ಬೆಂಗಳೂರು; ಚನ್ನಪಟ್ಟಣ ಉಪಚುನಾವಣೆಯ ಟಿಕೆಟ್ ಹಂಚಿಕೆ ವಿಚಾರಕ್ಕೆ ಸಂಬಂಧಪಟ್ಟಂತೆ ಕುಮಾರಸ್ವಾಮಿ ನೇತೃತ್ವದಲ್ಲಿ ಜೆಡಿಎಸ್ ಸಭೆ ನಡೆಯಿತು. ಮಾಜಿ ಪ್ರಧಾನಿ ದೇವೆಗೌಡ, ಶಾಸಕ ಸರಣಗೌಡ ಕಂದಕೂರ್, ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು,ಮಾಜಿ ಸಚಿವ ಸಾ ರಾ ಮಹೇಶ್,ನಿಖಿಲ್ ಕುಮಾರಸ್ವಾಮಿ ಉಪಸ್ಥಿತರಿದ್ದರು.
ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ರಾಮನಗರ ಜೆಡಿಎಸ್ ಜಿಲ್ಲಾಧ್ಯಕ್ಷ ಮಂಜುನಾಥ್ ಮಾತನಾಡಿ ಎನ್ಡಿಎ ಅಲೆಯೆನ್ಸ್ ಉಳಿಯಬೇಕು ಪಕ್ಷವು ಉಳಿಯಬೇಕು, ಇದು ಮುಂದೆಯೂ ಸಾಗಬೇಕು.ಈ ಹಿನ್ನೆಲೆ ಯೋಚಿಸಿ ಕುಮಾರಸ್ವಾಮಿ ಯವರು ಸೂಕ್ತ ತೀರ್ಮಾನ ಮಾಡ್ತಾರೆ.ಚನ್ನಪಟ್ಟಣಕ್ಕೆ ಎನ್ಡಿಎ ಅಭ್ಯರ್ಥಿ ಯಾರೆಂದು ಅವರು ನಿರ್ಧಾರ ಮಾಡ್ತಾರೆ.ಕುಮಾರಸ್ವಾಮಿಗೆ ಬೇಜಾರ್ ಆಗೋ ರೀತಿಯಲ್ಲಿ ನಾವು ನಡೆದುಕೊಳ್ಳೋದು ಬೇಡ.ಕುಮಾರಸ್ವಾಮಿಯರ ನಿರ್ಧಾರಕ್ಕೆ ನಾವೆಲ್ಲರೂ ಬೆಂಬಲ ಕೊಡೋಣ.ಕುಮಾರಸ್ವಾಮಿ ಏನ್ ನಿರ್ಧಾರ ಕೈಗೊಂಡ್ರು ನಾವು ಕೈ ಎತ್ತಿ ಬೆಂಬಲ ಸೂಚಿಸೋಣ ಎಂದರು.
ಇನ್ನು ಚನ್ನಪಟ್ಟಣ ಜೆಡಿಎಸ್ ಮುಖಂಡರ ಸಭೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಹೇಳಲು ಅವಕಾಶ ನೀಡಲಾಯಿತು. ಈ ವೇಳೆ ನಿಖಿಲ್ ಕುಮಾರಸ್ವಾಮಿ ಗೆ ಟಿಕೆಟ್ ಕೊಡಬೇಕು.ಇಲ್ಲವಾದರೆ ಗೌಡರ ಕುಟುಂಬದಿಂದ ಯಾರಿಗಾದ್ರು ಟಿಕೆಟ್ ಕೊಡಿ.ನಮ್ಮ ಪಕ್ಷ ಉಳಿಯಬೇಕು ಎಂದರೆ ಜೆಡಿಎಸ್ ಗೆ ಟಿಕೆಟ್ ಕೋಡಬೇಕು ಎಂದು ಸಭೆಯಲ್ಲಿ ಕಾರ್ಯಕರ್ತರು ಒತ್ತಡ ಹಾಕಿದ್ರು. ಭಾಷಣ ಬೇಡ ಜೆಡಿಎಸ್ ಗೆ ಟಿಕೆಟ್ ಘೋಷಣೆ ಮಾಡಿ ಎಂದು ಕಾರ್ಯಕರ್ತರು ಆಗ್ರಹಿಸಿದ್ರು.
