ಮನೆ Latest News ಬೆಂಗಳೂರಿನ ಜೆಡಿಎಸ್ ಕಛೇರಿಯಲ್ಲಿ ಜೆಡಿಎಸ್ ನಾಯಕರ ಸುದ್ದಿಗೋಷ್ಟಿ

ಬೆಂಗಳೂರಿನ ಜೆಡಿಎಸ್ ಕಛೇರಿಯಲ್ಲಿ ಜೆಡಿಎಸ್ ನಾಯಕರ ಸುದ್ದಿಗೋಷ್ಟಿ

0

ಬೆಂಗಳೂರಿನ ಜೆಡಿಎಸ್ ಕಛೇರಿಯಲ್ಲಿ ಜೆಡಿಎಸ್ ನಾಯಕರ ಸುದ್ದಿಗೋಷ್ಟಿ  ನಡೆಯಿತು. ಈ ವೇಳೆ ಮಾತನಾಡಿದ ಜೆಡಿಎಲ್ಪಿ ನಾಯಕ ಸುರೇಶ್ ಬಾಬು ಜೆಡಿಎಸ್ ಪಕ್ಷ ಅಸ್ಥಿತ್ವಕ್ಕೆ ಬಂದು ೨೫ ವರ್ಷ ತುಂಬ್ತಾ ಇದೆ. ಅದರ ಹಿನ್ನೆಲೆ ಕಾರ್ಯಕ್ರಮ ಆಯೋಜಿಸಿದ್ದೇವೆ. 21 ರ ಸಂಜೆ ಧ್ವಜಾರೋಹಣ ಮಾಡಲಾಗುತ್ತೆ. ಸಂಜೆ 5 ಗಂಟೆ ದೇವೇಗೌಡ ಸಾಧನೆ ಬಗ್ಗೆ ಪ್ರದರ್ಶನಕ್ಕೆ ಚಾಲನೆ ನೀಡಲಾಗುತ್ತೆ. ರೈತ, ಜನ ಪರ ಹೋರಾಟ ಮಾಡಿ. ಜನರಿಗೆ ಮಾಡಿರುವ ಬೆಳೆದುಬಂದಿರೋ ವಿಚಾರಗಳ ಬಗ್ಗೆ ಪ್ರದರ್ಶನ ಮಾಡಲಾಗುತ್ತದೆ. ನಮ್ಮ ಪಕ್ಷ ಪ್ರಧಾನಿ ಹುದ್ದೆ ಎರಡು ಬಾರಿ ಸಿಎಂ ಆಗಿರೋದನ್ನ ನೋಡಿದ್ದೇವೆ.ಜೆಡಿಎಸ್ ನಾಯಕರನ್ನ ಹುಟ್ಟು ಹಾಕು ಕಾರ್ಖಾನೆ. ಇಲ್ಲಿದ ಹೋಗಿ ನಾಯಕರಾಗಿದ್ದಾರೆ. ಜೆಡಿಎಸ್ ಪಕ್ಷ ಮುಗಿಸುತ್ತೇವೆ ಅಂತಾರೆ ಅವ್ರು ಅದು ಸಾಧ್ಯ ಆಗಿಲ್ಲ ಎಂದಿದ್ದಾರೆ.

ನಮ್ಮ ಪಕ್ಷ ೨೫ ವರ್ಷಗಳ ಜನರ ಪರ ಸೇವೆ ಮಾಡಿದ್ದೇವೆ. ಸೆ.6:30 ಕ್ಕೆ ವಿವಿಧ ರಾಜ್ಯಗಳ ಬಂದ ನಾಯಕರ ಜೊತೆ ರಾಷ್ಟ್ರೀಯ ಕಾರ್ಯಕಾರಣಿ ನಡೆಯುತ್ತೆ. ನ.22 ರಂದು ಪಕ್ಷ ದ ರಜತ ಮಹೋತ್ಸವ ಮತ್ತು ರಾಷ್ಟ್ರೀಯ ಮಹಾ ಅಧಿವೇಶನ ನಡೆಯಲಿದೆ.ಜೊತೆ ಬೃಹತ್ ಸಮಾವೇಶಕ್ಕೆ ಸಿದ್ದತೆ ಮಾಡಿಕೊಂಡಿದ್ದೇವೆ. ಆ ಮೂಲಕ ಜೆಡಿಎಸ್ ಪಕ್ಷವನ್ನ ಮುಂಬರುವ ಚುನಾವಣೆಗಳಿಗೆ ಪಕ್ಷವನ್ನು ತಯಾರಿ ನಡೆಸಲಾಗುತ್ತೆ ಎಂದರು.

