ಬೆಂಗಳೂರು; ಸಂವಿಧಾನ ಬದಲಾವಣೆ ಆಗಬೇಕೆಂದು ಡಿಸಿಎಂ ಹೇಳಿಕೆ ವಿರೋಧಿಸಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ದ ಜೆಡಿಎಸ್ ಯಿಂದ ಪ್ರತಿಭಟನೆ ನಡೆಯಿತು. ಫ್ರೀಡಂ ಪಾರ್ಕ್ ನಲ್ಲಿ ಜೆಡಿಎಸ್ ವತಿಯಿಂದ ಧರಣಿ ನಡೆಸಿದ್ರು.
ಪ್ರತಿಭಟನೆ ವೇಳೆ ಸರ್ಕಾರ ಹಾಗೂ ಡಿಕೆ ಶಿವಕುಮಾರ್ ವಿರುದ್ದ ಆಕ್ರೋಶ ಹೊರ ಹಾಕಿದ್ರು. ಸಂವಿಧಾನ ವಿರೋಧಿ ಕಾಂಗ್ರೆಸ್ ಸರ್ಕಾರಕ್ಕೆ, ಡಿಕೆ ಶಿವಕುಮಾರ್ ಗೆ ಧಿಕ್ಕಾರ ಎಂದು ಘೋಷಣೆ ಕೂಗಿದ್ರು. ದಲಿತ ವಿರೋಧಿ ಸರ್ಕಾರ, 420 ಡಿಕೆ ಶಿವಕುಮಾರ್ ಎಂದು ಧಿಕ್ಕಾರ ಕೂಗಿ ಆಕ್ರೋಶ ಹೊರ ಹಾಕಿದ್ರು. ಬಂಡೆ ಕಳ್ಳ, ೪೨೦ ಶಿವಕುಮಾರ್ ಗೆ ಧಿಕ್ಕಾರ ಎಂದು ಧಿಕ್ಕಾರ ಕೂಗಿದ್ರು. ಕನಕಪುರವನ್ನ ನುಂಗಿ ನೀರು ಕುಡಿದಿರೋ ಡಿ ಕೆ ಎಂದು ಭಿತ್ತಿ ಪತ್ರ ಹಿಡಿದು ಕಾರ್ಯಕರ್ತರು ಘೋಷಣೆ ಕೂಗಿದ್ರು.
ಮಾಜಿ ಶಾಸಕ ಅನ್ನದಾನಿ ನೇತೃತ್ವದಲ್ಲಿ ಜೆಡಿಎಸ್ ಪ್ರತಿಭಟನೆ ನಡೆಯಿತು. ಈ ವೇಳೆ ಮಾತನಾಡಿದ ಬೆಂ. ದಕ್ಷಿಣ ಲೋಕಸಭಾ ಕ್ಷೇತ್ರದ ಅಧ್ಯಕ್ಷ ತುಳಸಿರಾಮ್ ಎಸ್ಇಪಿ ಟಿಎಸ್ಪಿ ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಡಿಕೆ ಶಿವಕುಮಾರ್ ಅವರು ಸಂವಿಧಾನ ಬಗ್ಗೆ ಬದಲಾವಣೆ ಮಾಡುತ್ತೇನೆ ಎಂದಿದ್ದಾರೆ. ಅವರ ಹೇಳಿಕೆ ನೋಡಿದ್ರೆ ನಮಗೆ ನಾಚಿಕೆ ಆಗುತ್ತದೆ. ಸಂವಿಧಾನ ಬದಲಾವಣೆ ಮಾಡಿದ್ರೆ ನಿಮ್ಮ ಖುರ್ಚಿ ಅಲುಗಾಡುತ್ತದೆ ಎಂದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಟಿ ಎ ಶರವಣ ಡಿಸಿಎಂ ಡಿಕೆ ಶಿವಕುಮಾರ್ ಅವ್ರು ಸಂದರ್ಶನದಲ್ಲಿ ಸಂವಿಧಾನ ಕುರಿತು ಹೇಳಿಕೆ ಕೊಟ್ಟಿದ್ದಾರೆ. ಇದನ್ನ ಜೆಡಿಎಸ್ ಪಕ್ಷ , ಅನ್ನದಾನಿ ಅವರ ನೇತೃತ್ವದಲ್ಲಿ ಪ್ರತಿಭಟನೆ ಮಾಡುತ್ತಿದ್ದೇವೆ. ದಲಿತರ ವಿರುದ್ಧ ವಾಗಿರೋ ಸರ್ಕಾರ ಎಂದು ಡಿಕೆ ಸಾಬೀತು ಮಾಡಿದ್ದಾರೆ. ಸರಕಾರ ವೋಟ್ ಬ್ಯಾಂಕ್ ಗಾಗಿ ದಲಿತರನ್ನ ಬಳಕೆ ಮಾಡಿಕೊಂಡಿದೆ. ಸರ್ಕಾರ ಎಡವಿದೆ, ನುಡಿದಂತೆ ನಡೆದ ಸರ್ಕಾರ ಎಂದು ಡಂಗುರ ಬಾರಿಸ್ತಾರೆ. ಆದ್ರೆ ಎಸ್ಸಿ ಹಣ ದುರ್ಬಳಕೆ ಮಾಡಿಕೊಂಡಿದೆ. ಗ್ಯಾರಂಟಿ ಗೆ ೬೦% ಹೋಗಿದೆ. ಯಾವುದೇ ಪ್ರಶ್ನೆ ಗೆ ಉತ್ತರ ಕೋಡೋದಕ್ಕೆ ಆಗ್ತಿಲ್ಲ. ಇದಕ್ಕೆ ತಕ್ಕ ಉತ್ತರ ನೀಡೋ ಕೆಲಸ ರಾಜ್ಯದ ಜನ ಕೊಡ್ತಾರೆ ಎಂದರು.
ಮಾಜಿ ಶಾಸಕ ಅನ್ನದಾನಿ ಮಾತನಾಡಿ ಡಿಕೆ ಶಿವಕುಮಾರ್ ಅವರ ಹೇಳಿಕೆ ಖಂಡಿಸಿ ಹೋರಾಟ ನಡೀತಿದೆ. ಡಿಕೆ ಅವರು ಡಿಸಿಎಂ ಆಗೋಕೆ ಸಂವಿಧಾನ ಕಾರಣ. ನೀವು ಎಚ್ಚರಿಕೆ ಯಿಂದ ಮಾತನಾಡಬೇಕು. ದಲಿತರನ್ನ ರಕ್ಷಣೆ ಮಾಡಬೇಕು ಮಾಡಬೇಕು ಅಂದ್ರೆ ನೀವು ಈ ರೀತಿ ಮಾತನಾಡಬಾರದು. ನಿಮ್ಮ ಹೇಳಿಕೆ ಯನ್ನ ನಾವು ನೋಡಿದ್ದೀವಿ, ಸರಿಯಾಗಿ ನೋಡಿದ್ದೀವಿ. ಆದ್ರೆ ಸುಮ್ಮನೆ ಯಾಕೆ ಹೇಳಿಲ್ಲ ಎಂದು ಹೇಳ್ತೀರಿ. ನಿಮ್ಮ ಹೇಳಿಕೆ ಖಂಡಿಸುತ್ತೇವೆ ಎಂದ್ರು.
ಗ್ಯಾರಂಟಿ ಗಾಗಿ ದಲಿತರ ಹಣ ದುರ್ಬಳಕೆ ಮಾಡಿಕೊಂಡಿದ್ದೀರಿ. ದಲಿತರಿಗೆ ಮೋಸ ಮಾಡೋ ಕೆಲಸ ಮಾಡುತ್ತಿದ್ದೀರಿ. ನಿಮ್ಮ ಸರ್ಕಾರ ದಲಿತರಿಗಾಗಿ ಏನ್ ಮಾಡ್ತಿದೆ?. ಎಲ್ಲಾ ನಿಗಮದಲ್ಲೂ ಹಣ ನುಂಗಿದ್ದೀರಿ. ಡಿಕೆ ಅವರು ಕ್ಷಮೆ ಕೇಳಬೇಕು, ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ರು.
ಇನ್ನು ಇದೇ ವೇಳೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಮುಂದಾದ ಜೆಡಿಎಸ್ ನಾಯಕರನ್ನು ಫ್ರೀಡಂ ಪಾರ್ಕ್ ನಲ್ಲೇ ಪೊಲೀಸರು ವಶಕ್ಕೆ ಪಡೆದ್ರು. ಅನ್ನದಾನಿ, ಶರವಣ ಸೇರಿ ಹಲವರನ್ನು ವಶಕ್ಕೆ ಪಡೆದ್ರು.