ಬೆಂಗಳೂರು; ಜೆಡಿಎಸ್ ರಾಜ್ಯಾಧ್ಯಕ್ಷ,ಕೇಂದ್ರ ಸಚಿವ ಹೆಚ್ ಡಿಕೆ ನೇತೃತ್ವದಲ್ಲಿ ಜೆಡಿಎಸ್ ಪಕ್ಷದ ಕಚೇರಿ ಜೆಪಿ ಭವನದಲ್ಲಿ ಜೆಡಿಎಸ್ ಪಕ್ಷದ ಮಹತ್ವದ ಸಭೆ ನಡೆಯಿತು. ಸಭೆಯಲ್ಲಿ ಚನ್ನಪಟ್ಟಣ ಅಭ್ಯರ್ಥಿ ಆಯ್ಕೆ,ಸಿಪಿವೈ ಟಿಕೆಟ್ ಒತ್ತಾಯ ವಿಚಾರ,ರಾಜ್ಯದಲ್ಲಿ ಪಕ್ಷದ ಮೆಂಬರ್ ಶಿಫ್ ಡ್ರೈವ್,ರಾಜ್ಯದ ಸದ್ಯದ ರಾಜಕೀಯ ಬೆಳವಣಿಗೆ ಈ ಎಲ್ಲಾ ವಿಚಾರಗಳ ಕುರಿತಾಗಿ ಸಭೆಯಲ್ಲಿ ಚರ್ಚೆಯನ್ನು ನಡೆಸಲಾಯಿತು.
ಸಭೆಯಲ್ಲಿ ಜೆಡಿಎಲ್ಪಿ ನಾಯಕ ಸುರೇಶ್ ಬಾಬು,ಪಕ್ಷದ ಶಾಸಕರು,ಎಂಎಲ್ಸಿಗಳು,ಜಿಲ್ಲಾಧ್ಯಕ್ಷರುಗಳು ಭಾಗಿಯಾಗಿದ್ದರು. ಸಭೆ ಬಳಿಕ ಮಾತನಾಡಿದ ಜೆಡಿಎಸ್ ಶಾಸಕಾಂಗ ನಾಯಕ ಸುರೇಶ್ ಬಾಬು, ಕುಮಾರಸ್ವಾಮಿ ಅವರ ಅಧ್ಯಕ್ಷತೆಯಲ್ಲಿ ಸಭೆ ಮಾಡಿದ್ದೇವೆ.ಪಕ್ಷ ಸಂಘಟನೆಗೆ ಜಿಲ್ಲಾವಾರು ಪ್ರವಾಸ ಮಾಡಲು ತೀರ್ಮಾನ ಮಾಡಲಾಗಿದೆ.ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಪ್ರವಾಸ ಮಾಡಲು ನಿರ್ಧರಿಸಿದ್ದೇವೆ.ಉಪಚುನಾವಣೆ ಸಂಬಂಧ ಎನ್ಡಿಎ ಅಭ್ಯರ್ಥಿ ಗೆಲ್ಲಿಸುವ ಬಗ್ಗೆ ಚರ್ಚೆ ಮಾಡಿದ್ದೇವೆ.ಚನ್ನಪಟ್ಟಣಕ್ಕೆ ಅಭ್ಯರ್ಥಿ ಯಾರು ಎಂದು ಕುಮಾರಸ್ವಾಮಿ ಅವರು ಚರ್ಚೆ ಮಾಡಿ ತೀರ್ಮಾನ ಮಾಡ್ತಾರೆ.ನಾಳೆ ಸಿಎಂ ರಾಜೀನಾಮೆಗೆ ಆಗ್ರಹಿಸಿ, ಬಿಜೆಪಿ ಜೊತೆಗೂಡಿ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡಲಿದ್ದೇವೆ.ಸಿಎಂ ತನಿಖೆ ಎದುರಿಸಿ ಹೊರಬರಲಿ, ಮೊದಲು ರಾಜೀನಾಮೆ ನೀಡಲಿ ಎಂದರು.
ಇದೇ ವೇಳೆ ಮಾತನಾಡಿದ ಜೆಡಿಎಸ್ ಯುವ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ,ಸಿಎಂ ಹಾಗೂ ಸಿಎಂ ಯಾವ ರೀತಿ ನಡೆದುಕೊಂಡಿದ್ದಾರೆ ನೋಡಿದ್ದೇವೆ.ಸದನದಲ್ಲಿ ಸಭಾಧ್ಯಕ್ಷರ ರಕ್ಷಣೆ ಪಡೆದು ಪಲಾಯನವಾದ ಮಾಡಿದ್ದಾರೆ.ಪಾದಯಾತ್ರೆ ಮಾಡಿದ್ದೇವೆ .ರಾಜ್ಯಪಾಲರು ಪ್ರಾಸಿಕ್ಯುಷನ್ ಗೆ ಅನುಮತಿ ನೀಡಿದ್ದಾರೆ.ಸಿಎಂ ಸುಳ್ಳು ದಾಖಲೆ ನೀಡಿದ್ದಾರೆ.ಪ್ರಜಾಪ್ರಭುತ್ವದಲ್ಲಿ ಹೋರಾಟ ಮಾಡಲು ನಮಗೆ ಹಕ್ಕಿದೆ.ಸಿಎಂ ರಾಜ್ಯದ ಜನತೆಗೆ ಉತ್ತರ ನೀಡಬೇಕು.ಅಹಿಂದ ಹೆಸರಲ್ಲಿ ಸಿದ್ದರಾಮಯ್ಯ ಗುರುತಿಸಿಕೊಂಡಿದ್ದಾರೆ.ಇಲ್ಲಿ ಅಹಿಂದ ಪ್ರಶ್ನೆ ಅಲ್ಲ, ಮುಡಾ ಹಗರಣ ಬೆಳಕಿಗೆ ಬಂದಿದೆ.ಪ್ರಾಸಿಕ್ಯುಷನ್ ಗೆ ಅನುಮತಿ ನೀಡಲಾಗಿದೆ.ಮೂರು ಖಾಸಗಿ ದೂರು ಪರಿಗಣಿಸಿ, ದಾಖಲೆ ಪರಿಶೀಲಿಸಿ ಪ್ರಾಸಿಕ್ಯುಷನ್ ಗೆ ಅನುಮತಿ ನೀಡಿದ್ದಾರೆ.ಇಲ್ಲಿ ಟಾರ್ಗೆಟ್ ಪ್ರಶ್ನೆ ಇಲ್ಲ.ಸಿಎಂ ರಾಜೀನಾಮೆ ನೀಡುವುದು ಸೂಕ್ತ ಎಂದರು.
ರಾಜ್ಯದ ಜನ 136 ಶಾಸಕರನ್ನ ಗೆಲ್ಲಿಸಿದ್ದಾರೆ.ಹಿಂದುಳಿದವರ ಹೆಸರಲ್ಲಿ ಅಧಿಕಾರಕ್ಕೆ ಬಂದ್ರು.ದಲಿತರ ಹಣ ಹೇಗೆಲ್ಲ ವರ್ಗಾವಣೆ ಮಾಡಿದ್ದಾರೆ.ಕೇವಲ ಮತ ಬ್ಯಾಂಕ್ ಗೆ ಮಾತ್ರ ಈ ಸಮುದಾಯಗಳನ್ನ ಬಳಸಿಕೊಳ್ಳಬೇಡಿ.ಹೀಗಾಗಿ ವಿರೋಧ ಪಕ್ಷ ಬೀದಿಗಿಳಿದು ಹೋರಾಡ ಬೇಕಾಗಿದೆ.ಚುನಾವಣೆ ಇನ್ನೂ ಮೂರುವರೆ ವರ್ಷ ಇದೆ.ಚುನಾವಣಾ ಹೋರಾಟ ಅಲ್ಲ ಇದು ಎಂದರು