ಕೋರ್ ಕಮಿಟಿ ಅಧ್ಯಕ್ಷ ಕೃಷ್ಣಾರೆಡ್ಡಿ  ಮಾತನಾಡಿ ಪ್ರಾದೇಶಿಕ ಪಕ್ಷ ೨೫ ವರ್ಷ ಪೂರೈಸಿದೆ .ಇದು ಕರ್ನಾಟಕ ಇತಿಹಾಸದಲ್ಲಿ ಇದೇ ಮೊದಲು. ೨೫ ವರ್ಷಗಳ ಕಾಲ ಜನರ ಹೋರಾಟ ಮಾಡಿಕೊಂಡು ಬಂದಿದೆ. ಇದಕ್ಲೆ ಎಲ್ಲದಕ್ಕೂ ಕಾರಣ ನಮ್ಮ ದೇವೇಗೌಡರು. ಅದರ ಜೊತೆ ಕುಮಾರಸ್ವಾಮಿ ಅವ್ರು ಎಲ್ಲ ನಾಯಕರನ್ನ ಒಗ್ಗೂಡಿಸಿಕೊಂಡು ಎರಡು ಬಾರಿ ಸಿಎಂ ಆಗಿದ್ದಾರೆ. ಜೊತೆಗೆ ಉಳಿದುಕೊಂಡು ಹೋಗೋಕೆ ಹೋರಾಟ ಮಾಡ್ತಾ ಇದ್ದಾರೆ. ಅನೇಕ ಸಮುದಾಯಗಳ ನಾಯಕರು ಕುಮಾರಸ್ವಾಮಿ ಜೊತೆಗೆ ಸೇರಿ ಪಕ್ಷ ಸಂಘಟನೆ ಮಾಡ್ತಾ ಇದ್ದಾರೆ. ಅನೇಕ ಅನೇಕರ ಜೊತೆ ಸೇರಿ ಪಕ್ಷವನ್ನು ಉಳಿಸಿದ್ದಾರೆ. ಕೇರಳ,ತಮಿಳುನಾಡು,ಆಂಧ್ರಪ್ರದೇಶದಲ್ಲಿ ಪ್ರಾದೇಶಿಕ ಪಕ್ಣಗಳು ಇವೆ. ೨೫ ವರ್ಷ ಕಾಲವನ್ನ ಪಕ್ಷವನ್ನು ಉಳಿಸೋದು ಬಹಳ ಕಷ್ಟ. ಅದರೆ ಪಕ್ಷವನ್ನು ಉಳಿಸುವ ಕೆಲಸವನ್ನ ದೇವೇಗೌಡರ ಮಾಡಿದ್ದಾರೆ. ಇದು ಹೆಮ್ಮೆಯ ವಿಚಾರ ಎಂದಿದ್ದಾರೆ.

