ಬೆಂಗಳೂರು; ವಿಧಾನಸೌಧದ ಗಾಂಧಿ ಪ್ರತಿಮೆ ಬಳಿ ಜೆಡಿಎಸ್ ಶಾಸಕರು ಪ್ರತಿಭಟನೆ ನಡೆಸಿದ್ರು.ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು ನೇತೃತ್ವದಲ್ಲಿ ಧರಣಿ ನಡೆಯಿತು.ಗ್ಯಾರಂಟಿ ಹಣ ಬಿಡುಗಡೆ, ಅಭಿವೃದ್ಧಿ ಶೂನ್ಯ ವಿಚಾರವಾಗಿ ಸರ್ಕಾರ ವಿರುದ್ಧ ಜೆಡಿಎಸ್ ಶಾಸಕರು ಹೋರಾಟ ಮಾಡಿದ್ರು.ಧರಣಿಯಲ್ಲಿ ಜೆಡಿಎಸ್ ಶಾಸಕರು,ಎಂಎಲ್ಸಿಗಳು ಭಾಗಿಯಾಗಿದ್ದರು.
ಈ ವೇಳೆ ಮತನಾಡಿದ ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಗೃಹ ಲಕ್ಷ್ಮೀ ಹಣ ಇವರ ಮನೆ ಸ್ವಂತಿಕೆ ಹಣ ಹಾಕಿದವರಂತೆ ಮಾತಾಡ್ತಾರೆ.ಯಾವಾಗ ಬೇಕು ಆವಾಗ ಹಣ ಹಾಕುವ ಕೆಲಸ ಮಾಡ್ತಿದ್ದಾರೆ.ಚುನಾವಣೆ ಬಂದಾಗ ಗೃಹ ಲಕ್ಷ್ಮೀ ಹಣ ಬಿಡುಗಡೆ ಮಾಡ್ತಿದ್ದಾರೆ ಎಂದ್ರು. ಸಚಿವ ವೆಂಕಟೇಶ್ ಆಡಿಯೋ ವಿಚಾರದ ಬಗ್ಗೆ ಮಾತನಾಡಿ ಅಧಿಕಾರಿಗಳಿಗೆ ಧಮ್ಕಿ ಹಾಕುವ ಕೆಲಸ ಸಚಿವರು ಮಾಡಿದ್ದಾರೆ. ನಮ್ಮ ಪಕ್ಷದ ಹೆಸರು ಹೇಳಿ ಅವಾಚ್ಯ ಪದ ಬಳಕೆ ಮಾಡಿದ್ದಾರೆ . ಇದರ ಬಗ್ಗೆ ನಾವು ಸದನದ ಒಳಗೆ, ಹೊರಗೆ ಹೋರಾಟ ಮಾಡುತ್ತೇವೆ. ಅಧಿಕಾರಿಗಳಿಗೆ ರಕ್ಷಣೆ ಕೊಡುವ ಕೆಲಸ ಆಗ್ತಿಲ್ಲ.ಮೈಕ್ರೋಫೈನಾನ್ಸ್ ಹಾವಳಿ ಹೆಚ್ಚಾಗಿದೆ.ಗುತ್ತಿಗೆದಾರರಿಗೆ ಬಾಕಿ ಬಿಲ್ ಬಿಡುಗಡೆ ಮಾಡುತ್ತಿಲ್ಲ ಎಂದರು.
ಎಸ್ಸಿಪಿ, ಟಿಎಸ್ಪಿ ಹಣ ಅವರಿಗೆ ಕೊಡುತ್ತಿಲ್ಲ.ಮಂತ್ರಿಯೋರ್ವರು ಜೈಲಿಗೆ ಹೋಗಿ ಬಂದರು ನಿಮಗೆ ಬುದ್ದಿ ಬಂದಿಲ್ಲ.ಜನರು ನಿಮಗೆ ಸರಿಯಾದ ಪಾಠ ಕಲಿಸುತ್ತಾರೆ.ಚುನಾವಣೆಗೆ ಮಾತ್ರ ನಿಮಗೆ ಅವರ ಮತ ಬೇಕಾ ಎಂದು ಸರ್ಕಾರದ ವಿರುದ್ಧ ಸುರೇಶ್ ಬಾಬು ವಾಗ್ದಾಳಿ ನಡೆಸಿದ್ದಾರೆ.