ಇನ್ನು ಚನ್ನಪಟ್ಟಣ ಚುನಾವಣೆ ವಿಚಾರಕ್ಕೆ ಸಂಬಂಧಿದಂತೆ ಮಾತನಾಡಿದ ಅವರು ಎನ್ಡಿಎ ತೀರ್ಮಾನ ತೆಗೆದುಕೊಳ್ಳಬೇಕು.ಸ್ಥಳೀಯವಾಗಿ ಎರಡೂ ಪಕ್ಷಗಳ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಬೇಕು.ಯಾವ ಪಕ್ಷದ ಅಭ್ಯರ್ಥಿ ಕಣಕ್ಕಿಳಿಯಬೇಕು ಎಂದು ತೀರ್ಮಾನ. ಪಕ್ಷದ ಬಲವರ್ಧನೆಗೆ ಇಂದು ಸಭೆ ಮಾಡಿದ್ದೇವೆ.ಪಕ್ಷದ ಕಟ್ಟಕಡೆಯ ಕಾರ್ಯಕರ್ತರನ್ನ ಗುರುತಿಸುವ ಕೆಲಸ ಮಾಡ್ತೇನೆ.ಗೊಂದಲಕ್ಕೆ ಎಡೆ ಇಲ್ಲ.ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾದ ಕ್ಷೇತ್ರ .60-70 ಸಾವಿರ ಜೆಡಿಎಸ್ ಮತಗಳು ಕ್ಷೇತ್ರದಲ್ಲಿವೆ .ದೇವೇಗೌಡರ ಕೊಡುಗೆಯನ್ನು ಜನ ಮರೆತಿಲ್ಲ.ಕುಮಾರಸ್ವಾಮಿ 130 ಕೆರೆ ಕಟ್ಟೆ ತುಂಬಿಸಿದ್ದಾರೆ.ಜೆಡಿಎಸ್ ಗೆ ಟಿಕೆಟ್ ಸಿಕ್ಕಿದರೆ ಸ್ಪರ್ಧಿಸೋಣ ಎಂದು ಸಭೆಯಲ್ಲಿ ಚರ್ಚೆ ಆಗಿದೆ.ಎಲ್ಲವೂ ಬಿಜೆಪಿ ಜೆಡಿಎಸ್ ಹೈಕಮಾಂಡ್ ನಾಯಕರು ಚರ್ಚಿಸಿ ತೀರ್ಮಾನ ಮಾಡ್ತಾರೆ.ರಾಜ್ಯ ಸರ್ಕಾರ 224 ಕ್ಷೇತ್ರಗಳಲ್ಲಿ 136 ಕಾಂಗ್ರೆಸ್ ಶಾಸಕರ ಕ್ಷೇತ್ರಕ್ಕೂ ಅನುದಾನ ಕೊಟ್ಟಿಲ್ಲ.ಈಗ ಇದ್ದಕ್ಕಿದ್ದಂತೆ ಚನ್ನಪಟ್ಟಣದ ಮೇಲೆ ಕಾಂಗ್ರೆಸ್ ಗೆ ಪ್ರೀತಿ ಬಂದಿದ್ದೇಕೆ? ನಿಖಿಲ್ ಸ್ಪರ್ಧೆ ಮಾಡ್ತಾರಾ ಇಲ್ವಾ ಎಂಬ ಪ್ರಶ್ನೆಕ್ಕೆ ಉತ್ತರಿಸಿದ ನಿಖಿಲ್ ಶಾಸಕನಾಗಬೇಕು ಎಂಬ ಹಪಹಪಿ ನನ್ನಲ್ಲಿ ಇಲ್ಲ ಎಂದರು. ಲೋಕಸಭೆ ಅಭ್ಯರ್ಥಿ ಆಗಬೇಕು ಎಂದು ಆಗ್ರಹಿಸಿದ್ರು, ನಾನು ಒಪ್ಪಿಲ್ಲ ಎಂದು ತಿಳಿಸಿದ್ರು.