೨೫ ವರ್ಷ ಪಕ್ಷಕ್ಕೆ ಆಗಿರೋದ್ರಿಂದ ರಜತ ಮಹೋತ್ಸವ ಆಚರಣೆ ಮಾಡುತ್ತೇವೆ. ಈ ವೇಳೆ ಹೆಚ್ ಡಿಡಿ,ಹೆಚ್ ಡಿಕೆ ಮಾಡಿರುವ ಸಾಧನೆಗಳ ಬಗ್ಗೆ ವಸ್ತು ಪ್ರದರ್ಶನ ಏರ್ಪಾಡು ಮಾಡಿದ್ದೇವೆ. ದೇವೇಗೌಡರು ರಜತ ಮಹೋತ್ಸವ ಉದ್ಘಾಟನೆ ಮಾಡಲಿದ್ದಾರೆ. ಶಾಸಕರು,ಮಾಜಿ ಶಾಸಕರು, ಎಂಎಲ್ಸಿಗಳು ,ಸಾವಿರಾರು ಕಾರ್ಯಕರ್ತರು ಉಪಸ್ಥಿತಿ ಇರ್ತಾರೆ. ಡಿ.೧ ರಿಂದ ಜ ೧೫ ವರಗೆ ಜಿಲ್ಲಾ,ವಿಧಾನಸಭಾ ಕ್ಷೇತ್ರಗಳಲ್ಲಿ ವಸ್ತು ಪ್ರದರ್ಶನ ಏರ್ಪಾಡು ಮಾಡಿದ್ದೇವೆ. ಜೊತೆಗೆ ಜನವರಿ ಅಂತ್ಯದಲ್ಲಿ‌ ಬೃಹತ್ ಕಾರ್ಯಕರ್ತ ಸಮಾವೇಶ ಇದೆ ಎಂದು ಹೇಳಿದ್ದಾರೆ.

ಡಿ.8ಕ್ಕೆ  ಚಳಿಗಾಲದಲ್ಲಿ ಅಧಿವೇಶನ ವಿಚಾರವಾಗಿ ಮಾತನಾಡಿದ ಅವರು 21 ರಂದು ಕುಮಾರಸ್ವಾಮಿ ನೇತೃತ್ವದಲ್ಲಿ ಪಕ್ಷದ ಶಾಸಕರ ಸಭೆ ಇದೆ. ಸದನ ಪ್ರಾರಂಭ ಆಗುತ್ತೆ ಯಾವ ಯಾವ ವಿಷಯಗಳ ಬಗ್ಗೆ ಚರ್ಚೆ ಮಾಡಬೇಕು. ಜಲ್ವಂತ ಸಮಸ್ಯೆಗಳು ಯಾವ ಯಾವ ಇವೆ. ಸರ್ಕಾರ ಬಂದ ನಂತರ ನಡೆಯುತ್ತಿರುವ ದುರಾಡಳಿತ . ಅಂತಹ ವಿಚಾರಗಳ ಬಗ್ಗೆ ಬೆಳಕು ಚೆಲ್ಲಲು ಸಿದ್ದತೆ ಮಾಡಿಕೊಳ್ಳುತ್ತೇವೆ ಎಂದರು. ಬಿಹಾರ ಚುನಾವಣೆ ರಾಜ್ಯ ಜೆಡಿಎಸ್ ಗೆ ಹೊಸ ಉತ್ಸಾಹ ಬಂದಿದ್ದೀಯಾ ಎಂಬ ವಿಚಾರದ ಬಗ್ಗೆ ಮಾತನಾಡಿದ ಅವರು ಖಂಡಿತ ಹೌದು,ಬಿಹಾರದಲ್ಲಿ ಊಹೆ ಮಾಡೋದಕ್ಕೂ ಹೆಚ್ಚು ಫಲಿತಾಂಶ ಬಂದಿರೋದು. ಕಾಂಗ್ರೆಸ್ ಗೆ ಒಂದು ಪಾಠ ಆಗಿದೆ. ಭ್ರಮೆಯಲ್ಲಿ ಇದ್ದ ಕಾಂಗ್ರೆಸ್ ಗೆ ಹಿನ್ನಡೆಯಾಗಿದೆ. ಬಿಹಾರದಲ್ಲಿ ಚುನಾವಣೆಯಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದಿರೋದು ನಮಗೆ ಹೊಸ ಹುಮ್ಮಸ್ಸು ಬಂದಿದೆ. ೨೦೨೮ ಕ್ಕೆ ರಾಜ್ಯದಲ್ಲಿ ಜೆಡಿಎಸ್ ಬಿಜೆಪಿ ಅಧಿಕಾರಕ್ಕೆ ಬರುತ್ತೆ ಎಂದು ತಿಳಿಸಿದ್ದಾರೆ.