ಬೆಂಗಳೂರು; ಗುತ್ತಿಗೆ ಕೈಬಿಟ್ಟು ಕೆ.ಜೆ. ಜಾರ್ಜ್ ರಾಜೀನಾಮೆ ನೀಡಬೇಕು ಎಂದು ಶಾಸಕ ಡಾ. ಸಿ.ಎನ್. ಅಶ್ವಥ್ ನಾರಾಯಣ ಆಗ್ರಹಿಸಿದ್ದಾರೆ.
ಸ್ಮಾರ್ಟ್ ಮೀಟರ್ ಪ್ರಕರಣದಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಎಫ್ ಐಆರ್ ದಾಖಲಿಸಲು ಕೋರ್ಟ್ ಅದೇಶ ಹಿನ್ನೆಲೆ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು ಜನರ ಜೇಬಿನಿಂದ ಹಣ ತೆಗೆಯುವ ಕೆಲಸ ಆಗುತ್ತಿದೆ.ಸದನದಲ್ಲಿ ನಾವು ಪ್ರಸ್ತಾಪ ಮಾಡಿದ್ದೆವು. ನಾವು ಪ್ರತಿನಿಧಿಸುವ ಜನರು, ಪಕ್ಷಕ್ಕೆ ಗೌರವ ತರುವ ಕೆಲಸ ಮಾಡಬೇಕು.ನಾವು ಮಾಡುತ್ತಿರುವುದು ಸರಿ ಇದೆ ಎಂದು ಸಮರ್ಥನೆ ಮಾಡಿಕೊಂಡರು. ಸರ್ಕಾರ ನಿಷ್ಕ್ರಿಯ ಆಗಿರುವುದರಿಂದ ನಾವು ಎಲ್ಲಾ ಕಡೆ ಬಾಗಿಲು ತಟ್ಟಿ ಪಿಸಿಆರ್ ದಾಖಲು ಮಾಡಬೇಕಾಯಿತು. ಗುತ್ತಿಗೆ ಕೈಬಿಟ್ಟು ಕೆ.ಜೆ. ಜಾರ್ಜ್ ರಾಜೀನಾಮೆ ನೀಡಬೇಕು. ಸಿದ್ದರಾಮಯ್ಯನವರು ಎಲ್ಲಿದ್ದೀರಾ? ನಿಮ್ಮ ನಿಲುವೇನು?. ನಿಮ್ಮ ಕಿರೀಟಕ್ಕೆ ಹೊಸ ಗರಿ ಸೇರಿಕೊಂಡಿದೆ. ಕೆ.ಜೆ. ಜಾರ್ಜ್ ಅವರನ್ನು ಸಂಪುಟದಿಂದ ವಜಾಗೊಳಿಸಬೇಕು ಎಂದು ಆಗ್ರಹಿಸಿದ್ದಾರೆ.
ನಿಮಗೆ ಆದೇಶದ ಬಗ್ಗೆ ಗೊತ್ತಿಲ್ಲ ಅಂದರೆ ಗೊತ್ತಾದ ಮೇಲೆ ರಾಜೀನಾಮೆ ಕೊಡುತ್ತೀರಾ ಜಾರ್ಜ್ ಅವರೇ?. ನ್ಯಾಯಾಲಯಕ್ಕೆ ತಲೆ ಬಾಗುತ್ತೇವೆ ಎನ್ನುವವರು ತಕ್ಷಣ ತಲೆ ಬಾಗಲಿ. ಕೆಲವು ಗಂಟೆಗಳ ಬಳಿಕ ಆದೇಶ ಸಿಗುತ್ತದೆ, ಆಗ ರಾಜೀನಾಮೆ ನೀಡಲಿ ಎಂದು ಒತ್ತಾಯಿಸಿದ್ದಾರೆ.
ಕೆಜಿ ಹಳ್ಳಿ, ಡಿಜೆ ಹಳ್ಳಿ ಪ್ರಕರಣದಲ್ಲಿ ಮೂವರು ಅರೋಪಿಗಳಿಗೆ ಪ್ರಕಟವಾಗಿರುವ ಬಗ್ಗೆ ಮಾತನಾಡಿದ ಅವರು ಶಿಕ್ಷೆಯನ್ನು ಸ್ವಾಗತ ಮಾಡುತ್ತೇವೆ. ಇನ್ನಷ್ಟು ಆರೋಪಿಗಳಿಗೆ ಶಿಕ್ಷೆ ಆಗಬೇಕು ಎಂದ ಅವರು ಕಾಲ್ತುಳಿತ ಪ್ರಕರಣದಲ್ಲಿ ಪೊಲೀಸ್ ವಿರುದ್ಧ ಇಲಾಖಾ ತನಿಖೆ, ಕೆಎಸ್‌ಸಿಎ, ಆರ್‌ಸಿಬಿ ವಿರುದ್ಧ ಕ್ರಿಮಿನಲ್ ಕೇಸ್ ಗೆ ಸಂಪುಟ ತೀರ್ಮಾನ ವಿಚಾರದ ಬಗ್ಗೆ ಇದೇ ವೇಳೆ ಮಾತನಾಡಿ ಆಪಾದಿತರೇ ಇವರು. ಆಪಾದಿತರಾಗಿರುವ ಇವರು ಏನೇ ಮಾಡಿದರೂ ಮಾನ್ಯತೆ ಇಲ್ಲ. ಇವರಿಗೆ ಬೇಕಾದ ಹಾಗೆ ಮಾಡುತ್ತಿದ್ದಾರೆ. ಕೋರ್ಟ್‌ನಲ್ಲಿ ಪ್ರಕರಣ ಇದೆ. ಕೋರ್ಟ್ ಮೇಲೆ ಭರವಸೆ ಇಡೋಣ. ಇವರು ಏನೇ ಮಾಡಿದರೂ ಅದಕ್ಕೆ ಬೆಲೆ ಇಲ್ಲ ಎಂದಿದ್ದಾರೆ.