ಬೆಂಗಳೂರು; ಡಿಸಿಎಂ ಹಾಗೂ ಸಿಎಂ ಗೊಂದಲ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ ಕೆ ಶಿವಕುಮಾರ್ ಮಾತನಾಡುತ್ತಾ ಯಾವ ಎಂಎಲ್ಎ ಕೂಡ ಮಾತಾಡುವ ಅವಶ್ಯಕತೆ ಇಲ್ಲ.ಎಐಸಿಸಿಯವರು ನಾನೂ ವಿಧಿಯಿಲ್ಲದೇ ನೊಟೀಸ್ ನೀಡಬೇಕಾಗುತ್ತದೆ ಎಂದಿದ್ದರು. ಡಿಸಿಎಂ ಹೇಳಿಕೆಗೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿರುಗೇಟು ನೀಡಿದ್ದು, ಕಾಂಟ್ರವರ್ಸಿ ಆಗಬಾರದು ಅಂತಾ ಹೇಳಿರ್ತಾರೆ.ಹೆಚ್ಚುವರಿ ಡಿಸಿಎಂ ಕೇಳ್ಬಾರ್ದಾ ನಾವು..? ಕೇಳಿದ್ರೆ ತಪ್ಪಾಗುತ್ತಾ..? ವಾರ್ನಿಂಗ್ ನಾನ್ ಕೇಳ್ತೀನೇನ್ರೀ, ನಾನು ರಾಜಣ್ಣ ರಾಜಣ್ಣಾನೇ ಎಂದು ತಿರುಗೇಟು ಕೊಟ್ಟಿದ್ದಾರೆ.
ಬಾಯಿಗೆ ಬೀಗ ಎಲ್ಲಾರು ಹಾಕಿಕೊಳ್ಳಬೇಕು.ಎಲ್ಲಾರು ಸುಮ್ಮನೆ ಇದ್ರೆ ನಾನೂ ಸುಮ್ಮನೆ ಇರ್ತೀನಿ.ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಅಂತಾ ಹೇಳಿದರೆ ಕೇಳಿಕೊಂಡು ಸುಮ್ಮನೆ ಇರಬೇಕಾ?ಶಾಮನೂರು ಶಿವಶಂಕರಪ್ಪ ಅವರನ್ನು ಸಿಎಂ ಮಾಡಿ ಅಂತಾ ಅವ್ರ ಸ್ವಾಮಿಗಳು ಕೇಳ್ತಾರೆ. ಸತೀಶ್ ಜಾರಕಿಹೊಳಿ ಅವರನ್ನು ಮಾಡಿ ಅಂತಾ ಅವ್ರ ಸ್ವಾಮೀಜಿಗಳು ಹೇಳ್ತಾರೆ. ಸ್ವಾಮೀಜಿಗಳು ಹೇಳೋದನ್ನ ಕೇಳೋದಕ್ಕೆ ಆಗುತ್ತಾ..? ಸ್ವಾಮೀಜಿ ಹೇಳಿರೋದು ಪ್ರಜಾಪ್ರಭುತ್ವಕ್ಕೆ ಅವಮಾನ ನಾನು ಸಿಎಂ ಪರವಾಗಿ ಅಂತಲ್ಲ.. ಪ್ರಜಾಪ್ರಭುತ್ವ ಪರವಾಗಿ ಇದ್ದೀನಿ ಎಂದಿದ್ದಾರೆ.
ಇನ್ನು ನಾನು ಹಗರಣ ಮಾಡಿದ್ರೆ ತನಿಖೆ ಮಾಡಲಿ. ಬಡವರ ಪರ ಸಿದ್ದರಾಮಯ್ಯ ಕೆಲಸ ಮಾಡ್ತಾರೆ.ಅದಕ್ಕೆ ಅವ್ರ ಜೊತೆ ನಾವಿದ್ದೇವೆ.ಸ್ವಾಮೀಜಿಗಳದ್ದು ಅವ್ರ ಜಾಗ ಅವ್ರದ್ದು ಎಂದಿದ್ದಾರೆ. ಎಂಪಿಯಾಗಿ ಡಿಕೆ ಸುರೇಶ್ ಪರಿಣಾಮಕಾರಿಯಾಗಿ ಕೆಲಸ ಮಾಡಿರೋರಲ್ಲಿ ಪ್ರಥಮರು. ಯಾರ್ ಸೋಲಿಸಿದ್ದು.. ಇವ್ರೆಲ್ಲಾ ಸ್ವಾಮೀಜಿಗಳು ಒಂದಾಗಿ ಸೋಲಿಸಿದ್ರು.ದೇವೇಗೌಡ್ರು ಹುಟ್ಟು ಹಾಕಿದ ಸ್ವಾಮೀಜಿಗಳು ಇವ್ರು. ಯಾರನ್ನ ಸಿಎಂ ಮಾಡಬೇಕು ಅಂತಾ ಶಾಸಕರು, ಹೈಕಮಾಂಡ್ ನಿರ್ಧಾರ ಮಾಡುತ್ತೆ. ಸ್ವಾಮೀಜಿಗಳು ಹೇಳಿದಂತೆ ಮಾಡೋಕೆ ಆಗಲ್ಲ ಎಂದು ಗುಡುಗಿದ್ದಾರೆ. ಸ್ವಾಮೀಜಿಗಳು ಆರೋಪ ಮಾಡಿದ್ದಾರಾ. ಹಾಗಾದರೆ ಅದು ತನಿಖೆ ಮಾಡಿಸಲಿ ಎಂದು ಸವಾಲು ಹಾಕಿದ್ದಾರೆ.