ಈ ವೇಳೆ ಮಾತನಾಡಿದ ಕೇಂದ್ರ ಸಚಿವ ಕುಮಾರಸ್ವಾಮಿ ಭಾಷಣ ಚನ್ನಪಟ್ಟಣ ಉಪಚುನಾವಣೆ ಹಿನ್ನೆಲೆ ಚನ್ನಪಟ್ಟಣದ ನಾಯಕರಿಗೆ ಕರೆ ಮಾಡಿ.ಪ್ರಮುಖ ನಾಯಕರನ್ನ ಪಕ್ಷದ ಕಚೇರಿಗೆ ಬರುವಂತೆ ಮನವಿ ಮಾಡುವಂತೆ ಹೇಳಿದ್ದೆ.ನಮ್ಮ ಮನವಿಗಾಗಿ ನೀವೆಲ್ಲಾ ಬಂದಿದ್ದಿರಾ.ಚನ್ನಪಟ್ಟಣಕ್ಕೆ ನಮಗೆ ಸಂಬಂಧ ಪ್ರಾರಂಭವಾಗಿದ್ದು.ನೂರಾರು ವೆಹಿಕಲ್ ನಲ್ಲಿ ಹೋರಾಟಕ್ಕೆ ಚನ್ನಪಟ್ಟಣದಿಂದ ಬರ್ತಿದ್ರು.ಕಳೆದ ಲೋಕಸಭಾ ಚುನಾವಣೆ ಘೋಷಣೆ ಸಂಧರ್ಭದಲ್ಲಿ ,ಸಾರಾ ಮಹೇಶ್ ಅವರು ನಿಖಿಲ್ ನಿಲ್ಲುವಂತೆ ಒಪ್ಪಿಸಿ ಅಂದಿದ್ರು.ಶಾಸಕರ ಒತ್ತಾಯಕ್ಕೆ ನಿಂತಾಗ ಹಿನ್ನಡೆಯಾಗಿದೆ ಎಂದ್ರು.
ರಾಮನಗರದಲ್ಲು ಹಿನ್ನಡೆಯಾಗಿದೆ.ಮತ್ತೆ ಮಂಡ್ಯಕ್ಕೆ ಹೋದ್ರೆ ಜನ ಏನ್ ಯೋಚನೆ ಮಾಡೊದು ಅಂದ್ರು.ಮಂಡ್ಯದಲ್ಲಿ ಪುಟ್ಟರಾಜುಗೆ ಟಿಕೆಟ್ ಕೊಡಿ ಎಂದ್ರು ನಿಖಿಲ್ .ಮಂಡ್ಯದಲ್ಲಿ ನಮ್ಮ ನಾಯಕರ ನಡುವೆ ಭಿನ್ನಾಭಿಪ್ರಾಯ ಇದೆ.ಪಾತಾಳಕ್ಕೆ ತುಳಿದಿದ್ದಾರೆ ಕಾಂಗ್ರೆಸ್ ನವರು.ದೆಹಲಿಯಿಂದ ಬಿಜೆಪಿ ಯವರೆ ಕರೆದ್ರು .ಪುಟ್ಟರಾಜಗೆ ಅವಕಾಶ ಕೊಡೊದಕ್ಕೆ ಹೊಂದಾಣಿಕೆಯಾಗಲಿಲ್ಲ.ಮೂರು ಕ್ಷೇತ್ರ ನಿಂತು ಗೆಲ್ಲದಿದ್ರೆ ಪಕ್ಷದ ಭವಿಷ್ಯದ ಬಗ್ಗೆ ಯೋಚನೆ ಮಾಡಿದೆ.ಇವತ್ತು ಮಂಡ್ಯದಲ್ಲಿ ಸೋತ್ರೆ ಪಕ್ಷದ ಭವಿಷ್ಯ ಏನಾಗುತ್ತೆ ಅಂತಾ ಮನವಿ ಮಾಡಿದ್ದೆ.ನಾನು ಎಲ್ಲಿದ್ರು ನಿಮ್ಮ ಜೊತೆ ಇರ್ತಿನಿ ಅಂತ ಭರವಸೆ ನೀಡಿದ್ದೆ. ಅಂತಿಮವಾಗಿ ಪುಟ್ಟರಾಜ ಹೆಸರು ಹೇಳಿದ್ದಾಗ ನಿಖಿಲ್ ನಿಮ್ಮ ಹೆಸರು ಹೇಳಿ ಅಂದ್ರು .ಅಂತಿಮವಾಗಿ ನಾನೆ ನಿಲ್ಲಬೇಕಿತ್ತು.ನಿಖಿಲ್ ಕುಮಾರಸ್ವಾಮಿ ನಿಂತಿದ್ರೆ ಈ ಪರಿಸ್ಥಿತಿ ಬರ್ತಿರಲಿಲ್ಲ.ಇದು ಒಂದು ಅಗ್ನಿ ಪರೀಕ್ಷೆ.ನಮ್ಮ ಪಕ್ಷದ ಬಗ್ಗೆ ಏನೆನು ನಡೆದಿದೆ ಅರ್ಥ ಮಾಡಿಕೊಳ್ಳಿ ಎಂದ್ರು.
ದೇವೇಗೌಡ್ರು ನನ್ನ ಒತ್ತಡಕ್ಕೆ ರಾಮನಗರದಲ್ಲಿ ನಿಂತು ಪ್ರಧಾನಿಯಾದ್ರು.ರಾಮನಗರದಲ್ಲಿ ಉಪಚುನಾವಣೆ ಆದಾಗ ಕಾಂಗ್ರೆಸ್ ನವರು ಸೋಲಿಸಲಿಲ್ಲ.ನಮ್ಮ ಪಕ್ಷದವರೇ ನಮ್ಮನ್ನ ಸೋಲಿಸಿದ್ರು.ಕಳಂಕ ತರೋದಕ್ಕೆ ನಮ್ಮ ಪಕ್ಷದವರೆ ಹಾಗೆ ಮಾಡಿದ್ರು.ಅಂಬರೀಷ್ ನಿಲ್ಲಿಸಿದ್ರು ಸೋಲಬೇಕಿತ್ತು ಎಂದಿದ್ದಾರೆ.