿಕ ಜಾಲತಾಣದಲ್ಲೂ ಬಾಯ್ಕಾಟ್ ಕಲ್ಜಿಗ ಅಭಿಯಾನ ನಡೆಸುತ್ತಿದೆ.

ಇಂದು ರಾಜ್ಯಾದ್ಯಂತ ಕಲ್ಜಿಗ ಸಿನಿಮಾ ತೆರೆಗೆ ಬಂದಿದೆ. ಕೋಸ್ಟಲ್ ವುಡ್ ಕಲಾವಿದರು ನಿರ್ಮಿಸಿರುವ ಸ್ಯಾಂಡಲ್ ವುಡ್ ನ ಕಲ್ಜಿಗ ಸಿನಿಮಾದಲ್ಲಿ ಕೋಸ್ಟಲ್ ವುಡ್ ನ ಪ್ರಸಿದ್ದ ನಟ ಅರ್ಜುನ್ ಕಾಪಿಕಾಡ್ ನಟಿಸಿದ್ದಾರೆ.ಸಿನಿಮಾದಲ್ಲಿ ಕೊರಗಜ್ಜ ದೈವದ ಚಿತ್ರೀಕರಣ ಮಾಡಿ ಅನುಕರಣೆ ಮಾಡಿರುವುದಕ್ಕೆ ದೈವರಾಧಕರು ಅಸಮಾಧಾನ ಹೊರ ಹಾಕಿದ್ದಾರೆ.ಹಾಗಾಗಿ ಚಿತ್ರದ ವಿರುದ್ಧ ಕಾನೂನು ಹೋರಾಟ ನಡೆಸುವುದಕ್ಕೂ ಮಂಗಳೂರಿನ ದೈವಾರಾಧನೆ ಸಂರಕ್ಷಣಾ ವೇದಿಕೆ ನಿರ್ಧರಿಸಿದೆ.

ಕಲ್ಜಿಗ ಸಿನಿಮಾದಲ್ಲಿ ತುಳುನಾಡಿನ ಕಾರಣಿಕ ಕೊರಗಜ್ಜ ದೈವದ ಬಳಕೆ ವಿಚಾರಕ್ಕೆ  ವಿರೋಧ ವ್ಯಕ್ತವಾದ ಬೆನ್ನಲ್ಲೇ ಕೊರಗಜ್ಜನ ಸನ್ನಿಧಾನಕ್ಕೆ ನಟ ಅರ್ಜುನ್ ಕಾಪಿಕಾಡ್ ಓಡೋಡಿ ಬಂದಿದ್ದಾರೆ. ಕಲ್ಜಿಗ ಚಿತ್ರದ ನಾಯಕ ನಟ ಅರ್ಜುನ್ ಕಾಪಿಕಾಡ್, ಚಿತ್ರ ತಂಡ ಕೊರಗಜ್ಜನ ಸನ್ನಿಧಾನಕ್ಕೆ ಭೇಟಿ ಕೊಟ್ಟಿದೆ.ಮಂಗಳೂರು ಹೊರವಲಯದ ಕಲ್ಲಾಪು ಬುರ್ದುಗೋಳಿ ಕೊರಗಜ್ಜ ಆದಿಸ್ಥಳಕ್ಕೆ ಸಿನಿಮಾ ತಂಡ ಭೇಟಿ ಕೊಟ್ಟಿದೆ.ಕೊರಗಜ್ಜ ದೈವದ ಮುಂದೆ ಚಿತ್ರತಂಡ ವಿಶೇಷ ಪ್ರಾರ್ಥನೆ ಸಲ್ಲಿಸಿದೆ.ಚಿತ್ರದ ಯಶಸ್ವಿಗಾಗಿ ಪ್ರಾರ್ಥನೆ ಸಲ್ಲಿಸಿದೆ ಚಿತ್ರ ತಂಡ.