ಹಾಗಾದ್ರೆ ಡಿ ಸಿ ಎಂ ಡಿ ಕೆ ಶಿವಕುಮಾರ್ ಹೇಳಿದ್ದೇನು?
ಇನ್ನು ಸಿಎಂ. ಡಿಸಿಎಂ ಗೊಂದಲ ವಿಚಾರಕ್ಕೆ ಸಂಬಂಧಪಟ್ಟಂತೆ ಇಂದು ಮಾತನಾಡಿದ ಡಿ ಕೆ ಶಿವಕುಮಾರ್ ಹೀಗೇ ಮುಂದುವರಿದರೆ ನೊಟೀಸ್ ನೀಡಬೇಕಾಗುತ್ತದೆ.ಬಾಯಿಗೆ ಬೀಗ ಹಾಕಿಕೊಂಡು ಇರಿ ಎಂದು ಸಚಿವರಿಗೆ ಡಿ ಕೆ ಶಿವಕುಮಾರ್ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಯಾವ ಡಿಸಿಎಂ ಚರ್ಚೆಯೂ ಇಲ್ಲ ಸಿಎಂ ಪ್ರಶ್ನೆಯೂ ಇಲ್ಲ.ಯಾವ ರೆಕಮಂಡೇಷನ್ ಕೂಡ ಅವಶ್ಯಕತೆ ಇಲ್ಲ.ನಾನು ಖರ್ಗೆ ಹಾಗೂ ಸಿದ್ದರಾಮಯ್ಯ ಕೂತು ಪಕ್ಷದ ಹಿತದೃಷ್ಟಿಯಿಂದ ಒಂದು ತೀರ್ಮಾನಕ್ಕೆ ಬಂದಿದ್ದೇವೆಯಾವ ಎಂಎಲ್ಎ ಕೂಡ ಮಾತಾಡುವ ಅವಶ್ಯಕತೆ ಇಲ್ಲ.ಎಐಸಿಸಿಯವರು ನಾನೂ ವಿಧಿಯಿಲ್ಲದೇ ನೊಟೀಸ್ ನೀಡಬೇಕಾಗುತ್ತದೆ.ಅನಿವಾರ್ಯವಾಗಿ ಪಕ್ಷದ ಶಿಸ್ತು ಕಾಪಾಡಲು ನೊಟೀಸ್ ನೀಡಬೇಕಾಗುತ್ತದೆ ಎಂದಿದ್ದಾರೆ.
ಪಕ್ಷ ಕಟ್ಟಲು ಬಹಳ ಕಷ್ಟಪಟ್ಟಿದ್ದೇವೆ.ಪಕ್ಷ ಅಧಿಕಾರಕ್ಕೆ ತರಲು ಬರಲು ಎಷ್ಟು ಕಷ್ಟಪಟ್ಟಿದ್ದೇವೆ ನಮಗೆ ಗೊತ್ತಿದೆ.ಪಕ್ಷದ ಹಿತದೃಷ್ಟಿಯಿಂದ ಎಲ್ಲರೂ ನಿಮ್ಮ ಬಾಯಿಗೆ ಬೀಗ ಹಾಕಿಕೊಂಡು ಇದ್ದರೆ ಒಳ್ಳೆಯದಾಗುತ್ತದೆ.ಯಾವ ಸ್ವಾಮೀಜಿಗಳೂ ಮಾತಾಡಿಲ್ಲ, ಎಲ್ಲರಿಗೂ ಕೈ ಮುಗಿಯುತ್ತೇನೆ ನಮ್ಮ ರಾಜಕಾರಣದ ಸುದ್ದಿಗೆ ನೀವು ಬರಬೇಡಿ ಎಂದಿದ್ದಾರೆ.