ಮನೆ Latest News ಸಮಾಜದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೀವಿ ಅಷ್ಟೇ, ಯಾವುದೇ ರಾಜಕಾರಣ ಇಲ್ಲ;ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ

ಸಮಾಜದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೀವಿ ಅಷ್ಟೇ, ಯಾವುದೇ ರಾಜಕಾರಣ ಇಲ್ಲ;ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿಕೆ

0

ಬೆಂಗಳೂರು ; ಸಮಾಜದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೀವಿ ಅಷ್ಟೇ, ಯಾವುದೇ ರಾಜಕಾರಣ ಇಲ್ಲ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ಹೇಳಿದ್ದಾರೆ.

ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು ಅಪೆಕ್ಸ್‌ ಬ್ಯಾಂಕ್‌ನಲ್ಲಿ ಬೋರ್ಡ್ ಇದೆ. ಬೋರ್ಡ್‌ನಲ್ಲಿ ವಿಶ್ವಾಸ ಅವರಿಗಿದ್ರೆ ಕಂಟಿನ್ಯೂ ಆಗ್ತಾರೆ.ವಿಶ್ವಾಸ ಇಲ್ಲ ಅಂದ್ರೆ ಕೆಳಗಿಳಿಯುತ್ತಾರೆ. ನಿನ್ನೆ ಡಿಕೆಶಿ ಬಂದಾಗ ನಾನು ಕೂಡ ಇರಬೇಕಿತ್ತು. ಆರೋಗ್ಯ ಸರಿ ಇರದ ಕಾರಣ ನಾನು ವೈದ್ಯರ ಬಳಿ ಹೋದೆ.ಡಿಕೆಶಿ ಅವರ ಹೇಳಿಕೆಗೆ ನನ್ನ ಸಹಮತ ಇದೆ. ಇವತ್ತು ಅದರ ಬಗ್ಗೆ ಆದಷ್ಟು ಜಾಗೃತೆಯಿಂದ ತೀರ್ಮಾನ ಮಾಡ್ತೀವಿ. ಡಿಕೆಶಿ ಜೊತೆ ಮೀಟಿಂಗ್ ಫಿಕ್ಸ್ ಮಾಡಿದ್ದೇ ನಾವು.ನಾನು ಸ್ವಾಮೀಜಿ ಭೇಟಿಗೆ ಹೋಗಿದ್ದು ಎಷ್ಟೊತ್ತಿಗೆ? ಡಾಕ್ಟರ್ ಬಳಿ ಹೋಗಿ ಆಮೇಲೆ ಜಾರಕಿಹೊಳಿ ಮನೆಗೆ ಹೋಗಿದ್ದು.ಸಮಾಜದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಸ್ವಾಮೀಜಿ ಸಭೆ ಕರೆದಿದ್ರು.ಅನಿಲ್ ಚಿಕ್ಕಮಾಧು, ಬಾಲಚಂದ್ರ ಜಾರಕಿಹೊಳಿ ಹೊರತುಪಡಿಸಿ ಎಲ್ಲಾ ಶಾಸಕರು ಇದ್ರು.ಎಲ್ಲಾ ಶಾಸಕರು ಭಾಗವಹಿಸಿದ್ರು.ಸಮಾಜದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಿದ್ದೀವಿ ಅಷ್ಟೇ, ಯಾವುದೇ ರಾಜಕಾರಣ ಇಲ್ಲ ಎಂದು ಕೆ.ಎನ್.ರಾಜಣ್ಣ ಹೇಳಿದ್ದಾರೆ