ಬೆಂಗಳೂರು; ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಸಭೆ ನಡೆಯಿತು. ಸಭೆಯಲ್ಲಿ ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಭಾಗಿಯಾಗಿದ್ದರು. ಸಿಎಂ ಕಾವೇರಿ ನಿವಾಸದಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಸಾರಿಗೆ ನೌಕರರಿಗೆ ಸಮಾನ ವೇತನ ಜಾರಿ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ನಡೆಯಿತು. ಈಗಾಗಲೇ ಪ್ರಣಾಳಿಕೆಯಲ್ಲಿ ಹೇಳಿದಂತೆ ಸಮಾನ ವೇತನ ಜಾರಿಗೆ ಸಾರಿಗೆ ನೌಕರರು ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ಸಾರಿಗೆ ನೌಕರರ ಜೊತೆ ಇಲಾಖಾ ಸಚಿವರ ಸಮ್ಮುಖದಲ್ಲಿ ಸಿಎಂ ಸಭೆ ನಡೆಸಿದ್ರು.
ಇನ್ನು ಸಾರಿಗೆ ನೌಕರರ ಸಮಸ್ಯೆಗಳನ್ನ ಆಲಿಸಲು ಸಿಎಂ ಸಭೆ ಕರೆದಿದ್ದಾರೆ. ಕೆಎಸ್‌ಆರ್‌ಟಿಸಿ ನಿಗಮಗಳ ಕಾರ್ಮಿಕ ಸಂಘಟನೆಗಳ ಕ್ರಿಯಾ ಸಮಿತಿ, ಕೆಎಸ್‌ಆರ್‌ಟಿಸಿ ನಿಗಮಗಳ ಒಕ್ಕೂಟಗಳ ಮುಖಂಡರ ಜೊತೆ ಸಭೆ ನಡೆಸಿದ್ದಾರೆ. ಇನ್ನು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಘದ ಗೌರವಾಧ್ಯಕ್ಷ ಭಾಸ್ಕರ್ ರಾವ್ ಈ ಬಗ್ಗೆ ಮಾತನಾಡಿ ಸಿಎಂ, ಸಾರಿಗೆ ಸಚಿವರ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಮೂರು ಬೇಡಿಕೆಗಳನ್ನು ಇಟ್ಟಿದ್ದೇವೆ. ಈ ಬಗ್ಗೆ ಸಿಎಂಗೆ ಮನವಿ ಮಾಡಿದ್ದೇವೆ.38 ತಿಂಗಳ ಅರಿಯರ್ಸ್ ಬಗ್ಗೆ ಹೇಳಿದ್ದೇವೆ.1-1-24 ರಿಂದ ವೇತನ ಪರಿಷ್ಕರಣೆ ಬಗ್ಗೆ ಅಧಿಕಾರಿಗಳ ಜೊತೆ ಮಾತನಾಡ್ತೇವೆ ಅಂದ್ರು. ಕಳೆದ ಸಲದ ಮುಷ್ಕರದಲ್ಲಿ ವಜಾ ಆದ ಸಾರಿಗೆ ನೌಕರರನ್ನು ಮಾನವೀಯತೆಯಿಂದ ವಾಪಾಸ್ ತೆಗೆದುಕೊಳ್ಳಲು ಹೇಳಿದ್ದೇವೆ.ಹಬ್ಬ-ಹರಿದಿನದಂದು ಕೆಲಸ ಮಾಡ್ತಾರೆ.ತುರ್ತು ಕ್ರಮ ಕೈಗೊಳ್ಳಲು ಹೇಳಿದ್ದೇವೆ. ಸಿಎಂ ಇದಕ್ಕೆ ಸ್ಪಂದನೆ ನೀಡಿದ್ದಾರೆ ಎಂದರು.
ರಾಜಕೀಯವಾಗಿ ಜಾತಿಗಣತಿಯೇ ಅತಿಮುಖ್ಯ: ವಿಕಾಸಸೌಧದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿಕೆ
ಬೆಂಗಳೂರು; ರಾಜಕೀಯವಾಗಿ ಜಾತಿಗಣತಿಯೇ ಅತಿಮುಖ್ಯ ಎಂದು ವಿಕಾಸಸೌಧದಲ್ಲಿ ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದ್ದಾರೆ.
ಜಾತಿಗಣತಿ ವರದಿಗೆ ಮೇಲ್ವರ್ಗಗಳ ವಿರೋಧ ವಿಚಾರದ ಬಗ್ಗೆ ಮಾತನಾಡಿದ ಅವರು ಯಾವುದೇ ದೇಶದಲ್ಲಿ ಪೊಲಿಟಿಕಲ್ ಜಸ್ಟೀಫೈ ಮಾಡಲು ಜಾತಿಗಣತಿ ಬೇಕು.ನನಗಿರುವ ಮಾಹಿತಿ ಪ್ರಕಾರ ಅಸೆಂಬ್ಲಿವಾರು ಜಾತಿಗಣತಿ ಕುರಿತು ಸಿಡಿ ಕೊಡುವ ಸಾಧ್ಯತೆ ಇದೆ.ನಿಮ್ಮ ನಿಮ್ಮ ಸಮುದಾಯ ಎಷ್ಟಿದೆ ಅಂತ ಚೆಕ್ ಮಾಡಿ ಜಸ್ಟಿಫೈ ಮಾಡಲು ಅವಕಾಶ ಇದೆ.ರಾಜಕೀಯವಾಗಿ ಜಾತಿಗಣತಿಯೇ ಅತಿಮುಖ್ಯ.ಅಸೆಂಬ್ಲಿ ಚುನಾವಣೆ ನಡೆದ ಆರು ತಿಂಗಳಲ್ಲಿ ಲೋಕಸಭೆ ಚುನಾವಣೆಗೆ ನಲವತ್ತು ಲಕ್ಷ ಮತಗಳು ಹೆಚ್ಚಾಗುತ್ತೆ . ಹೀಗಾಗಿ ಜಾತಿಗಣತಿ ಬೇಕಾಗಿದೆ ಎಂದಿದ್ದಾರೆ.
ಸಮೀಕ್ಷೆ ಮಾಡಿರೋದು ಟೀಚರ್‌ಗಳು.ಟೀಚರ್‌ಗಳಿಗೆ ಇಂತಹದ್ದೆ ಮನೆಗೆ ಹೋಗಿ ಅಂತ ಹೇಳಕಾಗುತ್ತಾ..?.ವರದಿಯನ್ನೇ ನೋಡದೆ ಸಾರಾಸಗಟಾಗಿ ಸರಿ ಇಲ್ಲ ಎನ್ನುವುದು ಎಷ್ಟು ಸರಿ.? ನಿಮ್ಮ ಮನೆಗೆ ಬಂದಿಲ್ಲ ಅಂದ್ರೆ 95% ಮನೆಗೆ ಹೋಗಿದ್ದಾರಲ್ಲ. ಸಿಡಿ ಬಂದ ಮೇಲೆ ನಮ್ಮ ನಮ್ಮ ಸಮಾಜ ಎಷ್ಟಿದೆ ಅಂತ ನೋಡಿಕೊಳ್ಳಿ.ಡಿಕೆಶಿಯವ್ರು ಸಭೆ ಕರೆದಿದ್ದಾರೆ ಅಂದ್ರೆ ಸಹಜವಾಗಿ ಆ ಸಮುದಾಯಗಳಿಗೆ ಆತಂಕ ಇರುತ್ತೆ, ಅದಕ್ಕೆ ಸಭೆ ಕರೆದಿರ್ತಾರೆ.ಈ ಸ್ವಾಮೀಜಿಗಳು, ಜಾತಿ ಸಂಘಟನೆಗಳ ಲೆಕ್ಕಾಚಾರ ಕೇಳದ್ರೆ ಕರ್ನಾಟಕದಲ್ಲಿ ಜನಸಂಖ್ಯೆ 12 ಕೋಟಿ ಆಗುತ್ತೆ. ಸರ್ಕಾರದಿಂದ ಅಧಿಕೃತವಾಗಿ ವರದಿ ಬಂದಿದೆ. ವರದಿ ನೋಡೋಣ, ಸಾರ್ವಜನಿಕ ಚರ್ಚೆಗೆ ಬರಲಿ.ವರದಿಯಲ್ಲಿ ಬದಲಾವಣೆ ತರಲು ಅವಕಾಶ ಇದ್ರೆ ತರೋಣ ಎಂದಿದ್ದಾರೆ.